ನಿಮ್ಮ ಉಗುರುಗಳನ್ನು ಕತ್ತರಿಸಿದ ಬಳಿಕ ಆ ಉಗುರುಗಳನ್ನು ನೀವು ಈ ಮರದ ಕೆಳಗೆ ಉಗುರುಗಳನ್ನು ನೀವು ಹಾಕಿದ್ರೆ ಸಾಕು ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಜೀವನ ಬದಲಾಗುತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಉಗುರುಗಳನ್ನು ನೀವು ಎಲ್ಲೆಂದರಲ್ಲಿ ಬಿಸಾಡುತ್ತಿದ್ದರೆ ಹುಷಾರಾಗಿರಿ ಇದು ನಿಮ್ಮ ಜೀವನದಲ್ಲಿ ತುಂಬಾ ನಕಾರಾತ್ಮಕ ಶಕ್ತಿಯನ್ನು ತರುತ್ತದೆ.
ಹೌದು ಸ್ನೇಹಿತರೆ ಉಗುರುಗಳನ್ನು ತೆಗೆದುಕೊಳ್ಳುವುದು ಆರೋಗ್ಯಕರವಾದ ಸಂಗತಿ. ಉಗುರುಗಳು ನಮ್ಮ ದೇಹದ ಒಂದು ಅಂಗ. ಈಗಿನ ಆಧುನಿಕ ದಿನಗಳಲ್ಲಿ ಮಹಿಳೆಯರು ತುಂಬಾ ಉಗುರುಗಳನ್ನು ಬೆಳೆಸುವುದು,ಮತ್ತು ಅವುಗಳನ್ನು ಅಲಂಕಾರ ಮಾಡಿಕೊಳ್ಳುವುದು ಒಂದು ಫ್ಯಾಷನ್ ಆಗಿದೆ. ಉಗುರುಗಳನ್ನು ಕತ್ತರಿಸುವುದರಿಂದ ಮತ್ತೆ ಮತ್ತೆ ಬರುತ್ತವೆ. ಉಗುರುಗಳನ್ನು ಬಿಡುವುದು ಎಲ್ಲರಿಗೂ ಆಸೆ.ಆದರೆ ಉಗುರುಗಳನ್ನು ಕತ್ತರಿಸದೆ ಹೋದರೆ ಕೆಸರು ತುಂಬಿಕೊಂಡು ಗಾಯವಾಗುತ್ತದೆ. ನೀವೇನಾದ್ರೂ ಈ ಉಗುರುಗಳನ್ನು ಕತ್ತರಿಸಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರೆ ಹುಷಾರಾಗಿರಿ.

ಉಗುರುಗಳನ್ನು ಬಳಸಿ ವಶೀಕರಣ ಮಾಡುತ್ತಾರೆ ಅದರಿಂದ ನಿಮ್ಮ ಮನೆಗೆ ತುಂಬಾ ಕೆಟ್ಟದ್ದಾಗುತ್ತದೆ. ಹಾಗಾದರೆ ಉಗುರುಗಳನ್ನು ಕತ್ತರಿಸಿ ಏನು ಮಾಡಬೇಕು ಹೇಗೆ ಅವುಗಳನ್ನು ಬಿಸಾಡಬೇಕು ಮತ್ತು ಎಲ್ಲಿ ಹಾಕಬೇಕು ಮತ್ತು ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಏನು ಬದಲಾವಣೆ ಸಿಗುತ್ತದೆಯೆಂದು ನಾನು ನಿಮಗೆ ತಿಳಿಸುತ್ತೇನೆ.ಕೆಲವೊಬ್ಬರಿಗೆ ಉಗುರುಗಳು ಚಿಕ್ಕದಾಗಿರುತ್ತವೆ, ಇನ್ನೂ ಕೆಲವೊಬ್ಬರಿಗೆ ಉಗುರುಗಳು ದೊಡ್ಡದಾಗುತ್ತವೆ ಇದಕ್ಕೆ ಕಾರಣ ಅವರ ದೇಹದಲ್ಲಿರುವ ಜೀನ್ಸ್ ಗಳ ಪ್ರಭಾವ. ಕೆಲವೊಂದು ಜಾಗದಲ್ಲಿ ಋಣಾತ್ಮಕ ಶಕ್ತಿ ಇರುತ್ತದೆ ಅಂತಹ ಜಾಗದಲ್ಲಿ ನೀವು ನಿಮ್ಮ ಉಗುರುಗಳನ್ನು ಎಸೆಯುವುದರಿಂದ ನೀವು ಎಂದಿಗೂ ಸಕಾರಾತ್ಮಕವಾಗಿ ಯೋಚಿಸುವುದಿಲ್ಲ, ಬದಲಾಗಿ ನಕಾರಾತ್ಮಕ ಶಕ್ತಿ ನಿಮ್ಮನ್ನು ಆವರಿಸುತ್ತದೆ. ಇಂತಹ ಸಮಯದಲ್ಲಿ ನಿಮಗೆ ಯಾವುದೇ ಯಶಸ್ಸು ಇರುವುದಿಲ್ಲ.ಕಷ್ಟಗಳು ಮೇಲಿಂದ ಮೇಲೆ ಬರುತ್ತಲೇ ಇರುತ್ತವೆ.

ಉಗುರುಗಳನ್ನು ಕತ್ತರಿಸಿ ಕಸದಲ್ಲಿ ಹಾಕುವುದರಿಂದ ಶ್ರೀ ಮಹಾಲಕ್ಷ್ಮಿಗೆ ಅವಮಾನಿಸಿದಂತೆ ಆಗುತ್ತದೆ. ಅದಕ್ಕಾಗಿ ಉಗುರುಗಳನ್ನು ಎಸೆಯುವುದನ್ನು ನಿರ್ಲಕ್ಷ್ಯಮಾಡಬೇಡಿ ಕೆಲವೊಂದು ಸಲ ನಮ್ಮ ನಿರ್ಲಕ್ಷ ಗಳು ನಮ್ಮ ಜೀವನವನ್ನು ಕಷ್ಟದ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತವೆ.ನೀವು ಮಾಡಿದ ಕೆಲಸಗಳು ನಿಮಗೆ ಫಲ ಕೊಡುವವು. ಕೂದಲುಗಳನ್ನು ಮತ್ತು ಉಗುರುಗಳನ್ನು ಬಳಸಿಕೊಂಡು ವಶೀಕರಣವನ್ನು ಮಾಡುತ್ತಾರೆ ಇದರಿಂದ ನೀವು ತುಂಬಾ ಸಂಕಷ್ಟಕ್ಕೆ ಬರುತ್ತೀರಾ.ಉಗುರು ಮತ್ತು ಕೂದಲು ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿಬರುತ್ತವೆ. ಆರೋಗ್ಯದ ದೃಷ್ಟಿಯಿಂದ ಇವೆರಡನ್ನೂ ಸ್ವಚ್ಚವಾಗಿಟ್ಟುಕೊಳ್ಳಬೇಕು. ಹಾಗಂತ ನಮಗೆ ಅನುಕೂಲವಾದ ದಿನ ಉಗುರು ತೆಗೆಯುವುದು, ಕೂದಲಿಗೆ ಕತ್ತರಿ ಹಾಕುವುದು ಒಳ್ಳೆಯದಲ್ಲ. ಮಹಾಭಾರತದಲ್ಲಿ ಉಗುರು ಮತ್ತು ಕೂದಲನ್ನು ಯಾವಾಗ ಕತ್ತರಿಸಿಕೊಂಡರೆ ಶುಭ ಎಂದು ಉಲ್ಲೇಖಿಸಲಾಗಿದೆ.

ಮಕ್ಕಳಿಗೆ ಸ್ಕೂಲ್ ಗೆ ಹೋಗುವಾಗ ಉಗುರು ತೆಗೆಯಬೇಕೆಂದು ಕೆಲವರು ಸೋಮವಾರ ಉಗುರು ಕಟ್ ಮಾಡುತ್ತಾರೆ. ಆದರೆ ಸೋಮವಾರ ಉಗುರು ಮತ್ತು ಕೂದಲು ಕಟ್ ಮಾಡಿದರೆ ಮಾನಸಿಕ ಹಾಗು ಸಂತಾನದ ಸಮಸ್ಯೆ ಎದುರಾಗುತ್ತದೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಹಾಗೆ ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಬುಧವಾರ  ಉಗುರು ಮತ್ತು ಕೂದಲು ಕಟ್ ಮಾಡಲು ಉತ್ತಮವಾದ ದಿನವಾಗಿದೆ. ಈ ದಿನ ಉಗುರು ಮತ್ತು ಕೂದಲು ತೆಗೆದರೆ ಸಂಪತ್ತು ಜಾಸ್ತಿಯಾಗುವುದರ ಜೊತೆಗೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

ಉಗುರುಗಳನ್ನು ಮಂಗಳವಾರ ಮತ್ತು ಶನಿವಾರ ಕತ್ತರಿಸಬಾರದು ಉಗುರುಗಳನ್ನು ಕತ್ತರಿಸಲು ಒಳ್ಳೆಯ ದಿನಗಳು ಅಂದರೆ ಶುಕ್ರವಾರ ಮತ್ತು ಬುಧವಾರ. ಉಗುರುಗಳನ್ನು ಕತ್ತರಿಸಿ ಆಲದ ಮರದ ಕೆಳಗೆ ಹಾಕಬೇಕು.ಆಲದ ಮರ ತುಂಬಾ ವೇಗವಾಗಿ ಬೆಳೆಯುವ ಮರ ಇದು ಹೇಗೆ ಬೆಳೆಯುತ್ತದೆಯೋ ಹಾಗೆ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಆಗುತ್ತದೆ. ಒಂದು ವೇಳೆ ನಿಮಗೆ ಆಲದಮರ ಸಿಗದೇ ಹೋದರೆ ಮನೆಯ ಪಕ್ಕ ಇರುವ ಯಾವುದಾದರೂ ಹಸಿರು ಮರದ ಕೆಳಗಡೆ ಹಾಕಬೇಕು. ಒಣಗಿದ ಮರಗಳಿಗೆ ಉಗುರುಗಳನ್ನು ಹಾಕುವುದರಿಂದ ಇನ್ನಷ್ಟು ಕಷ್ಟಗಳು ನಿಮಗೆ ಬರುತ್ತವೆ.

ಆಲದ ಮರ ದೊಡ್ಡದಾಗಿ ಬೆಳೆಯುವ ಮರವಾಗಿದೆ. ಆಲದ ಮರಗಳು ತುಂಬಾ ವಿರಳವಾಗಿವೆ. ನೀವು ಉಗುರುಗಳನ್ನು ಶುಕ್ರವಾರ ಕತ್ತರಿಸಿದರೆ ಶನಿವಾರ ಸಂಜೆ ಒಂದಿಷ್ಟು ಕಟ್ಟಿಗೆಗಳಲ್ಲಿ ಕರ್ಪೂರವನ್ನು ಬೆರೆಸಿ ಸುಟ್ಟು ಬೂದಿಯಾದ ಮೇಲೆ ಆಲದ ಮರದ ಕೆಳಗಡೆ ಹಾಕಬೇಕು.ಹಂಗಾದ್ರೆ ಹೀಗೆ ಮಾಡುವುದರಿಂದ ನಿಮಗೆ ಏನು ಲಾಭವಾಗುತ್ತದೆ ಎಂದರೆ ನಿಮ್ಮ ಮನೆಯಲ್ಲಿ ಅಭಿವೃದ್ಧಿ ನೆಮ್ಮದಿ ಸಿಗುತ್ತದೆ. ಹಾಗೂ ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಯೋಚನೆಗಳು ಬರುತ್ತವೆ. ಆಫೀಸ್ನಲ್ಲಿ ಏನಾದರೂ ನಿಮಗೆ ತೊಂದರೆಗಳಿದ್ದರೆ ಪರಿಹಾರ ಆಗುತ್ತವೆ ನೀವು ಒಳ್ಳೆಯ ಅಭಿವೃದ್ಧಿ ಕಾಣುತ್ತೀರಾ ಹಾಗೆಯೇ ಕೆಲಸ ಇಲ್ಲದವರಿಗೆ ಬೇಗ ಉದ್ಯೋಗ ಸಿಗುತ್ತದೆ.

ವರ್ಷದಲ್ಲಿ ಒಂದು ಬಾರಿ ಇದನ್ನು ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ಇಷ್ಟು ಮಾಡೋದರಿಂದ ತುಂಬಾ ಪ್ರಯೋಜನವಿದೆ ಮತ್ತು ನಿಮ್ಮ ಜೀವನದಲ್ಲಿ ತುಂಬಾ ಚಮತ್ಕಾರಿ ಬದಲಾವಣೆಯಾಗುತ್ತದೆ. ಸ್ನೇಹಿತರೆ ಮನೆಯ ಮುಂದೆ ಮರವನ್ನು ನೆಡಿ ಇದರಿಂದ ನಮ್ಮ ಪ್ರಕೃತಿಯನ್ನು ಕಾಪಾಡಿ ಯಾವುದಾದರೂ ಶುಭ ಸಮಾರಂಭಕ್ಕೆ ಹೋಗುತ್ತಿದ್ದರೆ ಸಸಿಗಳನ್ನು ಉಡುಗೊರೆಯಾಗಿ ನೀಡಿ ಇಂತಹ ಕಾರ್ಯಗಳಿಂದ ನಮಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ಸಿಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.