ನಿಮ್ಮ ಮನೆಯಲ್ಲಿ ಪೂಜೆ ಮಾಡುವಾಗ ಹೂವುಗಳು ದೇವರ ಫೋಟೋಗಳಿಂದ ಪದೇ ಪದೇ ಕೆಳಗೆ ಬೀಳುತ್ತಿದೆಯಾ ಹಾಗೆ ಬೀಳುತ್ತಿದ್ದರೆ ಅದ್ರ ಅರ್ಥ ಏನು ಗೊತ್ತ ಒಳ್ಳೆಯದ್ದ ಕೆಟ್ಟದ್ದ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವರ ಪೂಜೆ ಮಾಡುತ್ತಿರುವಂತಹ ಸಮಯದಲ್ಲಿ ದೇವರಿಗೆ ಮೂಡಿಸಿದ, ದೇವರಿಗೆ ಅರ್ಪಿಸಿದ ಹೂವು ಪದೇ ಪದೆ ಕೆಳಗೆ ಬೀಳುತ್ತಿದ್ದರೆ, ಅದರ ಅರ್ಥವೇನು ಮತ್ತು ಈ ಒಂದು ಸೂಚನೆಯ ಅರ್ಥವೇನು ಎಂಬುದನ್ನು ನಾನು ನಿಮಗೆ ಇಂದಿನ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.ಎಷ್ಟೋ ಜನರಿಗೆ ತಿಳಿದಿರುವುದಿಲ್ಲ ಈ ರೀತಿ ದೇವರ ಪೂಜೆ ಮಾಡುವಾಗ ದೇವರ ಮೂರ್ತಿಯಿಂದ ಹೂವು ಕೆಳಗೆ ಬಿದ್ದರೆ ಅದರ ಅರ್ಥವೇನು, ಆ ಹೂವನ್ನು ಏನು ಮಾಡಬೇಕು ಎಂಬುದು. ಅದನ್ನೇ ನಾನು ಇಂದಿನ ಮಾಹಿತಿಯಲ್ಲಿ ನಮ್ಮ ಪೂರ್ವಜರು ಅಂದುಕೊಂಡ ಪದ್ಧತಿಯ ಬಗ್ಗೆ ತಿಳಿಸಿಕೊಡುತ್ತೇನೆ ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ನಮ್ಮ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದೇವರ ಪೂಜೆ ಅನ್ನು ಮಾಡಲಾಗುತ್ತದೆ, ಈ ದೇವರ ಪೂಜೆ ಅನ್ನು ಮಾಡುವಾಗ ದೇವರಿಗೆ ಹೂವನ್ನು ಸಮರ್ಪಿಸುವುದು ಒಂದು ಪದ್ಧತಿಯಾಗಿದೆ. ನೀವು ಕೂಡ ಒಂದು ಪದ್ಧತಿಯನ್ನು ಪಾಲಿಸುತ್ತಿದ್ದರೆ ಈ ಮಾಹಿತಿ ಅನ್ನು ಪೂರ್ತಿಯಾಗಿ ತಿಳಿಯಿರಿ .ಹಾಗೂ ದೇವರ ಪೂಜೆಯನ್ನು ಮಾಡುವಾಗ ದೇವರಿಗೆ ಸಮರ್ಪಿಸಿದ ಹೂವು ಕೆಳಗೆ ಬಿದ್ದರೆ ಇದರ ಅರ್ಥವೇನು ಅಂದರೆ ಪೂಜೆ ಮಾಡುವ ಪ್ರತಿಯೊಬ್ಬರು ದೇವರನ್ನು ಪ್ರಾರ್ಥಿಸಿಕೊಳ್ಳುತ್ತಾರೆ.

ತಮ್ಮ ಇಷ್ಟಾರ್ಥಗಳನ್ನು ತಮ್ಮ ಕಷ್ಟಗಳನ್ನು ತೊಂದರೆಗಳನ್ನು ದೇವರ ಬಳಿ ಹೇಳಿಕೊಂಡಿರುತ್ತಾರೆ ಅದನ್ನು ದೇವರು ಸ್ವೀಕರಿಸಿ ನಿಮ್ಮ ಕಷ್ಟಗಳಿಗೆ ಸ್ಪಂದಿಸುವುದಕ್ಕಾಗಿ ಈ ರೀತಿ ಹೂವನ್ನು ಬೀಳಿಸುವ ಮುಖಾಂತರ ನಿಮಗೆ ಸೂಚನೆ ನೀಡುತ್ತಾನೆ.ಹಾಗಾದರೆ ದೇವರಿಗೆ ಸಮರ್ಪಿಸಿದ ಈ ಹೂವು ಕೆಳಗೆ ಬಿದ್ದರೆ ಅದನ್ನು ಏನು ಮಾಡಬೇಕು ಯಾವ ಸಂದರ್ಭದಲ್ಲಿ ದೇವರ ಮೂರ್ತಿ ಅಥವಾ ದೇವರ ಫೋಟೋ ಯಿಂದ ಹೂವು ಕೆಳಗೆ ಬಿದ್ದರೆ ಅದನ್ನು ನಾವು ತೆಗೆದಿಟ್ಟುಕೊಳ್ಳಬೇಕು ಎಂದು ನೀವು ಹೇಳುವುದಾದರೆ ಇದಕ್ಕೂ ಕೂಡ ಕೆಲವೊಂದು ವಿಚಾರಗಳಿವೆ.

ಪೂಜೆಯೆಲ್ಲ ಮುಗಿದ ನಂತರ ದೇವರ ಮೂರ್ತಿಯಿಂದ ಅಥವಾ ದೇವರ ಫೋಟೋ ಯಿಂದ ಹೂವು ಕೆಳಗೆ ಬಿದ್ದರೆ ಆ ಹೂವನ್ನು ನಾವು ನಮ್ಮ ಬಳಿ ಇಟ್ಟುಕೊಳ್ಳಬೇಕು, ನಮ್ಮ ಪರ್ಸ್ ಅಥವಾ ಜೇಬಿನಲ್ಲಿ ಈ ಹೂವನ್ನು ದೇವರ ಪ್ರಸಾದವನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ.ಈ ರೀತಿಯಾಗಿ ದೇವರ ಹೂವು ದೇವರ ಮೂರ್ತಿಯಿಂದ ಕೆಳಗೆ ಬೀಳುವುದರ ಸೂಚನೆಯಾಗಿ ದೇವರ ಮೂರ್ತಿಯಿಂದ ಕೆಳಗೆ ಬಿದ್ದ ಹೂವನ್ನು, ನೀವು ಆ ಹೂವು ಪೂರ್ತಿಯಾಗಿ ಒಣಗಿ ಹೋಗುವವರೆಗೂ ತಮ್ಮ ಬಳಿ ಇಟ್ಟುಕೊಳ್ಳಬೇಕು.

ನಂತರ ಆ ಹೂವನ್ನು ಹರಿಯುವ ನೀರಿನಲ್ಲಿ ಅಥವಾ ದೇವಸ್ಥಾನದ ಬಳಿ ಇರುವ ಮರಗಳ ಬುಡಕ್ಕೆ ಹಾಕುವುದು ಒಳ್ಳೆಯದು.ದೇವರಿಗೆ ಸಮರ್ಪಿಸಿದ ಹೂವುಗಳನ್ನು ಕೂಡ ಎಲ್ಲೆಂದರೆ ಅಲ್ಲಿ ಬಿಸಾಡಬಾರದು ಈ ಹೂವುಗಳನ್ನು ಮನೆಯ ಬಳಿ ಇರುವ ಯಾವುದಾದರೂ ಗಿಡಕ್ಕೆ ಅಥವ ಮರದ ಬುಡಕ್ಕೆ ಹಾಕಬೇಕು ಅಥವಾ ಹರಿಯುವ ನೀರಿನಲ್ಲಿ ಈ ಹೂವನ್ನು ಬಿಡಬೇಕು ಎಂದು ಹೇಳಲಾಗಿದೆ.ಹಾಗಾದರೆ ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತ ಆಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಇಂತಹ ಅನೇಕ ಆಚಾರ ವಿಚಾರ ಮತ್ತು ಸಂಪ್ರದಾಯಗಳಿಗೆ

ಸಂಬಂಧಪಟ್ಟ ವಿಚಾರಗಳು ಮತ್ತು ಮಾಹಿತಿಗಳಿಗಾಗಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಸೌಂದರ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.