ನಿಮ್ಮ ವ್ಯವಹಾರ ದಿನೇ ದಿನೇ ಹೋದಂತೆ ಡಲ್ ಆಗ್ತಿದ್ಯಾ ಅದರಿಂದ ನಷ್ಟ ಅನುಭವಿಸುತ್ತಿದ್ದೀರಾ .. ಹಾಗಾದ್ರೆ ಈ 2 ವಸ್ತುಗಳನ್ನ ವ್ಯಾಪಾರದಲ್ಲಿ ಸ್ಥಳದಲ್ಲಿ ಇರಿಸಿ ಆಮೇಲೆ ನೋಡಿ ನಿಮಗೆ ಗೊತ್ತಿಲ್ಲದೇ ನೀವು ವ್ಯಾಪಾರದಲ್ಲಿ ಏಳಿಗೆಯನ್ನು ಹೊಂದುತ್ತೀರಾ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ವ್ಯಾಪಾರ ಚೆನ್ನಾಗಿ ನಡೆಯುತ್ತಿಲ್ಲವೇ ನೀವು ಮಾಡಿದ ಕೆಲಸದಲ್ಲಿ ಲಾಭವಿಲ್ಲವೇ ಹಾಗಾದರೆ ಈ ರೀತಿಯಾಗಿ ಮಾಡಿ ನೀವು ಒಳ್ಳೆಯ ಲಾಭವನ್ನು ಪಡೆಯುತ್ತಿರಿ.
ಹಾಯ್ ಫ್ರೆಂಡ್ಸ್ ನೀವು ಜೀವನಕ್ಕಾಗಿ ವ್ಯಾಪಾರ ನಡೆಸುತ್ತಿದ್ದೀರಾ ನಡೆಸುತ್ತಿದ್ದರೆ ನಿಮಗೆಲ್ಲಾ ಲಾಭ ಆಗುತ್ತಿಲ್ಲವೇ ಗ್ರಾಹಕರು ನಿಮ್ಮ ಅಂಗಡಿಗೆ ಬರುತ್ತಿಲ್ಲವೇ ಹಾಗಾದರೆ ಈ ಪರಿಹಾರವನ್ನು ಮಾಡಿಕೊಳ್ಳಿ. ಸ್ನೇಹಿತರೆ ನಾವು ಮಾಡುವ ವ್ಯಾಪಾರದಲ್ಲಿ ಅಥವಾ ಕೆಲಸದಲ್ಲಿ ಲಾಭವಿಲ್ಲ ಅಂದರೆ ಜೀವನವೇ ಕಷ್ಟವಾಗುತ್ತದೆ. ಎಷ್ಟೆಲ್ಲಾ ಖರ್ಚು ಮಾಡಿ ಒಂದು ವ್ಯಾಪಾರವನ್ನು ಶುರು ಮಾಡುತ್ತೇವೆ ಶುರು ಮಾಡುವ ಮೊದಲು ನಾವು ಎಲ್ಲಾ ಪ್ಲಾನಿಂಗ್ಸ್ ಗಳನ್ನು ಮಾಡಿಕೊಳ್ಳಬೇಕು

ಉದಾಹರಣೆಗೆ ಮೊದಲು ಆ ಕೆಲಸ ನಮ್ಮಿಂದ ಸಾಧ್ಯವಾಗುತ್ತದೆ ಎಂದು ನೋಡಬೇಕು ಹಾಗೆಯೇ ಅದಕ್ಕೆ ಒಳ್ಳೆಯ ಸ್ಥಳ ನಿಗದಿ ಆಗಬೇಕು. ಹೊಸ ಹೊಸ ಪ್ರೊಡಕ್ಟ್ ಗಳನ್ನು ಗ್ರಾಹಕರಿಗೆ ಪರಿಚಯಿಸಬೇಕು ಹಾಗೆ ಪ್ರೊಡಕ್ಟ್ ಗಳು ತುಂಬಾ ಉತ್ತಮವಾಗಿರಬೇಕು. ಮನೆಯವರೆಲ್ಲಾ ಸಪೋರ್ಟ್ ಆಗಿರಬೇಕು. ವ್ಯಾಪಾರವು ಲಾಭವಾಗಬಹುದು, ನಷ್ಟವೂ ಆಗಬಹುದು ಆದರೆ ಅದನ್ನೆಲ್ಲ ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು. ವ್ಯಾಪಾರ ಮಾಡಲು ಬಂಡವಾಳ ಇರಬೇಕು. ವ್ಯಾಪಾರವನ್ನು ಶುರು ಮಾಡಿದ ಮೇಲೆ ಬೇಕಾಗುವ ಪ್ರೊಡಕ್ಟ್ ಗಳನ್ನು ತರಲು ಹಾಗೂ ವ್ಯವಹಾರ ಮಾಡಲು ತುಂಬಾ ಬಂಡವಾಳ ಇರಬೇಕು

ಹಾಗೆಯೇ ಗ್ರಾಹಕರಿಂದ ಕೂಡ ಲಾಭ ಇರಬೇಕು. ಬೇರೆಯವರ ಒತ್ತಾಯದ ಮೇರೆಗೆ ನೀವು ವ್ಯಾಪಾರ ಮಾಡಬೇಡಿ ನಿಮ್ಮ ಜಾತಕದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿದ್ದರೆ ಮಾತ್ರ ವ್ಯಾಪಾರವನ್ನು ಪ್ರಾರಂಭಿಸಿ. ವ್ಯಾಪಾರವನ್ನು ಪ್ರಾರಂಭಿಸಿದ ಮೇಲೆ ಆಸಕ್ತಿದಾಯಕ ದಿಂದ ಕೆಲಸವನ್ನು ಮಾಡಬೇಕು. ನಾವು ಮಾಡುವ ಕೆಲಸದಲ್ಲಿ ಕಠಿಣ ಪರಿಶ್ರಮ ಇದ್ದರೆ ಅದೃಷ್ಟ ನಿಮ್ಮ ಮೇಲೆ ಇದ್ದರೆ ಯಾವುದೇ ವ್ಯಾಪಾರವಾದರು ಸಕ್ಸಸ್ ಸಾಗುತ್ತದೆ. ಹಾಗೆಯೇ ಹಿರಿಯರು ಹೇಳಿರುವ ಹಾಗೆ ಅನುಭವವುಳ್ಳವರ ಕೆಲವೊಂದು ಸಲಹೆಗಳನ್ನು ತೆಗೆದುಕೊಂಡರೆ ನೀವು ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತೀರಾ.

ಪ್ರತಿಯೊಂದು ವ್ಯಾಪಾರದ ಹಿಂದೆ ಗ್ರಹಗಳ ಪಾತ್ರ ಇದ್ದೇ ಇರುತ್ತದೆ. ಗ್ರಹಗಳು ಒಳ್ಳೆಯ ರೀತಿಯಲ್ಲಿದ್ದರೆ ವ್ಯಾಪಾರವು ಲಾಭವಾಗುತ್ತದೆ ಕೆಟ್ಟ ಸ್ಥಾನದಲ್ಲಿದ್ದರೆ ವ್ಯಾಪಾರದಲ್ಲಿ ನಷ್ಟ ಆಗುತ್ತದೆ. ನೀವೇನಾದರೂ ಜವಳಿ ಅಂಗಡಿ ಇಟ್ಟಿದ್ದರೆ ಅಂದರೆ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರೆ ನಿಮಗೆ ಶುಕ್ರದೆಸೆ ಇರಬೇಕು ಹಾಗೆ ನಿಮಗೆ ಶುಕ್ರ ದೇವರು ಉನ್ನತ ಸ್ಥಾನದಲ್ಲಿ ಇರಬೇಕು. ಪ್ರತಿ ಶುಕ್ರವಾರ ಶುಕ್ರನ ಮಂತ್ರವನ್ನು ಪಠಿಸಿ ಹಾಗೂ ಕೊರಳಿಗೆ ಸ್ಪಟಿಕ ಮಾಲೆಯನ್ನು ಹಾಕಿಕೊಳ್ಳಿ. ಪ್ರತಿ ಶುಕ್ರವಾರ ಗುಲಾಬಿ ಸುವಾಸನೆಯ ಅಗರಬತ್ತಿಯನ್ನು ಅಂಟಿಸಬೇಕು

ಹಾಗೆಯೇ ದೇವರಲ್ಲಿ ಪ್ರಾರ್ಥಿಸಬೇಕು ಹೀಗೆ ಮಾಡುವುದರಿಂದ ಜವಳಿ ಅಂಗಡಿಯಲ್ಲಿ ತುಂಬಾ ಲಾಭವಾಗುತ್ತದೆ. ಇನ್ನು ನೀವೇನಾದರೂ ತಿನಸಿ ಅಂಗಡಿ ಹಾಕಿಕೊಂಡಿದ್ದರೆ ನಿಮಗೆ ಗುರುನ ಅನುಗ್ರಹ ಬೇಕು ಬೇಯಿಸಿದ ಅಡುಗೆಯಲ್ಲಿ ಶುಕ್ರನ ಆಶೀರ್ವಾದ ಇರುತ್ತದೆ ಜಲದಿಂದ ಕೂಡಿರುವ ಆಹಾರದಲ್ಲಿ ಚಂದ್ರನ ಆಶೀರ್ವಾದ ಇರುತ್ತದೆ. ಎಲ್ಲಾ ರೀತಿಯ ಆಹಾರ ಪೂರೈಸುವ ವ್ಯಾಪಾರಸ್ಥರು ಕೃಷ್ಣನ ಜಪ ಮಾಡಬೇಕು. ವಿದ್ಯಾ ಸಂಸ್ಥೆ ನಡೆಸುವ ವ್ಯಾಪಾರಸ್ಥರಿಗೆ ಗುರು ಶುಕ್ರ ಹಾಗೂ ಬುಧ ಗ್ರಹಗಳ ಪಾತ್ರ ಇರಲೇಬೇಕು. ಅದಕ್ಕೆ ನೀವು ಶಿವನ ಆರಾಧನೆ ಮಾಡಬೇಕು ಬಿಳಿ ಹಾಗೂ ಹಳದಿ ಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬೇಕು.

ಯಾವುದೇ ವ್ಯಾಪಾರದಲ್ಲಿ ನೀವು ಲಾಭವನ್ನು ಕಾಣಬೇಕಾದರೆ ಪ್ರತಿ ಶುಕ್ರವಾರ ಹಾಗೂ ಅಮಾವಾಸ್ಯೆ ದಿನದಂದು ತಾಯಿ ಮಹಾಲಕ್ಷ್ಮಿ ಪೂಜೆಯನ್ನು ಮಾಡಿ ನಮಿಸಬೇಕು ಹಾಗೆಯೇ ಪ್ರಸಾದವನ್ನು ಹಂಚಬೇಕು. ಈ ರೀತಿಯಾಗಿ ಪ್ರತಿ ಶುಕ್ರವಾರ ಹಾಗೂ ಅಮಾವಾಸ್ಯೆ ದಿನದಂದು ಮಾಡಬೇಕು. ನಂತರ ಹಸುವಿಗೆ ಗೋಗ್ರಾಸವನ್ನು ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ವ್ಯಾಪಾರ ತುಂಬಾ ಚೆನ್ನಾಗಿ ನಡೆಯುತ್ತದೆ ಹಾಗೆ ನಿಮ್ಮ ಜಾತಕದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿರುತ್ತಾನೆ ಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಶುಕ್ರನು ನಿಮಗೆ ಲಾಭವನ್ನು ದಯಪಾಲಿಸುತ್ತಾನೆ.

ಶುಕ್ರನು ನಿಮಗೆ ಉತ್ತಮವಾಗಿದ್ದರೆ ಅಂದರೆ ಉಚ್ಚ ಸ್ಥಾನದಲ್ಲಿದ್ದರೆ ತುಂಬಾ ಲಾಭವನ್ನು ಕಾಣುತ್ತೀರಾ ಹಾಗೇನಾದರೂ ರವಿ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ವ್ಯಾಪಾರದಲ್ಲಿ ನಷ್ಟವನ್ನು ನೀವು ನೋಡಬೇಕಾಗುತ್ತದೆ. ಅದಕ್ಕಾಗಿ ನೀವು ಸೂರ್ಯ ಅಷ್ಟಕವನ್ನು 21 ದಿನ ಪಠಿಸಿ ಹೀಗೆ ಮಾಡುವುದರಿಂದ ರವಿಯ ಕೆಟ್ಟದೃಷ್ಟಿ ನಿಮ್ಮ ಮೇಲೆ ಬೀರುವುದಿಲ್ಲ. ಕೆಲವೊಂದು ಸಲ ನಿಮ್ಮ ವ್ಯಾಪಾರವು ತುಂಬಾ ಚೆನ್ನಾಗಿರುವಾಗ ಇದ್ದಕ್ಕಿದ್ದ ಹಾಗೆ ವ್ಯಾಪಾರದಲ್ಲಿ ತುಂಬಾ ನಷ್ಟವಾಗುತ್ತದೆ ಇದಕ್ಕೆ ಕಾರಣ ನಿಮ್ಮ ಜಾತಕದಲ್ಲಿ ಶುಕ್ರ ದೆಸೆ ಅಂತ್ಯವಾಗಿದೆ ಎಂದು ಅರ್ಥ.

ಶುಕ್ರದೆಸೆ 20 ವರ್ಷ ಇರುತ್ತದೆ ಇದಕ್ಕೆ ನಂತರ ನೀವು ವ್ಯಾಪಾರದಲ್ಲಿ ನಷ್ಟವನ್ನು ಕಾಣಬಹುದು. ನಂತರ ಏನಾದರೂ ರವಿಯ ಸ್ಥಾನ ವಿದ್ದರೆ ನೀವು ವ್ಯಾಪಾರದಲ್ಲಿ ತುಂಬಾ ನಷ್ಟವನ್ನು ಕಾಣುತ್ತೀರಾ ಏಕೆಂದರೆ ಶುಕ್ರನಿಗೆ ವೈರಿ ರವಿಗ್ರಹ ಶುಕ್ರ ನಂತರ ರವಿ ಬಂದರೆ ತುಂಬಾ ದುಷ್ಪರಿಣಾಮಗಳು ನಿಮ್ಮ ಮೇಲೆ ಬೀಳುತ್ತವೆ. ಇನ್ನೇನಾದರೂ ನಿಮ್ಮ ಜಾತಕದಲ್ಲಿ ರವಿ ಹಾಗೂ ಶನಿಗ್ರಹ ಕೆಟ್ಟದಾಗಿದ್ದರೆ ರೋಡ್ ಕಾಂಟ್ರಾಕ್ಟ್ ಕೆಲಸಗಳಲ್ಲಿ ಹಾಗೂ ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ನೀವು ಕೆಲಸಮಾಡುತ್ತಿದ್ದರೆ ತುಂಬಾ ನಷ್ಟವನ್ನು ಅನುಭವಿಸುತ್ತೀರಿ. ಹಾಗಾದ್ರೆ ಸ್ನೇಹಿತರೆ ಈ ಮಾಹಿತಿಯಲ್ಲಿ ನೀವು ವ್ಯಾಪಾರ ಮಾಡುವ ಮೊದಲು ಏನು ಮಾಡಬೇಕು ಹಾಗೆ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ ಧನ್ಯವಾದಗಳು.

Leave a Reply

Your email address will not be published.