ನಿಮ್ಮ ಶತ್ರುಗಳು ನಿಮಗೆ ಮಾಟ ಮಂತ್ರ ಮಾಡಿಸಿದ್ದಾರೆ ಎನ್ನುವ ಅನುಮಾನ ನಿಮ್ಮಲ್ಲಿದ್ದರೆ ಅದನ್ನು ಬೆಳ್ಳುಳ್ಳಿಯಿಂದ ಕಂಡುಹಿಡಿಯಬಹುದಂತೆ ಹೇಗೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಾಟ-ಮಂತ್ರ ನಿಮ್ಮ ಮೇಲೆ ಆಗಿದ್ದರೆ ಈ ಒಂದು ಬೆಳ್ಳುಳ್ಳಿ ಪ್ರಯೋಗವನ್ನು ಮಾಡಿಕೊಳ್ಳಿ. ಹಾಗೆ ಬೆಳ್ಳುಳ್ಳಿ ಇಂದ ಆಗುವ ಇನ್ನೂ ಹೆಚ್ಚಿನ ಅನುಕೂಲಗಳು ಯಾವುವು ಎಂದು ನೋಡಿ.ಹಾಯ್ ಸ್ನೇಹಿತರೆ ಈ ಮಾಹಿತಿಯಲ್ಲಿ ನಾನು ಬೆಳ್ಳುಳ್ಳಿಯಿಂದ ಹೇಗೆ ಮಾಟ ಮಂತ್ರ ವನ್ನು ಕಂಡು ಹಿಡಿಯುವುದು ಎಂದು ಹೇಳಿಕೊಡುತ್ತಿದ್ದೇನೆ. ಹಾಗೆ ಬೆಳ್ಳುಳ್ಳಿಯಲ್ಲಿ ಇನ್ನೂ ಹೆಚ್ಚಿನ ಪರಿಹಾರಗಳನ್ನು ಮಾಡಬಹುದು ಅವು ಯಾರಿಗೆ ಮತ್ತು ಹೇಗೆ ಮಾಡಬೇಕು ಎಂಬುದನ್ನು ಸಹ ಹೇಳಿಕೊಡುತ್ತೇನೆ. ಸ್ನೇಹಿತರೆ ಮಾಟ-ಮಂತ್ರವನ್ನು ನೀವು ನಂಬೋದೇ ಆಗಿದ್ದರೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ.

ಹಾಗಾದರೆ ಈ ಮಾಟ ಮಂತ್ರವನ್ನು ಏಕೆ ಮಾಡುತ್ತಾರೆ ಎಂದು ಮೊದಲು ತಿಳಿದುಕೊಳ್ಳಿ. ಹೀಗೆ ಮಾಡಲು ಹೊಟ್ಟೆಕಿಚ್ಚು ಕಾರಣ ಒಬ್ಬರು ಯಾರಾದರೂ ನಮ್ಮ ಮುಂದೆ ಬೆಳೆಯುತ್ತಿದ್ದರೆ ಚೆನ್ನಾಗಿ ಅಭಿವೃದ್ಧಿ ಹೊಂದಿದರೆ ಇಂತಹವರಿಗೆ ಆಗದವರು ಮಾಟ ಮಂತ್ರವನ್ನು ಮಾಡಿಸುತ್ತಾರೆ ಇದಕ್ಕೆ ಬೇರೆ ಯಾವುದೇ ಕಾರಣ ಇರುವುದಿಲ್ಲ. ಹಾಗಾದರೆ ಯಾರು ಇದನ್ನು ಮಾಡಿಸುತ್ತಾರೆ ಹೊರಗಿನವರು ಇಂತಹ ಕೆಲಸಗಳನ್ನು ಮಾಡುವುದು ಕಡಿಮೆ ಆದರೆ ನಮ್ಮ ಜೊತೆಗಿರುವವರು ಅಂದರೆ ಹಿತಶತ್ರುಗಳು ನಮಗೆ ಮಾಟ ಮಂತ್ರವನ್ನು ಮಾಡಿಸುತ್ತಾರೆ.

ಹಾಗಾದ್ರೆ ನಾವು ಮಾಟ ಮಂತ್ರದಿಂದ ಪ್ರಭಾವ ಹೊಂದಿದ್ದರೆ ನಮಗೆ ಹೇಗೆ ತಿಳಿಯುತ್ತದೆ ಎಂದು ನೋಡಿ ಈ ರೀತಿಯಾಗಿ ಮಾಟ ಮಂತ್ರ ಆಗಿದ್ದರೆ ಅಂಥವರು ಯಾವಾಗಲೂ ಡಲ್ಲಾಗಿ ಸುಮ್ಮನೆ ಇರುತ್ತಾರೆ ಹಾಗೆಯೇ ಅವರಲ್ಲಿ ಎಂಬುದು ವೀಕ್ನೆಸ್ ಎಂಬುದು ಬರುತ್ತದೆ ಇವರ ಜೀರ್ಣಕ್ರಿಯೆ ತುಂಬಾ ಕಡಿಮೆ ಇರುತ್ತದೆ ಹಾಗಾಗಿ ಇವರು ತುಂಬಾ ವೀಕ್ ಆಗಿಬಿಡುತ್ತಾರೆ ಹಾಗೆಯೇ ಇವರ ಆರೋಗ್ಯ ತುಂಬಾ ಹದಗೆಡುತ್ತಾ ಹೋಗುತ್ತದೆ. ಇಂಥವರಿಗೆ ತುಂಬಾ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ ಅವರ ಮೇಲೆ ಯಾರೋ ಕೂತಿರುವ ಹಾಗೆ ಅನಿಸುತ್ತದೆ ಇವೆಲ್ಲ ಮಾಟ ಮಂತ್ರ ಆದವರ ಲಕ್ಷಣಗಳು.

ಇನ್ನು ಕೆಲವೊಬ್ಬರು ಯಾರನ್ನಾದರೂ ಪ್ರೀತಿಸುತ್ತಿದ್ದರೆ ವಶೀಕರಣದಿಂದ ಅಥವಾ ಮಾಟ ಮಂತ್ರದಿಂದ ಅವರನ್ನು ಒಲಿಸಿಕೊಳ್ಳಲು ಹೀಗೆ ಮಾಡುತ್ತಾರೆ. ಆದರೆ ಸ್ನೇಹಿತರೆ ಪ್ರೀತಿಯೆಂಬುದು ಅವರ ಮನಸ್ಸಿನಿಂದ ಇರಬೇಕು ಹೀಗೆ ವಶೀಕರಣದಿಂದ ಮಾಡಿಸಿಕೊಳ್ಳುವ ಪ್ರೀತಿ ನಿಜವಲ್ಲ ಆದರೆ ಅಂತವರಿಗೆ ಅದೇನು ಅಷ್ಟು ಖುಷಿ ಕೊಡುತ್ತದೆಯೋ ಗೊತ್ತಿಲ್ಲ ಇಂತಹ ಕಾರ್ಯಕ್ಕೆ ಅವರು ಸಿದ್ಧರಾಗಿರುತ್ತಾರೆ. ಹಾಗಾದರೆ ಹೀಗೆ ಮಾಟ ಮಂತ್ರ ಆಗಿದೆ ಎಂದು ತಿಳಿದುಕೊಳ್ಳುವುದಾದರೂ ಹೇಗೆ ನೀವೇ ನೋಡಿ ಕೇವಲ ಒಂದು ಬೆಳ್ಳುಳ್ಳಿಯಿಂದ ಇದನ್ನು ತಿಳಿದುಕೊಳ್ಳಬಹುದು.

ಸ್ನೇಹಿತರೆ ಈ ಪರಿಹಾರಕ್ಕೆ ಒಂದು ಬೆಳ್ಳುಳ್ಳಿ ಬೇಕು ಈ ಬಳ್ಳುಳ್ಳಿ ತುಂಬಾ ಫ್ರೆಶ್ ಆಗಿ ಇರಬೇಕು ಯಾವುದೇ ಕಲೆ ಇರಬಾರದು ಚೆನ್ನಾಗಿರೋ ಬೆಳ್ಳುಳ್ಳಿ ಆಗಿರಬೇಕು. ಬರೀ ಒಂದು ಬೆಳ್ಳುಳ್ಳಿಯ ಎಸಳು ತೆಗೆದುಕೊಳ್ಳಿ ಹಾಗೆಯೇ ಇದರ ಮೇಲಿನ ಸಿಪ್ಪೆಯನ್ನು ತೆಗೆಯಿರಿ. ರಾತ್ರಿ ಮಲಗುವಾಗ ಈ ಬೆಳ್ಳುಳ್ಳಿಯನ್ನು ನಿಮ್ಮ ತಲೆದಿಂಬಿನ ಅಡಿಯಲ್ಲಿ ಇಟ್ಟುಕೊಳ್ಳಿ. ಬೆಳಿಗ್ಗೆ ಎದ್ದು ಈ ಬೆಳ್ಳುಳ್ಳಿಯನ್ನು ನೋಡಿ ಇದು ಫುಲ್ ಒಣಗಿದ ಹಾಗೆ ಆದರೆ ಅಥವಾ ತುಂಬಾ ಕೆಟ್ಟದಾದ ಒಂದು ವಾಸನೆ ಬರುತ್ತಿದ್ದರೆ ಹಾಗೆ ತುಂಬಾ ನೀರು ನೀರಾಗಿ ಬೆಳ್ಳುಳ್ಳಿ ಇದ್ದರೆ ನೀವು ಖಂಡಿತ ಮಾಟ-ಮಂತ್ರದಲ್ಲಿ ಸಿಕ್ಕಿ ಹಾಕಿಕೊಂಡಿರುವಿರಿ ಎಂದು ಅರ್ಥಮಾಡಿಕೊಳ್ಳಿ. ಹೌದು ಸ್ನೇಹಿತರೆ ಬೆಳ್ಳುಳ್ಳಿ ರೀತಿ ಆಗಿ ಕಂಡರೆ ನೀವು ತಿಳಿದುಕೊಳ್ಳಬೇಕು.

ಹಾಗೆ ಬೆಳ್ಳುಳ್ಳಿಗೆ ಇನ್ನೂ ಕೆಲವು ಉಪಯೋಗಗಳು ಯಾವವು ಎಂದರೆ ನಿಮ್ಮ ಮನೆಯಲ್ಲಿ ಚಿಕ್ಕಮಕ್ಕಳು ತುಂಬಾ ಸಣ್ಣಗಿದ್ದರೆ ಅಂದರೆ ತೆಳ್ಳಗಿದ್ದರೆ ಹಾಗೂ ಡಲ್ಲಾಗಿ ಮನೆಯಲ್ಲಿ ವೀಕ್ನೆಸ್ ನಿಂದ ಬಳಲುತ್ತಿದ್ದರೆ ಇವರಿಗೆ ಒಂದು ಕಪ್ಪು ದಾರದಲ್ಲಿ 5 ಬೆಳ್ಳುಳ್ಳಿಯ ಎಸಳನ್ನು ಕಟ್ಟಿ ಅವರ ಕುತ್ತಿಗೆಗೆ ಹಾಕಬೇಕು ಈ ರೀತಿಯಾಗಿ ಒಂಬತ್ತು ಮಂಗಳವಾರ ಮಾಡಬೇಕು ಹೀಗೆ ಮಾಡುವುದರಿಂದ ಅವರು ಕೂಡ ತುಂಬಾ ಆರೋಗ್ಯವಾಗಿದ್ದಾರೆ ಮತ್ತು ಅವರಿಗೆ ತುಂಬಾ ಒಳ್ಳೆಯದಾಗುತ್ತದೆ. ಮಕ್ಕಳಿಗೂ ಸಹ ಬೆಳ್ಳುಳ್ಳಿಯಿಂದ ತುಂಬಾ ಉಪಯೋಗವಾಗುತ್ತದೆ.

ಹಾಗೆ ಸ್ನೇಹಿತರೇ ಮಕ್ಕಳು ಊಟ ಮಾಡದೇ ಇದ್ದರೆ ಹಾಗೆ ತುಂಬಾ ಹಠ ಮಾಡುತ್ತಿದ್ದರೆ 2 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ ಹಾಗೆ 5 ನೆನೆದ ಕಡ್ಲೆಬೇಳೆಯನ್ನು ತೆಗೆದುಕೊಳ್ಳಿ ಇದರ ಜೊತೆಗೆ ಎರಡು ನೆನೆಸಿದ ಬಾದಾಮಿಯನ್ನು ತೆಗೆದುಕೊಳ್ಳಿ ಇವು ಮೂರನ್ನು ಚೆನ್ನಾಗಿ ಬೆಲ್ಲದೊಂದಿಗೆ ಸೇರಿಸಿ 48 ದಿನದ ಅವರಿಗೆ ತಿನ್ನಿಸಿ. ಇದನ್ನು ತಿಂದ ಮೇಲೆ ಅರ್ಧ ಗಂಟೆ ಅವರಿಗೆ ಏನನ್ನು ಕೊಡಬಾರದು ಹೀಗೆ ಮಾಡುವುದರಿಂದ ಅವರು ಕೂಡ ಆರೋಗ್ಯವಾಗಿ ಇರುತ್ತಾರೆ ಮತ್ತು ಊಟವನ್ನು ಚೆನ್ನಾಗಿ ಮಾಡುತ್ತಾರೆ ಹಠವೂ ಕೂಡ ಕಡಿಮೆಯಾಗುತ್ತದೆ.

ಇವೆಲ್ಲ ಪರಿಹಾರಗಳು ಸನಾತನ ಕಾಲದಿಂದಲೂ ನಮ್ಮ ಹಿರಿಯರು ಇವನ್ನೆಲ್ಲ ಮಾಡುತ್ತಿದ್ದರು ಆದರೆ ನಾವೀಗ ಇವುಗಳನ್ನು ಕಡೆಗಣಿಸಿ ಮತ್ತೆ ಪರಿಹಾರಗಳನ್ನು ಹುಡುಕುತ್ತಿದ್ದೇವೆ .ಹಾಗಾದರೆ ಸ್ನೇಹಿತರೆ ಬೆಳ್ಳುಳ್ಳಿಯಿಂದ ಇಷ್ಟೆಲ್ಲ ಲಾಭವಿದೆ ಎಂದು ನಿಮಗೆ ತಿಳಿಯಿತಲ್ಲವೇ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.