ನಿಮ್ಮ ಮನೆಯಲ್ಲಿ ಶಿವಲಿಂಗವನ್ನು ಇಟ್ಟುಕೊಂಡು ಪ್ರತಿದಿನ ಪೂಜೆ ಮಾಡುತ್ತೀರಾ … ಹಾಗಾದ್ರೆ ಶಿವಲಿಂಗಕ್ಕೆ ಪೂಜೆ ಮಾಡುವಾಗ ಈ ನಿಯಮವನ್ನು ಅನುಸರಿಸಿ ಇಲ್ಲದಿದ್ದರೆ ಮಹಾಶಿವನ ಕಂಗೆಣ್ಣಿಗೆ ಗುರಿಯಾಗಿ ಜೀವನದಲ್ಲಿ ಕಷ್ಟಗಳು ಬರುತ್ತವೆ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಿಯ ಓದುಗರೆ ನೀವೇನಾದರೂ ಮನೆಯೊಳಗೆ ಶಿವಲಿಂಗವನ್ನು ಇಟ್ಟು ಪೂಜಿಸುತ್ತಿದ್ದಲ್ಲಿ, ಖಂಡಿತವಾಗಿಯೂ ಈ ಕೆಲವೊಂದು ನಿಯಮಗಳನ್ನು ತಿಳಿದು ಶಿವಲಿಂಗವನ್ನೂ ಆರಾಧನೆ ಮಾಡುತ್ತಾ ಬನ್ನಿ ಇಲ್ಲವಾದಲ್ಲಿ ಶಿವನ ಕೆಂಗಣ್ಣಿಗೆ ನೀವು ಕೂಡ ಪಾತ್ರರಾಗಬೇಕಾಗುತ್ತದೆ, ಶಿವನ ಅನುಗ್ರಹ ನಿಮಗೆ ಎಂದಿಗೂ ಸಿಗುವುದಿಲ್ಲ. ಹಾಗಾದರೆ ಬನ್ನಿ ಶಿವನ ಕೃಪೆ ಪಡೆದುಕೊಳ್ಳಲು ನೀವು ಪಾಲಿಸಬೇಕಾದ ಕೆಲವೊಂದು ಕ್ರಮಗಳನ್ನು ತಿಳಿಯಿರಿ ಈ ಪುಟವನ್ನ ಸಂಪೂರ್ಣವಾಗಿ ಓದಿ.

ಪ್ರಿಯ ಓದುಗರೇ ಶಿವನು ಎಲ್ಲಾ ದೇವಾನು ದೇವತೆಗಳಿಗಿಂತಲೂ ವಿಶೇಷ ದೈವನಾಗಿದ್ದಾನೆ ಅವನನ್ನು ಒಲಿಸಿಕೊಳ್ಳುವುದು ಸುಲಭದ ಮಾತೆ ಆಗಿದ್ದರೂ ಶಿವನ ಕೃಪೆ ಪಡೆದುಕೊಳ್ಳುವುದು ಸುಲಭವೇ ಆಗಿದ್ದರೂ, ಒಮ್ಮೆ ಶಿವದೇವನು ಕೋಪಿಸಿಕೊಂಡರೆ ಅವನ ಎದುರು ಹಾಕಿಕೊಂಡರೆ ಏನೆಲ್ಲಾ ಪರಿಣಾಮವನ್ನು ಜೀವನದಲ್ಲಿ ಎದುರಿಸಬೇಕಾಗಿರುತ್ತದೆ ಗೊತ್ತಾ ಹಾಗಾಗಿಯೇ ಶಿವನ ಆರಾಧನೆ ಮಾಡುವಾಗ ಎಲ್ಲರೂ ಕೂಡ ಭಕ್ತಿಪೂರ್ವಕವಾಗಿ ಆರಾಧನೆ ಮಾಡ್ತಾರೆ ಹಾಗೆ ಶಿವನ ಆರಾಧನೆ ಮಾಡುವಾಗ ಕೂಡ ಕ್ರಮಬದ್ಧವಾಗಿ ಅವನ ಆರಾಧನೆ ಮಾಡ ಬೇಕಿರುತ್ತದೆ.

ಮುಕ್ಕಣ್ಣನು ಯಾವುದೇ ತರದ ಆಡಂಬರದ ಪೂಜೆಯನ್ನು ಇಷ್ಟಪಡುವುದಿಲ್ಲ ಯಾಕೆ ಅಂದರೆ ಈ ಸೃಷ್ಟಿಯ ಆದಿಯೂ ಅಂತ್ಯವೂ ಅವನೇ ಆಗಿರುವುದರಿಂದ, ಎಲ್ಲಾ ಜೀವಿಯು ಅಂತ್ಯವಾದಾಗ ಕೊನೆಗೆ ಉಳಿಯುವುದು ಬೂದಿ ಮಾತ್ರವೇ ಹಾಗಾಗಿಯೇ ಶಿವನಿಗೆ ಪೂಜೆ ಅಂದರೆ ವಿಭೂತಿ ಅಂದರೆ ಪ್ರಿಯಾ ಆತನಿಗೆ ಭಕ್ತಿಯಿಂದ ವಿಭೂತಿಯನ್ನು ಸಮರ್ಪಿಸಿದರು ಆತ ಅದನ್ನು ಮನಸಾರೆ ಒಪ್ಪಿಕೊಳ್ಳುತ್ತಾನೆ.ಆದರೆ ಯಾವಾಗ ನಾವು ಶಿವನ ಪೂಜೆಯ ಕುರಿತು ತಿಳಿಯದೆ ಅವನ ಆರಾಧನೆ ಮಾಡಲು ಮುಂದಾಗುತ್ತೇವೆ ಆಗ ನಾವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಹಾಗೇ ಕೆಲವರು ಶಿವನ ಮೇಲಿನ ನಂಬಿಕೆಯಿಂದ ಶಿವನ ಆರಾಧನೆ ಮಾಡಬೇಕೆಂದು ಮನೆಯೊಳಗೆ ಶಿವಲಿಂಗವನ್ನು ಇಟ್ಟುಕೊಂಡು ಅವನ ಆರಾಧನೆ ಮಾಡ್ತಾ ಇರ್ತಾರೆ. ಆದರೆ ನೀವು ಶಿವಲಿಂಗವನ್ನು ಈ ರೀತಿ ಮನೆಯಲ್ಲಿ ಇಟ್ಟು ಪೂಜಿಸುವಾಗ ಕೂಡ ಕೆಲ ಕ್ರಮಗಳನ್ನು ತಿಳಿದು ಅವನ ಆರಾಧನೆ ಮಾಡಬೇಕಿರುತ್ತದೆ. ಅದರಲ್ಲಿ ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಇಷ್ಟ ಬಂದಂತಹ ಲಿಂಗವನ್ನು ಮನೆಯಲ್ಲಿ ತಂದಿಟ್ಟು ಪೂಜಿಸಬಾರದು. ನಿಮ್ಮ ಹೆಬ್ಬೆರಳಿನ ಗಾತ್ರಕ್ಕಿಂತ ಚಿಕ್ಕದಾದ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ನೀವು ಪೂಜಿಸಬೇಕಿರುತ್ತದೆ,

ಹಾಗೆ ಶಿವಲಿಂಗವನ್ನು ಇಡುವಾಗ, ಶಿವಲಿಂಗವನ್ನು ಮಾತ್ರ ಮನೆಯೊಳಗೆ ಇಡಬಾರದು ಜೊತೆಗೆ ಗೌರಿ ಮತ್ತು ಗಜಾನನನನ್ನು ಸಹ ಶಿವಲಿಂಗದ ಜೊತೆಗೆ ಇಟ್ಟು ಪೂಜಿಸಬೇಕು. ಯಾಕೆಂದರೆ ಶಿವನನ್ನು ಅರ್ಧನಾರೇಶ್ವರನಾಗಿರುವ ಕಾರಣ ಕೇವಲ ಲಿಂಗವನ್ನು ಇಟ್ಟು ಪೂಜಿಸಿದಾಗ ಶಿವನು ಅಷ್ಟು ಸಂತೃಪ್ತನಾಗುವುದಿಲ್ಲ.ಶಿವನ ಲಿಂಗವನ್ನು ಇಟ್ಟಾಗ ಶಿವನ ಲಿಂಗದ ಮೇಲೆ ಮಡಿಕೆಯೊಂದರಲ್ಲಿ ನೀರನ್ನು ತುಂಬಿಸಿ ಅದರ ತಳಭಾಗದಲ್ಲಿ ಸ್ವಲ್ಪ ರಂಧ್ರವನ್ನು ಮಾಡಿ ಸದಾ ಶಿವಲಿಂಗದ ಮೇಲೆ ನೀರು ಹರಿಯುವ ಹಾಗೆ ಮಾಡಬೇಕು.

ಈ ರೀತಿ ಮಾಡುವುದರಿಂದ ಶಿವನು ಸದಾ ಸಂತಸ ನಾಗಿರುತ್ತಾನೆ ಆದರೆ ಈ ಕ್ರಮವನ್ನು ಬಾರಿಸಲು ಸಾಧ್ಯವಾಗಲಿಲ್ಲ ಅನ್ನುವವರು ಶಿವಲಿಂಗವನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ  ಅಭಿಷೇಕವನ್ನು ಮಾಡಬೇಕು.ಶಿವನಿಗೆ ತೆಂಗಿನಕಾಯಿಯನ್ನು ಸಮರ್ಪಣೆ ಮಾಡುವಾಗ ಅದರೊಳಗಿನ ನೀರನ್ನು ತೆಗೆದು ತೆಂಗಿನಕಾಯ ಹೂಳನ್ನು ಸಮರ್ಪಿಸಬೇಕು. ನಿಮಗಿದು ಗೊತ್ತಿರಬಹುದು ಶಿವನಿಗೆ ಬಿಲ್ವ ಅಂದರೆ ಪಂಚಪ್ರಾಣ ಅದಕ್ಕಾಗಿ ಶಿವನಿಗೆ ತುಳಸೀದಳವನ್ನು ಸಮರ್ಪಣೆ ಮಾಡುವುದಕ್ಕಿಂತ ಅವನಿಗೆ ಬಿಲ್ವವನ್ನು ಸಮರ್ಪಣೆ ಮಾಡಿದರೆ ಬಹಳ ಸಂತುಷ್ಟನಾಗುತ್ತಾನೆ ಶಿವನು.

ಶಿವನ ಲಿಂಗವನ್ನು ನೀವು ಮನೆಯಲ್ಲಿ ಎಲ್ಲೆಂದರೆ ಅಲ್ಲಿ ಇಡುವ ಆಗಿಲ್ಲ ಹೌದು ಕೆಲವರು ಶೋಕೇಸ್ ನಲ್ಲಿ ಶೋಪೀಸ್ ಗಾಗಿ ಮನೆಯಲ್ಲಿ ಶಿವಲಿಂಗವನ್ನು ಎತ್ತರ ಹೀಗೆ ಮಾಡಬಾರದು ದೇವರ ಕೋಣೆಯಲ್ಲಿ ಮಾತ್ರ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು ಮತ್ತು ಶಿವಲಿಂಗವನ್ನು ಪೂಜಿಸುವಾಗ ಮಂತ್ರ ಪಠಣೆ ಮಾಡಬೇಕು. ಈ ರೀತಿ ಮನೆಯಲ್ಲಿ ಲಿಂಗವನ್ನು ಇಡುವಾಗ ಲಿಂಗ ಪ್ರತಿಷ್ಠಾಪನೆ ಮಾಡುವ ಮುನ್ನ ಗಂಗಾಜಲದಿಂದ ಅಥವಾ ಕಾಯಿಸದೆ ಇರುವ ಗೋವಿನ ಹಾಲಿನಿಂದ ಆ ಸ್ಥಳವನ್ನ ಶುಚಿ ಮಾಡಬೇಕು.

Leave a Reply

Your email address will not be published.