ನಮಸ್ಕಾರಗಳು ಓದುಗರೆ, ಈ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರುತ್ತದೆ ಮನೆಯಲ್ಲಿ ಇರಲೇಬೇಕಾದ ಕೆಲವೊಂದು ವಸ್ತುಗಳು ಇವುಗಳ ಆಗಿರುತ್ತದೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನ ತಿಳಿಯಿರಿ ಮತ್ತು ಮನೆಯಲ್ಲಿ ಇರಲೇಬೇಕಾದ ಆ ಕೆಲವೊಂದು ವಸ್ತುಗಳು ಯಾವುವು ಎಂಬುದನ್ನು ಈ ಪುಟದಲ್ಲಿ ತಿಳಿದು ಮನೆಯಲ್ಲಿ ತಪ್ಪದೆ ಈ ಕೆಲವೊಂದು ವಸ್ತುಗಳನ್ನು ಇಡಿ ಇದರಿಂದ ಹೊರಬರುವ ಸಕಾರಾತ್ಮಕ ತರಂಗಗಳು ಮನೆಯನ್ನು ಸದಾ ಶಾಂತಿ ಎಂದು ಹೇಳಲು ಸಹಕಾರಿಯಾಗಿರುತ್ತದೆ
ಅಂದಿನ ಕಾಲದಲ್ಲಿಯೂ ಕೂಡ ಹಿರಿಯರು ತಪ್ಪದೆ ತಮ್ಮ ಮನೆಗಳಲ್ಲಿ ಇಂತಹ ವಸ್ತುಗಳನ್ನು ಇಡುತ್ತಿದ್ದರು. ಹಾಗಾಗಿಯೇ ಕೆಲವರ ಮನೆಗೆ ಇವತ್ತಿಗೂ ಹೋದಾಗ ಮನಸ್ಸಿಗೆ ನೆಮ್ಮದಿ ಆಗುವಂತಹ ಭಾವನೆ ಉಂಟಾಗುತ್ತದೆ. ಹಾಗಾದರೆ ಬನ್ನಿ ಮನೆಯಲ್ಲಿ ಇರಲೇಬೇಕಾದ ಆ ಕೆಲವೊಂದು ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ.ಹೌದು ಪ್ರಿಯಾ ಸ್ನೇಹಿತರ ಮನೆಯಲ್ಲಿ ನಾವು ಇಂತಹದೇ ಕೆಲವೊಂದು ವಸ್ತುಗಳನ್ನು ಇಡಬೇಕು ಇಂತಹದೇ ಕೆಲವೊಂದು ವಸ್ತುಗಳನ್ನು ಇಡಬಾರದು ಎಂಬ ನಿಯಮವಿದೆ ಯಾವುದೆಂದರೆ ಅಂತಹ ವಸ್ತುಗಳನ್ನು ಮನೆಯಲ್ಲಿ ಇಡುವಂತಿಲ್ಲ.
ಯಾಕೆ ಅಂದರೆ ಮನೆಯಲ್ಲಿ ನಾವುಗಳು ಸದಾ ಕಾಲ ಇರುವುದರಿಂದ ನಮ್ಮ ಸುತ್ತ ಇರುವ ವಸ್ತುಗಳು ಕೂಡ ನಮ್ಮ ಮೇಲೆ ನಮ್ಮ ಆಲೋಚನೆಗಳ ಮೇಲೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಯಾವ ಕೆಲವೊಂದು ವಸ್ತುಗಳನ್ನು ತಂದು ಇಡುವುದಕ್ಕಿಂತ ಮೊದಲು ಹಿರಿಯರು ಯೋಚಿಸಿ ಎಂದು ಕಿವಿ ಮಾತು ಹೇಳ್ತಾರೆ ಆದರೆ ಇವತ್ತಿನ ದಿನಗಳಲ್ಲಿ ಮನೆಗೆ ಅಲಂಕಾರಿಕ ವಸ್ತುಗಳು ಎಂದು ಪ್ಲಾಸ್ಟಿಕ್ ಗಳದ್ದೇ ವಸ್ತುಗಳು ತುಂಬಿ ಹೋಗಿರುತ್ತದೆ.ಆದರೆ ಅಂದಿನ ಕಾಲದ ಮನೆಗಳ ನೀವು ನೋಡಿದಾಗ ಮನೆ ಎಷ್ಟು ಪ್ರಶಾಂತ ಭಾವನೆಯನ್ನ ನೀಡುತ್ತಿತ್ತು ಮತ್ತು ಮನೆಯೊಳಗೆ ಕಾಲಿಡುತ್ತಿದ್ದ ಹಾಗೆ ಏಕಾಗ್ರತೆ ಎಂಬುದು ಹೆಚ್ಚು ಆಗುವುದರ ಜೊತೆಗೆ ಮನಸ್ಸಿಗೆ ಏನೋ ಸಂತಸದ ಅನುಭವ ಆಗುತ್ತಿತ್ತು
ಯಾಕೆ ಅಂದರೆ ಹಳೆ ಕಾಲದ ಮನೆಗಳಲ್ಲಿ ಹೆಚ್ಚಾಗಿ ತಾಮ್ರದಿಂದ ಮಾಡಿದಂತಹ ವಸ್ತುಗಳನ್ನು ಇಡುತ್ತಿದ್ದರು. ಹೌದು ಅಂದಿನ ಕಾಲದಲ್ಲಿ ಅಡುಗೆ ಮಾಡಲು ಕೂಡ ಹೆಚ್ಚಾಗಿ ತಾಮ್ರದ ಪಾತ್ರೆಗಳ ಬಳಕೆ ಮಾಡುತ್ತಿದ್ದರು ಹಾಗಾಗಿ ಮನೆಯಲ್ಲಿ ಸದಾ ಎಲ್ಲರೂ ಕೂಡ ಆರೋಗ್ಯದಿಂದ ಕೂಡಿರುತ್ತಿದ್ದರು.ಇದರ ಜೊತೆಗೆ ಮನೆಯಲ್ಲಿ ತಪ್ಪದೆ ಚಿನ್ನದ ವಸ್ತುಗಳನ್ನು ಕೂಡ ಇರಿಸಿರಬೇಕು, ಯಾಕೆ ಅಂದರೆ ಚಿನ್ನದ ವಸ್ತು ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತು ಆಗಿರುತ್ತದೆ ಈ ವಸ್ತುಗಳನ್ನು ಅಂದರೆ ಚಿನ್ನದಿಂದ ಮಾಡಿದ ಕೆಲ ಚಿಕ್ಕಪುಟ್ಟ ವಸ್ತುಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸದಾ ಮನೆಯಲ್ಲಿ ಲಕ್ಷ್ಮೀದೇವಿ ಸಂತಸದಿಂದ ನೆಲೆಸಿರುತ್ತಾಳೆ ಎಂಬ ನಂಬಿಕೆ.
ಬೆಳ್ಳಿ ಯಾವುದರ ಪ್ರತೀಕವಾಗಿರುತ್ತದೆ ಅಂದರೆ ಇದು ಲಕ್ಷ್ಮೀ ಕಾರಕ ಮತ್ತು ಚಂದ್ರ ಆಕರ್ಷಕ ವಸ್ತು ಆಗಿರುತ್ತದೆ ಬೆಳ್ಳಿಯನ್ನು ಯಾರೂ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಇದು ಜನಾಕರ್ಷಣೆಯನ್ನು ಕೂಡ ಮಾಡುವುದರಿಂದ ಧನ ಸಂಪತ್ತು ಕೂಡ ಮನೆಯಲ್ಲಿ ವೃದ್ಧಿಯಾಗುತ್ತದೆ ಮನೆಯಲ್ಲಿ ಬೆಳ್ಳಿವಸ್ತುಗಳ ಇಟ್ಟುಕೊಳ್ಳುವುದರಿಂದ. ಈ ರೀತಿಯಾಗಿ ಕೆಲವೊಂದು ಶ್ರೇಷ್ಠವಾದ ವಸ್ತುಗಳು ಮನೆಯಲ್ಲಿ ಇಡುವುದರಿಂದ ಬಹಳ ಒಳ್ಳೆಯದು ಅಂತಹ ವಸ್ತು ಗಳಿಂದ ಹೊರಬರುವ ಸಕಾರಾತ್ಮಕ ತರಂಗಗಳು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕಿ ಮನೆಯ ಸದಸ್ಯರ ಮೇಲೆ ಒಳ್ಳೆಯ ಪ್ರಭಾವ ಬೀರಲು ಸಹಕಾರಿಯಾಗಿರುತ್ತದೆ.
ಆದರೆ ಇವತ್ತಿನ ದಿನಗಳಲ್ಲಿ ಮನೆಗಳಲ್ಲಿ ನೋಡಿದಾಗ ಶೋಕೇಸ್ ನಲ್ಲಿ ಪ್ಲಾಸ್ಟಿಕ್ ನಿಂದ ಮಾಡಿರುವ ಸ್ಟೀಲ್ ಲೋಹದಿಂದ ಮಾಡಿರುವಂತಹ ಕೆಲವೊಂದು ಶೋ ಪೀಸ್ ಗಳನ್ನು ನಾವು ಹೆಚ್ಚಾಗಿ ಕಾಣುತ್ತವೆ. ಆದರೆ ಧನಾಕರ್ಷಣೆ ಮಾಡುವಂತಹ ಸಂಪತ್ತು ವೃದ್ಧಿ ಗೆ ಸಹಕಾರಿಯಾಗುವಂತಹ ಈ ಕೆಲವೊಂದು ವಸ್ತುಗಳು ಮನೆಯಲ್ಲಿ ಇಟ್ಟು ನೋಡಿ ಖಂಡಿತ ಇದರ ಪ್ರಭಾವವನ್ನು ನೀವು ಕಾಣಬಹುದು ಧನ್ಯವಾದ