ಯಾವುದೇ ಕಾರಣಕ್ಕೂ ನೀವು ನಿಮ್ಮ ಮನೆಯಲ್ಲಿ ಗಣಪತಿ ದೇವರ ಪ್ರತಿಮೆ ಅಥವಾ ಫೋಟೋವನ್ನು ಈ ದಿಕ್ಕಿನಲ್ಲಿ ಇರಿಸಬೇಡಿ.. ಒಂದೇ ವೇಳೆ ಈ ದಿಕ್ಕಿನಲ್ಲಿ ಇರಿಸಿದರೆ ಜೀವನದಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ….!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಿಯ ವೀಕ್ಷಕ ಬಂಧುಗಳೇ ಎಲ್ಲರಿಗೂ ಸಹ ತಮ್ಮ ಕುಟುಂಬ ತಮ್ಮ ಸಂಸಾರ ಚೆನ್ನಾಗಿರಬೇಕು ತಮ್ಮ ಮನೆಯ ಸದಸ್ಯರು ಏಳಿಗೆ ಕಾಣಬೇಕು, ತಮ್ಮವರು ಎತ್ತರಕ್ಕೆ ಬೆಳೆಯಬೇಕು ಈ ಸಮಾಜದಲ್ಲಿ ದೊಡ್ಡ ಹೆಸರು ಮಾಡಬೇಕು ಅನ್ನುವ ಕನಸು ಪ್ರತಿಯೊಬ್ಬರಿಗೂ ಸಹ ಇರುತ್ತದೆ ಇದಕ್ಕಾಗಿ ನಾವು ನಮ್ಮ ಶ್ರಮದ ಜೊತೆಗೆ ನಮ್ಮ ಪ್ರಾರ್ಥನೆಯು ಸಹ ನಮ್ಮ ಜೊತೆ ಇದ್ದರೆ ನಾವು ಜೀವನದಲ್ಲಿ ನಾವು ಕಂಡ ಕನಸು ನನಸು ಮಾಡಿಕೊಳ್ಳುವಂತೆ ಯಶಸ್ಸು ಕಾಣಬಹುದಾಗಿದೆ. ಹಾಗಾದರೆ ನಮ್ಮ ಪ್ರಾರ್ಥನೆ ಮತ್ತು ಆ ದೇವರ ಅನುಗ್ರಹ ನಮ್ಮ ಮೇಲೇರಬೇಕೆಂದರೆ ಏನು ಮಾಡಬೇಕು ಹೌದು ದೇವರ ಅನುಗ್ರಹ ಪಡೆದುಕೊಳ್ಳುವುದಕ್ಕೆ ನಾವೆಲ್ಲರೂ ಪ್ರತಿದಿನ ದೇವರ ಆರಾಧನೆ ಮಾಡ್ತೇವೆ.

ನಮ್ಮ ಜೀವನದಲ್ಲಿ ನಾವು ಮಾಡುವ ಕೆಲಸಗಳಿಗೆ ಎದುರಾಗುವ ವಿಘ್ನಗಳನ್ನು ನಿವಾರಣೆ ಮಾಡಿಕೊಂಡು ನಾವು ಮುಂದೆ ಸಾಗಬೇಕೆಂದರೆ ಆ ವಿಘ್ನ ವಿನಾಶಕನನ್ನು ಆರಾಧನೆ ಮಾಡ್ತವೆ ನೀವು ನೋಡಿರಬಹುದು ಪ್ರತಿಯೊಂದು ಒಳ್ಳೆ ಪೂಜೆಯಲ್ಲಿ ಒಳ್ಳೆಯ ಕಾರ್ಯಕ್ರಮಗಳಲ್ಲಿ ಮೊದಲು ಗಣಪತಿಯನ್ನು ನೆನೆಯುತ ಗಣಪತಿಯ ಆರಾಧನೆ ಮಾಡುತ್ತಾ ಕಾರ್ಯಕ್ರಮಗಳನ್ನಾಗಲೀ ಪೂಜೆಯನ್ನಾಗಲಿ ಶುಭಸಮಾರಂಭಗಳಲ್ಲಾಗಲಿ ಪ್ರಾರಂಭ ಮಾಡ್ತೇವೆ. ಇದರ ಹಿಂದಿರುವ ಕಾರಣವೇನು ಎಂದರೆ ನಾವು ಮಾಡುತ್ತಿರುವ ಶುಭ ಸಮಾರಂಭಗಳಿಗೆ ಶುಭ ಕಾರ್ಯಕ್ಕೆ ಯಾವುದೇ ವಿಘ್ನವಾಗದಿರಲಿ ಎಂದು ಗಣಪತಿಯ ಆರಾಧನೆ ಮಾಡುತ್ತೇವೆ.

ಇದೇ ರೀತಿ ನಾವು ಮನೆಯಲ್ಲಿ ಗಣಪತಿಯ ಆರಾಧನೆ ಮಾಡುವುದಕ್ಕಾಗಿಯೇ ಮೂರ್ತಿ ಇಟ್ಟು ಆರಾಧನೆ ಮಾಡ್ತೇವೆ. ಹಾಗಾದರೆ ವಿಘ್ನವಿನಾಶಕನ ಆರಾಧನೆ ಮಾಡುವುದಕ್ಕೆ ಮನೆಯಲ್ಲಿ ಯಾವ ಮೂರ್ತಿ ಇಟ್ಟರೆ ಲಾಭ ಹಾಗೂ ಯಾವ ದಿಕ್ಕಿನಲ್ಲಿ ವಿಘ್ನವಿನಾಶಕನನ್ನು ಪ್ರತಿಷ್ಠಾಪನೆ ಮಾಡಬೇಕಿರುತ್ತದೆ ಇದನೆಲ್ಲ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹೌದು ವಿಘ್ನವಿನಾಶಕ ಗಜಾನನನ ವಿಚಾರದಲ್ಲಿ ಗಜಾನನ ಆರಾಧನೆಯಲ್ಲಿ ಸ್ವಲ್ಪವೂ ಸಹ ವಿಘ್ನ ಗಳಿರಬಾರದು ಬಹಳ ಅಚ್ಚುಕಟ್ಟಾಗಿ ಆತನ ಆರಾಧನೆ ಮಾಡಬೇಕಿರುತ್ತದೆ ಇಲ್ಲವಾದಲ್ಲಿ ಗಣಪತಿಯ ಅನುಗ್ರಹ ಪಡೆಯಲು ಸಾಧ್ಯವಾಗುವುದಿಲ್ಲಾ.

ಹೌದು ಗಜಾನನ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಈಶಾನ್ಯ ಮೂಲೆಯಲ್ಲಿ ಇರಿಸಬೇಕು ಹೌದು ಈಶಾನ್ಯ ಮೂಲೆಯಲ್ಲಿ ಗಣಪತಿಯ ಮೂರ್ತಿಯನ್ನು ಇರಿಸಿ ಪೂಜೆ ಮಾಡುತ್ತಾ ಬಂದರೆ ಗಣಪತಿ ಪ್ರಸನ್ನನಾಗುತ್ತಾನೆ ಹಾಗೂ ಆತನ ಆಶೀರ್ವಾದ ಅನುಗ್ರಹ ನಮ್ಮ ಮೇಲೆ ಸದಾ ಇರುತ್ತದೆ. ಮನೆಯಲ್ಲಿ ಬೆಳ್ಳಿ ಲೋಹದ ಅಥವಾ ತಾಮ್ರಲೋಹದ ಗಣಪತಿಯ ಮೂರ್ತಿಯನ್ನು ಇರಿಸಿ ಪೂಜೆ ಮಾಡಲಾಗುತ್ತದೆ.

ಇಂತಹದೇ ಲೋಹದ ಗಣಪತಿಯನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು ಅಂತೇನಿಲ್ಲ ಬೆಳ್ಳಿ ಅಥವಾ ತಾಮ್ರದ ಲೋಹದ ಗಣಪತಿಯನ್ನು ಮನೆಯಲ್ಲಿಯೇ ಇರಿಸಿ ಪೂಜಿಸುವುದರಿಂದ ಅದರಲ್ಲಿಯೂ ನಮ್ಮ ಹೆಬ್ಬೆರಳಿನ ಗಾತ್ರದ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಇರಿಸಿ ಮನೆಗೆ ಒಳ್ಳೆಯದಾಗುತ್ತದೆ ಹಾಗೂ ನಿಮ್ಮ ಎಲ್ಲಾ ವಿಘ್ನಗಳು ದೂರವಾಗುತ್ತದೆ. ಹಿಂದಿನ ಕಾಲದಲ್ಲಿ ಮಣ್ಣಿನಿಂದ ಮಾಡಿದಂತಹ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು ಇದರಲ್ಲಿ ಎಡಮುರಿ ಗಣಪತಿ ಮತ್ತು ಬಲಮುರಿ ಗಣಪತಿ ಎಂದು 2ವಿಧ ಇರುತ್ತಿತ್ತು.

ಮನೆಯಲ್ಲಿ ಯಾವಾಗಲೂ ಎಡಮುರಿ ಗಣಪತಿ ಅನ್ನೂ ಮಾತ್ರ ಪ್ರತಿಷ್ಠಾಪನೆ ಮಾಡಬೇಕಿರುತ್ತದೆ ಬಲಮುರಿ ಗಣಪತಿ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದರೆ ಅದಕ್ಕೆ ಅಂತಾನೆ ಪ್ರತ್ಯೇಕ ಮಂತ್ರಗಳು ಹಾಗೂ ಗಣಪತಿಗೆ ಪ್ರತ್ಯೇಕ ನೈವೇದ್ಯ ಸಮರ್ಪಿಸುವ ಮೂಲಕ ಬಲಮುರಿ ಗಣಪತಿ ಆರಾಧನೆ ಮಾಡಬೇಕಿರುತ್ತದೆ ಆದ್ದರಿಂದ ಮನೆಯಲ್ಲಿ ಎಡಮುರಿ ಗಣಪತಿ ಅನ್ನೂ ಮಾತ್ರ ಪ್ರತಿಷ್ಠಾಪನೆ ಮಾಡಬೇಕು.ನೆನಪಿನಲ್ಲಿ ಈಡೇ ಯಾವುದೇ ಕಾರಣಕ್ಕೂ ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಗಣಪತಿ ಮೂರ್ತಿಯನ್ನು ಇರಿಸಬಾರದು

ಯಾವಾಗಲೂ ಮನೆಯಲ್ಲಿ ಗಣಪತಿಯ ವಿಗ್ರಹ ಅಥವಾ ಗಣಪತಿ ಮೂರ್ತಿಯನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸುವುದು ಶ್ರೇಷ್ಠ ಎಂದು ಹೇಳಲಾಗಿದೆ ಆದರೆ ನಾವು ಈ ದಿನ ತಿಳಿಸಿದ ಈ ಮಾಹಿತಿಯಂತೆ ಗಣಪತಿಯ ಆರಾಧನೆ ಮಾಡಿ ಗಣಪತಿಯನ್ನು ಪ್ರತ್ಯೇಕ ದಿಕ್ಕಿನಲ್ಲಿ ಇರಿಸಿ ನಿಮ್ಮ ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ವಿಘ್ನಗಳನ್ನು ನಿವಾರಿಸಿಕೊಳ್ಳಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.