ನಿಮ್ಮ ಮನಸಿನಲ್ಲಿ ಏನಾದ್ರು ಕೋರಿಕೆಗಳು ಇದ್ದರೆ ದೇವರಲ್ಲಿ ಈ ರೀತಿ ಪ್ರಾರ್ಥನೆ ಮಾಡಿಕೊಳ್ಳುವುದರಿಂದ ನಿಮ್ಮ ಬೇಡಿಕೆಗಳು ಶೀಘ್ರದಲ್ಲಿ ನೆರವೇರುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪ್ರಿಯ ಸ್ನೇಹಿತರೆ ಕಷ್ಟ ಬಂದಾಗ ದೇವರಲ್ಲಿ ಎಲ್ಲರೂ ಕೂಡ ಹೌದು ಕಷ್ಟ ಬಂದಾಗಲೇ ಅಲ್ವಾ ಹೆಚ್ಚು ಮಂದಿ ದೇವರನ್ನ ನೆನಪಿಸಿಕೊಳ್ಳುವುದು ಹಾಗೆ ದೇವರಲ್ಲಿ ಪ್ರಾರ್ಥಿಸುವಾಗ ನಾವು ಯಾವ ರೀತಿ ದೇವರಲ್ಲಿ ಪ್ರಾರ್ಥಿಸಿದರೆ ಅದು ಅವನ ಸಂಪೂರ್ಣ ಅನುಗ್ರಹ ನಮ್ಮ ಮೇಲಾಗುತ್ತದೆ ಗೊತ್ತಾ ನಾವು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ದೇವರಲ್ಲಿ ಹೇಗೆ ಪ್ರಾರ್ಥಿಸಿಕೊಳ್ಳಬೇಕು ಮತ್ತು ಆ ಪ್ರಾರ್ಥನೆ ಸಲ್ಲಿಸಿದ ಮೇಲೆ ನಾವು ದೇವರಿಗೆ ಏನನ್ನು ನೀಡಬೇಕು ಎಂಬುದರ ಪ್ರತಿಯೊಂದು ಮಾಹಿತಿಯನ್ನು. ಈ ಪುಟವನ್ನು ಸಂಪೂರ್ಣವಾಗಿ ತಿಳಿದು ನೀವು ಕೂಡ ಕಷ್ಟದಲ್ಲಿದ್ದೀರಿ ಹಾಗಾದರೆ ದೇವರಲ್ಲಿ ಈ ರೀತಿಯಾಗಿ ಪ್ರಾರ್ಥಿಸಿಕೊಳ್ಳಿ ಖಂಡಿತ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ.

ಹೌದು ಹಿರಿಯರು ಒಂದು ಅದ್ಭುತವಾದ ಮಾತನ್ನು ಹೇಳಿದ್ದಾರೆ ಕಷ್ಟ ಬಂದಾಗ ವೆಂಕಟರಮಣ ಅಂತ ಹೌದು ಮನುಷ್ಯನ ಸ್ವಭಾವವೂ ಕೂಡ ಹಾಗೆ ಸಾಮಾನ್ಯವಾಗಿ ಕೆಲವರು ಕೆಲ ಮಂದಿ ಪ್ರತಿದಿನ ದೇವಸ್ಥಾನಕ್ಕೆ ಹೋಗ್ತಾರೆ ದೇವರಲ್ಲಿ ಪ್ರಾರ್ಥಿಸುತ್ತಾರೆ ಹಾಗೆ ಇನ್ನೂ ಕೆಲವರು ಮಾತ್ರ ಹೇಗೆ ಅಂದರೆ ಕಷ್ಟ ಬಂದಾಗ ಮಾತ್ರ ದೇವರಲ್ಲಿ ಹೋಗಿ ಅಪ್ಲಿಕೇಶನ್ ಒಂದನ್ನು ಹಾಕಿ ತಮ್ಮ ಕಷ್ಟಗಳನ್ನು ಈಡೇರಿಸೋ ನಾವು ಹಾಗೆ ಮಾಡ್ತೇವೆ ಹೀಗೆ ಮಾಡ್ತೇವೆ ಈ ಕಾಣಿಕೆ ಕೊಡ್ತೇವೆ ಎಂದು ಹರಕೆ ಹೊತ್ತು ಬರ್ತಾರೆ. ಹೌದು ಹರಕೆಯ ಒಂದು ಪದ್ಧತಿ ನಿಮಗೆ ತಿಳಿದೇ ಇದೆ ಈ ಹರಕೆ ಅಂದರೆ ನಾವು ದೇವರಿಗೆ ನಮ್ಮ ಕಷ್ಟಗಳನ್ನು ತೀರಿದಾಗ ಕೊಡುವ ಒಂದು ಉಡುಗೊರೆಯ ರೂಪವೆಂದು ಹೇಳಬಹುದು.

ಹೌದು ನಮ್ಮ ಕಷ್ಟ ತೀರಿಸಿದ್ದಕ್ಕೆ ನಾವು ದೇವರ ಬಳಿ ಮುಂಚೆ ಕೇಳಿಕೊಂಡ ಹಾಗೆ ದೇವರಿಗೆ ಸಲ್ಲಿಸಿದ್ದನ್ನ ಸಲ್ಲಿಸಲೇ ಬೇಕು ಅಲ್ವಾ. ಹಾಗಾಗಿ ನಾವು ಕಷ್ಟ ತೀರಿದ ಮೇಲೆ ದೇವರಿಗೂ ಕೂಡ ಸಲ್ಲಿಸಬೇಕಾದ ಮುಡುಪನ್ನು ನಾವು ದೇವರಿಗೆ ಸಲ್ಲಿಸಲೆ ಬೇಕಲ್ವಾ. ಆದರೆ ಈ ರೀತಿ ಹರಕೆ ಹೊರುವುದು ಅದನ್ನು ತೀರಿಸುವುದು ಅಥವಾ ಅದನ್ನು ಮರೆತು ಬಿಡುವುದು ಹೀಗೆಲ್ಲಾ ಮಾಡುವುದರ ಬದಲು ದೇವರಲ್ಲಿ ಪ್ರಾರ್ಥಿಸುವಾಗ ಯಾವ ವಿಧಾನದಲ್ಲಿ ಪ್ರಾರ್ಥಿಸಬೇಕು ಎಂಬುದನ್ನು ತಿಳಿದಿರಿ.ಹೌದು ಈ ಕಾಣಿಕೆ ಹಾಕುವುದು ಹರಕೆ ಮಾಡಿಕೊಳ್ಳುವುದು ನಮಗೆ ಈ ಸಲ ನಾವು ಅದನ್ನು ನೀಡ್ತೇವೆ ಅನ್ನುವುದು ಇದೆಲ್ಲ ದೇವರಿಗೆ ಯಾವುದೋ ರೀತಿಯಲ್ಲಿ ಲಂಚ ಕೊಟ್ಟ ಹಾಗೆ ಆಗುತ್ತೆ ನೋಡಿ.

ಹಾಗಾಗಿ ದೇವರಲ್ಲಿ ಬೇಡಿಕೊಳ್ಳಬೇಕು ಅನ್ನೋದನ್ನ ನಾವು ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಸರಿ ಅನಿಸಿದರೆ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚ್ಚಿಕೊಳ್ಳಿ.ಹೌದು ಕಷ್ಟ ಬಂತು ಅಂದಾಗ ಮಾತ್ರ ದೇವರ ಬಳಿ ಹೋಗಬೇಡಿ ದೇವರು ಕಾಣದ ಶಕ್ತಿ ಆ ಶಕ್ತಿ ಸದಾ ನಮ್ಮನ್ನು ಕಾಯುತ್ತಲೇ ಇರುತ್ತದೆ ಹಾಗಾಗಿ ಪ್ರತಿ ದಿನ ಅವನನ್ನು ಪ್ರಾರ್ಥಿಸಿ ಪ್ರತಿದಿನ ಅವನನ್ನು ಸ್ಮರಿಸಿ ಆತನ ದರ್ಶನ ಪಡೆಯಿರಿ ಖಂಡಿತಾ ನಿಮ್ಮ ಜೊತೆ ದೇವರ ಶಕ್ತಿ ಇದ್ದೇ ಇರುತ್ತದೆ ಮತ್ತು ಕಷ್ಟ ಬಂದಾಗ ಹೀಗೆ ಮಾಡಿ ಅಕಸ್ಮಾತ್ ನೀವು ಕೆಲಸ ಇಲ್ಲದೆ ಪರದಾಡುತ್ತಾ ಇರುತ್ತೀರಾ ಅಂದಾಗ ದೇವರಲ್ಲಿ ಈ ರೀತಿ ಬೇಡಿಕೊಳ್ಳಿ ದೇವರೇ ತನಗೆ ತುಂಬಾ ಕಷ್ಟ ಆಗಿದೆ ನನ್ನ ಕುಟುಂಬದವರಿಗೂ ಹೊರೆ ಹಾಕಿದೆ

ಹಾಗಾಗಿ ನನಗೆ ಒಂದು ಕೆಲಸವನ್ನು ಅನುಗ್ರಹಿಸು ಇದರಿಂದ ನಾನು ಸ್ವತಂತ್ರವಾಗಿ ಬಾಳುತ್ತೇನೆ ಮತ್ತು ನನ್ನ ಕುಟುಂಬದವರಿಗೂ ಕೂಡ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇದರಿಂದ ನನ್ನ ಕುಟುಂಬದ ಕಷ್ಟ ಕೂಡ ತೀರುತ್ತದೆ ಎಂದು ಕೆಲಸ ಕೊಡಿಸುವುದಾಗಿ ದೇವರಲ್ಲಿ ಪ್ರಾರ್ಥಿಸಿ ಕೊಳ್ಳಿ.ಈ ರೀತಿ ನೀವು ದೇವರಲ್ಲಿ ಪ್ರಾರ್ಥಿಸಿದ ಮೇಲೆ ಖಂಡಿತ ದೇವರು ನಿಮ್ಮ ಕೈ ಹಿಡಿಯುತ್ತಾನೆ ಆದರೆ ನಿಮ್ಮ ಪ್ರಾರ್ಥನೆ ಫಲ ನೀಡಿದ ಮೇಲೆ ಯಾವುದೇ ಕಾರಣಕ್ಕೂ ಬದಲಾಗಬೇಡಿ, ದೇವರ ನಾಮ ಪಠಿಸಿ ದೇವರ ದರ್ಶನ ಪಡೆದು ಬನ್ನಿ. ಈ ರೀತಿ ನೀವು ಸದಾ ಸ್ಥಿರವಾಗಿರುವುದರಿಂದ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಸ್ಥಿರವಾಗಿರುತ್ತದೆ ಧನ್ಯವಾದ.

Leave a Reply

Your email address will not be published. Required fields are marked *