ನಿಮಗೆ ಏನಾದ್ರು ಬೆಳಗಿನ ಜಾವದ ಕನಸಿನಲ್ಲಿ ಮಂಗಳಮುಖಿಯರು ಮತ್ತು ಮುತ್ತೈದೆಯರು ಕಾಣಿಸಿಕೊಂಡರೆ ಅದರ ಅರ್ಥ ಏನು ಗೊತ್ತ ..ಶುಭವೋ ಇಲ್ಲ ಅಶುಭವೋ .!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ರಾತ್ರಿ ಸಮಯದಲ್ಲಿ ಅಥವಾ ಬೆಳಗಿನ ಜಾವ ಬೀಳುವ ಕನಸು ಅದು ಕೆಲವೊಂದು ಬಾರಿ ನಿಜವಾಗುತ್ತದೆ ಅಂತ ಹೇಳುವುದನ್ನು ನೀವು ಕೂಡ ಕೇಳಿರುತ್ತಿರಾ ಅಲ್ವಾ. ಹೌದು ಹಿರಿಯರು ಮನೆಯಲ್ಲಿದ್ದರೆ ಈ ಮಾತು ಹೇಳುವುದನ್ನು ಕೇಳಿರ್ತೀರಾ ಅದರಲ್ಲಿಯೂ ಈ ಮುತ್ತೈದೆಯರಿಗೆ ಬೀಳುವ ಕನಸು, ಹೌದು ಮದುವೆಯಾದವರಿಗೆ ಬೀಳುವ ಕನಸು ಕೆಲವೊಂದು ಬಾರಿ ನಿಜ ಆಗುತ್ತಾ ಇರುತ್ತದೆ ಹಾಗಾಗಿ ಆ ಕನಸಿನಿಂದಲೇ ಅವರು ಮುಂದೆ ಸಿಗುವ ಕೆಲವೊಂದು ಸೂಚನೆಗಳ ಬಗ್ಗೆ ಅರಿತು, ಅದಕ್ಕೆ ಬೇಕಾದ ಕ್ರಮವನ್ನು ಕೂಡ ಮುಂಚೆಯೇ ತೆಗೆದುಕೊಳ್ತಾರೆ. ಹೌದು ಇಂತಹ ತಂತ್ರಜ್ಞಾನ ಯುಗದಲ್ಲಿಯೂ ಇವತ್ತಿಗೂ ಕನಸಿನ ಅರ್ಥವನ್ನು ತಿಳಿದು, ಆ ಕನಸು ಯಾವುದರ ಸಂಕೇತ ಆಗಿರಬಹುದು ಎಂದು ತಿಳಿದುಕೊಳ್ಳುವವರು ಕೂಡ ಇದ್ದಾರೆ.

ಈ ದಿನದ ಲೇಖನಿಯಲ್ಲಿ ಕನಸಿನಲ್ಲಿ ಮಂಗಳಮುಖಿಯರು ಅಥವಾ ಮುತ್ತೈದೆಯರು ಬಂದರೆ ಅವರು ಕನಸಿನಲ್ಲಿ ಕೊಡುವ ಕೆಲವೊಂದು ಸೂಚನೆಗಳು ಏನನ ತಿಳಿಹೇಳುತ್ತಾ ಇರುತ್ತದೆ ಎಂಬುದನ್ನು ಈ ಪುಟದಲ್ಲಿ ತಿಳಿಸಲು ಹೊರಟಿದ್ದೇವೆ ನಿಮಗೂ ಕೂಡ ಕೆಲವೊಂದು ಬಾರಿ ಬೀಳುವ ಕನಸು ಅದು ನಿಜವಾಗಿದ್ದಲ್ಲಿ ಈ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಹೌದು ಕೆಲವರಿಗೆ ಇದೆಲ್ಲಾ ಹಾಸ್ಯ ಅನಿಸಬಹುದು ಮೂಢನಂಬಿಕೆ ಎನಿಸಬಹುದು ಕೆಲವರಿಗೆ ನಂಬಿಕೆ ಇಲ್ಲದೆ ಇರಬಹುದು, ಆದರೆ ನಂಬುವವರಿಗೆ ಮಾತ್ರ ಕನಸು ಎಂಬುದು ಕೆಲವೊಂದು ಸೂಚನೆ ನೀಡುತ್ತಾ ಇರುತ್ತದೆ, ಇನ್ನು ಕೆಲವರು ಈ ಕನಸನ್ನು ದೇವರ ಹಸ್ತಕ್ಷೇಪ ಅಂತ ಕೂಡ ಭಾವಿಸಿರುತ್ತಾರೆ.

ಹಾಗದರೆ ಮಾಹಿತಿಗೆ ಬರೋಣ ಬನ್ನಿ ಸ್ನೇಹಿತರೆ ಕನಸಿನಲ್ಲಿ ನಿಮಗೇನಾದರೂ ಇಹಲೋಕ ತ್ಯಜಿಸಿದವರು ಕಾಣಿಸಿಕೊಂಡಾಗ, ಅವರು ಕೂಡ ನಿಮಗೆ ಕಿಳುವುದು ಸೂಚನೆ ನೀಡುತ್ತಾ ಇರ್ತಾರೆ ಹೌದು ಅಂಥವರು ನಿಮ್ಮ ಕನಸಿನಲ್ಲಿ ಬಂದಾಗ ನೀವು ಎಲ್ಲಿಯೊ ಎಡವುತ್ತಿದ್ದೀರ ಎಚ್ಚೆತ್ತುಕೋ ಎಂದು ತಿಳಿಸಲು ಬಂದಿರ್ತಾರೆ ಅಥವಾ ನೀವು ಅವರನ್ನ ನೆನಪು ಮಾಡಿಕೊಂಡಾಗ ಆ ದಿನ ರಾತ್ರಿ ಕನಸಿನಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಅತಿಯಾಗಿ ಪ್ರೀತಿಸುವವರು ನಿಮ್ಮನು ಬಿಟ್ಟು ಬಾರದ ಲೋಕಕ್ಕೆ ಹೋದಾಗ ಕೆಲವೊಂದು ಬಾರಿ ನಿಮ್ಮ ಕನಸಿನಲ್ಲಿ ಕಾಣಿಸುವುದುಂಟು.

ಹಾಗೆ ನಿಮಗೇನಾದರೂ ಮಂಗಳಮುಖಿ ಕಾಣಿಸಿಕೊಂಡಾಗ ಅದರಲ್ಲಿಯೂ ಮುಖ್ಯವಾಗಿ ನೀವು ಅವರಿಂದ ಹಣ ಪಡೆದು ಕೊಳ್ಳುತ್ತಿರುವ ಹಾಗೆ ನಿಮಗೆ ಕನಸು ಬಿದ್ದರೆ ನಿಮ್ಮ ಜೀವನದಲ್ಲಿ ಬಹಳ ಉನ್ನತ ಮಟ್ಟಕ್ಕೆ ಏರಲಿದ್ದು ಎಂಬುದನ್ನ ಈ ಕನಸು ನಿಮಗೆ ಸೂಚನೆ ನೀಡುತ್ತಾರೆ. ಹೌದು ಮಂಗಳಮುಖಿ ಅಂದರೆ ಅವರನ್ನು ಹಿಂದೂ ಸಂಪ್ರದಾಯದಲ್ಲಿ ದೇವರ ರೂಪದಲ್ಲಿ ಪರಿಗಣಿಸಲಾಗುತ್ತದೆ. ಹಾಗಾಗಿ ಅವರಿಂದ ನೀವು ಹಣ ಪಡೆದುಕೊಳ್ಳುತ್ತಿರುವ ಹಾಗೆ ನಿಮಗೇನಾದರೂ ಕನಸು ಕಂಡರೆ ಅದು ನಿಮಗೆ ಮುಂದಿನ ದಿನಗಳಲ್ಲಿ ಬಹಳ ಅದೃಷ್ಟ ಒಲಿದು ಬರಲಿದೆ ಎಂಬುದರ ಸೂಚನೆಯಾಗಿರುತ್ತದೆ.

ಹೌದು ಮುತ್ತೈದೆಯರು ಬಂದರೆ ನಿಮ್ಮ ಕನಸಿನಲ್ಲಿ ಅಮ್ಮನವರು ಬಂದ ಹಾಗೆ ಹಾಗೆ ಮುತ್ತೈದೆಯರು ಬಂದು ನಿಮಗೇನಾದ್ರೂ ಸೂಚನೆ ಕೊಟ್ಟಿದ್ದಾರೆ ಅಥವಾ ಮದುವೆಯಾಗಿರುವ ಹೆಣ್ಣು ಮಕ್ಕಳು ಬಂದು ನಿಮಗೆ ಏನೋ ಹೇಳುತ್ತಾ ಇದ್ದಾರೆ ಅಂದರೆ ನೀವು ಅದನ್ನು ಸರಿಯಾಗಿ ಪರಿಗಣಿಸಿ ಕೊಳ್ಳಿ ಯಾವ ವಿಚಾರದ ಕುರಿತು ನಿಮಗೆ ಆ ಮುತ್ತೈದೆ ಸೂಚನೆ ನೀಡುತ್ತಾ ಇದ್ದಾರೆ ಎಂದು ತಿಳಿದುಕೊಳ್ಳಿ. ಯಾಕೆಂದರೆ ಕೆಲವೊಂದು ಬಾರಿ ನಿಮ್ಮ ಜೀವನದಲ್ಲಿ ನೀವು ಹಾದಿ ತಪ್ಪುತ್ತ ಇದ್ದೀರಾ ಅಂದಾಗ ಅಥವಾ ಯಾವುದಾದರೂ ಹೊಸ ಕೆಲಸ ಪ್ರಾರಂಭ ಮಾಡುತ್ತಿದ್ದೀರಿ ಹೊಸ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ಎಂದಾಗ, ದೇವರೇ ನಿಮಗೆ ಬಂದು ಕೆಲವೊಂದು ಬಾರಿ ಕೆಲವೊಂದು ಸೂಚನೆ ನೀಡುತ್ತ ಇರುತ್ತಾರೆ. ಹಾಗಾಗಿ ಅದನ್ನು ಸರಿಯಾಗಿ ತಿಳಿದು ಮುಂದೆ ನಡೆದಾಗ ಆ ದೇವರ ಅನುಗ್ರಹದೊಂದಿಗೆ ನೀವು ಜೀವನದಲ್ಲಿ ಮುಂದೆ ಸಾಗುತ್ತೀರಿ.

ಅಕಸ್ಮಾತ್ ನಿಮ್ಮ ಕನಸಿನಲ್ಲಿ ಮಂಗಳಮುಖಿ ಕಾಣಿಸಿಕೊಂಡು ನೀವು ಹಣ ಕೊಡುತ್ತಿದ್ದರು ಅವರು ನಿಮ್ಮಿಂದ ಹಣ ಪಡೆದುಕೊಳ್ಳುತ್ತಿಲ್ಲ ಹಾಗೆ ಹೋಗುತ್ತಿದ್ದಾರೆ ಎಂದರೆ ನಿಮಗೆ ಅದು ಕೆಟ್ಟ ಸೂಚನೆಯಾಗಿರುತ್ತದೆ ಮುಂದೆ ಯಾವುದಾದರು ಅವಘಡ ಸಂಭವಿಸಬಹುದು ಎಂಬುದರ ಅರ್ಥವಾಗಿರುತ್ತದೆ. ಹಾಗಾಗಿ ಅಂತಹ ಕನಸು ಬಿದ್ದಾಗ ಆ ಕನಸು ಪರಿಹಾರ ಮಾಡಿಕೊಳ್ಳುವುದಕ್ಕೆ ಮುಂದೆ ಯಾವುದೇ ಕೆಟ್ಟ ಘಟನೆಯು ನಡೆಯಬಾರದೆಂದರೆ, ನಿಮಗೆ ದಾರಿಯಲ್ಲಿ ಹೋಗುವಾಗ ಮಂಗಳಮುಖಿ ಕಂಡರೆ, ನಿಮ್ಮ ಕೈಲಾದ ಸಹಾಯ ಮಾಡಿ. ಮುಂದೆ ನಡೆಯಬಹುದಾದ ಕೆಲವು ಕೆಟ್ಟ ಘಟನೆಗಳು ಪರಿಹಾರವಾಗುತ್ತದೆ ಧನ್ಯವಾದ.

Leave a Reply

Your email address will not be published. Required fields are marked *