ಹೊಸದಾಗಿ ಮದುವೆಯಾದ ಜೋಡಿಗಳು ಆಷಾಢ ಮಾಸದಲ್ಲಿ ಜೊತೆಗೆ ಇರುವುದಿಲ್ಲ ಯಾಕೆ ಗೊತ್ತ ಹಾಗೆಯೇ ಹೆಣ್ಣುಮಕ್ಕಳು ಈ ಮಾಸದಲ್ಲಿ ತವರಿಗೆ ಯಾಕೆ ಹೋಗುತ್ತಾರೆ ಗೊತ್ತ ಒಂದಿಷ್ಟು ಮಾಹಿತಿ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಗಳು ತವರಿಗೆ ಹೋಗುವುದು ಯಾಕೆ ಗೊತ್ತಾ. ಈ ಮಾಸದಲ್ಲಿ ಗಂಡ ಹೆಂಡತಿ ಸೇರುವುದಿಲ್ಲ ಯಾಕೆ ಗೊತ್ತಾ. ಹೌದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹೊಸದಾಗಿ ಮದುವೆಯಾದ ವಧು ವರರು ಈ ಆಷಾಢ ಮಾಸದಲ್ಲಿ ಸೇರುವಂತಿಲ್ಲ, ಯಾವುದೇ ಕಾರಣಕ್ಕೂ ಈ ಮಾಸದಲ್ಲಿ ಹೊಸ ವಧು ವರರು ಸೇರುವುದಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು ತಿಳಿದುಕೊಳ್ಳುವ ಕುತೂಹಲ ನಿಮಗೂ ಕೂಡ ಇದೆಯಾ, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ನಾವು ತಿಳಿಸಿಕೊಡಲಿದ್ದೇವೆ ಈ ಕುರಿತು ಈ ಪದ್ದತಿಯ ಹಿಂದಿನ ಅರ್ಥವೇನು ಹಾಗೂ ಈ ಪದ್ಧತಿ ಅನ್ನು ಯಾವಾಗಿನಿಂದ ಮಂದಿ ಪಾಲಿಸುತ್ತಿದ್ದಾರೆ ಹಿರಿಯರು ಇದಕ್ಕೆ ಕೊಡುವ ಕಾರಣಗಳೇನು ಜೊತೆಗೆ ವೈಜ್ಞಾನಿಕ ಕಾರಣಗಳನ್ನು ಕೂಡ ತಿಳಿಯೋಣ ಬನ್ನಿ ಈ ಕೆಳಗಿನ ಮಾಹಿತಿಯಲ್ಲಿ.

ಹೌದು ಪ್ರಿಯಾ ಸ್ನೇಹಿತರೆ, ಹಿಂದು ಸಂಪ್ರದಾಯದ ಪ್ರಕಾರ ಆಷಾಢ ಮಾಸವನ್ನು ಕೆಟ್ಟ ಮಾಸಾ ಎಂದು ಪರಿಗಣಿಸಲಾಗಿದೆ. ಹೌದು ಒಳ್ಳೆಯ ಮಾಸ ಅಲ್ಲಾ ಎಂದ ಮಾತ್ರಕ್ಕೆ, ಈ ಮಾಸದಲ್ಲಿ ಕೆಟ್ಟದ್ದೇ ನಡೆಯುತ್ತಾ ಅಂತ ಅಲ್ಲ ಈ ಆಷಾಢ ಮಾಸವೂ ಹಿಂದೂ ಪುರಾಣ ಗ್ರಂಥದ ಪ್ರಕಾರ ಮೂರನೆಯ ತಿಂಗಳು ಆಗಿದ್ದು ಈ ಮಾಸವು ಬಹುಶಃ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬರುತ್ತದೆ. ಹೌದು ಹೆಚ್ಚಾಗಿ ಜನರಿಗೆ ಹಿಂದೂ ಪಂಚಾಂಗದ ಪರಿಚಯ ಆಗುವುದಕ್ಕಿಂತ ಆಂಗ್ಲರ ಕ್ಯಾಲೆಂಡರ್ ಪರಿಚಯವೇ ಹೆಚ್ಚು.

ಆದರೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರವೇ ಹಿಂದೂ ಪಂಚಾಂಗವನ್ನ ನೋಡಿಯೇ ಹಿಂದುಗಳು ಹಬ್ಬಗಳನ್ನ ಮಾಡುವುದು ಒಳ್ಳೆಯ ಕಾರ್ಯಕ್ರಮಗಳನ್ನ ಶುಭ ಕಾರ್ಯಕ್ರಮಗಳು ಕೈಗೊಳ್ಳುವುದು. ಹೀಗಿರುವಾಗ ಆಷಾಡ ಮಾಸದಲ್ಲಿ ಯಾವುದೇ ತರಹದ ಶುಭಕಾರ್ಯಕ್ರಮಗಳು ಜರುಗುವುದಿಲ್ಲ ಅಂದರೆ ಮದುವೆ ಆಗಲಿ ನಾಮಕರಣ ಶಾಸ್ತ್ರ ಗೃಹಪ್ರವೇಶ ಶಾಸ್ತ್ರ ಕೇಶಮುಂಡನೆ ಇಂತಹ ಶಾಸ್ತ್ರಗಳೂ ನಡೆಯುವುದಿಲ್ಲ. ಆದರೆ ಆಷಾಢ ಮಾಸದಲ್ಲಿ ದೇವಾನು ದೇವತೆಗಳಿಗೆ ಪೂಜೆ ಮಾಡುವುದಕ್ಕೆ ವ್ರತ ಮಾಡುವುದಕ್ಕೆ ಒಳ್ಳೆಯ ಸಮಯವಾಗಿದೆ ಎಂದು ಹೇಳ್ತಾರೆ ಯಾಕೆಂದರೆ ದೇವತೆಗಳ ಪ್ರಕಾರ ಇದು ಸಂಧ್ಯಾಕಾಲ ಆಗಿರುವುದರಿಂದ, ಈ ಆಷಾಢ ಮಾಸದಲ್ಲಿ ಪೂಜೆ ಪುನಸ್ಕಾರಗಳು ವ್ರತ ಮಾಡುವುದು ಬಹಳ ಒಳ್ಳೆಯದಾಗಿರುತ್ತದೆ.

ಹಾಗಾದರೆ ಆಷಾಢ ಮಾಸದಲ್ಲಿ ಯಾಕೆ ಗಂಡ ಹೆಂಡತಿ ಸೇರುವಂತಿಲ್ಲಾ..ಹೌದು ಹೊಸ ವಧು ವರರು ಆಷಾಢ ಮಾಸದಲ್ಲಿ ಸೇರಲು ಬಿಡುವುದಿಲ್ಲಾ, ಯಾಕೆ ಅಂದರೆ ಇದಕ್ಕೆ ವಿಜ್ಞಾನ ಹೇಳುವುದೇನೆಂದರೆ ಆಷಾಡ ಮಾಸದಲ್ಲಿ ವಧುವರರು ಅಂದರೆ ಈಗ ತಾನೆ ಮದುವೆಯಾದ ವಧು ವರರು ಸೇರುವುದರಿಂದ ಮತ್ತು ಆ ಸಮಯದಲ್ಲಿ ಹೆಣ್ಣು ಗರ್ಭಾವತಿ ಆದರೆ, ತಾಯಿಗೆ 9ತಿಂಗಳು ಚೈತ್ರಮಾಸದಲ್ಲಿ ಬೀಳುತ್ತದೆ ಅಂದರೆ ಆ ಸಮಯದಲ್ಲಿ ತಾಯಿ ಮಗುವಿಗೆ ಜನ್ಮ ನೀಡುವಾಗ ಕೆಲವೊಂದು ತೊಂದರೆಗಳು ಉಂಟಾಗಬಹುದು ಹೌದು ಅಂದು ಹವಾಮಾನ ವೈಪರೀತ್ಯ ಇರುವುದರಿಂದ ಅಂದರೆ ಬೇಸಿಗೆ ಶುರುವಾಗುವ ಸಮಯ ಆಗಿರುವುದರಿಂದ ತಾಯಿಮಗುವಿನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಬಹುದು ಎಂಬ ಕಾರಣಕ್ಕಾಗಿ ಅಂದಿನ ಕಾಲದಿಂದಲೂ ಹಿರಿಯರು ವಧು ವರರನ್ನ ಅಂದರೆ ಹೊಸದಾಗಿ ಮದುವೆಯಾದ ವಧೂವರರನ್ನು ಆಷಾಡ ಮಾಸದಲ್ಲಿ ಸೇರಲು ಬಿಡುತ್ತಿರಲಿಲ್ಲ.

ಹೌದು ಈ ಪದ್ಧತಿ ಕುರಿತು ಹಿರಿಯರು ನೀಡುವ ಕಾರಣವೇನೆಂದರೆ ಆಷಾಡ ಮಾಸದಲ್ಲಿ ಯಾಕೆ ವಧು ವರರನ್ನ ಸೇರಲು ಬಿಡುವುದಿಲ್ಲ ಅಥವಾ ಹೊಸದಾಗಿ ಮದುವೆ ಆದ ಹೆಣ್ಣು ಮಗಳು ತವರಿಗೆ ಕಳುಹಿಸುವುದು ಯಾಕೆ ಅಂದರೆ ಈ ಆಷಾಢಮಾಸದಲ್ಲಿ ನಮ್ಮ ಭಾರತದ ಪ್ರಾಂತ್ಯದ ರೈತರಿಗೆ ಹೆಚ್ಚು ಕೆಲಸ ಇರುತ್ತದೆ ಈ ವೇಳೆ ಹೆಣ್ಣು ಅಂದರೆ ಹೊಸದಾಗಿ ಮದುವೆಯಾದ ಹೆಣ್ಣು ಮಗಳು ಮನೆಯಲ್ಲಿದ್ದರೆ ಗಂಡನಿಗೆ ಹೆಂಡತಿ ಮೇಲೆ ಹೆಚ್ಚು ಗಮನ ಇರುತ್ತದೆ ಆಕೆಯ ಜೊತೆಗೆ ಹೆಚ್ಚು ಸಮಯ ಕಳೆಯಬೇಕು ಅನಿಸುವ ಕಾರಣದಿಂದಾಗಿ ಇತ್ತ ಮನೆಯ ಗಂಡು ಮಗನಿಗೆ ಹೊಲದಲ್ಲಿ ಗದ್ದೆಯಲ್ಲಿ ಕೆಲಸ ಮಾಡುವ ಆಸಕ್ತಿ ಇರದ ಕಾರಣ, ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ತಿಂಗಳುಗಳ ಕಾಲ ತಾಯಿ ಮನೆಗೆ ಕಳುಹಿಸುವ ಮೂಲಕ ಗಂಡು ಹೆಣ್ಣನ್ನು ದೂರ ಇಡಲಾಗುತ್ತಿತ್ತು ಎಂಬ ಕಾರಣ ಕೊಡುತ್ತಿದ್ದರು, ಆದರೆ ಈ ಕುರಿತು ವೈಜ್ಞಾನಿಕ ಕಾರಣ ನಿಮಗೆ ಈಗಾಗಲೇ ತಿಳಿದಿದೆ.

ಹೌದು ಈ 2022ರಲ್ಲಿ ಜೂನ್ 30 ರಿಂದ ಆಷಾಡ ಮಾಸ ಶುರುವಾಗಿದ್ದು ಜುಲೈ 28 ರವರೆಗೆ ಆಷಾಢ ಮಾರ್ಗ ಇರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ಮೊದಲೇ ಹೇಳಿದಂತೆ ಆಷಾಡಮಾಸ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬರುವುದರಿಂದ, ಹೆಚ್ಚಾಗಿ ಮಳೆಗಾಲದ ಸಮಯದಲ್ಲಿಯೇ ಈ ಆಷಾಢ ಮಾಸ ಬರುತ್ತದೆ ಹಾಗೆ ಆಷಾಡ ಮಾಸದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಗಳು ಮತ್ತು ಅತ್ತೆ ಒಂದೇ ಸೂರಿನಲ್ಲಿ ಇದ್ದರೆ ಅವರಿಬ್ಬರು ಜಗಳ ಆಡುತ್ತಾರೆ ಎಂಬ ಕಾರಣದಿಂದಾಗಿ ಕೂಡ ಹೊಸ ವಧುವನ್ನು ತಿಂಗಳುಗಳ ಕಾಲ ಆಕೆಯ ತವರು ಮನೆಗೆ ಕಳುಹಿಸಲಾಗಿತ್ತದೆ. ಈ ರೀತಿಯಾಗಿದೆ ಆಷಾಡ ಮಾಸದಲ್ಲಿ ಯಾಕೆ ವಧುವರರನ್ನು ಸೇರಲು ಬಿಡುವುದಿಲ್ಲ ಮತ್ತು ಅತ್ತೆ ಸೊಸೆ ಒಂದೇ ಸೂರಿನಡಿಯಲ್ಲಿ ಇರಬಾರದು ಅಂತ ಯಾಕೆ ಹೇಳ್ತಾರೆ ಅನ್ನೋದರ ಕುರಿತು ಇರುವ ಕಾರಣ

Leave a Reply

Your email address will not be published. Required fields are marked *