ನಿಮ್ಮ ಸಂಗಾತಿ ನೀವು ಹೇಳಿದ ಮಾತನ್ನು ಕೇಳುತ್ತಿಲ್ವಾ … ಪದೇ ಪದೇ ಕೋಪ ಮಾಡಿಕೊಳ್ಳುತ್ತಾರ ಹಾಗಾದ್ರೆ ಬೆಳ್ಳಿಯ ಈ ವಸ್ತುವಿನಿಂದ ಈ ಚಿಕ್ಕ ಪರಿಹಾರನ್ನು ಮಾಡಿಕೊಳ್ಳಿ ನಿಮ್ಮ ದಾಂಪತ್ಯ ಸುಖಮಯವಾಗಿರುತ್ತೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ನಿಮ್ಮ ಸಂಗಾತಿ ನಿಮ್ಮ ಮಾತನ್ನು ಕೇಳದೇ ಇದ್ದರೆ ಒಂದು ಪರಿಹಾರ ಮಾಡಿ. ಬೆಳ್ಳಿ ತಿರುಪಿನ ಸಹಾಯದಿಂದ ಈ ಪರಿಹಾರ ಮಾಡಿಕೊಂಡರೆ ನೀವು ಅನ್ಯೋನ್ಯವಾಗಿ ಇರುತ್ತೀರಿ.ಹಾಯ್ ಸ್ನೇಹಿತರೆ ನಾನು ಇಂದು ನಿಮಗೆ ಒಂದು ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದೇನೆ ಅದು ಗಂಡ-ಹೆಂಡತಿಯರ ನಡುವೆ ಇರುವ ಕಲಹಗಳನ್ನು ಸರಿಪಡಿಸುತ್ತದೆ. ಸ್ನೇಹಿತರೆ ಗಂಡ ಹೆಂಡತಿ ಖುಷಿಯಾಗಿ ಅನ್ಯೋನ್ಯವಾಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು ಎಷ್ಟೊಂದು ಖುಷಿ ಇರುತ್ತದೆ ಅಲ್ಲವೇ. ಅವರಿಬ್ಬರ ನಡುವೆ ಯಾರು ಬರದಂತೆ ಬಂದರು ಯಾರಿಂದಲೂ ಅವರು ತೊಂದರೆಯನ್ನು ಅನುಭವಿಸಿದೆ ನಗುನಗುತ್ತಾ ಜೀವನವನ್ನು ಕಳೆದರೆ ಜೀವನವೇ ಒಂದು ಸ್ವರ್ಗ ಆಗುತ್ತದೆ.

ಆದರೆ ಕೆಲವೊಬ್ಬರ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ಕಿತ್ತಾಟಗಳು ನಡೆಯುತ್ತವೆ ಯಾವುದೋ ವಿಷಯಕ್ಕಾಗಿ ತುಂಬಾ ಗಲಾಟೆಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಗಂಡ ಹೆಂಡತಿ ಜಗಳವಾಡಿದರೆ ಯಾರಿಗೂ ಹೇಳಬಾರದು ಏಕೆಂದರೆ ಮಧ್ಯದಲ್ಲಿ ಇನ್ನೊಬ್ಬರು ಬಂದರೆ ಇನ್ನಷ್ಟು ಹೆಚ್ಚಾಗುತ್ತದೆ ಹೊರತು ಕಡಿಮೆ ಆಗುವುದಿಲ್ಲ. ಮನೆಯಲ್ಲಿರುವ ಸಂಗಾತಿಯನ್ನು ಮರೆತು ಅವಳ ಮಾತನ್ನು ಕೇಳದೆ ಬೇರೆಯವರ ಮಾತನ್ನು ಕೇಳಿ ಗಂಡ ನಷ್ಟವುಂಟು ಮಾಡಿಕೊಂಡರೆ ಅಥವಾ ತಪ್ಪು ದಾರಿ ಹಿಡಿದರೆ ಹೆಣ್ಣಿಗೆ ಆಗುವ ನೋವು ಅಷ್ಟಿಷ್ಟಲ್ಲ. ಗಂಡನಿಗೆ ಹೆಂಡತಿ ಎಲ್ಲಾ ಕಷ್ಟಸುಖಗಳಲ್ಲಿ ಭಾಗಿ ಆಗಬೇಕು. ಹಾಗಂತ ಈ ಪರಿಹಾರವನ್ನು ಕೆಟ್ಟ ಉದ್ದೇಶಕ್ಕಾಗಿ ಮಾಡಬಾರದು.

ಈ ಒಂದು ಪರಿಹಾರ ನೀವು ಮಾಡಿದರೆ ಗಂಡನಿಗೆ ನನ್ನ ಮಡದಿ ನನ್ನ ಮನೆಗೆ ಮಹಾಲಕ್ಷ್ಮಿ ಎಂದು ಅರ್ಥವಾಗುತ್ತದೆ ಹಾಗೂ ನೀವು ಏನೇ ಹೇಳಿದರೂ ಕೇಳುತ್ತಾರೆ ಬೇರೆಯವರು ನಿಮ್ಮ ಬಗ್ಗೆ ಚಾಡಿ ಹೇಳಿದರು ಅವರು ನಂಬುವುದಿಲ್ಲ. ಎಲ್ಲರೂ ಮನೆಯಲ್ಲಿ ಖುಷಿಯಿಂದ ಇದ್ದಾಗ ಮಾತ್ರ ಒಂದು ಮನೆ ನೆಮ್ಮದಿಯಾಗಿ ಹಾಗೂ ಏಳಿಗೆಯನ್ನು ಕಾಣಲು ಸಾಧ್ಯ. ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಗಂಡ-ಹೆಂಡತಿ ಒಟ್ಟಿಗೆ ಅವುಗಳನ್ನು ಎದುರಿಸಬೇಕು ಹೆಂಡತಿ ಗಂಡನನ್ನು ಅರ್ಥಮಾಡಿಕೊಳ್ಳಬೇಕು ಅದೇ ರೀತಿಯಾಗಿ ಗಂಡ-ಹೆಂಡತಿಯನ್ನು ಅರ್ಥಮಾಡಿಕೊಳ್ಳಬೇಕು ಅಂದಾಗ ಮಾತ್ರ ಅವರ ಜೀವನ ನೆಮ್ಮದಿಯಿಂದ ಸಾಗುತ್ತದೆ. ಗಂಡ-ಹೆಂಡತಿಯ ನಡುವೆ ಜಗಳವಾದರೆ ಒಂದೇ ದಿನದಲ್ಲಿ ಅದನ್ನು ಪರಿಹಾರ ಮಾಡಿಕೊಳ್ಳಬೇಕು ದಿನಗಳನ್ನು ಕಳೆಯಲು ಬಿಟ್ಟರೆ ಅವರ ನಡುವೆ ಅಂತರ ಹೆಚ್ಚಾಗಿ ಹೋಗುತ್ತದೆ.

ದಾಂಪತ್ಯದಲ್ಲಿ ಏನೇ ಕಷ್ಟ ಇದ್ದರೂ ಅದನ್ನು ಇಬ್ಬರೂ ಕುಳಿತು ಪರಿಹಾರ ಮಾಡಿಕೊಳ್ಳಬೇಕು. ನಿಮ್ಮ ಗಂಡ ಏನಾದರೂ ಬೇರೆಯವರ ಮಾತು ಕೇಳಿ ಕೆಲಸದಲ್ಲಿ ಅಥವಾ ಮನೆಯಲ್ಲಿ ಏನಾದರೂ ನಷ್ಟವನ್ನುಂಟು ಮಾಡಿಕೊಂಡರೆ ತಿಳಿಸಿ ಅವರಿಗೆ ಹೇಳಬೇಕು ನೀವು ಹೇಳಿದ್ದೆಲ್ಲ ಅವರಿಗೆ ತಿಳಿದು ನಿಮ್ಮ ಮಾತು ಕೇಳಬೇಕು ಎಂದರೆ ಈ ರೀತಿಯಾದ ಒಂದು ಪರಿಹಾರ ಮಾಡಿಕೊಳ್ಳಿ. ಸ್ನೇಹಿತರೆ ಈ ಪರಿಹಾರಕ್ಕೆ ಬೆಳ್ಳಿ ತಿರುಪು ಅಂದರೆ ಬೆಳ್ಳಿ ಪಿರ್ಕಿ ಬೇಕು ಅಂದರೆ ಕಿವಿಯ ಓಲೆಯ ಹಿಂದೆ ಹಾಕುವ ತಿರುಪು ನೀವು ಯಾವುದೇ ಓಲೆಯನ್ನು ಹಾಕಿದರು ಅದರಲ್ಲೂ ಬಂಗಾರದ ಓಲೆ ಹಾಕಿದಾಗ ಹಿಂದೆ ಅದರ ತಿರುಪ ಬೆಳ್ಳಿಯಿಂದ ಮಾಡಿಸಿಕೊಂಡು ಹಾಕಿಕೊಳ್ಳಬೇಕು.

ಒಂದು ಕಾರಣ ಇದೆ ಗಂಡು ಎಂದರೆ ಗುರುಗ್ರಹದ ಆಶೀರ್ವಾದ ಬೇಕು ಹೆಣ್ಣಿಗೆ ಶುಕ್ರನ ಆಶೀರ್ವಾದ ಬೇಕು ಗುರುಗ್ರಹಕ್ಕೆ ಬೆಳ್ಳಿ ಹಾಗೂ ಶುಕ್ರಗ್ರಹಕ್ಕೆ ಬಂಗಾರ ಉತ್ತಮ. ಯಾವುದೇ ಗುರುವಾರ ನೀವು ಬೆಳ್ಳಿ ತಿರುಪನ್ನು 6:00 15ರಿಂದ 6:45ರ ಒಳಗಡೆ ಹಾಕಿಕೊಳ್ಳಬೇಕು ಅಂದರೆ ಓಲೆಯನ್ನು ತೆಗೆದು ಹಾಕಿಕೊಳ್ಳಬೇಕು. ಹಾಕಿಕೊಳ್ಳುವಾಗ ಮನಸ್ಸಿನಲ್ಲಿ ನಿಮ್ಮ ಪತಿ ನಿಮ್ಮ ಮಾತನ್ನು ಕೇಳುವಂತೆ ಬೇಡಿಕೊಳ್ಳಬೇಕು ಹಾಗೂ ಅನ್ಯೋನ್ಯವಾಗಿ ಇರಬೇಕು ಎಂದು ಕೇಳಿಕೊಳ್ಳಬೇಕು. ಈ ಒಂದು ಗಣೇಶನ ಮಂತ್ರವನ್ನು ನೀವು ಹೇಳಬೇಕು ಓಂ ಶ್ರೀಂ ರೀಂ ಕ್ಲೀಂ ಗೌಂ ಗಂ ಗಣಪತಿಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಹೇಳಿಕೊಳ್ಳಬೇಕು.

ನಂತರ ಕೊನೆಯದಾಗಿ ಇನ್ನೊಂದು ಮಂತ್ರವನ್ನು ಹೇಳಬೇಕು. ಓಂ ಕೇಂ ಕಾಂ ಫಟ್ ಪ್ರಾಣಗ್ರಹಾಸಿ ಪ್ರಾಣಗ್ರಹಾಸಿ ಹೂಂ ಫಟ್ ಸರ್ವ ಶತ್ರು ಸಂಹಾರಣಾಯ ಶರಭ ಶಾಳುವಾಯ ಪಕ್ಷಿರಾಜಾಯ ಹೂಂ ಫಟ್ ಸ್ವಾಹ ಎಂದು ನಿಮಗೆ ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಹೇಳಬೇಕು. ಗುರುವಾರ ಶುಕ್ರವಾರ ಹೀಗೆ ಮಾಡಿದರೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಸ್ನೇಹಿತರೆ ಒಂದು ಪರಿಹಾರ ತುಂಬಾ ಸರಳವಾಗಿದೆ ಎಲ್ಲರೂ ಇದನ್ನು ಮಾಡಿದರೆ ತುಂಬಾ ಖುಷಿಯಾಗಿ ಜೀವನವನ್ನು ಹಿಡಿಸಬಹುದು ಹಾಗೂ ನಿಮ್ಮ ಪತಿ ಅಥವಾ ಪತ್ನಿ ನೀವು ಹೇಳಿದಂತೆ ನಿಮ್ಮ ಮಾತನ್ನು ಕೇಳುತ್ತಾರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published.