ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿವೆಯೇ ಹಾಗಾದ್ರೆ ಬರೀ ಒಂದು ಹಿಡಿ ಮುಷ್ಟಿಯಷ್ಟು ಮೆಂತೆ ಕಾಳಿನಿಂದ ಈ ಪರಿಹಾರವನ್ನು ಮಾಡಿದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬರೀ ಒಂದು ಹಿಡಿ ಮುಷ್ಟಿಯಷ್ಟು ಮೆಂತೆ ಕಾಳಿನಿಂದ ಈ ಪರಿಹಾರವನ್ನು ಮಾಡಿದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.ಸ್ನೇಹಿತರೆ ನಿಮ್ಮ ಮನೆಯಲ್ಲಿ ದಾರಿದ್ರ್ಯ ಬಾಧೆಗಳು ಅಂದರೆ ನಾವು ಎಲ್ಲವನ್ನೂ ಹೊಂದಿದ್ದರೂ ನೆಮ್ಮದಿ ಇಲ್ಲದಂತಹ ಸಂದರ್ಭ ಇದ್ದರೆ ಅದನ್ನು ದರಿದ್ರ ಭಾದೆ ಎನ್ನುತ್ತಾರೆ. ತುಂಬಾ ಜನರಿಗೆ ಆಸ್ತಿ ಇರುತ್ತದೆ ಆದರೆ ನಿಮ್ಮದೇ ಇರುವುದಿಲ್ಲ ಇನ್ನೂ ಕೆಲವೊಬ್ಬರಲ್ಲಿ ಆಸ್ತಿ ಇಲ್ಲದಿದ್ದರೂ ತುಂಬಾ ಸಂತೋಷದಿಂದ ಇರುತ್ತಾರೆ. ಮನೆಯಲ್ಲಿ ನಾವು ಸದಾ ಮಂಕಾಗಿರುವುದು ಎಲ್ಲರ ಜೊತೆ ಜಗಳವಾಡುವುದು ಮನಸ್ಸಿನಿಂದ ಎಲ್ಲರನ್ನು ದೂರವಿಡುವುದು ಮಾಡುತ್ತೇವೆ ಆಗ ಮನೆಯಲ್ಲಿ ನೆಮ್ಮದಿ ಇರುವುದು ಸಾಧ್ಯವಿಲ್ಲ

ಹಾಗೆಯೇ ನಕಾರತ್ಮಕ ಶಕ್ತಿಗಳು ಮನೆಯಲ್ಲಿ ಇಂತಹ ಕೆಟ್ಟ ಸಂದರ್ಭಗಳನ್ನು ತಂದಿರುತ್ತವೆ ನೀವು ಮಾಡಿದ ಕೆಲಸದಲ್ಲಿ ಲಾಭವಿರುವುದಿಲ್ಲ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೂ ಆರೋಗ್ಯ ಇರುವುದಿಲ್ಲ ಇಂಥ ಸಂದರ್ಭದಲ್ಲಿ ನಾವು ದೇವರ ಮೋರೆ ಹೋಗಲೇಬೇಕಾಗುತ್ತದೆ. ಎಲ್ಲದಕ್ಕೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಹಾಗಾದರೆ ಇಂತಹ ಎಲ್ಲಾ ಕಠಿಣ ಸಂದರ್ಭಗಳನ್ನು ಈ ಒಂದು ಪರಿಹಾರದಿಂದ ಹೇಗೆ ಮುಕ್ತಿಗೊಳಿಸುವುದು ಎಂದು ತಿಳಿಯೋಣ. ಈ ಒಂದು ಪರಿಹಾರವನ್ನು ಹೇಗೆ ಯಾವಾಗ ಮಾಡುವುದು ಎಂದು ನಾನು ನಿಮಗೆ ತಿಳಿಸುತ್ತೇನೆ

ಹಾಗೆಯೇ ಈ ಪರಿಹಾರಕ್ಕಾಗಿ ಏನೇನು ಸಾಮಗ್ರಿಗಳು ಬೇಕು ಎಂದು ಕೂಡ ತಿಳಿಸುತ್ತೇನೆ ಸ್ನೇಹಿತರೆ ಮೆಂತೆ ಕಾಳು ಆರೋಗ್ಯಕ್ಕೆ ಎಷ್ಟು ಉಪಯುಕ್ತವೋ ಅಷ್ಟೇ ದೇವರಿಗೆ ಪ್ರಿಯವಾದದ್ದು ಒಂದು ಹಿಡಿಯಷ್ಟು ಮೆಂತೆಕಾಳು ಹಾಗೂ ಒಂದು ನಿಂಬೆಹಣ್ಣು ಎರಡು ಕರ್ಪೂರ ಈ ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು. ಈ ಪರಿಹಾರವನ್ನು ನಾವು ಗುರುವಾರ ದಿನದಂದು ಮಾಡಿದರೆ ತುಂಬಾ ಒಳ್ಳೆಯದು ಪೂಜೆ ಮಾಡಲು ಯಾವುದೇ ಸಮಯವಾದರೂ ಕೂಡ ಸೂಕ್ತ ಆದರೆ ಸಂಜೆ ಕತ್ತಲಾದ ಮೇಲೆ ಮಾಡಿದರೆ ಇನ್ನೂ ಸೂಕ್ತ. ಎಲ್ಲರ ಮನೆಯಲ್ಲೂ ಮೆಂತೆ ಕಾಳುಗಳು ಇದ್ದೇ ಇರುತ್ತವೆ

ಈ ಒಂದು ಪರಿಹಾರಕ್ಕೆ ಯಾವುದೇ ಖರ್ಚಿಲ್ಲ. ಈ ಒಂದು ಚಿಕ್ಕ ಪರಿಹಾರದಿಂದ ನೀವು ತುಂಬಾ ಲಾಭವನ್ನು ಪಡೆದುಕೊಳ್ಳುತ್ತೀರಿ ಈ ಒಂದು ಪರಿಹಾರವನ್ನು 9 ದಿನ ಮಾಡಬೇಕು ಗುರುವಾರದಿಂದ ಮಾಡಬೇಕು. ಈ ಒಂದು ಪರಿಹಾರವನ್ನು ಮಾಡುವುದರಿಂದ ನಿಮ್ಮ ಉದ್ಯೋಗದ ಸಮಸ್ಯೆಯೂ ಕೂಡ ಪರಿಹಾರವಾಗುತ್ತವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಷ್ಟಗಳು ಸಮಸ್ಯೆಗಳು ಮೇಲಿಂದ ಮೇಲೆ ಬರುತ್ತಲೇ ಇರುತ್ತವೆ ಇವುಗಳಿಗೆ ಕಾರಣ ನರದೃಷ್ಟಿ ಆಗಿರಬಹುದು ಅಥವಾ ನಕಾರಾತ್ಮಕ ಶಕ್ತಿಗಳು ಕೂಡ ಕಾರಣ ಆಗಿ ಇರಬಹುದು.

ಹಾಗಾದ್ರೆ ಸ್ನೇಹಿತರೆ ಈ ಪರಿಹಾರವನ್ನು ಹೇಗೆ ಮಾಡುವುದು ಎಂದು ನೋಡೋಣ ಮೊದಲನೆಯದಾಗಿ ಮನೆಯಲ್ಲಿ ದಿನ ಮಾಡುವಹಾಗೆ ಪೂಜೆಯನ್ನು ಮಾಡಿ ನಂತರ ಒಂದು ತಟ್ಟೆಯಲ್ಲಿ ಮೆಂತೆ ಕಾಳುಗಳನ್ನು ಗುಂಪಾಗಿ ಇರಿಸಿಕೊಂಡು ಅದರ ಮೇಲೆ ನಿಂಬೆಹಣ್ಣನ್ನು ಇಟ್ಟು ಅದರ ಮೇಲೆ ಎರಡು ಕರ್ಪೂರ ಗಳನ್ನು ಅಂಟಿಸಬೇಕು ಕುಲದೇವರ ಮುಂದೆ ಅಥವಾ ಯಾವುದೇ ನಿಮ್ಮ ಇಷ್ಟವಾದ ದೇವರ ಮುಂದೆ ಇದನ್ನು ಇಟ್ಟು ಸಂಕಲ್ಪ ಮಾಡಿಕೊಳ್ಳಬೇಕು. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ನಂತರ ಕೈಮುಗಿದು ಕರ್ಪೂರವನ್ನು ಅಂಟಿಸಿ ದೇವರಿಗೆ ಬೆಳಗಬೇಕು.

ಆಗ ನಿಂಬೆಹಣ್ಣಿನಲ್ಲಿ ಎಲ್ಲಾ ನಕಾರಾತ್ಮಕ ಶಕ್ತಿಗಳು ಬಂದು ಸೇರುವವು ನಿಂಬೆ ಹಣ್ಣಿಗೆ ನಕಾರಾತ್ಮಕ ಶಕ್ತಿಗಳನ್ನು ಹಿಡಿದುಕೊಳ್ಳುವ ಶಕ್ತಿ ಇದೆ. ಪೂಜೆ ಮಾಡಿದ ದಿನ ಮೆಂತೆ ಕಾಳುಗಳನ್ನು ತಟ್ಟೆಯಲ್ಲಿ ಬಿಡಬೇಕು ಮರುದಿನ ನಿಂಬೆಹಣ್ಣು ತೆಗೆದುಕೊಂಡು ಯಾರು ತುಳಿಯದಿರಿ ಸ್ಥಳಕ್ಕೆ 3 ರಸ್ತೆ ಇರುವ ಸ್ಥಳಕ್ಕೆ ಹೋಗಿ ಎಸೆಯಬೇಕು. ಮರುದಿನ ಪೂಜೆಗೆ ಮತ್ತೆ ಬೇರೆ ನಿಂಬೆಹಣ್ಣನ್ನು ಬಳಸಬೇಕು. ಹೀಗೆ ಒಂಬತ್ತು ದಿನಗಳ ಕಾಲ ಈ ಪೂಜೆಯನ್ನು ಮಾಡುವುದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿರುವ ಭಾದೆಗಳು ದೂರವಾಗುತ್ತವೆ.

ಯಾವುದೇ ಕಷ್ಟವಾದರೂ ಮಾಯವಾಗುತ್ತವೆ. ಗುರುವಾರದ ದಿನದಂದೇ ಈ ಪೂಜೆಯನ್ನು ಪ್ರಾರಂಭ ಮಾಡಬೇಕು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಶುಭ ಲಾಭ ಪ್ರಾಪ್ತಿಯಾಗುತ್ತದೆ. ಸ್ನೇಹಿತರೆ ಈ ಒಂದು ಪರಿಹಾರವನ್ನು ಯಾವಾಗಲೂ ಮಾಡಿ ಹಾಗೆಯೇ ಲಾಭ ಪಡೆದುಕೊಳ್ಳಿ ನಿಮ್ಮ ಕುಟುಂಬ ವರ್ಗದವರಿಗೂ ತಿಳಿಸಿ ಧನ್ಯವಾದಗಳುನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.