ಯಾವಾಗಾದ್ರೂ ನೀವು ದೇವಸ್ಥಾನಕ್ಕೆ ಹೋದಾಗ ನಿಮ್ಮ ಚಪ್ಪಲಿಗಳನ್ನು ಕಳೆದುಕೊಂಡಿದ್ದೀರಾ ಹಾಗೆ ಚಪ್ಪಲಿಗಳು ಕಳೆದುಹೋದರೆ ಅದು ಒಳ್ಳೆಯದ್ದಾ ಇಲ್ಲ ಕೆಟ್ಟದ್ದಾ .. ತಿಳಿದುಕೊಳ್ಳಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವಸ್ಥಾನದಲ್ಲಿ ಚಪ್ಪಲಿ ಕಳೆಯುವುದು ಶುಭವೇ ಅಥವಾ ಅಶುಭವೇ ಎಂದು ತಿಳಿಯಿರಿ.ಹಾಯ್ ಸ್ನೇಹಿತರೆ ಚಪ್ಪಲಿಗಳನ್ನು ನಾವೆಲ್ಲರೂ ತುಂಬಾ ಕೀಳುಭಾವನೆಯಿಂದ ನೋಡುತ್ತೇವೆ ಆದರೆ ಈಗಿನ ಕಾಲದಲ್ಲಿ ಚಪ್ಪಲಿಗಳಿಗೆ ಮಹತ್ವವಿದೆ. ಚೆನ್ನಾಗಿರುವ ಚಪ್ಪಲಿಗಳನ್ನು ನೋಡಿ ಮನುಷ್ಯರ ವ್ಯಕ್ತಿತ್ವವನ್ನು ಸಹ ಹೇಳುತ್ತಾರೆ ಹಾಗೆ ಚಪ್ಪಲಿ ಕೆಟ್ಟದಾಗಿದ್ದರೆ ಅವರನ್ನು ಸರಿಯಾಗಿ ಗುರುತಿಸುವುದಿಲ್ಲ ಕೂಡ. ಆದರೆ ಸ್ನೇಹಿತರೆ ಎಲ್ಲರಿಗೂ ಫ್ಯಾಶನ್ ಆದ ಚಪ್ಪಲಿಗಳು ಹೊಂದುವುದಿಲ್ಲ. ಆದರೆ ಮಹಿಳೆಯರು ತಮಗೆ ಏನಾದರೂ ಒಂದು ಡ್ರೆಸ್ ಖರೀದಿ ಮಾಡಿದರೆ ಅದರ ಜೊತೆಗೆ ಮ್ಯಾಚಿಂಗ್ ಚಪ್ಪಲಿಗಳನ್ನು ಸಹ ತೆಗೆದುಕೊಳ್ಳುತ್ತಾರೆ.

ಚಪ್ಪಲಿ ಅಂಗಡಿಗಳಿಗೆ ನಾವು ಹೋದಾಗ ತುಂಬಾ ಚೆನ್ನಾಗಿರುವ ಚಪ್ಪಲಿಗಳನ್ನು ನೋಡಿ ಯಾವುದನ್ನು ತೆಗೆದುಕೊಳ್ಳಬೇಕು ಎಂಬುದು ಸಹ ಅರ್ಥ ಆಗುವುದಿಲ್ಲ. ಚಪ್ಪಲಿಗಳಿಂದ ನಮಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳು ಬರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಮನೆಯೇ ಮಂದಿರ ಎಂದು ಹೇಳುತ್ತಾರೆ ಇಂತಹ ಮಂದಿರದ ಒಳಗಡೆ ಹೋಗುವಾಗ ನಾವು ಚಪ್ಪಲಿಯನ್ನು ಹಾಕಿಕೊಳ್ಳುವುದಿಲ್ಲ ಬದಲಾಗಿ ಚಪ್ಪಲಿಯನ್ನು ಮನೆಯ ಹೊರಗೆ ಬಿಡುತ್ತೇವೆ. ಹಿಂದಿನ ಕಾಲದಿಂದ ನಮಗೆ ಈ ಅಭ್ಯಾಸವನ್ನು ಹಿರಿಯರು ಮಾಡುತ್ತಿದ್ದಾರೆ ಇದರಿಂದ ನಮಗೆ ತುಂಬಾ ಆರೋಗ್ಯವು ಹೆಚ್ಚುತ್ತಿದೆ.

ನಾವು ಹೊರಗೆ ಓಡಾಡಿ ಬಂದಾಗ ಚಪ್ಪಲಿಗಳಲ್ಲಿ ತುಂಬಾ ಧೂಳು ತುಂಬಿರುತ್ತದೆ. ಇದನ್ನು ನಾವು ಒಳಗೆ ಅಂದರೆ ಮನೆಯ ಒಳಗೆ ತೆಗೆದುಕೊಂಡರೆ ನಮಗೆ ಅನಾರೋಗ್ಯದ ಸಮಸ್ಯೆ ಹೆಚ್ಚಬಹುದು. ಹಾಗೇ ಸ್ನೇಹಿತರೆ ಇನ್ನೊಂದು ಮುಖ್ಯ ವಿಷಯವೇನೆಂದರೆ ಮನೆಯ ಮುಂದೆ ಹರಿದ ಚಪ್ಪಲಿಗಳನ್ನು ಬಿಡಬಾರದು ಹೀಗೆ ಮಾಡಿದರೆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚುತ್ತವೆ ಹಾಗೆಯೇ ಚಪ್ಪಲಿಗಳು ಮನೆಯ ಮುಂದೆ ಉಲ್ಟಾ ಬಿದ್ದರೆ ಮನೆಯಲ್ಲಿ ಜಗಳಗಳು ಹೆಚ್ಚುತ್ತವೆ ಎನ್ನುವ ವಾಡಿಕೆ ಇದೆ. ಸ್ನೇಹಿತರೆ ಯಾವುದೇ ಕಾರಣಕ್ಕೂ ನೀವು ಚಪ್ಪಲಿಗಳನ್ನು ಮನೆಯ ಮುಖ್ಯ ದ್ವಾರದ ಮುಂದೆ ಬಿಡಬಾರದು ಹೀಗೆ ಬಿಟ್ಟರೆ ಮಹಾಲಕ್ಷ್ಮಿಯು ನಿಮ್ಮ ಮನೆಗೆ ಬರುವುದಿಲ್ಲ.

ಹೀಗೇನಾದರೂ ನಾವು ಮುಖ್ಯ ದ್ವಾರದ ಮುಂದೆ ಚಪ್ಪಲಿಗಳನ್ನು ಬಿಟ್ಟರೆ ಲಕ್ಷ್ಮಿ ಸಂಚಾರ ಮನೆಯಲ್ಲಿ ಆಗುತ್ತದೆ ಹಾಗೆ ಸಾಲದ ಬಾಧೆ ಕೂಡ ಹೆಚ್ಚುತ್ತದೆ. ಹರಿದ ಚಪ್ಪಲಿಗಳನ್ನು ಹೊರಗೆ ಕೆಲಸಕ್ಕೆ ಹೊರಡುವಾಗ ಹಾಕಿಕೊಳ್ಳಬಾರದು ಹೀಗೆ ಮಾಡಿದರೆ ನೀವು ಹೋದ ಕೆಲಸ ಯಶಸ್ಸಿನಿಂದ ಆಗುವುದಿಲ್ಲ ಹಾಗೂ ನಿಮಗೆ ನಷ್ಟವಾಗುತ್ತದೆ. ಸ್ನೇಹಿತರೆ ನಿಮಗೆ ಯಾರಾದರೂ ಚಪ್ಪಲಿಗಳನ್ನು ಗಿಫ್ಟಾಗಿ ನೀಡಿದರೆ ನೀವು ತೆಗೆದುಕೊಳ್ಳಬೇಡಿ ಅದು ಅಶುಭವಾಗಿರುತ್ತದೆ ಹಾಗೆಯೇ ನೀವು ಕೂಡ ಯಾರಿಗೂ ಚಪ್ಪಲಿಗಳನ್ನು ಗಿಫ್ಟಾಗಿ ಕೊಡಬೇಡಿ. ಒಂದು ವೇಳೆ ಆ ಚಪ್ಪಲಿಗಳನ್ನು ನೀವು ಬಳಸಿದರೆ ನಿಮ್ಮ ಜೀವನದಲ್ಲಿ ತುಂಬಾ ಕಷ್ಟಗಳನ್ನು ನೋಡುತ್ತೀರಾ. ಇನ್ನು ಮನೆಯಲ್ಲಿ ಚಪ್ಪಲಿಗಳನ್ನು ಬಿಡಲು ಒಂದು ಸ್ಥಳವನ್ನು ನಿಗದಿ ಮಾಡಬೇಕು

ಎಲ್ಲೆಂದರಲ್ಲಿ ನಮ್ಮ ಚಪ್ಪಲಿಗಳನ್ನು ಬಿಡುವುದರಿಂದ ಮನೆಯಲ್ಲಿ ಅಶಾಂತಿ ಗಂಡ-ಹೆಂಡತಿಯರ ನಡುವೆ ಜಗಳ ಉಂಟಾಗುತ್ತದೆ. ಚಿಕ್ಕಮಕ್ಕಳಿಗೆ ಎಡಗಾಲಿನ ಚಪ್ಪಲಿನಿಂದ ನಿವಾಳಿಸಿದರೆ ಯಾವ ಕೆಟ್ಟ ದೃಷ್ಟಿಯು ಮಗುವಿನ ಮೇಲೆ ಬೀಳುವುದಿಲ್ಲ ನೀವು ಕೂಡ ಈ ಚಪ್ಪಲಿಯನ್ನು ಎಡ ಕೈಯಲ್ಲಿ ಹಿಡಿದುಕೊಂಡು ತಲೆಯಿಂದ ಪಾದದವರೆಗೆ ನಿವಾಳಿಸಬೇಕು. ಶನಿವಾರ ಅಥವಾ ಮಂಗಳವಾರ ಹೊಸ ಮೂರು ಜೊತೆ ಚಪ್ಪಲಿಗಳನ್ನು ಬಡವರಿಗೆ ದಾನ ಮಾಡುವುದರಿಂದ ನಿಮ್ಮ ಮನೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ. ಹೀಗೆ ಮಾಡುವುದರಿಂದ ಶನಿಕಾಟ ನಿಮ್ಮ ಮನೆಯ ಮೇಲೆ ಇರುವುದಿಲ್ಲ ಹಾಗೆಯೇ ಶನಿವಾರ ನೀವು ಯಾವುದೇ ಕಾರಣಕ್ಕೂ ಹೊಸ ಚಪ್ಪಲಿಗಳನ್ನು ಖರೀದಿ ಮಾಡಬಾರದು.

ಮನೆಯಲ್ಲಿ ಚಿಕ್ಕ ಮಕ್ಕಳು ಚಪ್ಪಲಿಗಳನ್ನು ಹಿಡಿದುಕೊಂಡು ಹಾಡುತ್ತಿದ್ದರೆ ಅದು ಶುಭದ ಸಂಕೇತ. ನಿಮ್ಮ ಮನೆಯಲ್ಲಿ ಏನಾದರೂ ಶುಭ ಕಾರ್ಯಕ್ರಮ ಸದ್ಯದಲ್ಲಿ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಹಾಗೇ ನಿಮ್ಮ ವೃತ್ತಿಯಲ್ಲಿ ಕೂಡಾ ಯಶಸ್ಸು ಸಿಗುತ್ತದೆ. ಚಿಕ್ಕಮಕ್ಕಳು ಏನಾದರೂ ಬಾಯಲ್ಲಿ ಚಪ್ಪಲಿ ಹಿಡಿದುಕೊಂಡು ಆಟವಾಡಿದರೆ ಮನೆಯಲ್ಲಿ ಎಷ್ಟು ವರ್ಷಗಳ ಹಿಂದೆ ಆಗದ ಕೆಲಸಗಳು ನೆರವೇರುತ್ತವೆ ಎಂದು ಅರ್ಥ ಹಾಗೆಯೇ ಮದುವೆಯಾಗದವರು ಮನೆಯಲ್ಲಿದ್ದರೆ ಬೇಗ ಮದುವೆಯಾಗುತ್ತದೆ. ದೇವರ ಕೋಣೆಯ ದಿಕ್ಕಿನಲ್ಲಿ ಚಪ್ಪಲಿಗಳನ್ನು ಬಿಡಬಾರದು ಹೀಗೆ ಮಾಡಿದರೆ ನಿಮಗೆ ತುಂಬಾ ಕೆಟ್ಟದಾಗುತ್ತದೆ. ನಿಮ್ಮ ಚಪ್ಪಲಿಗಳೇನಾದರೂ ದೇವಸ್ಥಾನದಲ್ಲಿ ಕಳೆದುಹೋದರೆ ಏನು ಚಿಂತೆ ಮಾಡುವ ಅವಶ್ಯಕತೆ ಇಲ್ಲ

ಹೀಗೆ ಚಪ್ಪಲಿ ಕಳೆಯುವುದು ನಿಮಗೆ ತುಂಬಾ ಒಳ್ಳೆಯದು ನಿಮಗೆ ಆ ದಿನದಿಂದ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಚಪ್ಪಲಿಗಳು ಚೆನ್ನಾಗಿದ್ದವು ಎಂದು ಚಿಂತೆ ಮಾಡಬಾರದು ದುಡ್ಡಿನ ಬಗ್ಗೆಯೂ ಚಿಂತೆ ಮಾಡಬಾರದು ಚಪ್ಪಲಿ ಕಳೆದಿದೆ ಅಂತ ಬೇರೆಯವರ ಚಪ್ಪಲಿಗಳನ್ನು ಹಾಕಿಕೊಂಡು ಮನೆಗೆ ಬರಬಾರದು ಬದಲಾಗಿ ಮನೆಗೆ ಬರಿಗಾಲಿನಿಂದ ಹೋಗಿ ಕೈಕಾಲು ತೊಳೆದು ದೇವರ ಮುಂದೆ ದೀಪ ಹಚ್ಚಿ ನಮಸ್ಕರಿಸಬೇಕು ಇನ್ನು ಮುಂದೆ ನನ್ನ ಜೀವನದಲ್ಲಿ ಕಷ್ಟಗಳು ಬಂದರೂ ನನಗೆ ಎದುರಿಸುವ ಶಕ್ತಿ ಕೊಡು ನಮಗೆ ನಮ್ಮದೇ ಕೊಡು ಎಂದು ಕೇಳಿಕೊಳ್ಳಬೇಕು ಹಾಗಾದರೆ ಚಪ್ಪಲಿಗಳು ಕಳೆಯುವುದು ಅಶುಭ ಅಲ್ಲ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published.