ಒಮ್ಮೆಲೇ ನಿಮಗೆ ತುಂಬಾ ಸಿಟ್ಟು ಬರತ್ತಾ .. ಅತಿಯಾದ ಸಿಟ್ಟು ನಿಮಗೆ ಬಂದರೆ ಹೀಗೆ ಮಾಡಿ ಸಾಕು ತಕ್ಷಣವೇ ನಿಮ್ಮ ಕೋಪ ಕಂಟ್ರೋಲ್ ಗೆ ಬರುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೋಪ ಬಂದಾಗ ಏನು ಮಾಡಬೇಕು ಹಾಗೆ ಕೋಪದಿಂದ ಆಗುವ ಜಗಳಗಳನ್ನು ಕಂಟ್ರೋಲ್ ಮಾಡುವುದಾದರೂ ಹೇಗೆ ಈ ಮಾಹಿತಿಯನ್ನು ನೋಡಿ ತಿಳಿದುಕೊಳ್ಳಿ.ಹಾಯ್ ಫ್ರೆಂಡ್ಸ್ ನಿಮಗೂ ಕೋಪ ಬರುತ್ತಿದೆಯಾ ಅಪ್ಕೋರ್ಸ್ ಬರಲೇಬೇಕು ಮನುಷ್ಯ ಅಂದಮೇಲೆ ಕೋಪವು ಸಹಜವಾಗಿ ಎಲ್ಲರಿಗೂ ಬರುತ್ತದೆ ಹಾಗಾದರೆ ಈ ಕೋಪವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಹಾಗೆ ಇದರಿಂದಾಗುವ ಪರಿಣಾಮಗಳನ್ನು ಹೇಗೆ ತಡೆಯುವುದು ಎಂದು ಈ ಮಾಹಿತಿಯಲ್ಲಿ ನಾನು ನಿಮಗೆ ಹೇಳುತ್ತೇನೆ. ಮೊದಲು ಈ ಕೋಪ ಯಾರ ನಡುವೆ ಬರುತ್ತದೆ ಎಂದು ತಿಳಿಯಿರಿ ಕೋಪವು ಅಪ್ಪ-ಮಗನಲ್ಲಿ, ಅಮ್ಮ ಮಗಳ ಜೊತೆ,ಫ್ರೆಂಡ್ಸ್ ಗಳ ಜೊತೆ ಹಾಗೂ ಯಾವುದಾದರೂ ಸಂಬಂಧದಲ್ಲೂ ಕೋಪ ಬರುವುದು ಸಹಜ.

ಕೋಪ ಬರಲು ಒಂದು ಚಿಕ್ಕ ಕಾರಣ ಸಾಕು ಯಾರಾದರೂ ಏನಾದರೂ ಅಂದರೆ ಎಲ್ಲರಿಗೂ ಕೋಪ ಬರುತ್ತದೆ ಆಗ ನೀವು ಕೋಪದಿಂದ ಅವರಿಗೆ ಇನ್ನೂ ಒಂದು ಹೇಳುತ್ತೀರಾ ಹಾಗೆ ಚಿಕ್ಕ ಚಿಕ್ಕ ಮಾತುಗಳೆಲ್ಲ ದೊಡ್ಡದಾಗಿ ಅವರಿಗೆ ಇವರು ಇವರಿಗೆ ಅವರು ಮಾತಾಡಿಕೊಂಡು ದೊಡ್ಡ ಜಗಳವನ್ನೇ ಮಾಡುವ ಸಾಧ್ಯತೆ ಇರುತ್ತದೆ ಹಾಗಾದರೆ ಜಗಳಗಳನ್ನು ತಪ್ಪಿಸುವುದು ಹೇಗೆ ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಒಂದು ಉದಾಹರಣೆಯೊಂದಿಗೆ ನಾನು ನಿಮಗೆ ಹೇಳುತ್ತೇನೆ ಈ ಉದಾಹರಣೆಯು ಕೋಪಕ್ಕೆ ಎಷ್ಟು ಚೆನ್ನಾಗಿ ಹೊಂದುತ್ತದೆ ನೀವೇ ನೋಡಿ.

ಸ್ನೇಹಿತರೇ ನೀವು ಜಗಳವಾಡುವಾಗ ಈ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ನಾವು ಇಲ್ಲಿ ಇರುವುದು ಶಾಶ್ವತವಲ್ಲ ಅಂದರೆ ಭೂಮಿಯ ಮೇಲೆ ನಾವು ಶಾಶ್ವತವಾಗಿರುವುದಿಲ್ಲ ಇದನ್ನು ಮೊದಲು ನೆನಪಿನಲ್ಲಿಡಬೇಕು. ನಾವು ಸತ್ತಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಇರುವಷ್ಟು ದಿನ ಎಲ್ಲರ ಜೊತೆಗೆ ಪ್ರೀತಿ-ವಿಶ್ವಾಸ ನಂಬಿಕೆಯಿಂದ ಇರಬೇಕು. ಸ್ನೇಹಿತರೆ ಒಂದು ಉದಾಹರಣೆಯನ್ನು ನೋಡಿ ಒಂದು ಖಾಲಿ ಇರುವ ಜಾಗಕ್ಕೆ ಯಾರಾದರೂ ಒಂದು ದಿನ ಕಸವನ್ನು ಹಾಕಿದರೆ ಮರುದಿನ ಅಲ್ಲಿ ಇನ್ನೊಬ್ಬರು ಕಸವನ್ನು ಚೆಲ್ಲುತ್ತಾರೆ ಹೀಗೆ ದಿನಕಳೆದಂತೆಲ್ಲಾ ಕಸವು ಸಂಗ್ರಹಣೆಯಾಗಿ ಒಂದು ದೊಡ್ಡ ತಿಪ್ಪೆ ಆಗುತ್ತದೆ.

ತಿಪ್ಪೆಯು ಕೊಳೆತ ಮೇಲೆ ದುರ್ವಾಸನೆ ಇರುತ್ತದೆ ಕ್ರಿಮಿಕೀಟಗಳು ಅನಾರೋಗ್ಯ ಉಂಟು ಮಾಡುತ್ತವೆ. ಕೋಪವು ಕೂಡ ಒಂದು ಸಲ ನಮ್ಮ ಮನಸ್ಸಿಗೆ ಬಂದರೆ ಅದು ದಿನದಿನ ಹೆಚ್ಚಾಗಿ ಹೋಗುತ್ತದೆ ನಮ್ಮ ಮನಸ್ಸು ನಮ್ಮ ಹಿಡಿತವನ್ನು ತಪ್ಪಿದ್ದರೆ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುವಂತೆ ಮಾಡುತ್ತದೆ. ಯಾರಾದರೂ ನಿಮ್ಮ ಜೊತೆ ಜಗಳವಾಡಲು ಬಂದಾಗ ನೀವು ನಿಮ್ಮ ಕೋಪವನ್ನು ತೊರೆದು ಒಂದು ಸಲ ಅವರ ಜೊತೆ ಕುಶಲದ ಮಾತನಾಡಿ ಹಾಗಾದರೆ ನಿಮ್ಮ ತಪ್ಪು ಇಲ್ಲ ಎಂದು ತಿಳಿಯುತ್ತಾರೆ ಹಾಗೆ ಅವರು ಕೂಡ ಬದಲಾಗುತ್ತಾರೆ ಇದರ ಬದಲು ನೀವು ಕೋಪವನ್ನು ವ್ಯಕ್ತಪಡಿಸಿದರು ಅವರು ಕೂಡ ಕೋಪದಿಂದ ಇನ್ನೊಂದು ಮಾತನಾಡುತ್ತಾರೆ ಹೀಗೆ ಎಲ್ಲೆಲ್ಲೋ ಮಾತುಗಳಾಗುತ್ತವೆ.

ಇದರ ಬದಲು ಒಂದು ಸ್ಥಳದಲ್ಲಿ ನೀವು ಒಂದು ಹೂವಿನ ಗಿಡ ನೆಟ್ಟರೆ ಅಂದರೆ ನಿಮ್ಮ ಮನಸ್ಸಿನಲ್ಲಿ ಕುಶಲದ ಮಾತುಗಳನ್ನು ಇಟ್ಟುಕೊಂಡಿದ್ದರೆ ಹಾಗೆ ಎಲ್ಲರ ಮೇಲೆ ದಯೆ ಕರುಣೆಯನ್ನು ತೋರಿಸಿದರೆ ಹೂವಿನ ಗಿಡದ ಹಾಗೆ ನಿಮ್ಮ ಮನಸ್ಸಿನಲ್ಲಿ ಮೃದು ಸ್ವಭಾವ ಬರುತ್ತದೆ ಹಾಗೆ ಹೂವಿನ ಸುವಾಸನೆ ಹಾಗೆ ನಿಮ್ಮ ಪ್ರತಿಷ್ಠೆ ಎಲ್ಲೆಲ್ಲೂ ಹಬ್ಬುತ್ತದೆ. ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರುವುದಿಲ್ಲ ಎಂದು ಗಾದೆಯೇ ಇದೆ. ಇದರ ಅರ್ಥ ಕೋಪದಲ್ಲಿ ನೀವು ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ಚಿಕ್ಕ ಚಿಕ್ಕ ವಿಷಯದಿಂದ ಮನಸ್ಸನ್ನು ಹಾಳು ಮಾಡಿಕೊಂಡು ನಿಮ್ಮ ಅನಾರೋಗ್ಯಕ್ಕೆ ನೀವೇ ಕಾರಣರಾಗುತ್ತೀರಿ ಕೋಪವನ್ನು ಎಷ್ಟು ನಮ್ಮ ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳುತ್ತೇವೆ ಅಷ್ಟು ಎತ್ತರವಾಗಿ ನಾವು ನಮ್ಮ ಜೀವನದಲ್ಲಿ ಬೆಳೆಯುತ್ತವೆ. ಆದಷ್ಟು ನೀವು ಕೋಪ ಬಂದಾಗ ಮಾತನಾಡಲು ಹೋಗಬೇಡಿ ಎಕೆಂದರೆ ಕೋಪದಲ್ಲಿ ಮಾತಾಡಿದಾಗ ನಿಜ ವಿಷಯಗಳು ಹೊರಗೆ ಬರುತ್ತದೆ ಆಗ ಇಬ್ಬರಲ್ಲೂ ನೋವು ಉಂಟಾಗುತ್ತದೆ. ಆದಷ್ಟು ಲೈಫನ್ನು ಈಸಿಯಾಗಿ ತೆಗೆದುಕೊಳ್ಳಿ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡರೆ ಇಂತಹ ಕೆಟ್ಟ ಕೋಪ ಬರುವುದು ಸಹಜ ಹಾಗಂತ ಎಲ್ಲ ಸಮಯದಲ್ಲೂ ಮೌನವಾಗಿ ಇರಬಾರದು

ಇದು ಅದಕ್ಕಿಂತ ಅಪಾಯಕಾರಿಯಾದದ್ದು ಮಾತನಾಡುವ ಸಂದರ್ಭದಲ್ಲಿ ಮಾತ್ರ ನೀವು ಮಾತನಾಡಿ ಮಾತನಾಡುವಾಗ ಒಂದು ಸಲ ಮನಸ್ಸಿನಿಂದ ಮಾತಾಡಿ ಬುದ್ಧಿ ಹೇಳಿದ ಹಾಗೆ ಮಾತಾಡಿ ಎಲ್ಲರನ್ನೂ ಕಳೆದುಕೊಳ್ಳಬೇಡಿ. ಒಂದು ಸಲ ಹಾಳಾದ ಸಂಬಂಧವನ್ನು ಕೂಡಿಸುವುದು ತುಂಬಾ ಕಷ್ಟಕರವಾದದ್ದು ಆದರೆ ಒಂದು ಸಲ ನೀವು ಕೋಪವನ್ನು ಬಿಟ್ಟು ಎಲ್ಲರ ಜೊತೆ ಹೊಂದಿದರೆ ಜೀವನವು ಸಂತೋಷದಿಂದ ಕೂಡಿರುತ್ತದೆ ಹಾಗೆ ಸುತ್ತಮುತ್ತಲೂ ನಿಮಗೆ ಒಳ್ಳೆಯ ಹೆಸರು ಸಹ ಇರುತ್ತದೆ ಹಾಗದರೆ ಕೋಪ ಬಂದಾಗ ಯಾವ ರೀತಿ ವರ್ತಿಸಬೇಕು ಎಂಬುದನ್ನು ಈ ಮಾಹಿತಿಯಲ್ಲಿ ನಾನು ನಿನಗೆ ಹೇಳಿದ್ದೇನೆ ಇಷ್ಟವಾಗಿದ್ದರೆ ಧನ್ಯವಾದಗಳು.

Leave a Reply

Your email address will not be published.