ಹರಕೆ ಮಾಡಿಕೊಂಡು ನೀವು ಅದನ್ನು ತೀರಿಸದೇ ಇದ್ದರೆ ನಿಮ್ಮ ಜೀವನದಲ್ಲಿ ಯಾವ ರೀತಿಯ ಕಷ್ಟಗಳು ಎದುರಾಗುತ್ತವೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹರಕೆ ಮಾಡಿಕೊಂಡ ನಂತರ ನೀವು ಈ ತಪ್ಪನ್ನು ಮಾಡಿದರೆ ಈ ಮಾಹಿತಿ ತಿಳಿಯಿರಿ ಹರಕೆ ಮಾಡಿಕೊಂಡು ನಾವು ಈ ಕೆಲವೊಂದು ತಪ್ಪುಗಳನ್ನು ಮಾಡಿದರೆ ನಾವು ದೇವರ ಕೋಪಕ್ಕೆ ಕಾರಣವಾಗಬೇಕಾಗುತ್ತದೆ ಇದರಿಂದ ನಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಕೂಡ ಉಂಟಾಗಬಹುದು. ಆದರೆ ನಮಗೆ ತಿಳಿದೆ ಇರುವುದಿಲ್ಲಾ ಆ ಸಮಸ್ಯೆಗಳು ನಾವು ಮರೆತ ಹರಕೆಯಿಂದ ನಮಗೆ ಕಾಡುತ್ತಾ ಇರುತ್ತದೆ ಅಂತ.ಆದರೆ ನಾವು ಸಾಕಷ್ಟು ಬಾರಿ ನಮಗೆ ಕಷ್ಟ ಬಂದಾಗ ಮನೆಯಲ್ಲಿಯೇ ಕೆಲವರು ಅದರೆ ಕೆಲವು ಹೆಣ್ಣು ಮಕ್ಕಳು ಒಂದು ಹಳದಿ ಬಟ್ಟೆಯಲ್ಲಿ ಮುಡುಪನ್ನು ಅಂದರೆ ಕಾಣಿಕೆಯನ್ನ ಕಟ್ಟಿ

ನಮ್ಮ ಕಷ್ಟಗಳು ನಿವಾರಣೆ ಆದ ನಂತರ ನಿನ್ನ ಸನ್ನಿಧಿಗೆ ಬಂದು ಅರ್ಪಿಸುತ್ತೇವೆ ಅಂತ ಕೂಡ ಹೇಳಿಕೊಂಡಿರುತ್ತಾರೆ.ಆದರೆ ಆ ಕಷ್ಟ ತೀರಿದ ಮೇಲೆ ಆ ಹರಕೆಯೇ ಮರೆತಿರುತ್ತಾರೆ ಇನ್ನು ಆ ಮುಡಿಪು ಹಾಗೆ ಮನೆಯಲ್ಲಿಯೇ ಇರುತ್ತದೆ. ಈ ರೀತಿ ಮಾಡುವುದರಿಂದ ನಮಗೆ ಸಂಕಷ್ಟ ಉಂಟಾಗುತ್ತದೆ ನಾವು ಹರಕೆಯನ್ನು ಮಾಡಿಕೊಂಡು ಅದನ್ನ ಮರೆತುಬಿಟ್ಟರೆ ಉದ್ಯೋಗ ಸ್ಥಳದಲ್ಲಿ ಕಲಹ ಮತ್ತು ದಾಂಪತ್ಯದಲ್ಲಿ ಸುಮ್ಮನೆ ಜಗಳ ಕಲಹ ಉಂಟಾಗುತ್ತಲೇ ಇರುತ್ತದೆ.

ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಯಾವುದಾದರೂ ಒಂದು ವಿಚಾರಗಳಲ್ಲಿ ನೆಮ್ಮದಿ ಕಾಡುತ್ತಲೇ ಇರುತ್ತದೆ. ಈ ರೀತಿ ಸಮಸ್ಯೆಗಳು ನಿಮ್ಮ ಮನೆಯಲ್ಲೂ ಕೂಡ ಕಾಡುತ್ತಾ ಇದ್ದರೆ ನೀವು ಮಾಡಿರುವ ಹರಕೆ ಮರೆತು ಹೋಗಿದ್ದರೆ ಅಥವಾ ಇನ್ನಾ ಕೆಲವರಿಗಂತೂ ಯಾವ ದೇವರಿಗೆ ಹರಕೆ ಮಾಡಿಕೊಂಡಿರುತ್ತೇವೆ ಅಂತ ಗೊತ್ತಿರುತ್ತದೆ ಆದರೆ ಏನನ್ನು ಅರ್ಪಿಸುತ್ತೇವೆ ಅಂತ ಕೇಳಿಕೊಂಡಿರುವ ಬೇಡಿಕೆ ಮರೆತುಹೋಗಿರುತ್ತದೆ ಅಂಥವರು ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಹರಕೆ ಮಾಡಿಯೂ ನಿಮಗೆ ಮರೆತುಹೋಗಿದೆ ಅನ್ನೋರು ದೇವರ ಸನ್ನಿಧಿಗೆ ಹೋಗಬೇಕು ನಂತರ ಅಲ್ಲಿ ತಪ್ಪು ಕಾಣಿಕೆಯನ್ನು ಹಾಕಬೇಕು

ಮತ್ತು ದೇವರಿಗೆ ಆ ದಿನ ವಿಶೇಷ ಪೂಜೆಯನ್ನು ಸಲ್ಲಿಸಬೇಕು. ಹೂವು ಪ್ರಸಾದವನ್ನು ತೆಗೆದುಕೊಂಡು ಮನೆಗೆ ಬರಬೇಕು ಈ ರೀತಿ ತಪ್ಪು ಕಾಣಿಕೆಯನ್ನು ದೇವರಿಗೆ ಸಮರ್ಪಿಸುವುದರಿಂದ ನೀವು ಮಾಡಿರುವ ಹರಕೆ ಪರಿಹಾರವಾಗುತ್ತದೆ.ಇನ್ನು ಹರಕೆ ಮಾಡಿಕೊಂಡು ಅದು ಮರೆತು ಹೋಗಿದ್ದರೆ ಕೆಲವರಿಗೆ ದೇವರು ಕನಸಿಗೆ ಬರುತ್ತಾ ಇರುತ್ತದೆ ಕೆಲವರು ದೇವರು ಕನಸಿಗೆ ಬರುವುದು ಒಳ್ಳೆಯದು ಅಂತ ಅದನ್ನು ನಿರ್ಲಕ್ಷ್ಯ ಮಾಡ್ತಾರೆ ಆದರೆ ನೀವು ಕೆಲವೊಂದು ಬಾರಿ ಹರಕೆಯನ್ನು ಮಾಡಿಕೊಂಡು ಅದನ್ನು ಮರೆತಿದ್ದರೆ

ಅಥವ ನಿಮ್ಮ ಮನೆಯಲ್ಲಿ ದೇವರ ಮುಡುಪನ್ನು ಇಟ್ಟುಕೊಂಡು ಹಾಗೇ ಇದ್ದರೆ ನಿಮ್ಮ ಕನಸಿನಲ್ಲಿ ದೇವರು ಕಾಣಿಸಿಕೊಳ್ಳುತ್ತದೆ ಆಗ ನೀವು ದೇವರ ಸನ್ನಿಧಿಗೆ ಹೋಗಿ ಆ ಮುಡುಪನ್ನು ದೇವರಿಗೆ ಸಮರ್ಪಿಸಿ ಬರಬೇಕು ಇಲ್ಲವಾದಲ್ಲಿ ಕೂಡ ನೀವು ಜೀವನದಲ್ಲಿ ಪದೇಪದೆ ಮೇಲಿಂದ ಮೇಲೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಈ ಚಿಕ್ಕ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ಮಾಹಿತಿಗೆ ಲೈಕ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಜೊತೆಗೆ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

Leave a Reply

Your email address will not be published.