ನಿಂಬೆಹಣ್ಣು ಹಾಗೂ ಲವಂಗದಿಂದ ಈ ಒಂದು ಪರಿಹಾರ ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆಗಳು ಬರುವುದಿಲ್ಲ.ಹಾಯ್ ಸ್ನೇಹಿತರೆ ಜೀವನದಲ್ಲಿ ನೀವು ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಹಾಗೂ ನಿಮಗೆ ಹಣದ ಸಮಸ್ಯೆಗಳು ಹೆಚ್ಚಾಗಿದ್ದರೆ ಮತ್ತು ಮನೆಯಲ್ಲಿ ಚಿಕ್ಕಪುಟ್ಟ ವಿಷಯಗಳಿಗೂ ಕೂಡ ಜಗಳಗಳು ನಡೆಯುತ್ತಿದ್ದರೆ ಹಾಗೂ ವ್ಯಾಪಾರ ಮಾಡಲು ಹೋದರು ನಷ್ಟ ಆಗುತ್ತಿದ್ದರೆ ಮತ್ತು ನಿಮ್ಮ ಮನೆಗೆ ಯಾರಾದರೂ ಮಾತ ಮಂತ್ರ ಹಾಗೂ ವಶೀಕರಣ ಮಾಡಿಸಿದ್ದರೆ ಹಾಗೆ ನಿಮ್ಮ ಮನೆಯಲ್ಲಿ ಏನಾದರೂ ನಕಾರಾತ್ಮಕ ಶಕ್ತಿಗಳು ಇದ್ದರೆ ಈ ಒಂದು ಪರಿಹಾರವನ್ನು ಮಾಡಿ. ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಇರುವ ಯಾವುದೇ ಸಮಸ್ಯೆಯಾದರೂ ಒಂದು ತಿಂಗಳಲ್ಲಿ ಪರಿಹಾರ ಆಗುತ್ತದೆ
ಸ್ನೇಹಿತರೆ ಯಾವುದೇ ಪರಿಹಾರ ಮಾಡಿದರೆ ಬೇಗನೆ ಅದರ ಫಲ ಅಥವಾ ಉತ್ತರ ನಿಮಗೆ ಸಿಗುವುದಿಲ್ಲ ಬದಲಾಗಿ ಒಂದು ತಿಂಗಳಾದರೂ ಬೇಕಾಗುತ್ತದೆ. ಇನ್ನು ನಿಮ್ಮ ಜಾತಕದಲ್ಲಿ ಏನಾದರೂ ಶನಿ ರಾಹು ಕೇತು ಗ್ರಹಗಳ ತೊಂದರೆಗಳು ಇದ್ದರೆ ಇದರಿಂದ ಪರಿಹಾರ ಆಗುತ್ತವೆ ಹಾಗಾದರೆ ಇಷ್ಟೆಲ್ಲಾ ತೊಂದರೆಗಳ ಪರಿಹಾರಕ್ಕಾಗಿ ಏನೇನು ಬೇಕು ಎಂಬುದನ್ನು ನೀವು ಯೋಚಿಸುತ್ತಿರಬಹುದು ಆದರೆ ಇದಕ್ಕೆ ಬೇಕಾಗಿರುವುದು ಕೇವಲ ಎರಡು ನಿಂಬೆಹಣ್ಣು ಹಾಗೂ 8 ಲವಂಗಗಳು. ಸ್ನೇಹಿತರೆ ನಿಂಬೆಹಣ್ಣಿನಲ್ಲಿ ನಕಾರಾತ್ಮಕ ಶಕ್ತಿಗಳನ್ನು ಹಿಡಿದಿಟ್ಟುಕೊಳ್ಳುವ ಗುಣ ಇದೆ ಹಾಗಾಗಿ ಮದುವೆಗಳಲ್ಲಿ ವಧುವರರಿಗೆ ನಿಂಬೆಹಣ್ಣಿನಿಂದ ನಿವಾರಳಿಸುತ್ತಾರೆ ಹಾಗೆ ಚಿಕ್ಕ ಮಕ್ಕಳಿಗೆ ದೃಷ್ಟಿ ಯಾದಾಗ ಕೂಡ ಅವರಿಗೂ ನಿವಾಳಿಸುತ್ತಾರೆ.
ನಿಂಬೆಹಣ್ಣಿನಲ್ಲಿ ಅಂತಹ ಶಕ್ತಿ ಇದೆ ಇದರಿಂದ ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳವನ್ನು ಅಮಾವಾಸ್ಯೆಯ ದಿನದಂದು ನಿವಾಳಿಸುತ್ತಾರೆ. ಹಾಗಾದರೆ ಸ್ನೇಹಿತರೆ ಒಂದು ಪರಿಹಾರ ಹೇಗೆ ಯಾವಾಗ ಮತ್ತು ಯಾವ ದಿನದಂದು ಮಾಡಬೇಕು ಎಂದು ನೋಡೋಣ. ಸ್ನೇಹಿತರೆ ಒಂದು ಪರಿಹಾರವನ್ನು ಮಂಗಳವಾರ ಅಥವಾ ಶನಿವಾರ ಮಾಡಬಹುದು ಸಂಜೆ 6 ಗಂಟೆಯ ಮೇಲೆ ಒಂದು ಪರಿಹಾರ ನೀವು ಮನೆಯಲ್ಲಿ ಮಾಡಿ ನೋಡಿ. ಮೊದಲು ಶನಿವಾರ ಅಥವಾ ಮಂಗಳವಾರ ಸಾಯಂಕಾಲ ಕೈಕಾಲು ಮುಖ ತೊಳೆದು ದೇವರಿಗೆ ದೀಪ ಹಚ್ಚಿ ಒಂದು ನಿಂಬೆಹಣ್ಣನ್ನು ಅರ್ಧ ಭಾಗವಾಗಿ ಎರಡು ಹೋಳುಗಳನ್ನಾಗಿ ಮಾಡಬೇಕು ನಂತರ ಅರ್ಧ ಮಾಡಿರುವ ನಿಂಬೆಹಣ್ಣನ್ನು ತೆಗೆದುಕೊಂಡು 4 ಕಡೆ ಲವಂಗವನ್ನು ಹೂವನ್ನು ಮೇಲೆ ಕಾಣಿಸುವಂತೆ ನಿಂಬೆ ಹಣ್ಣಿಗೆ ಚುಚ್ಚಬೇಕು.
ಹಾಗೆ 2 ಹೋಳುಗಳಿಗೆ ಲವಂಗಗಳನ್ನು ಚುಚ್ಚಿ ಇಟ್ಟುಕೊಳ್ಳಬೇಕು. ಈ ಪರಿಹಾರಕ್ಕೆ ಬಳಸುವ ನಿಂಬೆಹಣ್ಣು ಹಾಗೂ ಲವಂಗಗಳು ತುಂಬಾ ಚೆನ್ನಾಗಿರಬೇಕು. ನಂತರ ಇವುಗಳನ್ನು ಒಂದು ತಟ್ಟೆಯಲ್ಲಿಟ್ಟುಕೊಂಡು ಮೊದಲು ಅಡುಗೆ ಮನೆಯಲ್ಲಿರುವ ಸ್ಟೋವ್ ಗೆ ಏಳು ಬಾರಿ ಆಂಟಿ ಕ್ಲಾಕ್ ವೈಸ್ ನಿವಾಳಿಸಬೇಕು. ನಂತರ ಮನೆಯಲ್ಲಿ ದುಡ್ಡು ಇಡುವ ಸ್ಥಳಕ್ಕೆ ಏಳು ಬಾರಿ ನಿವಾಳಿಸಬೇಕು. ನಂತರ ಮನೆಯ ದ್ವಾರಗಳಿಗೆ ಹಾಗೂ ಮುಖ್ಯ ದ್ವಾರಗಳಿಗೆ ನಿವಾಳಿಸಬೇಕು. ನಂತರ ಇವುಗಳನ್ನು ತೆಗೆದುಕೊಂಡು ಮೂರು ದಾರಿ ಇರುವ ರೋಡಿಗೆ ಒಂದರ ಮೇಲೆ ಒಂದು ಇಟ್ಟು ಹಿಂತಿರುಗಿ ನೋಡದೆ ಬರಬೇಕು ಬಂದಮೇಲೆ ಮತ್ತು ಕೈಕಾಲು ಮುಖ ತೊಳೆಯಬೇಕು.
ಸ್ನೇಹಿತರೆ ಆಗಿನ ಕಾಲದಲ್ಲಿ ಮನೆಯ ಮುಂದೆ ಒಂದು ಸ್ವಲ್ಪ ನೀರು ಇಡುತ್ತಿದ್ದರು ಹೊರಗಿನಿಂದ ಯಾರೇ ಬಂದರೂ ಕಾಲು ಹಾಗೂ ಕೈಗಳನ್ನು ತೊಳೆದುಕೊಂಡು ಬರುತ್ತಿದ್ದರು ಹಾಗಾಗಿ ಯಾವುದೇ ನಕಾರಾತ್ಮಕ ಶಕ್ತಿಗಳು ನಮ್ಮ ಮನೆಯಲ್ಲಿ ಇರುತ್ತಿರಲಿಲ್ಲ ಆದರೆ ಈಗ ಅಭ್ಯಾಸವನ್ನು ಮರೆತಿದ್ದಾರೆ. ಇದರಿಂದಾಗಿ ಕೂಡ ನಾವು ಮನೆಯಲ್ಲಿ ಸಂಕಷ್ಟಗಳನ್ನು ನೋಡಬಹುದು ಹಾಗಾಗಿ ಸ್ನೇಹಿತರೆ ಈ ಒಂದು ಪರಿಹಾರವನ್ನು ಏಳು ಬಾರಿ ಮಾಡಿನೋಡಿ ಮಂಗಳವಾರ ಶನಿವಾರ 7 ವಾರ ಮಾಡಿದರೆ ಖಂಡಿತವಾಗಿಯೂ ನಿಮಗೆ ಯಾವುದೇ ತೊಂದರೆಗಳು ಬರುವುದಿಲ್ಲ. ಹಾಗಾದರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಈ ಮಾಹಿತಿ ಇಷ್ಟವಾಗಿದ್ದರೆ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಿಳಿಸಿ ಧನ್ಯವಾದಗಳು.