ಬೇರೆಯವರ ಕೆಟ್ಟ ಕಣ್ಣು ನಿಮ್ಮ ಮೇಲೆ ಬಿದ್ದು ನಿಮಗೆ ಬಹಳ ತೊಂದರೆ ಆಗುತ್ತಿದೆಯಾ .. ಹಾಗಾದ್ರೆ ಎಕ್ಕದ ಗಿಡದಿಂದ ಹೀಗೆ ಮಾಡಿದ್ರೆ ಸಾಕು ನಿಮ್ಮ ಮೇಲೆ ಬೇರೆಯವರ ದೃಷ್ಟಿ ಎಷ್ಟೇ ಕೆಟ್ಟದಾಗಿದ್ದರೂ ಕೂಡ ನಿಮಗೆ ಆ ಕೆಟ್ಟ ದೃಷ್ಟಿ ತಾಗಲ್ಲ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಪ್ರಕೃತಿ ಅದೆಷ್ಟು ಚೆಂದ ಅಲ್ವಾ ಪ್ರಕೃತಿಯನ್ನುವ ಪದವೇ ಚಂದ ನಮ್ಮ ಭೂಮಿ ಮೇಲೆ ಇರುವ ಈ ಒಂದು ಪ್ರಕೃತಿಯಿಂದಲೆ ನಮ್ಮ ಈ ಗ್ರಹ ಬೇರೆ ಗ್ರಹಗಳಿಗಿಂತ ಭಿನ್ನ ಅಂತ ಅನ್ನಿಸಿಕೊಂಡಿದೆ. ಈ ಒಂದು ಪ್ರಕೃತಿಯಲ್ಲಿ ಎಷ್ಟೆಲ್ಲ ಔಷಧೀಯ ಗುಣವುಳ್ಳ ಮರ ಗಡಿಗಳಿವೆ ಬಳ್ಳಿಗಳಿವೆ. ಇಂತಹದ್ದೇ ಒಂದು ಪ್ರಕೃತಿಯೊಳಗೆ ಇರುವ ಒಂದು ವಿಶೇಷವಾದ ಪೂಜ್ಯನೀಯ ಭಾವ ಹೊಂದಿರುವಂತಹ ಮತ್ತು ಅಗಾಧವಾದ ಔಷಧೀಯ ತತ್ವವನ್ನು ಹೊಂದಿರುತಕ್ಕಂತಹ ಒಂದು ಗಿಡದ ಬಗ್ಗೆ ನಿಮಗೆ ತಿಳಿಸುತ್ತೇನೆ. ಈ ಗಿಡವನ್ನು ನೀವು ನಿಮ್ಮ ಅಕ್ಕ ಪಕ್ಕದ ಮನೆಯಲ್ಲಿ ಅಥವಾ ನಿಮ್ಮ ಊರಿನಲ್ಲಿ ರಸ್ತೆಯ ಬದಿಯಲ್ಲಿ ಕಂಡಿರುತ್ತೀರಿ.

ನಾನು ಹೇಳುತ್ತಿರುವುದು ಎಕ್ಕದ ಗಿಡದ ಬಗ್ಗೆ ನೀವು ಎಕ್ಕದ ಗಿಡದಲ್ಲಿ ಎರಡು ರೀತಿಯ ಗಿಡವನ್ನು ಕಂಡಿರುತ್ತೀರಿ, ಒಂದು ನೀಲಿ ಗುಲಾಬಿ ಬಣ್ಣದ ಎಕ್ಕದ ಗಿಡ ಆದರೆ ಮತ್ತೊಂದು ಬಿಳಿ ಎಕ್ಕದ ಗಿಡ. ಈ ಬಿಳಿ ಎಕ್ಕದ ಗಿಡ ಔಷಧೀಯ ಗುಣವನ್ನು ಹೊಂದಿದ್ದು ಪೂಜೆಯಲ್ಲಿಯೂ ಕೂಡ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಈ ಬಿಳಿ ಎಕ್ಕದ ಗಿಡವನ್ನು ನೀವೇನಾದರೂ ನಿಮ್ಮ ಮನೆಯ ಬಲಭಾಗದಲ್ಲಿ ಬೆಳೆಸಿದ್ದೆ ಆದಲ್ಲಿ.ನಿಮ್ಮ ಮನೆಗೆ ವಾಸ್ತು ದೋಷದ ಸಮಸ್ಯೆಗಳು ಎದುರಾಗುವುದಿಲ್ಲ ಹೌದು ನೀವು ಅಕಸ್ಮಾತಾಗಿ ಯಾವುದಾದರೂ ಒಂದು ವಿಚಾರದಲ್ಲಿ ಮನೆಯಲ್ಲಿ ವಾಸ್ತು ದೋಷವನ್ನು ಎದುರಿಸುತ್ತಿರುತ್ತೀರ. ಅದರಿಂದ ನಿಮ್ಮ ಮನೆಯಲ್ಲಿ ತೊಂದರೆಗಳು ಜರುಗುತ್ತಿದೆ ಅನ್ನುವುದಾದರೆ ಆ ಸಮಸ್ಯೆಗಳನ್ನು ನಿವಾರಿಸಿ ಕೊಳ್ಳುವುದಕ್ಕಾಗಿ, ನೀವು ಮನೆಯ ಬಲಭಾಗದಲ್ಲಿ ಎಕ್ಕದ ಗಿಡವನ್ನು ಅದರಲ್ಲಿಯು ಬಿಳಿ ಎಕ್ಕದ ಗಿಡವನ್ನು ಬೆಳೆಸಿ ನಿಮ್ಮ ಮನೆಯ ಸಮಸ್ಯೆಗಳು ನಿವಾರಣೆ ಆಗುತ್ತದೆ.

ಮನೆಯಲ್ಲಿ ಶ್ವೇತಾಗ್ನಿ ಗಣಪತಿಯನ್ನು ಅಂದರೆ ಬಿಳಿ ಎಕ್ಕದ ಬುಡದಿಂದ ಗಣಪತಿಯನ್ನು ಮಾಡಿ ಮನೆಯಲ್ಲಿ ಪೂರ್ವ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡಿ. ಇದನ್ನು ಇಪ್ಪತ್ತ್ ಒಂದು ದಿನಗಳ ಕಾಲ ಪ್ರತಿ ದಿನ ಇಪ್ಪತ್ತೊಂದು ಎಕ್ಕದ ಹೂವುಗಳಿಂದ ಮಾಲೆಯನ್ನು ಮಾಡಿ ಗಣಪತಿಗೆ ಸಮರ್ಪಿಸುತ್ತಾ ಬಂದರೆ, ನಿಮ್ಮ ಮನೆಯಲ್ಲಿ ಆಗುತ್ತಿರುವ ಕಷ್ಟಗಳು ತೊಂದರೆಗಳು ಎಲ್ಲವೂ ನಿವಾರಣೆಯಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಉಂಟಾಗುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ.ಮನೆಯ ಸಿಂಹ ದ್ವಾರದಲ್ಲಿ ಎಕ್ಕದ ಗಿಡದ ಹೂವಿನಿಂದ ಮಾಡಿದ ಮಾಲೆಯನ್ನು ಹಾಕುವುದರಿಂದ ಮನೆಗೆ ಕೆಟ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ ಜೊತೆಗೆ ಗಣಪತಿ ಆಂಜನೇಯ ಲಕ್ಷ್ಮೀದೇವಿ ಶನಿದೇವರಿಗೆ ಎಕ್ಕದ ಹೂವು ಬಹಳ ಪ್ರಿಯವಾದದ್ದು ಈ ದೇವರುಗಳಿಗೆ ಪೂಜೆಯನ್ನು ಸಲ್ಲಿಸುವಾಗ ಎಕ್ಕದ ಗಿಡದ ಬಿಳಿ ಹೂವನ್ನು ಸಮರ್ಪಣೆ ಮಾಡುವುದರಿಂದ ನಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.

ಮಂಗಳವಾರದ ದಿವಸ ದಂದು ಗಜಾನನಿಗೆ ಬಿಳಿ ಎಕ್ಕದ ಹೂವನ್ನು ಮಕ್ಕಳಿಂದ ಅಂದರೆ ವಿದ್ಯಾಭ್ಯಾಸವನ್ನು ಮಾಡುತ್ತಿರುವಂತಹ ಮಕ್ಕಳಿಂದ ಸಮರ್ಪಣೆ ಮಾಡಿಸಿದರೆ. ಅವರು ವಿದ್ಯಾಭ್ಯಾಸದಲ್ಲಿ ಹೆಚ್ಚು ಉನ್ನತಿಗೊಳ್ಳುತ್ತಾರೆ ಅಂತ ಹೇಳಲಾಗುತ್ತದೆ.ವ್ಯಾಪಾರ ವಹಿವಾಟು ಮಾಡುತ್ತಿರುವಂತಹ ಸ್ಥಳದಲ್ಲಿ ಪ್ರತಿ ದಿನ ಎಕ್ಕದ ಗಿಡದ ಹೂವನ್ನು ಇರಿಸುವುದರಿಂದ, ಆ ಒಂದು ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಕಣ್ಣು ದೃಷ್ಟಿಯ ಸಮಸ್ಯೆ ಆಗುವುದಿಲ್ಲ ಅಂತ ಹೇಳ್ತಾರೆ. ಈ ರೀತಿಯಾಗಿ ಕೇವಲ ಆಧ್ಯಾತ್ಮಿಕವಾಗಿ ಮಾತ್ರ ಎಕ್ಕದ ಗಿಡವನ್ನು ಬಳಸುವುದಿಲ್ಲ ನಾಟಿ ಔಷಧಿಯಲ್ಲಿ ಆಯುರ್ವೇದದಲ್ಲಿಯೂ ಕೂಡ ಈ ಬಿಳಿ ಎಕ್ಕದ ಹೂವನ್ನು ಮತ್ತು ಎಲೆ ಅನ್ನು ಬಳಸಲಾಗುತ್ತದೆ.

Leave a Reply

Your email address will not be published.