ಮನೆಯ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಈ ರೀತಿಯ ಫೋಟೋಗಳನ್ನು ಹಾಕಿಕೊಳ್ಳಬೇಡಿ .. ಹಾಗೇನಾದ್ರೂ ಹಾಕಿದರೆ ನಿಮ್ಮ ಮನೆಗೆ ಕೆಡುಕು ಉಂಟಾಗುತ್ತೆ ಅದರ ಬದಲು ಈ ಫೋಟೋಗಳನ್ನು ಹಾಕಿಕೊಳ್ಳಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಈ ಫೋಟೋಗಳು ಇದ್ದರೆ ನಿಮಗೆ ತೊಂದರೆ ಆಗುತ್ತದೆ ಹಾಗಾದರೆ ಯಾವ ಫೋಟೋಗಳು ಒಳ್ಳೆಯದು ಎಂದು ಮಾಹಿತಿ ಓದಿ ತಿಳಿದುಕೊಳ್ಳಿ.
ಹಾಯ್ ಸ್ನೇಹಿತರೆ ಎಲ್ಲರಿಗೂ ತಮ್ಮ ತಮ್ಮ ಮನೆ ಬರುವವರೆಗೆ ಹಾಗೂ ನೋಡುವವರಿಗೆ ತುಂಬಾ ಚೆನ್ನಾಗಿ ಕಾಣಬೇಕು ಎಂಬ ಆಸೆ ಇರುತ್ತದೆ. ಮನೆಯನ್ನು ಶೃಂಗರಿಸುವುದುರದಿಂದ ಮನೆಯಲ್ಲಿ ನೆಮ್ಮದಿ ಇರುತ್ತದೆ ನಮ್ಮ ಮನೆಗೆ ಎಷ್ಟು ಸ್ವಚ್ಛವಾಗಿ ಅಂದವಾಗಿರುತ್ತದೆ ಅಷ್ಟು ನಮ್ಮ ಮನೆಯಲ್ಲಿ ನಾವು ಸಂತೋಷವಾಗಿರುತ್ತವೆ.ವಿಷ್ಣು ಪುರಾಣದಲ್ಲಿ ಹೇಳಿರುವಂತೆ ಮನೆಯಲ್ಲಿ ಇಂತಹ ಫೋಟೋಗಳು ಇರಬಾರದು ಮತ್ತು ಇಂತಹ ಫೋಟೋಗಳು ಇರಬೇಕು ಎಂಬ ಉಲ್ಲೇಖವಿದೆ. ಭಗವಾನ್ ಶ್ರೀಕೃಷ್ಣ ಮನೆಯಲ್ಲಿ ಯಾವ ಚಿತ್ರಗಳು ಇರಬೇಕು ಯಾವ ಚಿತ್ರಗಳು ಇರಬಾರದು ಎಂಬುದನ್ನು ವಿಷ್ಣುಪುರಾಣದಲ್ಲಿ ಹೇಳಿದ್ದಾರೆ. ಅದರ ಪ್ರಕಾರ ನಾನು ನಿಮಗೆ ಈ ಒಂದು ವಿಷಯವನ್ನು ತಿಳಿಸುತ್ತೇನೆ.

ಮಾಹಿತಿಯನ್ನು ಓದುವವರು ಕೂಡ ಮನೆಯಲ್ಲಿ ಇಂತಹ ಫೋಟೋಗಳನ್ನು ಹಾಕಿರಬಹುದು. ಹಾಗೂ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಹಾಕಿದರೆ ಒಳ್ಳೆಯ ಫಲ ಸಿಗುತ್ತದೆ ಇಂದು ಕೂಡ ಹೇಳುತ್ತೇನೆ. ಮನೆಯಲ್ಲಿ ನಾವು ಯಾವ ಯಾವ ಫೋಟೋಗಳನ್ನು ಹಾಕಿದರೆ ಉತ್ತಮವಾದ ಫಲಿತಾಂಶ ನೋಡುತ್ತೇವೆ ಎಂಬ ಮಾಹಿತಿ ನಮಗೆ ತಿಳಿದರೆ ನಾವು ನಮ್ಮ ಜೀವನದಲ್ಲಿ ತುಂಬಾ ಸಂತೋಷದಿಂದ ಇರಬಹುದು. ಹಾಗಾದರೆ ಸ್ನೇಹಿತರೆ ಕೂಡಲೇ ಈ ಮಾಹಿತಿಯನ್ನು ನೀವು ಓದಬೇಕು ಮಿಸ್ ಮಾಡದೆ ಓದಿದರೆ ನೀವು ತುಂಬಾ ಒಳ್ಳೆಯ ವಿಷಯವನ್ನು ತಿಳಿದಂತಾಗುತ್ತದೆ. ಮೊದಲನೆಯದಾಗಿ ಯಾವ ಫೋಟೋ ಹಾಕುವುದರಿಂದ ನಿಮಗೆ ಒಳ್ಳೆಯದು ಎಂದು ತಿಳಿಸುತ್ತೇನೆ. ತಿಂಗಳ ಬೆಳಕಿನಲ್ಲಿ ಓಡುತ್ತಿರುವ ಕುದುರೆಗಳು ಇರುವ ಫೋಟೋವನ್ನು ಅಥವಾ ಭಾವಚಿತ್ರವನ್ನು ನೀವು ಏನಾದರೂ ಮನೆಯಲ್ಲಿ ಹಾಕಿದರೆ ತುಂಬಾ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಿ.

ಮನೆಯಲ್ಲಿ ಇದನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಮಂಗಳಕರ ಕಾರ್ಯಗಳು ನೆರವೇರುತ್ತವೆ. ಇಂತಹ ಪೋಸ್ಟರನ್ನು ಪೂರ್ವದಿಕ್ಕಿಗೆ ಹಾಕುವುದರಿಂದ ತುಂಬಾ ಒಳ್ಳೆಯದು. ಹಾಗೆ ಸ್ನೇಹಿತರೆ ವ್ಯಾಪಾರದ ಸ್ಥಳಗಳಲ್ಲಿ ಇಂತಹ ಓಡುವ ಕುದುರೆಯ ಭಾವಚಿತ್ರವನ್ನು ಹಾಕಿದರೆ ವ್ಯಾಪಾರದಲ್ಲಿ ತುಂಬಾ ಲಾಭ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ವ್ಯಾಪಾರ ಸ್ಥಳದಲ್ಲಿ ಇದನ್ನು ದಕ್ಷಿಣ ದಿಕ್ಕಿಗೆ ಹಾಕಬೇಕು. ಎರಡನೆಯ ಭಾವಚಿತ್ರ ಯಾವುದು ಎಂದರೆ ನಿಮ್ಮ ಮನೆಯಲ್ಲಿ ಯಾರಾದರೂ ಗರ್ಭವತಿ ಇದ್ದರೆ ಯಶೋದೆಯ ಜೊತೆ ಕೃಷ್ಣ ಇರುವ ಪೋಸ್ಟರ್ ಹಾಕಿಕೊಳ್ಳಬೇಕು ಮಲಗುವ ಸ್ಥಳದಲ್ಲಿ ಇದನ್ನು ಹಾಕಿಕೊಂಡರೆ ತುಂಬಾ ಒಳ್ಳೆಯದು. ಹಾಗೆ ಬೆಣ್ಣೆ ತಿನ್ನುವ ಕೃಷ್ಣನ ಫೋಟೋ ಹಾಕಿಕೊಳ್ಳುವುದರಿಂದ ಗರ್ಭವತಿ ಚೆನ್ನಾಗಿ ಹಾಗೂ ಆರೋಗ್ಯದಿಂದ ಪುತ್ರ ಭಾಗ್ಯವನ್ನು ಕರುಣಿಸಿಕೊಳ್ಳಬಹುದು.

ಇನ್ನು ಮನೆಯ ಒಳಗಡೆ ರಾಮ ಹಾಗೂ ಸೀತೆ ಇರುವ ಫೋಟೋ ಅದರಲ್ಲೂ ರಾಮನ ದರ್ಬಾರ್ ನಡೆಸುವ ಚಿತ್ರ ಇದ್ದರೆ ಮನೆಯ ಹಾಲಲ್ಲಿ ಹಾಕುವುದರಿಂದ ಗಂಡ-ಹೆಂಡತಿಯ ನಡುವೆ ಯಾವುದೇ ಕಲಹಗಳು ಬರುವುದಿಲ್ಲ ಹಾಗೂ ಮನೆಯಲ್ಲಿ ಸಂತೋಷ ಸದಾ ಇರುತ್ತದೆ. ಇನ್ನು ಮನೆಯೊಳಗಡೆ ಮಗು ಅಳುತ್ತಿರುವ ಅಥವಾ ಹೆಣ್ಣು ಅಳುತ್ತಿರುವ ಫೋಟೋವನ್ನು ಹಾಕಿಕೊಳ್ಳಬಾರದು. ಇದು ಕೂಡ ನಿಮ್ಮ ಮನೆಯ ನೆಮ್ಮದಿಗೆ ಭಂಗ ತರಬಹುದು. ಸ್ನೇಹಿತರೆ ನಿನ್ನ ಮನೆಯಲ್ಲಿ ಪ್ರೇಮ ಸ್ಮಾರಕವಾದ ತಾಜ್ಮಹಲ್ ಫೋಟೋವನ್ನು ಹಾಕಿಕೊಳ್ಳಬೇಡಿ. ಇದರಿಂದ ಗಂಡ-ಹೆಂಡತಿಯ ನಡುವೆ ಕಲಹ ಉಂಟಾಗಬಹುದು. ಹೆಚ್ಚಾಗಿ ಕೆಲವೊಬ್ಬರ ಮನೆಯಲ್ಲಿ ಇಂತಹ ಫೋಟೋಗಳು ಕಂಡುಬರುತ್ತವೆ.

ಯಾರ ಮನೆಯಲ್ಲಿ ಆದರೂ ಇಂತಹ ಫೋಟೋವನ್ನು ಹಾಕಿದರೆ ಅವರಿಗೂ ಸಹ ಈ ವಿಷಯವನ್ನು ತಿಳಿಸಿ. ಇನ್ನೊಂದು ಫೋಟೋ ಯಾವುದೆಂದರೆ ಹಡಗು ನೀರಿನಲ್ಲಿ ಮುಳುಗುವ ದೃಶ್ಯ ಇರುವ ಪೋಸ್ಟರ್ ಯಾವಾಗಲೂ ಹಾಕಿಕೊಳ್ಳಬೇಡಿ. ಹಾಗೂ ಮನೆಯಲ್ಲಿ ನಿಂತಿರುವ ಲಕ್ಷ್ಮಿ ಎಂದಿಗೂ ಇರಬಾರದು ಇದು ಕೂಡ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡುತ್ತದೆ. ಲಕ್ಷ್ಮಿ ಪೋಸ್ಟರ್ ಯಾವಾಗಲೂ ಲಕ್ಷ್ಮೀದೇವಿ ಕೂತಿರುವ ಪೋಸ್ಟರ್ ಹಾಕಿಕೊಳ್ಳಬೇಕು. ಹಾಗೆಯೇ ಕೊನೆಯದಾಗಿ ಮಹಾಭಾರತದಲ್ಲಿ ಅರ್ಜುನ ಹಾಗೂ ಕೃಷ್ಣ ರಥದಲ್ಲಿ ಇರುವ ಪೋಸ್ಟರನ್ನು ಮನೆಯಲ್ಲಿ ಹಾಕಿಕೊಳ್ಳಬೇಡಿ ಇದರಿಂದ ಮನೆಯಲ್ಲಿ ತುಂಬಾ ಅಶಾಂತಿ ಇರುತ್ತದೆ. ಸ್ನೇಹಿತರೆ ಹಾಗಾದರೆ ಯಾವ ಭಾವಚಿತ್ರ ಹಾಕಿದರೆ ಒಳ್ಳೆಯದು ಹಾಗೂ ಯಾವ ಭಾವಚಿತ್ರ ಹಾಕಿದರೆ ಕೆಟ್ಟದ್ದು ಎಂದು ಈಗ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *