ಸಂತಾನಕ್ಕಾಗಿ ಹಂಬಲಿಸುತ್ತಿರುವ ಹೆಣ್ಣುಮಕ್ಕಳು ಈ ಒಂದು ವೃತಾ ಮಾಡಿದರೆ ಸಾಕು… ಈ ವೃತ ಮಾಡುವುದರಿಂದ ಒಳ್ಳೆಯ ಫಲ ನಿಮಗೆ ಸಿಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವ ದೇವರ ವ್ರತ ಮಾಡುವುದರಿಂದ ಏನು ಫಲಗಳು ಸಿಗುತ್ತವೆ ಎಂಬುದನ್ನು ತಿಳಿಯಲು ಮಾಹಿತಿ ಒದಿ.ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಎಲ್ಲರೂ ಚೆನ್ನಾಗಿದ್ದೇವೆ ಎಂದರೆ ಅದಕ್ಕೆ ಮೇಲಿರುವ ದೇವರ ಆಶೀರ್ವಾದ ಇದೆಯೆಂದು ಅರ್ಥ. ಮನುಷ್ಯರ ಕೈಗಳನ್ನು ಸಾಧ್ಯವಾಗದ ಕೆಲಸಗಳು ದೇವರ ಅನುಗ್ರಹದಿಂದ ಆಗುತ್ತದೆ. ಇಂತಹ ಅನುಗ್ರಹಗಳನ್ನು ನಾವು ಪಡೆಯಲು ಸಾಕಷ್ಟು ವ್ರತ ಪೂಜೆಗಳನ್ನು ಮಾಡುತ್ತೇವೆ. ದೇವರು ಒಂದು ಸಲ ವ್ರತಕ್ಕೆ ಆಶೀರ್ವದಿಸಿದರೆ ನಾವು ಮಾಡಿದ ಪೂಜೆಗೆ ಫಲ ಸಿಗುತ್ತದೆ. ಹಾಗಾದರೆ ಯಾವ ದೇವರ ಪೂಜೆ ಮಾಡುವುದರಿಂದ ಯಾವ ಯಾವ ಪ್ರಯೋಜನಗಳ ನಮಗೆ ಸಿಗುತ್ತವೆ ಎಂದು ಮಾಹಿತಿಯಲ್ಲಿ ತಿಳಿಯೋಣ. ನಾವು ದೇವರಿಗೆ ಪೂಜೆ ಹಾಗೂ ವ್ರತಗಳನ್ನು ಮಾಡುವುದರಿಂದ ಭಕ್ತಿಯನ್ನು ಸಲ್ಲಿಸುತ್ತೇವೆ.

ಒಂದೊಂದು ವ್ರತ ಮಾಡುವುದರಿಂದ ಒಂದೊಂದು ವಿಶೇಷವಾದ ಫಲಗಳು ಸಿಗುತ್ತವೆ. ಒಂದೊಂದು ವ್ರತಕ್ಕೆ ಒಂದೊಂದು ವಿಶೇಷವಾದ ಮಹತ್ವವಿದೆ. ದೇವರ ಆಶೀರ್ವಾದ ಒಂದಿದ್ದರೆ ದೊಡ್ಡ ದೊಡ್ಡ ರೋಗಗಳು ಕೂಡ ವಾಸಿಯಾಗುತ್ತವೆ. ಕೆಲವೊಬ್ಬರಿಗೆ ದೈವಾನುಗ್ರಹದಿಂದ ಮಾತ್ರ ಫಲಗಳು ಸಿಗುವಂತೆ ಇರುತ್ತದೆ. ಇಂಥವರು ದೇವರ ಮೊರೆ ಹೋಗಬೇಕು. ಹಾಗಾದರೆ ಯಾವ ದೇವರಿಗೆ ಪೂಜೆ ಮಾಡುವುದರಿಂದ ಯಾವ ಯಾವ ಪ್ರಯೋಜನ ಹಾಗೂ ಫಲಗಳು ಸಿಗುತ್ತವೆಂದು ನೋಡೋಣ. ವ್ರತ ಗಳನ್ನು ಮಾಡುವುದರಿಂದ ನಾವು ಕಂಡ ಕನಸುಗಳೆಲ್ಲ ಬೇಗ ಈಡೇರುತ್ತವೆ ಹಾಗೆಯೇ ಪೂಜೆಗೆ ತಕ್ಕ ಪ್ರತಿಫಲ ಸಿಗುತ್ತದೆ. ಹಾಗಾದರೆ ನಾವು ಯಾವ ಇಷ್ಟಾರ್ಥ ಗಳಿಗೆ ಯಾವ ವ್ರತ ಗಳನ್ನು ಮಾಡಬೇಕು ಎಂಬುದರ ಬಗ್ಗೆ ನೋಡೋಣ.

ಮೊದಲನೆಯದಾಗಿ ಸಾಕಷ್ಟು ಜನರು ಮಾಡುವ ಚತುರ್ಥಿ ವ್ರತ ಅಂದರೆ ಸಂಕಷ್ಟಹರ ಚತುರ್ಥಿ. ಪ್ರತಿ ತಿಂಗಳು ಬರುವ ಈ ಸಂಕಷ್ಟಯನ್ನು ಎಲ್ಲಾ ಸಂಕಷ್ಟಗಳು ದೂರ ಆಗುವುದಕ್ಕೆ ಮಾಡುತ್ತಾರೆ ಹಾಗೂ ಮುಂದಿನ ಜೀವನದಲ್ಲಿ ಯಾವುದೇ ದೋಷಗಳು ಬರಬಾರದು ಎಂದು ಕೂಡ ಮಾಡುತ್ತಾರೆ. ಇದರಿಂದ ಕೆಲಸದ ಅಡತಡೆಗಳು ನಿವಾರಣೆಯಾಗುತ್ತದೆ. ನಂತರ ಬರುವುದು ಷಷ್ಠಿ ವ್ರತ ಅಂದರೆ ಸುಬ್ರಹ್ಮಣ್ಯ ಸ್ವಾಮಿಯ ವ್ರತ ಇದನ್ನು ಮಕ್ಕಳು ಬೇಕು ಎಂದು ಸಂತಾನಭಾಗ್ಯಕ್ಕೋಸ್ಕರ ಮಾಡಬೇಕು. ಇದರಿಂದ ವಂಶಾಭಿವೃದ್ಧಿ ಆಗುತ್ತದೆ.

ಹಾಗೂ ಒಳ್ಳೆಯ ಆರೋಗ್ಯ ಇರುವ ಮಗು ಜನಿಸುವಂತೆ ನಿಮಗೆ ಸದಾ ಸಿಗುತ್ತದೆ. ಯಾವಾಗ ಷಷ್ಠಿ ಇರುತ್ತದೆಯೋ ಆ ದಿನದಂದು ಇದನ್ನು ಮಾಡಬೇಕು. ಇನ್ನು ಏಕಾದಶಿ ಮಾಡುವುದರಿಂದ ಅಂದರೆ ವಿಷ್ಣು ದೇವನ ಆರಾಧನೆ ಮಾಡುವುದರಿಂದ ಮನೆಯಲ್ಲಿರುವ ಹಣಕಾಸಿನ ತೊಂದರೆಗಳು ದೂರಾಗುತ್ತವೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಮನೆಯಲ್ಲಿ ಇಂತಹ ಎಲ್ಲಾ ಕೆಲಸಗಳು ಪೂರ್ಣವಾಗುತ್ತದೆ. ಮನೆಯಲ್ಲಿ ಏಳಿಗೆ ಸಮೃದ್ಧಿ ಅಭಿವೃದ್ಧಿಯಾಗುತ್ತದೆ. ನಂತರ ಪ್ರದೋಷದ ವ್ರತ ಮಾಡುವುದರಿಂದ ಅಂದರೆ ಶಿವನನ್ನು ಹಾಗೂ ನಂದಿಯನ್ನು ಪೂಜಿಸುವುದರಿಂದ ಶೀಘ್ರವಾಗಿ ನಿಮ್ಮ ಇಷ್ಟಾರ್ಥಗಳು ಪೂರ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ಇನ್ನು ಹುಣ್ಣಿಮೆಯ ದಿನ ಯಾರು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಅವರಿಗೆ ಧನ ಪ್ರಾಪ್ತಿಯಾಗುತ್ತದೆ. ಹಾಗೂ ಅವರ ಮನೆಗೆ ಐಶ್ವರ್ಯ ಸಮೃದ್ಧಿ ಎಂಬುದು ಸದಾ ಇರುತ್ತದೆ.ಅಮಾವಾಸ್ಯೆಯ ದಿನ ಪಿತೃ ದೋಷ ದೂರ ಮಾಡಿಕೊಳ್ಳಲು ಪಿತೃ ದೋಷ ವ್ರತ ಮಾಡುತ್ತಾರೆ. ಇದರಿಂದ ನಿಮ್ಮ ದೋಷಗಳು ದೂರವಾಗುತ್ತದೆ. ಹಾಗಾದರೆ ಸ್ನೇಹಿತರೇ ಇನ್ನೂ ಹಲವಾರು ವ್ರತಗಳು ನಿಮಗೆ ತಿಳಿದಿರುತ್ತದೆ ನೀವು ಯಾವುದೇ ಪೂಜೆ ಮಾಡಿದರೆ ದೇವರು ನಿಮಗೆ ಪ್ರತಿಫಲ ನೀಡುತ್ತಾನೆ ಆದ್ದರಿಂದ ದೇವರನ್ನು ಪೂಜಿಸಿ ಭಕ್ತಿಯಿಂದ ನಂಬಿ ಯಾವುದೇ ಪೂಜೆ ಮಾಡಿದರು ಒಳ್ಳೆಯದು ಆಗುತ್ತದೆ ಹಾಗಾದರೆ ಸ್ನೇಹಿತರೇ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.