ಈ ರೀತಿ ಇರುವ ಜೇನುಗೂಡು ಸಿಕ್ಕರೆ ಬಿಡಬೇಡಿ ಅದರಿಂದ ನೀವು ಈ ರೀತಿ ಮಾಡಿದ್ರೆ ಸಾಕು ನಿಮ್ಮ ಒಂದೇ ದಿನದಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಒಂದು ಜೇನುಗೂಡಿನಿಂದ ನಿಮ್ಮ ಮನೆಯ ಅದೃಷ್ಟವೇ ಬದಲಾಗುವುದು ಜೇನುಗೂಡಿನ 5 ಪರಿಹಾರಗಳಲ್ಲಿ ಯಾವುದಾದರೂ ಒಂದು ಮಾಡಿದರೆ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿಯೂ ಸದಾ ನೆಲೆಸಿರುತ್ತಾಳೆ.ಹೌದು ಸ್ನೇಹಿತರೆ ಬರಿ ಒಂದು ಜೇನುಗೂಡಿನಿಂದ ಇಷ್ಟೆಲ್ಲ ಲಾಭವಿದೆ ಎಂಬುದನ್ನು ನೀವೇ ಓದಿ ತಿಳಿದುಕೊಳ್ಳಿ. ಜೇನಿನ ಗೂಡು ದುರ್ಗಾದೇವಿಯ ಸ್ವರೂಪ ಎಂದು ನಂಬಲಾಗುತ್ತದೆ. ಇಂತಹವೊಂದು ಜೇನುಗೂಡಿನಿಂದ ಹೇಗೆ ಪರಿಹಾರವನ್ನು ಮಾಡಿಕೊಳ್ಳುವುದು ಮತ್ತು ಯಾವ ರೀತಿಯಾಗಿ ಈ ಪರಿಹಾರವನ್ನು ಮಾಡಬೇಕು ಎಂಬುದನ್ನು ನಾನು ನಿಮಗೆ ಈ ಮಾಹಿತಿಯಲ್ಲಿ ತಿಳಿಸುತ್ತೇನೆ.

ಜೇನುಗೂಡು ಎಂದರೆ ಎಲ್ಲರಿಗೂ ಗೊತ್ತೇ ಇರುತ್ತದೆ. ಜೇನುಗೂಡು ಅಂದ ತಕ್ಷಣ ಜೇನಿನ ಗೂಡು ನಾವೆಲ್ಲ ಅನ್ನುವ ಹಾಡಿನ ನೆನಪು ಬರುತ್ತದೆ ಏಕೆಂದರೆ ಜೇನುಗಳು ತುಂಬಾ ಹೊಂದಾಣಿಕೆಯಿಂದ ಜೇನುಗೂಡಿನಲ್ಲಿ ಇರುತ್ತವೆ. ಜೇನುಗೂಡಿನಲ್ಲಿ ಜೇನನ್ನು ನೋಡಿದರೆ ಅವುಗಳು ಎಷ್ಟು ಹೊಂದಾಣಿಕೆಯಿಂದ ಇವೆ ಎಂದು ನಮಗೆ ತಿಳಿಯುತ್ತದೆ. ಜೇನಿನಲ್ಲಿ ತುಂಬಾ ವಿಧವಾದ ಜೇನುಗಳಿವೆ. ಹೆಜ್ಜೇನು ಎಂಬ ಜೇನಿನ ಗೂಡು ತುಂಬಾ ಅಪಾಯಕಾರಿಯಾಗಿದ್ದು ಈ ಹುಳಗಳು ಕಚ್ಚಿದರೆ ಕೆಲವೊಂದು ಸಲ ಸಾ’ವನ್ನಪ್ಪುತ್ತಾರೆ.

ಜೇನುಹುಳುಗಳು ಎಲ್ಲಾ ಮರಗಳಲ್ಲಿ ಜೇನಿನ ಗೂಡುಗಳನ್ನು ಕಟ್ಟುತ್ತವೆ ಜೇನಿನ ರಸ ಖಾಲಿಯಾದ ಮೇಲೆ ಅವುಗಳು ಮರದಿಂದ ದೂರ ಹೋಗಿ ಮತ್ತೊಂದು ಜೇನುಗೂಡನ್ನು ತಯಾರಿಸುತ್ತವೆ ಹೀಗೆ ಖಾಲಿಯಾದ ಒಂದು ಜೇನುಗೂಡನ್ನು ಬಳಸಿಕೊಂಡು ನಾವು ಪರಿಹಾರವನ್ನು ಮಾಡಬೇಕು. ಸ್ನೇಹಿತರೆ ಈ ಪರಿಹಾರಕ್ಕೆ ಯಾವುದೇ ಖರ್ಚಿಲ್ಲ. ಈ ಜೇನುಗೂಡನ್ನು ತರುವಾಗ ಅದರಲ್ಲಿ ಯಾವುದೇ ಒಂದೇ ಒಂದು ಜೇನು ಕೂಡ ಇರಬಾರದು. ನಾವು ಮನೆಗೆ ತರುತ್ತಿರುವುದು ಸಾಕ್ಷಾತ್ ದುರ್ಗಾದೇವಿ ಸ್ವರೂಪವಾದ ಜೇನುಗೂಡನ್ನು ಎಂದು ನಾವು ಬಲವಾಗಿ ನಂಬಿ ತರಬೇಕು.

ಈ ಜೇನುಗೂಡನ್ನು ತಂದು ಮನೆಯ ಮುಂದೆ ಅಂದರೆ ಗೇಟಿನ ಮುಂದೆ ಹೂತು ಹಾಕಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಕೆಟ್ಟಶಕ್ತಿಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ನೆಮ್ಮದಿ ಆರೋಗ್ಯ ಇರುತ್ತದೆ. ಹಣಕಾಸಿನ ತೊಂದರೆ ಸಹ ಇರುವುದಿಲ್ಲ. ಇನ್ನು ಜೇನುಗೂಡಿನಿಂದ ಮಾಡಿಕೊಳ್ಳುವ ಎರಡನೇ ಪರಿಹಾರವನ್ನು ತಿಳಿಸುತ್ತೇನೆ. ಹೀಗೆ ತಂದ ಜೇನುಗೂಡನ್ನು ಸ್ವಲ್ಪ ಕಟ್ ಮಾಡಿಕೊಂಡು ಒಂದು ಕೆಂಪು ವಸ್ತ್ರದಲ್ಲಿ ಹಾಕಿ ಅದನ್ನು ಪೂಜಿಸಿ ದೀಪ ದೂಪಗಳನ್ನು ಬೆಳಗಿ ನೀವು ದುಡ್ಡು ಇಡುವ ಜಾಗದಲ್ಲಿ ಇಟ್ಟರೆ ನಿಮಗೆ ಮಹಾಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ ಹಾಗೂ ನಿಮಗೆ ಅನಾವಶ್ಯವಾಗಿ ಹಣದ ಖರ್ಚುಗಳು ಬರುವುದಿಲ್ಲ.

ಇನ್ನು ಮೂರನೇ ಪರಿಹಾರ ಯಾವುದೆಂದರೆ ಜೇನುಗೂಡಿನ ಒಂದು ತುಂಡನ್ನು ತೆಗೆದುಕೊಂಡು ತಾಯತದಲ್ಲಿ ಹಾಕಿಕೊಂಡರೆ ನಿಮಗೆ ಯಾವ ದೃಷ್ಟಿದೋಷ ಇರುವುದಿಲ್ಲ ಹಾಗೆಯೇ ನಿಮ್ಮ ಮೇಲೆ ಕೆಟ್ಟವರ ಪ್ರಭಾವ ಎಂದಿಗೂ ಬೀರುವುದಿಲ್ಲ. ಹಾಗಾದರೆ ಸ್ನೇಹಿತರೆ ನಾಲ್ಕನೇ ಪರಿಹಾರವನ್ನು ನಾವೀಗ ನೋಡೋಣ. ಈ ಒಂದು ಜೇನಿನ ತುಂಡಿನ ಮೇಲೆ ಗಂಗಾಜಲವನ್ನು ಸಿಂಪಡಿಸಿ ಕೈಯಿಂದ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬರೆದು ಹರಿಯುತ್ತಿರುವ ನದಿಗೆ ಇದನ್ನು ಹಾಕುವುದರಿಂದ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರುತ್ತವೆ. ನೀವು ಅಂದುಕೊಳ್ಳುವ ಎಲ್ಲಾ ಕಾರ್ಯಗಳು ನೆರವೇರುತ್ತವೆ.

ಆದರೆ ಸ್ನೇಹಿತರೇ ಈ ರೀತಿಯಾಗಿ ಮನಸ್ಸಿನಲ್ಲಿ ಅಂದುಕೊಂಡು ಬರೆಯುವುದನ್ನು ಯಾರಿಗೂ ಹೇಳಬಾರದು ಇದು ರಹಸ್ಯವಾಗಿ ಇರಬೇಕು. ಹೀಗೆ ಮಾಡುವುದರಿಂದ ನೀವು ಬಯಸಿದಂತೆ ಎಲ್ಲ ಕೆಲಸಗಳು ನೆರವೇರುತ್ತವೆ. ಹಾಗಾದರೆ ಸ್ನೇಹಿತರೇ ಕೊನೆಯದಾಗಿ 5 ನೇ ಪರಿಹಾರವನ್ನು ನಾನು ನಿಮಗೆ ಹೇಳುತ್ತೇನೆ ಈ ಪರಿಹಾರ ಯಾವುದು ಅಂದರೆ ಈ ಪರಿಹಾರಗಳು ಬರೀ ಗಂಡ-ಹೆಂಡತಿರಿಗೆ ಮಾತ್ರ ಮಾಡಬೇಕು ಏಕೆಂದರೆ ಇದು ವಶೀಕರಣಕ್ಕೆ ಸಂಬಂಧಪಟ್ಟ ಪರಿಹಾರ. ಗಂಡ-ಹೆಂಡತಿಯರು ಇದನ್ನು ಮಾಡುವುದರಿಂದ ಯಾವುದೇ ಮನಸ್ತಾಪಗಳು ಇರುವುದಿಲ್ಲ.

ಈ ಒಂದು ವಶೀಕರಣ ತಂತ್ರವನ್ನು ಬೇರೆ ಯಾರಿಗೂ ಮಾಡಬಾರದು. ಮಾಡಿದರೆ ಅದು ಕೂಡ ಒಳ್ಳೆಯ ಉದ್ದೇಶಕ್ಕೆ ಆಗಿರಬೇಕು. ಗಂಡ-ಹೆಂಡತಿಯರು ಮಾಡಿದರೆ ಯಾವುದೇ ಪಾಪ ಇರುವುದಿಲ್ಲ. ಜೇನು ತುಪ್ಪದಲ್ಲಿ ಬೆಲ್ಲವನ್ನು ಮಿಕ್ಸ್ ಮಾಡಿ ಅವರಿಗೆ ತಿನ್ನಿಸಿದರೆ ಇದು ಕೂಡ ಕೆಲಸವನ್ನು ಮಾಡಿಸುತ್ತದೆ ಅಂದರೆ ಅವರು ನಿಮಗೆ ವಶೀಕರಣರಾಗುತ್ತಾರೆ. ಹಾಗೆಯೇ ಗಂಡ-ಹೆಂಡತಿಯ ನಡುವೆ ಪ್ರೀತಿಯು ಹೆಚ್ಚುತ್ತದೆ. ಹಾಗಾದರೆ ಸ್ನೇಹಿತರೇ ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ನಂಬುತ್ತೇನೆ

ನೀವು ಕೂಡ ಈ ಪರಿಹಾರಗಳನ್ನು ಮಾಡಿ ಜೀವನದಲ್ಲಿ ನೆಮ್ಮದಿ ಶಾಂತಿ ಆರೋಗ್ಯ ಮತ್ತು ಮಹಾಲಕ್ಷ್ಮಿಯ ಆಶೀರ್ವಾದ ಪಡೆದುಕೊಳ್ಳಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.