ಸೊಳ್ಳೆಯ ಕಾಟದಿಂದ ಬೇಸತ್ತಿದ್ದೀರಾ … ಹಾಗಾದ್ರೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಹೀಗೆ ಮಾಡಿ ಸಾಕು ಜನುಮದಲ್ಲಿ ಸೊಳ್ಳೆಗಳು ನಿಮ್ಮ ಬಳಿ ಬರಲ್ಲ ….!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಹೆಚ್ಚಾಗಿ ಸೊಳ್ಳೆಗಳು ಮಳೆಗಾಲದಲ್ಲಿ ಕಂಡುಬರುತ್ತವೆ. ಹಾಗೂ ನಿಮ್ಮ ಮನೆಯ ಸುತ್ತಮುತ್ತಲ ಪ್ರದೇಶ ಸ್ವಚ್ಛವಾಗಿಡದಿದ್ದರೆ ಅಲ್ಲಿ ನೀರು ನಿತ್ತಿರುವ ಇರುವ ಜಾಗದಲ್ಲಿ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡಲು ಪ್ರಾರಂಭಿಸುತ್ತದೆ.ಹಾಗಾಗಿ ನಿಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಮುಖ ಪಾತ್ರವನ್ನು ಅಂದರೆ ಸೊಳ್ಳೆಯನ್ನು ತಡೆಗಟ್ಟಬಹುದು.ಸೊಳ್ಳೆಗಳು ಒಂದು ರೀತಿಯ ಚಿಕ್ಕ ಚಿಕ್ಕ ಕೀಟಗಳು ಸೊಳ್ಳೆಗಳು ಪ್ರಾಣಿಗಳ ರಕ್ತವನ್ನು ಕುಡಿಯುತ್ತವೆ .ಮಾನವನ ರಕ್ತವನ್ನು ಕುಡಿಯುವ ಕೀಟಗಳು ಅಂದರೆ ಹೆಣ್ಣು ಸೊಳ್ಳೆಗಳನ್ನು ಪಿಶಾಚಿಗಳು ಎಂದು ಕರೆಯುತ್ತಾರೆ.

ಇವುಗಳು ರಕ್ತವನ್ನು ಕುಡಿಯುವುದು ಮಾತ್ರವಲ್ಲದೆ ವಿವಿಧ ರೋಗಗಳನ್ನು ಹರಡುತ್ತವೆ.ಸೊಳ್ಳೆಗಳಿಂದ ಡೆಂಗ್ಯೂ,ಮಲೇರಿಯಾ ಮುಂತಾದ ಕಾಯಿಲೆಗಳು ಬರುತ್ತವೆ.ಸೊಳ್ಳೆಯ ಕಚ್ಚುವಿಕೆಯ ಚರ್ಮಕ್ಕೆ ಹರಡಿದ ಲಾಲಾರಸವು ತುರಿಕೆ ದದ್ದು ಬರಲು ಕಾರಣವಾಗಬಹುದು.ಪ್ರಾಣಿಗಳಿಗಿಂತ ಈ ಸೊಳ್ಳೆಗಳು ಹೆಚ್ಚಾಗಿ ಜನರನ್ನು ಕೊಲ್ಲುತ್ತವೆ. ಇನ್ನು ಈ ಸೊಳ್ಳೆಗಳು ಚಿಕ್ಕ ಚಿಕ್ಕ ಮಕ್ಕಳಿಗೆ ಕಚ್ಚಿದರೆ ಮಕ್ಕಳಿಗೆ ಬೇಗ ಕಾಯಿಲೆಗಳು ಬರುತ್ತವೆ.ನಾವು ಈ ಸೊಳ್ಳೆಗಳಿಂದ ದೂರವಿರಲು ಏನು ಮಾಡುತ್ತೇವೆ ಎಂದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಗುಡ್ ನೈಟ್ ಆಗಿರಬಹುದು ಇಲ್ಲವೇ ಕಾಯಿಲ್ ಆಗಿರಬಹುದು ಇವುಗಳನ್ನು ಬಳಸುತ್ತೇವೆ.

ಆದರೆ ಇವು ಸೊಳ್ಳೆಗಳನ್ನು ಓಡಿಸುವುದಲ್ಲದೇ ನಮ್ಮ ಆರೋಗ್ಯದ ಮೇಲೂ ಕೂಡ ಪರಿಣಾಮವನ್ನು ಬೀರುತ್ತವೆ. ಗುಡ್ ನೈಟ್ ಮತ್ತು ಕಾಯಿ ಲ್ಗಳನ್ನು ಯೂಸ್ ಮಾಡುವುದರಿಂದ ನಮ್ಮ ದೇಹಕ್ಕೆ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ.ಅಲ್ಲದೆ ಇನ್ನೂ ಅನೇಕ ರೀತಿಯ ಹಲವಾರು ಸಮಸ್ಯೆಗಳು ಉಂಟಾಗುತ್ತವೆ.ಈ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಾಗಲು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಕೆಲವು ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ಸೊಳ್ಳೆಯನ್ನು ಹೇಗೆ ಓಡಿಸಬಹುದು ಎಂದು ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಮೊದಲನೆಯದಾಗಿ ಈ ಮನೆಮದ್ದು ಏನಂದರೆ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್. ಲವೆಂಡರ್ ಎಸೆನ್ಶಿಯಲ್ ಆಯಿಲ್ ಅನ್ನು ಬರೀ ಕೂದಲಿಗೆ ಮತ್ತು ಮುಖಕ್ಕೆ ಮಾತ್ರವಲ್ಲದೆ ಸೊಳ್ಳೆಯನ್ನು ಓಡಿಸುವ ಅಲ್ಲಿಯೂ ಕೂಡ ಇದನ್ನು ಉಪಯೋಗಿಸಬಹುದು.ಅದು ಹೇಗೆ ಎಂದರೆ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಅನ್ನು ನಿಮ್ಮ ಬೆಡ್ ಸೀಟಿಗೆ ಎರಡು ಅಥವಾ ಮೂರು ಹನಿಗಳನ್ನು ಹಾಕಬೇಕು ಮಲಗಿ ಕೊಳ್ಳುವುದರಿಂದ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ ಹಾಗೂ ಸೊಳ್ಳೆಯಿಂದ ಮುಕ್ತಿಯನ್ನು ಕೂಡ ಪಡೆಯಬಹುದು.

ಸೊಳ್ಳೆಯ ಜೊತೆಗೆ ಯಾವ ಕ್ರಿಮಿಕೀಟಗಳು ಕೂಡ ನಿಮ್ಮ ಹತ್ತಿರ ಬರುವುದಿಲ್ಲ. ಇದು ನಿಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರ ವಾಸನೆಯು ಕೂಡ ನಿಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದನ್ನು ನಿಮ್ಮ ಚರ್ಮಕ್ಕೆ ನೇರವಾಗಿ ಬಳಸಲು ಹೋಗಬಾರದು.ಎರಡನೇ ಮನೆಮದ್ದು ಏನೆಂದರೆ ಒಂದು ಬೌಲ್ ಗೆ ಒಣಗಿದ ಕರಿಬೇವಿನ ಎಲೆಗಳನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಕರ್ಪೂರವನ್ನು ಬೆರೆಸಬೇಕು. ಕರ್ಪೂರವನ್ನು  ಹಾಕಿದ ನಂತರ ಆ ಕರ್ಪೂರಕ್ಕೆ ಬೆಂಕಿಯನ್ನು ಹಾಕಬೇಕು.ಅದು ಹೊಗೆ ಬಂದ ನಂತರ ಮನೆಯ ಮಧ್ಯಭಾಗಕ್ಕೆ ಆ ಮಿಶ್ರಣವನ್ನು ಇಡಬೇಕು.ಹೀಗೆ ಮಾಡುವುದರಿಂದ ಸೊಳ್ಳೆಯು ನಿಮ್ಮ ಮನೆ ಹತ್ತಿರ ಸುಳಿಯುವುದಿಲ್ಲ. ಹೊಗೆಯು ನಿಮ್ಮ ಮನೆಯ ಎಲ್ಲ ಮೂಲೆಮೂಲೆಗಳಿಗೂ ಹೋಗುತ್ತದೆ.

ನಾನು ತಿಳಿಸಿದಂತೆ ಈ ರೀತಿ ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ಸೊಳ್ಳೆಗಳಿಂದ ದೂರವಿರಬಹುದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ.ಹಾಗೂ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಧನ್ಯವಾದಗಳು ಶುಭದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.