ನಿಮ್ಮ ಮನೆಯಲ್ಲಿ ವಾಸ್ತುದೋಷ ಉಂಟಾಗಿ ನಿಮ್ಮ ಮನೆ ಅಭಿವೃದ್ಧಿ ಹೊಂದುತ್ತಿಲ್ವ .. ಹಾಗಾದ್ರೆ ಈ ಒಂದು ಗಿಡವನ್ನು ಈ ದಿಕ್ಕಿನಲ್ಲಿ ಇಟ್ಟು ಈ ಒಂದು ಮಂತ್ರವನ್ನು ಹೇಳಿಕೊಳ್ಳಿ ನಿಮ್ಮ ಮನೆ ಅಭಿವೃದ್ಧಿಯತ್ತ ಸಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದ್ದರೆ ಈ ಒಂದು ಪರಿಹಾರ ಮಾಡಿ ಮನೆಯನ್ನು ಚೇಂಜ್ ಮಾಡುವ ಅವಶ್ಯಕತೆ ನಿಮಗೆ ಇರುವುದಿಲ್ಲ.ಹಾಯ್ ಸ್ನೇಹಿತರೆ ಎಲ್ಲರೂ ನಾವು ಒಂದು ಮನೆ ಕಟ್ಟಿಸಬೇಕು ಅದರಲ್ಲಿ ನಾವೆಲ್ಲರೂ ಕೂಡಿ ಚೆನ್ನಾಗಿ ಬಾಳಬೇಕು ನಮ್ಮ ಸಂಸಾರಕ್ಕೆ ಒಂದು ಚೆನ್ನಾಗಿರುವ ಮನೆ ಬೇಕು ಹೀಗೆ ಮನೆಯ ಮೇಲೆ ತುಂಬಾ ಕನಸನ್ನು ಇಟ್ಟುಕೊಂಡಿರುತ್ತಾರೆ ಆದರೆ ಮನೆಯನ್ನು ಕಟ್ಟುವಾಗ ಚಿಕ್ಕ ತಪ್ಪುಗಳು ನಡೆದು ದೊಡ್ಡ ದೊಡ್ಡ ಅನಾಹುತಗಳು ಪ್ರಾರಂಭವಾಗುತ್ತವೆ ವಾಸ್ತು ದೋಷದಿಂದ ಆಗಿದೆಯೋ ಅಥವಾ ನಮ್ಮ ಬೇಜವಾಬ್ದಾರಿತನದಿಂದ ಆಗಿರುತ್ತದೆ ಎಂದು ನಮಗೆ ತಿಳಿಯುವುದಿಲ್ಲ ಆದರೆ ವಾಸ್ತು ದೋಷವಿದ್ದರೆ ಮನೆಯಲ್ಲಿ ನೀವು ಈ ಒಂದು ಸರಳವಾದ ಪರಿಹಾರವನ್ನು ಮಾಡಿಕೊಳ್ಳಬಹುದು.

ವಾಸ್ತುಶಾಸ್ತ್ರದಲ್ಲಿ ಅಡುಗೆಮನೆ ದೇವರಮನೆ ರೂಮ್ ಹಾಗೂ ಹಾಲ್ ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ಹೇಳಿರುತ್ತಾರೆ ಅದೇ ರೀತಿಯಾಗಿ ನೀವು ಕೂಡ ನಿರ್ಮಾಣ ಮಾಡಿರುತ್ತೀರಿ ಆದರೆ ಕೆಲವೊಂದು ಸಲ ಈಶಾನ್ಯದಿಕ್ಕಿನಲ್ಲಿ ಸ್ಟೇರ್ ಕೇಸ್ ಗಳು ಬಂದಿರುತ್ತವೆ ಹಾಗೆಯೇ ವಾಯುವ್ಯ ದಿಕ್ಕಿನಲ್ಲಿ ಟಾಯ್ಲೆಟ್ ರೂಮುಗಳು ಆಗಿರುತ್ತವೆ ಆದರೆ ಇವು ವಾಸ್ತು ಪ್ರಕಾರ ಸರಿಯಾದದ್ದಲ್ಲ. ಆದರೆ ತಿಳಿದೆ ಈ ತಪ್ಪಿನಿಂದ ಈ ಕೆಲಸಗಳು ಮುಗಿದು ಹೋಗಿರುತ್ತವೆ. ಅಥವಾ ಬಾಡಿಗೆ ಮನೆಯಲ್ಲಿರುವವರು ಇಂತಹ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಕೂಡ ಅವರಿಗೆ ಬರುತ್ತದೆ. ಸ್ನೇಹಿತರೆ ಮನೆಯೆಂಬುದು ಬರೀ ನಾವು ವಾಸಿಸುವ ಸ್ಥಳ ಅಲ್ಲ ಅದು ನಮಗೆ ಎಷ್ಟು ಸಿಹಿ ನೆನಪುಗಳನ್ನು ಕೊಟ್ಟಿರುತ್ತದೆ ನಾವು ನಮ್ಮ ಕುಟುಂಬದವರ ಜೊತೆ ಕಾಲವನ್ನು ಆ ಮನೆಯಲ್ಲಿ ಕಳೆದಿರುತ್ತವೆ

ಸಡನ್ನಾಗಿ ಮನೆಯನ್ನು ಚೇಂಜ್ ಮಾಡಬೇಕು ಅಥವಾ ಮನೆಯನ್ನು ಒಡೆದು ಮತ್ತೆ ಹೊಸ ಮನೆಯನ್ನು ಕಟ್ಟಬೇಕು ಎಂದಾಗ ಎಲ್ಲರಿಗೂ ಅಸಮಾಧಾನ ಆಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ತೊಂದರೆ ಆದರೆ ಮಹಿಳೆಯರಿಗೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೆ ಮಹಿಳೆಯರಿಗೆ ತುಂಬಾ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತವೆ ಅದೇ ರೀತಿಯಾಗಿ ಈಶಾನ್ಯ ದಿಕ್ಕಿನಲ್ಲಿ ವಾಸ್ತು ದೋಷ ಇದ್ದರೆ ಪುರುಷರಿಗೆ ತುಂಬಾ ಸಮಸ್ಯೆಗಳು ಎದುರಾಗುತ್ತವೆ. ಆದರೆ ಸ್ನೇಹಿತರೇ ತಪ್ಪು ಆದಮೇಲೆ ನಾವು ಸರಿಪಡಿಸಿಕೊಳ್ಳಲೇಬೇಕು. ಹಾಗಾಗಿ ಈ ಒಂದು ಪರಿಹಾರವನ್ನು ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ದಿಕ್ಕಿನಲ್ಲಿ ದೋಷವಿದ್ದರೂ ಪರಿಹಾರವಾಗುತ್ತದೆ. ಸ್ನೇಹಿತರೆ ವಾಸ್ತು ದೋಷದಿಂದಾಗಿ ಎಂತೆಂತಹ ದೊಡ್ಡ ದೊಡ್ಡ ಕುಟುಂಬಗಳು ಸರ್ವನಾಶ ವಾಗಿರುವ ಸಂಗತಿಗಳನ್ನು ನಾವು ನೋಡುತ್ತಿದ್ದೇವೆ

ವಾಸ್ತು ದೋಷ ಇದ್ದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೆ ನಾವು ಏನೇ ಕೆಲಸ ಮಾಡಿದರೂ ನಮ್ಮ ಕೈಗೆ ಲಾಭ ಸಿಗುವುದಿಲ್ಲ ಕೆಲವೊಂದು ಸಲ ದಂಪತಿಗಳ ನಡುವೆ ಕಲಹಗಳು ಕೂಡ ಉಂಟಾಗಬಹುದು ಅತ್ತೆ-ಸೊಸೆಯ ಜಗಳಗಳು ಪ್ರಾರಂಭವಾಗಬಹುದು ಹೀಗೆ ಸುಮಾರು ಸಮಸ್ಯೆಗಳು ವಾಸ ದೋಷದಿಂದ ಉದ್ಭವವಾಗುತ್ತದೆ ಇಂತಹ ಸಮಸ್ಯೆಗಳಿಂದ ಎಷ್ಟೋ ಜನರಿಗೆ ನೆಮ್ಮದಿ ಇರುವುದಿಲ್ಲ. ಸ್ನೇಹಿತರೆ ಈ ಒಂದು ಪರಿಹಾರಕ್ಕೆ ನೀವು ತುಂಬಾ ಹಣ ಖರ್ಚು ಮಾಡಬೇಕಾಗಿಲ್ಲ. ಕೇವಲ ಒಂದು ಸ್ಕ್ವೇರ್ ಆಕಾರದಲ್ಲಿರುವ ಅಂದರೆ ಚೌಕಾಕಾರದಲ್ಲಿ ಇರುವ ಸಣ್ಣ ಪಾಟ್ ಅಂದರೆ ಗಿಡವನ್ನು ನೆಡುವ ಡಬ್ಬಿ ಇದನ್ನು ನೀವು ತರಬೇಕು ಇದಕ್ಕೆ ಸ್ವಲ್ಪ ಮಣ್ಣನ್ನು ಹಾಕಿ ಈಶಾನ್ಯ ದಿಕ್ಕಿನಲ್ಲಿ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು.

ನಿಮ್ಮ ಮನೆಯಲ್ಲಿ ಯಾವ ದಿಕ್ಕಿನಲ್ಲಿ ತೊಂದರೆ ಆಗಿರುತ್ತೆ ಆ ದಿಕ್ಕಿನಲ್ಲಿ ಇಡಬೇಕು. ಇದರಲ್ಲಿ ನೀವು ಗರಿಕೆಯನ್ನು ಬೆಳೆಯಬೇಕು ಅಂದರೆ ಗಣೇಶನಿಗೆ ಪ್ರಿಯವಾದ ಗರಿಕೆಯನ್ನು ನೀವು ಅಪಾಟ್ ನಲ್ಲಿ ಬೆಳೆಯಬೇಕು. ಸ್ನೇಹಿತರೆ ಮಹಾಗಣಪತಿ ವಿಘ್ನಗಳನ್ನು ಕಳೆಯುವ ವಿಜ್ಞಾಯಕ ಗಣೇಶನ ಆಶೀರ್ವಾದ ಇದ್ದರೆ ನಿಮಗೆ ಯಾವುದೇ ದೋಷಗಳು ಅಂಟುವುದಿಲ್ಲ ಹಾಗೂ ನಿಮ್ಮ ಮನೆಗೆ ಯಾವುದೇ ದೋಷಗಳು ಆಗುವುದಿಲ್ಲ. ಪ್ರತಿ ಮಂಗಳವಾರ ಹಾಗೂ ಸಂಕಷ್ಟಿಯ ದಿನ ಈ 21 ಗರಿಕೆಗಳನ್ನು ಹರಿದುಕೊಂಡು ಗಣೇಶನಿಗೆ ಏರಿಸಬೇಕು.

ಗಣೇಶನ ಮಂತ್ರವನ್ನು ಹೇಳಬೇಕು ಎಷ್ಟು ಸಾಧ್ಯವೋ ಅಷ್ಟು ಸಾರಿ ಗಣೇಶ ಮಂತ್ರವನ್ನು ಪಠಿಸಬೇಕು. ಗಣೇಶ ಮಂತ್ರ ಹೀಗಿದೆ ಓಂ ಶ್ರೀಂ ರೀಮ್ ಕ್ಲೀಂ ಗೌಂ ಗಂ ಗಣಪತಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಪಠಿಸಬೇಕು ಹೀಗೆ ಮಾಡಿದರೆ ವಿನಾಯಕನ ಆಶೀರ್ವಾದ ನಿಮಗೆ ಹಾಗೂ ನಿಮ್ಮ ಮನೆಗೆ ಸದಾ ಸಿಗುತ್ತದೆ ನಿಮಗೆ ಯಾವ ದೋಷಗಳಿದ್ದರೂ ಪರಿಹಾರವಾಗುತ್ತದೆ ಸ್ನೇಹಿತರೆ ಹಾಗಾದರೆ ಈ ಒಂದು ಸರಳವಾದ ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು

Leave a Reply

Your email address will not be published.