ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಏನಾದ್ರು ನೀವು ಇಟ್ಟಿದ್ದರೆ ಈಗಲೇ ತೆಗೆದುಬಿಡಿ ಇಲ್ಲದಿದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಲ್ಲಾ ನನ್ನ ಪ್ರಿಯ ವೀಕ್ಷಕರಿಗೂ ನಮಸ್ಕಾರಗಳು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ದೇವರ ಮನೆಯಲ್ಲಿ ಅನುಸರಿಸಬೇಕಾದ ಕೆಲವೊಂದು ನಿಯಮಗಳ ಬಗ್ಗೆ ತಿಳಿಸಿ ಕೊಡಲು ಇಷ್ಟಪಡುತ್ತೇನೆ .ಹಾಗೆ ನೀವು ಕೂಡ ಈ ಒಂದು ಮಾಹಿತಿಯನ್ನು ತಿಳಿದು ಇನ್ನು ಮುಂದೆ ದೇವರ ಮನೆಯಲ್ಲಿ ಇಂತಹ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಒಳ್ಳೆಯದು ಜರುಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ದೇವರ ಮನೆಯಲ್ಲಿ ಪಾಲಿಸಬೇಕಿರುವ ಆ ಕೆಲವೊಂದು ನಿಯಮಗಳ ಬಗ್ಗೆ ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ.

ಮೊದಲನೆಯದಾಗಿ ದೇವರ ಕೋಣೆಯಲ್ಲಿ ಕಲ್ಲಿನಿಂದ ಅಥವಾ ಕಬ್ಬಿಣದ ಲೋಹದಿಂದ ಮಾಡಿರುವ ಮೂರ್ತಿಗಳನ್ನು ಇಟ್ಟು ಪೂಜಿಸಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುವ ಸಾಧ್ಯತೆ ಇರುತ್ತದೆ,ಹಾಗೆ ದೇವರ ಮನೆಯಲ್ಲಿ ಇಡುವ ವಿಗ್ರಹಗಳು ಒಂದು ಮುಷ್ಟಿಯೊಳಗೆ ಮುಚ್ಚಬೇಕು ಅಷ್ಟೇ ಗಾತ್ರದ ಮೂರ್ತಿಯನ್ನು ಇಟ್ಟು ಮನೆಯಲ್ಲಿ ಪೂಜಿಸುವುದರಿಂದ ಒಳ್ಳೆಯದು ಎಂದು ಹೇಳಲಾಗಿದ್ದು ಶಾಸ್ತ್ರಗಳು ತಿಳಿಸುತ್ತಿದೆ ದೇವರ ಪೂಜೆಗೆ ತುಪ್ಪದ ದೀಪವನ್ನು ಹಚ್ಚುವುದು ಸಮರ್ಪಕವೆಂದು.ನೀವು ಅಂದುಕೊಳ್ಳಬಹುದು ತುಪ್ಪದ ದೀಪವನ್ನು ಹಚ್ಚುವುದು ಅಥವಾ ಬೇರೆ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚುವುದರಿಂದ ಏನು ವ್ಯತ್ಯಾಸ ಕಂಡುಬರುತ್ತದೆ ಎಂದು ಆದರೆ ಮನೆಯಲ್ಲಿ ತುಪ್ಪದ ದೀಪವನ್ನು ದೇವರಿಗೆ ಆರಾಧನೆ ಮಾಡುವುದರಿಂದ ಮನೆಯಲ್ಲಿ ಸಾತ್ವಿಕತೆ ನೆಲೆಸಿರುತ್ತದೆ.

ಶಾಂತ ವಾತಾವರಣವೂ ಮನೆಯಲ್ಲಿ ಇರುತ್ತದೆ ಎಂದು ನಂಬಲಾಗಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸುವುದೇ ದೇವರ ಕೋಣೆಯಿಂದ ಆದ ಕಾರಣ ದೇವರ ಮನೆಯು ಯಾವಾಗಲೂ ಸ್ವಚ್ಛವಾಗಿ ಇರಬೇಕುಇದಿಷ್ಟು ದೇವರ ಮೂರ್ತಿ ಮತ್ತು ದೀಪಾರಾಧನೆಗೆ ಸಂಬಂಧಪಟ್ಟ ವಿಚಾರವಾದರೆ ದೇವರಿಗೆ ಸಮರ್ಪಿಸುವ ನೈವೇದ್ಯೆ ಹೇಗಿರಬೇಕು ಎಂಬ ವಿಚಾರವನ್ನು ಹೇಳುವುದಾದರೆ ಈ ನೆಲೆಯಲ್ಲಿಯೂ ಕೂಡ ಮೂರು ವಿಧ ವಿರುತ್ತದೆ ಒಂದು ಸಾತ್ವಿಕ ನೈವೇದ್ಯೆ ರಾಜತ್ವ ನೈವೇದ್ಯ ಮತ್ತು ತಾಮಸಿಕ ನೈವೇದ್ಯ ಎಂದು.

ಸಾತ್ವಿಕ ನೈವೇದ್ಯೆ ಅಂದರೆ ಪರಿಸರವು ನೀಡುವಂತಹ ಹಣ್ಣುಗಳನ್ನು ದೇವರಿಗೆ ನೈವೇದ್ಯೆ ಆಗಿ ನೀಡುವುದು, ಈ ಪರಿಯ ನಾವೇಕೆ ಬಹಳಾನೇ ಶ್ರೇಷ್ಠ ಎಂದು ಹೇಳಲಾಗಿದ್ದು ರಾಜತ್ವ ನೈವೇದ್ಯ ಎಂದರೆ ನೀವು ನಿಮ್ಮ ಕೈಯಾರೆ ತಯಾರಿಸಿದ ನೈವೇದ್ಯ ಎಂದರ್ಥ .ಉದಾಹರಣೆಗೆ ನೀವು ಹಬ್ಬಗಳಲ್ಲಿ ಮನೆಯಲ್ಲಿ ಸಿಹಿ ತಿಂಡಿಯನ್ನು ಮಾಡಿರುತ್ತೀರ ಅದನ್ನು ಮೊದಲು ದೇವರಿಗೆ ಅರ್ಪಿಸಿ ನಂತರ ಮನೆಯ ಸದಸ್ಯರಿಗೆ ನೀಡಬೇಕು ಹಾಗೆ ಮೂರನೆಯದ್ದು ತಾಮಸಿಕ ನೈವೇದ್ಯ ಅಂದರೆ ಮಾಂಸಾಹಾರಿ ನೈವೇದ್ಯ ಎಂದು ಇದನ್ನು ಯಾವತ್ತಿಗೂ ದೇವರ ಮನೆಯಲ್ಲಿ ದೇವರಿಗೆ ನೈವೇದ್ಯ ಆಗಿ ನೀಡಬಾರದು.

ಮಾಂಸಾಹಾರಿಗಳು ಕೆಲವೊಂದು ಬಾರಿ ದೇವರಿಗು ಮಾಂಸ ಪದಾರ್ಥವನ್ನು ನೈವೇದ್ಯವಾಗಿ ನೀಡುತ್ತಾರೆ ಆದರೆ ಈ ರೀತಿ ದೇವರ ಕೋಣೆಯಲ್ಲಿ ದೇವರಿಗೆ ಈ ನೈವೇದ್ಯ ಮಾಡಬಾರದು .ನಿಮ್ಮ ಮನೆಯಲ್ಲಿ ದೇವರ ಮನೆಯನ್ನು ಹೊರತುಪಡಿಸಿ ಬೇರೆ ಎಲ್ಲಿಯಾದರೂ ದೇವರ ಹೆಸರನ್ನು ಹೇಳಿ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಅದಕ್ಕೆ ಈ ಮಾಂಸ ಪದಾರ್ಥಗಳನ್ನು ನೈವೇದ್ಯಯಾಗಿ ಮಾಡಬೇಕು ಈ ರೀತಿ ಮಾಡುವಾಗ ದೇವರ ಮೂರ್ತಿಯನ್ನು ಕೂಡ ಪ್ರತಿಷ್ಠಾಪನೆ ಮಾಡಬಾರದು.ಇದಿಷ್ಟು ದೇವರ ಮನೆಯಲ್ಲಿ ಪಾಲಿಸ ಬೇಕಾಗಿರುವಂತಹ ಕೆಲವೊಂದು ನಿಯಮಗಳ ಗಿದ್ದು ದೇವರಿಗೆ ನೈವೇದ್ಯ ಯನ್ನು ಅರ್ಪಿಸಿದ ನಂತರ ದೀಪಾರಾಧನೆ ಮಾಡಿದ ನಂತರ ತಕ್ಷಣವೇ ದೇವರ ಮನೆಗೆ ಹೋಗಬಾರದು .

ಐದಾರು ನಿಮಿಷಗಳ ನಂತರ ದೇವರ ಮನೆಗೆ ಹೋಗಿ ಆ ನೈವೇದ್ಯವನ್ನು ಮನೆಯ ಸದಸ್ಯರಿಗೆ ಹಂಚಿ ಸೇವಿಸುವುದರಿಂದ ಒಳ್ಳೆಯದೊಂದು ಹೇಳಲಾಗಿದೆ. ಇದಿಷ್ಟು ಮಾಹಿತಿ ದೇವರ ಮನೆಯಲ್ಲಿ ಅನುಸರಿಸಬೇಕಾದಂತಹ ಕೆಲವೊಂದು ವಿಚಾರಗಳಾಗಿವೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.