ಅಡುಗೆ ಮನೆಯಲ್ಲಿ ಮಹಿಳೆಯರು ಹಂಚನ್ನು ಅಥವಾ ಕಡಾಯಿ ಅಥವಾ ಕಾವಲಿಯನ್ನು ಈ ರೀತಿಯಾಗಿ ಉಪಯೋಗಿಸಿದರೆ ನಿಮಗೆ ಭಾಗ್ಯದ ಬಾಗಿಲು ತೆರೆಯುತ್ತದೆ.ಹಾಯ್ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ಒಳ್ಳೆಯ ಪ್ರಯೋಗವನ್ನು ಹೇಳುತ್ತಿದ್ದೇನೆ ಇದು ಮಹಿಳೆಯರಿಗೆ ಅತಿಹೆಚ್ಚು ಉಪಯೋಗವಾಗಿದೆ. ಅಡುಗೆಮನೆ ನಮ್ಮ ಮನೆಯಲ್ಲಿ ಒಂದು ಮುಖ್ಯವಾದ ಸ್ಥಳವಾಗಿದೆ ಅಡುಗೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಏನು ಇರಬೇಕು ಎಂಬುದು ಎಲ್ಲರಿಗೂ ತಿಳಿದಿದೆ ಏಕೆಂದರೆ ವಾಸ್ತು ಪ್ರಕಾರ ಯಾವ ವಸ್ತುವನ್ನು ಎಲ್ಲಿದ್ದರೆ ಒಳ್ಳೆಯದು ಎಂದು ಎಲ್ಲರಿಗೂ ಈಗ ತಿಳಿದಿದೆ ಆದರೆ ನಾವು ರೊಟ್ಟಿಗೆ, ದೋಸೆಗೆ ಬಳಸುವ ಹಂಚನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂಬುದನ್ನು ಈಗ ನಿಮಗೆ ಹೇಳುತ್ತೇನೆ. ಮನೆಗೆ ಹೇಗೆ ವಾಸ್ತು ಮುಖ್ಯವೋ ಅದೇ ರೀತಿಯಾಗಿ ಅಡುಗೆಮನೆಯಲ್ಲಿ ಈ ಹಂಚನ್ನು ಇಡುವುದು ಕೂಡ ಅಷ್ಟೇ ಮುಖ್ಯ.
ಹಾಗಾದರೆ ಇದನ್ನು ಹೇಗೆ ಬಳಸಬೇಕು ಹೇಗೆ ಉಪಯೋಗಿಸಬೇಕು ಮತ್ತು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಈ ಮಾಹಿತಿಯಲ್ಲಿ ನೋಡೋಣ. ಸ್ನೇಹಿತರೆ ಮೊದಲನೆಯದಾಗಿ ನೀವು ಮನೆಯಲ್ಲಿ ಹಳೆ ಪಾತ್ರೆ ಹಾಗೂ ಹಳೆ ಹಂಚುಗಳನ್ನು ಅಥವಾ ಕಡಾಯಿಗಳನ್ನು ಬಳಸಬಾರದು ಏಕೆಂದರೆ ಇದು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ತುಂಬಾ ಹದಗೆಡುವಂತೆ ಮಾಡುತ್ತದೆ. ಯಾವಾಗಲೂ ಅಡುಗೆ ಮಾಡಿದ ನಂತರ ಕಡಾಯಿಯನ್ನು ತೊಳೆದು ಇಡಬೇಕು ಹಾಗೆ ಇದನ್ನು ಒಲೆಯ ಮೇಲೆ ಬೇರೆಯವರಿಗೆ ಕಾಣದಂತೆ ಸರಿಯಾಗಿ ಇಡಬೇಕು. ಕೆಲವೊಬ್ಬರು ಉಲ್ಟಾ ಮಾಡಿ ಇಡುತ್ತಾರೆ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯ ವ್ಯಾಪಾರಗಳಲ್ಲಿ ನಷ್ಟ ಉಂಟಾಗುತ್ತದೆ.
ಹಾಗೂ ಕೆಲವೊಬ್ಬರು ರಾತ್ರಿ ಅಡುಗೆ ಮಾಡಿದ ಮೇಲೆ ಪಾತ್ರೆಗಳನ್ನು ಹಾಗೆ ಬಿಟ್ಟು ಮಲಗುತ್ತಾರೆ ಹೀಗೆ ಮಾಡುವುದರಿಂದ ಅವರ ಮನೆಯವರ ಮೇಲೆ ಆರೋಗ್ಯದ ಸಮಸ್ಯೆ ಮೇಲಿಂದ ಮೇಲೆ ಬರುತ್ತದೆ. ಕಡಾಯಿಯನ್ನು ನಾವು ರಫ್ ಆಗಿರುವ ಬ್ರೆಷ್ನಿಂದ ಜೋರಾಗಿ ತೊಳೆಯಬಾರದು ಬದಲಾಗಿ ಒಂದು ದಿನ ರಾತ್ರಿ ಅದನ್ನು ನೀರಿನಲ್ಲಿ ಹಾಕಿ ಮರುದಿನ ಅದನ್ನು ನಿಧಾನವಾಗಿ ತೊಳೆಯಬೇಕು. ನಾವು ಕಡಾಯಿಯನ್ನು ಸೂಕ್ಷ್ಮ ರೀತಿಯಿಂದ ಬಳಸಬೇಕು. ಹಾಗೂ ತುಂಬಾ ರಾಸಾಯನಿಕಗಳನ್ನು ಹಾಕಿ ಹಂಚನ್ನು ತೊಳೆಯಬಾರದು ಹೀಗೆ ಮಾಡುವುದರಿಂದ ಹಂಚು ಗೆರೆಗೆರೆ ಆಗಿ ಕಾಣುತ್ತದೆ. ಈ ತರನಾದ ಹಂಚು ಮನೆಯಲ್ಲಿ ಮೇಲಿಂದ ಮೇಲೆ ಕಷ್ಟಗಳನ್ನು ತರುತ್ತದೆ. ಹಾಗೆ ಮನೆಯಲ್ಲಿ ಯಾರು ಇದನ್ನು ಬಳಸಿ ಎರಡು ಅಥವಾ ಮೂರು ದಿನ ತೊಳೆಯದೆ ಇರುತ್ತಾರೆ
ಅವರಿಗೆ ಯಾವುದೇ ಲಾಭ ಕೂಡ ಮನೆಯಲ್ಲಿ ಆಗುವುದಿಲ್ಲ. ಸ್ನೇಹಿತರೆ ನೀವು ಅಂದುಕೊಳ್ಳಬಹುದು ಹಂಚಿನಿಂದ ಇಷ್ಟೆಲ್ಲ ತೊಂದರೆಗಳು ಆಗುವುದಿಲ್ಲ ಎಂದು ಆದರೆ ನಾವು ಬಳಸುವ ಕಡಾಯಿ ಕೂಡ ನಮ್ಮ ಜೀವನದ ಶುಭ ಹಾಗೂ ಲಾಭಗಳಲ್ಲಿ ಪರಿಣಾಮವನ್ನು ಬೀರುತ್ತದೆ. ಕೇವಲ ಕಡಾಯಿ ಅಥವಾ ಹಂಚಿನಿಂದ ಇಷ್ಟೆಲ್ಲಾ ತೊಂದರೆಗಳು ಮನೆಯಲ್ಲಿ ಆಗುತ್ತಿದೆ ಎಂದರೆ ನೀವು ನಂಬಲೇಬೇಕು. ಹಾಗಾದರೆ ಕಡಾಯಿಯನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿದುಕೊಳ್ಳಿ. ಕಡಾಯಿಯನ್ನು ಅಡುಗೆ ಮಾಡುವಾಗ ಓಲೆಯ ಮೇಲೆ ಇಡಬೇಕು ಸ್ವಲ್ಪ ಚಿಟಿಕೆಯಷ್ಟು ಉಪ್ಪನ್ನು ಅದರ ಮೇಲೆ ಹಾಕಿ ಹಂಚಿನ ಪೂರ್ತಿ ಬಟ್ಟೆಯಿಂದ ಅದನ್ನು ಹಂಚಿನ ಮೇಲೆ ಅಲ್ಲಾಡಿಸಬೇಕು
ನಂತರ ಈ ಉಪ್ಪನ್ನು ಸ್ವಚ್ಛವಾಗಿ ಮಾಡಿ ನಂತರ ಅಡುಗೆಯನ್ನು ಮಾಡಲು ಈ ಕಡಾಯಿಯನ್ನು ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಮನೆಯಲ್ಲಿ ಶುಭ ಹಾಗೂ ಲಾಭ ಕೂಡ ಸಿಗುತ್ತದೆ. ಅಡುಗೆ ಮಾಡುವಾಗ ಈ ಕಡಾಯಿಯ ಹಿಡಕಿಯನ್ನು ನಿಮ್ಮ ಬಲಗೈಯಲ್ಲಿ ಹಿಡಿದುಕೊಳ್ಳಬೇಕು. ಸ್ನೇಹಿತರೆ ಮನೆಯಲ್ಲಿ ಅದರಲ್ಲೂ ಅಡುಗೆಮನೆಯಲ್ಲಿ ನಾವು ಶುದ್ಧ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಹಾಗೆ ಬಿಸಿ ಹಂಚಿನ ಮೇಲೆ ನೀರನ್ನು ಹಾಕಬಾರದು ಹಾಕಿದಾಗ ಒಂದು ಸೂಯ್ ಎನ್ನುವ ಶಬ್ದ ಬರುತ್ತದೆ ಇದನ್ನು ಮನೆಯಲ್ಲಿರುವ ಯಾರು ಕೂಡ ಶಬ್ದವನ್ನು ಕೇಳಬಾರದು ಇದರಿಂದ ಅವರಿಗೆ ಮನೆಯಲ್ಲಿ ಕಷ್ಟದ ಮೇಲೆ ಕಷ್ಟಗಳು ಬರಲು ಪ್ರಾರಂಭವಾಗುತ್ತದೆ. ಬದಲಾಗಿ ಹಂಚನ್ನು ಆರಿದ ಮೇಲೆ ನೀರು ಹಾಕಿ ಸ್ವಚ್ಛಮಾಡಬೇಕು.
ಸ್ನೇಹಿತರೆ ಹಾಗಾದರೆ ಅಡುಗೆಮನೆಯಲ್ಲಿ ಬಳಸುವ ಕಡಾಯಿ ಅಥವಾ ಹಂಚನ್ನು ಹೇಗೆ ಬಳಸಬೇಕು ಮತ್ತು ಇದರಿಂದ ಏನೇನು ಲಾಭ ಹಾಗೂ ನಷ್ಟಗಳಿಗೆ ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ