ನಿಮ್ಮ ಮನಸಿನ ಕೋರಿಕೆಗಳು ಎಷ್ಟೇ ಪ್ರಯತ್ನ ಪಟ್ಟರೂ ಈಡೇರುತ್ತಿಲ್ವಾ .. ಹಾಗಾದ್ರೆ ಈ ಒಂದು ಕರ್ಪೂರದ ಬಿಲ್ಲೆಯನ್ನು ಕೈಯಲ್ಲಿಟ್ಟುಕೊಂಡು ಹೀಗೆ ಸಂಕಲ್ಪವನ್ನು ಮಾಡಿಕೊಳ್ಳಿ ಒಂದೇ ವಾರದಲ್ಲಿ ನಿಮ್ಮ ಮನಸಿನ ಕೋರಿಕೆಗಳು ಈಡೇರುತ್ತವೆ ಬೇಕಾದ್ರೆ ಮಾಡಿ ನೋಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಣಕಾಸಿನ ತೊಂದರೆ ಕಾಡುತ್ತಾ ಇದ್ದರೆ ಅಥವಾ ನಿಮ್ಮ ಬಳಿ ಹಣಕಾಸು ಇದ್ದರೂ ನಿಮ್ಮ ಕಷ್ಟಗಳಿಗೆ ಆ ಹಣಕಾಸು ಉಪಯೋಗಕ್ಕೆ ಬರುತ್ತಿಲ್ಲ ಅನ್ನೋದಾದರೆ ಅದಕ್ಕಾಗಿ ಈ ರೀತಿಯ ಒಂದು ಪರಿಹಾರವನ್ನು ಮಾಡಿಕೊಳ್ಳಿ.ಅದು ಯಾವ ಪರಿಹಾರ ಅಂತ ನಿಮಗೆ ಈ ಮಾಹಿತಿಯ ಮುಖಾಂತರ ತಿಳಿಸಿಕೊಡುತ್ತೇವೆ ಇದನ್ನು ನೀವು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಹಣಕಾಸಿನ ತೊಂದರೆಗಳೆ ಆಗಲಿ ಅಥವಾ ನೀವು ಕೂಡಿಟ್ಟ ಹಣ ನಿಮ್ಮ ಕಷ್ಟಕ್ಕೆ ಬರುತ್ತಿಲ್ಲವಾದರೆ ಹಾವೊಂದು ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಈ ಒಂದು ತಂತ್ರವನ್ನು ನೀವೇ ಮಾಡಿಕೊಂಡಿದ್ದಲ್ಲಿ.

ಈ ತಂತ್ರವನ್ನು ಗುರುವಾರ ಅಥವಾ ಶುಕ್ರವಾರ ದಿವಸದಂದು ಮಾಡಿದರೆ ತುಂಬಾ ಶುಭಾ. ಮೊದಲು ಇದಕ್ಕಾಗಿ ಬೇಕಾಗಿರುವುದು 1ನಿಂಬೆಹಣ್ಣು ಈ ನಿಂಬೆಹಣ್ಣನ್ನು ಹೇಗೆ ತೆಗೆದುಕೊಳ್ಳಬೇಕು ಅಂದರೆ ಪೂರ್ಣ ವೃತ್ತಾಕಾರದಲ್ಲಿ ಇರುವ ನಿಂಬೆಹಣ್ಣನ್ನ ತೆಗೆದುಕೊಳ್ಳಬಾರದು ನಿಂಬೆಹಣ್ಣಿನ ಮೇಲೆ ಒಂದು ಗೆರೆ ಬರಬೇಕು ಅಂದರೆ ನಿಂಬೆಹಣ್ಣಿನ ಮೇಲೆ ಗೆರೆ ಇರುತ್ತದೆ ಅಂತಹ ಒಂದು ನಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು. ಯಾಕೆ ಅಂದರೆ ತಂತ್ರ ಪ್ರಯೋಗಕ್ಕೆ ಈ ನಿಂಬೆ ಹಣ್ಣಿನ ಮೇಲೆ ಗೆರೆ ಇರುವಂತಹ ಹಣ್ಣನ್ನು ತೆಗೆದುಕೊಂಡರೆ ಪ್ರಯೋಜನಕಾರಿಯಾದ ಪರಿಣಾಮ ಉಂಟಾಗುತ್ತದೆ ತಂತ್ರ ಪ್ರಯೋಗಕ್ಕೆ ಇಂತಹ ನಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು.

ಇದೀಗ ಈ ನಿಂಬೆ ಹಣ್ಣನ್ನು ದೇವರ ಮುಂದೆ ಇಟ್ಟು ನೀವು ಪ್ರತಿದಿನ ಮಾಡುವಂತೆ ಪೂಜೆಯನ್ನು ಕೈಗೊಳ್ಳಬೇಕು. ನಂತರ ಕರ್ಪೂರವನ್ನು ತೆಗೆದುಕೊಂಡು, ಐದ ರಿಂದ ಆರು ಕರ್ಪೂರದ ಬಿಲ್ಲೆಗಳನ್ನು ತೆಗೆದುಕೊಂಡು ಅದನ್ನು ಬಲಗೈನಲ್ಲಿ ಇಟ್ಟುಕೊಳ್ಳಬೇಕು ನಂತರ ಮನೆಯ ಮುಖ್ಯ ದ್ವಾರದ ಮುಂದೆ ನಿಂತು ಮನೆಯ ಮುಖ್ಯದ್ವಾರಕ್ಕೆ ಮುಖ ಮಾಡಿ ನಿಲ್ಲಬೇಕು ನಂತರ ಬಲಗೈನಲ್ಲಿ ಹಿಡಿದಿರುವ ಕರ್ಪೂರದ ಬಿಲ್ಲೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಬಲಭಾಗದಿಂದ ಎಡಭಾಗಕ್ಕೆ ಇಳೆ ತೆಗೆಯಬೇಕು. ಗಣಪತಿಯನ್ನು ನೆನೆಯುತ್ತಾ ಓಂ ಗಂ ಗಣಪತಯೆ ನಮಃ ಎಂದು ಹೇಳಿಕೊಳ್ಳುತ್ತಾ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾ ಈ ಕೆಲಸವನ್ನು ಮಾಡಬೇಕು.

ನಂತರ ಕರ್ಪೂರದ ಬಿಲ್ಲೆಗಳನ್ನು ಎಡಗೈಗೆ ಇಟ್ಟುಕೊಂಡು ಎಡಭಾಗದಿಂದ ಬಲಭಾಗಕ್ಕೆ ಇಳೆ ತೆಗೆಯಬೇಕು ಇದೀಗ ಲಕ್ಷ್ಮೀದೇವಿಯನ್ನು ನೆನೆಯುತ್ತ ಮತ್ತೆ ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಈ ಕರ್ಪೂರಗಳನ್ನು ಹಚ್ಚಿ ಮನೆಯ ಒಳಗೆ ಹೋಗಬೇಕು.ಈ ಕರ್ಪೂರವನ್ನು ಹಚ್ಚಿದಾಗ ಅದಕ್ಕೆ ಕೈ ಮುಗಿಯುವುದು ಬೇಡ ದೇವರ ಮುಂದೆ ಆರತಿ ಎತ್ತಿದಾಗ ಮಾತ್ರ ಆರತಿಯ ಆಶೀರ್ವಾದವನ್ನು ತೆಗೆದುಕೊಳ್ಳಬೇಕು ಅಷ್ಟೆ. ಈ ರೀತಿಯ ಪರಿಹಾರವನ್ನು ಮಾಡಿಕೊಂಡ ನಂತರ ದೇವರ ಮನೆಯಲ್ಲಿ ಇಟ್ಟಂತಹ ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ಮನೆಯ ಉತ್ತರ ಭಾಗದ ಖಾಲಿ ಜಾಗದಲ್ಲಿ ಈ ನಿಂಬೆ ಹಣ್ಣನ್ನು ಮಣ್ಣಿನ ಒಳಗೆ ಇಡಬೇಕು

ಹೌದು ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯಾಗಲಿ ಅಥವಾ ಯಾವುದೇ ತರಹದ ತೊಂದರೆಗಳಾಗಲಿ ಮಣ್ಣಿನಲ್ಲಿ ಸಮವಾಯಿತು ಎಂಬುದರ ಅರ್ಥ ಇದಾಗಿರುತ್ತದೆ. ಮನೆಯ ಉತ್ತರ ಭಾಗದಲ್ಲಿ ಜಾಗವಿರುವೆಡೆ ನೀವು ಈ ಪರಿಹಾರವನ್ನು ಮಾಡಬೇಕು.ನಂತರ ಮನೆಯೊಳಗೆ ಕಾಲು ತೊಳೆದು ಹೋಗಬೇಕು ಈ ರೀತಿ ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ಹಣಕಾಸಿನ ತೊಂದರೆಗಳು ನಿವಾರಣೆ ಆಗುತ್ತದೆ ಮತ್ತು ಯಾವುದೇ ಕೆಟ್ಟ ಶಕ್ತಿಯ ಪ್ರಭಾವ ಮನೆಯ ಮೇಲೆ ಆಗಿದ್ದರೂ ಅದನ್ನು ಕೂಡ ಈ ಪರಿಹಾರ ನಿವಾರಿಸುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.