ನೀವೇನಾದ್ರು ಈ ರೀತಿಯಾಗಿ ಕುಡಿಯುವ ನೀರನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಾಕು ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿಯ ವಾಸ ಸ್ಥಿರವಾಗಿ ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗಿ ನೀವು ಶ್ರೀಮಂತರಾಗುತ್ತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ನೀರನ್ನು ಈ ದಿಕ್ಕಿನಲ್ಲಿ ಇಟ್ಟರೆ ಮಹಾಲಕ್ಷ್ಮಿ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ.ಹಾಯ್ ಸ್ನೇಹಿತರೆ ಮನೆಯೇ ನಿರ್ಮಾಣವಾದ ಮೇಲೆ ನಾವು ವಾಸಿಸುವ ಮನೆಯಲ್ಲಿ ಯಾವ ವಸ್ತು ಯಾವ ದಿಕ್ಕಿನಲ್ಲಿ ಇರಬೇಕು ಎಂದು ಯೋಚಿಸಿ ಅವುಗಳನ್ನು ಇಡಬೇಕು. ನಾವು ಇರುವ ಜೀವನ ಶೈಲಿಯೂ ಕೂಡ ನಮ್ಮ ಕಷ್ಟ ತೊಂದರೆಗಳಿಗೆ ಕಾರಣವಾಗಿರಬಹುದು. ಯಾವ ದಿಕ್ಕಿನಲ್ಲಿ ಯಾವ ರೂಮು ಇರಬೇಕು ಹಾಗೆ ಯಾವ ದಿಕ್ಕಿನಲ್ಲಿ ದೇವರ ಕೋಣೆ ಇರಬೇಕು ಎಂಬುದು ವಾಸ್ತುಶಾಸ್ತ್ರದಲ್ಲಿ ಇದೆ. ಎಷ್ಟೋ ರೋಗಗಳಿಗೆ ನೀರು ಔಷಧಿಯಾಗಿದೆ ನೀರಿನ ಅಂಶ ಇರದಿದ್ದರೆ ಬಹುಶಹ ಯಾವ ಮನುಷ್ಯನು ಪ್ರಾಣಿಯು ಭೂಮಿಯಲ್ಲಿ ಇರುತ್ತಿರಲಿಲ್ಲ.

ನೀರು ದೇವರ ಸೃಷ್ಟಿಯಿಂದ ಉದ್ಭವವಾಗಿದೆ ಈ ದೇವರ ಅಂಶದ ನೀರನ್ನು ಯಾವ ರೀತಿಯಾಗಿ ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತೇನೆ. ನೀರಿನಲ್ಲಿ ಎಲ್ಲಾ ಲವಣಾಂಶಗಳು ಇರುವುದರಿಂದ ದೇಹಕ್ಕೆ ತುಂಬಾ ಒಳ್ಳೆಯ ಆರೋಗ್ಯವನ್ನು ಕೊಡುತ್ತದೆ. ಊಟವನ್ನು ಬಿಟ್ಟು ಎರಡು ದಿನವಾದರೂ ಇರಬಹುದು ಆದರೆ ನೀರನ್ನು ಬಿಡಲು ತುಂಬಾ ಕಷ್ಟವಾಗುತ್ತದೆ ನೀರು ನಮಗೆ ಬಹುಮುಖ್ಯವಾಗಿದೆ. ನಮ್ಮ ದೇಹ 70 ಪರ್ಸೆಂಟ್ ನೀರಿನಿಂದ ಕೂಡಿದೆ. ಪಂಚಭೂತಗಳಲ್ಲಿ ನೀರು ಕೂಡ ಒಂದು ನೀರಿಗೆ ದೊಡ್ಡ ಶಕ್ತಿಯಿದೆ ದೇವಿ ಗಂಗಾ ರೂಪದಲ್ಲಿರುವ ನೀರು ಎಲ್ಲರಿಗೂ ತುಂಬಾ ಪ್ರಯೋಜನಕಾರಿ. ವಾಸ್ತು ಪ್ರಕಾರದಲ್ಲಿ ಪಂಚಭೂತಗಳಿಗೆ ತುಂಬಾ ಮಹತ್ವವಿದೆ.

ನೀರು ಎಲ್ಲದಕ್ಕೂ ಉಪಯೋಗವಾಗುತ್ತದೆ ವಶೀಕರಣದಲ್ಲಿ ಹಾಗೂ ಎಲ್ಲ ಪೂಜೆಗಳಿಗೂ ಸಹ ನೀರನ್ನು ಉಪಯೋಗಿಸುತ್ತಾರೆ. ಮನೆಯಲ್ಲಿ ನೀರನ್ನು ಕುಡಿಯಲು ಸ್ನಾನ ಮಾಡಲು ಮನೆಗೆ ಬಳಸಲು ಉಪಯೋಗಿಸುತ್ತಾರೆ ಆದರೆ ಇದರ ಪ್ರಭಾವ ಮನುಷ್ಯರ ಮೇಲೆ ಬೀಳುತ್ತೆ ಏಕೆಂದರೆ ಮನುಷ್ಯನ ದೇಹದಲ್ಲಿ ನೀರು ಇದೆ. ನಿಮ್ಮ ಮನೆಯಲ್ಲಿ ನೀರಿನ ಸ್ಥಾನ ಚೆನ್ನಾಗಿಲ್ಲ ಎಂದರೆ ನೀವು ಕುಡಿಯುವ ನೀರು ನಿಮಗೆ ಅನಾರೋಗ್ಯ ಉಂಟುಮಾಡಬಹುದು. ಸಾಧ್ಯವಾದಷ್ಟು ನೀವು ನೀರಿನ ಟ್ಯಾಂಕನ್ನು ನಿಮ್ಮ ಮನೆಯ ಉತ್ತರದಿಕ್ಕಿಗೆ ಅಥವಾ ಈಶಾನ್ಯ ದಿಕ್ಕಿಗೆ ಇಡಬೇಕು.

ಹೀಗೆ ಮಾಡುವುದರಿಂದ ನಿಮಗೆ ಯಾವುದೇ ಹಣಕಾಸಿನ ತೊಂದರೆಗಳು ಬರುವುದಿಲ್ಲ. ಹಾಗೆ ಮನೆಯಲ್ಲಿ ಕುಡಿಯುವ ನೀರನ್ನು ಅಥವಾ ನೀರು ಕುಡಿಯಲು ಬಳಸುವ ಯಂತ್ರಗಳನ್ನು ನೀವು ಯಾವಾಗಲೂ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಈ ರೀತಿಯಾಗಿ ಪಶ್ಚಿಮ ದಿಕ್ಕಿನಲ್ಲಿ ಕುಡಿಯುವ ನೀರು ಇಟ್ಟರೆ ಅದನ್ನು ನೀವು ಪ್ರತಿನಿತ್ಯ ಕುಡಿಯುತ್ತಿದ್ದರೆ ನಿಮಗೆ ಧನಸಂಪತ್ತು ಸದಾ ಇರುತ್ತದೆ. ಈ ರೀತಿಯಾದ ಚಿಕ್ಕಚಿಕ್ಕ ವಿಷಯಗಳು ನಮಗೆ ತಿಳಿದಿರುವುದಿಲ್ಲ ಹೀಗಾಗಿ ನಮಗೆ ತೊಂದರೆಗಳು ಅನಾರೋಗ್ಯದ ಸಮಸ್ಯೆಗಳು ಮನೆಯಲ್ಲಿ ಹೆಚ್ಚಾಗಿ ಕಾಡುತ್ತಿರುತ್ತವೆ.

ನೀರು ಸಹ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಏಕೆಂದರೆ ನೀರಿಗೂ ಶಕ್ತಿ ಇದೆ. ಕುಡಿಯುವ ನೀರನ್ನು ಉತ್ತರ ದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಇಡಬಹುದು ಆದರೆ ಪೂರ್ವ ಹಾಗೂ ದಕ್ಷಿಣ ಮುಖವಾಗಿ ಕುಡಿಯುವ ನೀರನ್ನು ಇಡಬಾರದು ಇದರಿಂದ ನಿಮಗೆ ತೊಂದರೆ ಆಗುತ್ತದೆ. ನೀವು ದಕ್ಷಿಣ ದಿಕ್ಕಿನಲ್ಲಿ ನೀರನ್ನು ಇಟ್ಟರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ ಹಣಕಾಸಿನ ವಿಷಯದಲ್ಲಿ ನಿಮಗೆ ಯಾವುದೇ ಲಾಭ ಸಿಗುವುದಿಲ್ಲ. ದಕ್ಷಿಣ ದಿಕ್ಕು ಅಗ್ನಿ ದಿಕ್ಕು ಎಂದು ಹೇಳುತ್ತಾರೆ ಹಾಗಾಗಿ ನೀರನ್ನು ಅಲ್ಲಿ ಇಡಬಾರದು. ರಾತ್ರಿ ಮಲಗುವಾಗ ನೀರನ್ನು ತುಂಬಿಕೊಂಡರೆ ಅದನ್ನು ಸಹ ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ಇಟ್ಟುಕೊಳ್ಳಬೇಕು ಏಕೆಂದರೆ ನಾವು ಕುಡಿಯುವ ನೀರು ನಮ್ಮ ಮೇಲೆ ಪ್ರಭಾವ ಬೀರುತ್ತದೆ.

ನೀರಿಗೆ ಎಂತಹ ಶಕ್ತಿ ಇದೆ ಎಂದರೆ ಎಲ್ಲಾ ಶಕ್ತಿಗಳನ್ನು ಎರಡು ಪಟ್ಟು ವೇಗವಾಗಿ ಇದು ತೆಗೆದುಕೊಳ್ಳುತ್ತದೆ. ನೀರನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ನಿಮಗೆ ತಿಳಿಯದೇ ಹೋದರೆ ಇಂತಹ ಚಿಕ್ಕ ತಪ್ಪುಗಳು ನಿಮ್ಮ ಜೀವನಕ್ಕೆ ತೊಂದರೆಯನ್ನು ತರುತ್ತವೆ. ಈ ಮಾಹಿತಿ ತಿಳಿದ ಮೇಲೆ ನೀವು ನಿಮ್ಮ ಮನೆಯಲ್ಲಿ ನೀರನ್ನು ಪಶ್ಚಿಮ ಹಾಗೂ ಉತ್ತರ ದಿಕ್ಕಿಗೆ ಇಡಿ ಮಹಾಲಕ್ಷ್ಮಿಯು ನಿಮಗೆ ಸದಾ ಆಶೀರ್ವದಿಸಿ ನಿನ್ನ ಮನೆಯಲ್ಲಿ ಶಾಶ್ವತವಾಗಿ ಇರುತ್ತಾಳೆ. ನೀವು ಕೂಡ ಇಂತಹ ತಪ್ಪುಗಳನ್ನು ಯಾರ ಮನೆಯಲ್ಲಾದರೂ ನೋಡಿದರೆ ಅವರಿಗೂ ಸಹ ಈ ವಿಷಯವನ್ನು ತಿಳಿಸಿ ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.