ಬರೀ ಒಂದು ಗಾಜಿನ ಲೋಟದ ನೀರಿನಿಂದ ನಿಮ್ಮ ಮನೆಯ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಆರೋಗ್ಯವಾಗಿ ಇರಬಹುದು. 11 ದಿನ ಈ ರೀತಿಯಾಗಿ ಮಾಡಿದರೆ ನಿಮ್ಮ ಹಣೆ ಬರಹವೇ ಬದಲಾಗುತ್ತದೆ.ಹಾಯ್ ಸ್ನೇಹಿತರೆ ಕಷ್ಟ ಯಾರಿಗೆ ಇರುವುದಿಲ್ಲ ಹೇಳಿ ಜೀವನದಲ್ಲಿ ಮನುಷ್ಯರಿಗೆ ಬರದೇ ಮರಗಳಿಗೆ ಕಷ್ಟ ಬರುವುದಿಲ್ಲ. ಕೆಲವೊಬ್ಬರಿಗೆ ನೋವು ಇರುತ್ತದೆ ಆದರೆ ಅದು ಬೇರೆ ಯಾರಿಗೂ ಕಾಣುವುದಿಲ್ಲ ಮನಸ್ಸಿನಲ್ಲಿ ನೂರಾರು ಚಿಂತೆಗಳನ್ನು ಇಟ್ಟುಕೊಂಡು ಬೇರೆಯವರ ಮುಂದೆ ಖುಷಿಖುಷಿಯಾಗಿ ಇರುತ್ತಾರೆ ಆದರೆ ಅವರು ಮಾನಸಿಕವಾಗಿ ತುಂಬಿ ನೊಂದಿರುತ್ತಾರೆ
ಬೇರೆಯವರು ಅವರನ್ನು ನೋಡಿದರೆ ಅವರಿಗೇನಾಗಿದೆ ತುಂಬಾ ಚೆನ್ನಾಗಿ ಇದ್ದಾರೆ ಎಂದು ಮಾತನಾಡುತ್ತಾರೆ. ಆದರೆ ಅವರ ಕಷ್ಟ ಅವರಿಗೆ ಗೊತ್ತು ಇರುತ್ತದೆ. ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ನೀವು ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ.ಅದು ಕೇವಲ ಒಂದು ಕಪ್ ನಷ್ಟು ನೀರಿನಿಂದ ಸಾಧ್ಯವಾಗುತ್ತದೆ. ಹೌದು ಸ್ನೇಹಿತರೆ ನೀರಿಗೆ ಎಂತಹ ಶಕ್ತಿ ಇದೆ ಎಲ್ಲ ರೋಗಗಳನ್ನು ಕಡಿಮೆ ಮಾಡುವ ಗುಣ ನೀರಿನಲ್ಲಿದೆ. ಎಷ್ಟೋ ರೋಗಗಳಿಗೆ ನೀರು ಔಷಧಿಯಾಗಿದೆ. ನೀರನ್ನು ಎಲ್ಲಾ ಕಡೆ ಬಳಸುತ್ತಾರೆ ಪೂಜೆಗೆ ಅಭಿಷೇಕ ಮಾಡಲು ನೀರು ಬೇಕು ನೀರು ಇಲ್ಲದೆ ಯಾವ ಪೂಜೆಯೂ ನಡೆಯುವುದಿಲ್ಲ. ನೀರು ಸಾಕ್ಷಾತ್ ಗಂಗಾದೇವಿಯ ಸ್ವರೂಪವಾಗಿದ್ದಾಳೆ.
ನೀರಿಗೆ ಎಷ್ಟು ಶಕ್ತಿ ಇದೆ ಎಂದರೆ ನಮ್ಮಲ್ಲಿರುವ ಹಾಗೂ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತೆ ನಮ್ಮ ಮನಸ್ಸಿನಲ್ಲಿರುವ ಕಲ್ಮಶವನ್ನು ಸಹ ನೀರು ಶುದ್ಧ ಮಾಡುತ್ತದೆ. ನೀರು ಎಲ್ಲಾ ಕಲ್ಮಶವನ್ನು ಶುದ್ಧ ಮಾಡುವ ಗುಣ ಹೊಂದಿದೆ. ನಕಾರಾತ್ಮಕ ಶಕ್ತಿಯಿಂದ ಮನೆಯಲ್ಲಿ ನಾವು ಏನೇ ಮಾಡಿದರೂ ಲಾಭ ಆಗುತ್ತಿರುವುದಿಲ್ಲ ಹಾಗೆ ಮನೆಯಲ್ಲಿ ಕಲಹಗಳು ತಪ್ಪುವುದಿಲ್ಲ. ಆರೋಗ್ಯದ ಸಮಸ್ಯೆ ಮನೆಯ ಎಲ್ಲರಿಗೂ ಕಾಡುತ್ತಿರುತ್ತೆ. ಇದರಿಂದಾಗಿ ಮನೆಯಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ. ಈ ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಆದರೆ ಇದನ್ನು ಮಾಡಲು ಶುದ್ಧ ಮನಸ್ಸು ಇರಬೇಕು.
ನೀವೇನಾದರೂ ಪ್ರವಾಸಕ್ಕೆ ಹೋದಾಗ ಅಲ್ಲಿಯ ನದಿಗಳಿಗೆ ಹೋದರೆ ಒಂದು ಬಾಟಲ್ ನಲ್ಲಿ ಅಲ್ಲಿಯ ನೀರನ್ನು ತರಬೇಕು ಶುದ್ಧವಾದ ನೀರನ್ನು ಪರಿಹಾರಕ್ಕೆ ಬಳಸಬೇಕು 11 ದಿನ ನೀರನ್ನು ಬಳಸಬೇಕಾಗುತ್ತದೆ ನೀವು ಸ್ವಲ್ಪ ನೀರನ್ನು ತಂದಿದ್ದರೆ ಅದಕ್ಕೆ ಮನೆಯಲ್ಲಿರುವ ಶುದ್ಧ ನೀರನ್ನು ಸೇರಿಸಿಕೊಳ್ಳಬಹುದು. ಈ ಒಂದು ಪರಿಹಾರಕ್ಕೆ ಯಾವುದೇ ಖರ್ಚಿಲ್ಲ. ಮನೆಯಲ್ಲೇ ನೀವು ಇದನ್ನು ಮಾಡಬಹುದು. ಮನೆಯಲ್ಲಿ ಯಾರಿಗಾದರೂ ದರಿದ್ರ ಹತ್ತಿದರೆ ಹಾಗೂ ಅವರು ನಿಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದರೆ ಮಂಕಾಗಿ ಕೂತಿರುತ್ತಾರೆ ಅಂದರೆ ಅವರಿಗೆ ಈ ಪರಿಹಾರವನ್ನು ಮಾಡಿ. ಮಲಗುವಾಗ ಈ ನೀರನ್ನು ಅಂದರೆ ನದಿಯಿಂದ ತಂದಿರುವ ಶುದ್ಧ ನೀರನ್ನು ಒಂದು ಗಾಜಿನ ಲೋಟಕ್ಕೆ ಹಾಕಿ ಕೊಳ್ಳಬೇಕು.
ಅದಕ್ಕೆ ಬೇಕಾದರೆ ಮನೆಯಲ್ಲಿರುವ ಶುದ್ಧ ನೀರನ್ನು ಸಹ ಹಾಕಿಕೊಳ್ಳಬೇಕು ನಿಮ್ಮ ತಲೆಯ ಹತ್ತಿರ ನೀರನ್ನು ಇಟ್ಟುಕೊಂಡು ಮಲಗಬೇಕು. ನೀವೇನಾದರೂ ಮಂಚದಮೇಲೆ ಮಲಗುತ್ತಿದ್ದರೆ ಮಂಚದ ಕೆಳಗೆ ತಲೆ ಕಡೆ ಇಟ್ಟುಕೊಳ್ಳಬೇಕು. ಮಲಗುವಾಗ ಮನಸ್ಸಿನಲ್ಲಿ ಭಕ್ತಿಯಿಂದ ದೇವರೇ ಈ ಪರಿಹಾರದಿಂದ ನನಗೆ ಆರೋಗ್ಯ ನೆಮ್ಮದಿ ಶಾಂತಿ ಕೊಡು ಎಂದು ಕೇಳಿಕೊಳ್ಳಬೇಕು ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡು ಎಂದು ಕೇಳಿಕೊಳ್ಳಬೇಕು. ಬುಧವಾರದ ದಿನ ಈ ಒಂದು ಪರಿಹಾರವನ್ನು ಪ್ರಾರಂಭ ಮಾಡಬೇಕು ನಂತರ ಗುರುವಾರ ಬೆಳಿಗ್ಗೆ ನೀರನ್ನು ಮನೆಯ ಮುಂದೆ ಇರುವ ಹಸಿರು ಗಿಡಕ್ಕೆ ಹಾಕಬೇಕು ಹಾಕುವಾಗ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರ ಹೋಗಲಿ ಎಂದು ಮನಸಲ್ಲಿ ಅಂದುಕೊಳ್ಳಬೇಕು.
ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ಇರುತ್ತದೆ. ದೋಷಗಳೆಲ್ಲ ಪರಿಹಾರವಾಗಿ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಈ ರೀತಿಯಾಗಿ ಬುಧವಾರದಿಂದ 11 ದಿನ ಮಾಡಬೇಕು ಹಾಗಾದರೆ ಸ್ನೇಹಿತರೆ ಈ ಪರಿಹಾರ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆ ಉಂಟುಮಾಡುತ್ತದೆ. ನೀವು ಅಚ್ಚರಿ ಆಗುವಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತವೆ. ಅದೃಷ್ಟವಂತರಾಗಿ ಬದಲಾಗುತ್ತಿರಿ. ಹೌದು ಸ್ನೇಹಿತರೆ ನೀವು ಅಂದುಕೊಳ್ಳುವ ಆಸೆಗಳೆಲ್ಲಾ ನೆರವೇರುತ್ತವೆ ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ತಿಳಿಸಿ ಈ ಪರಿಹಾರವನ್ನು ಮಾಡಿ ತುಂಬಾ ಲಾಭವನ್ನು ಪಡೆಯಿರಿ ಧನ್ಯವಾದಗಳು.