ನಿಮ್ಮ ಮನೇಲಿ ಈ ಐದು ವಸ್ತುಗಳನ್ನು ನೀವು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಗೆ ಅದೃಷ್ಟ ಹುಡಿಕಿಕೊಂಡು ಬಂದು ನೀವು ಧನವಂತರಾಗುತ್ತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಈ 5 ವಸ್ತುಗಳು ಇದ್ದರೆ ಖಂಡಿತವಾಗಿಯೂ ನಿಮಗೆ ಭಾಗ್ಯ ಖುಲಾಯಿಸುತ್ತೆ ಹಾಗಾದರೆ ಆ ವಸ್ತುಗಳು ಯಾವುವು ಎನ್ನುವುದನ್ನು ತಿಳಿಯಲು ಮಾಹಿತಿ ಓದಿ.ಹೌದು ಸ್ನೇಹಿತರೆ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಸಂಪೂರ್ಣವಾಗಿ ಸಿಗುತ್ತದೆ ಆದರೆ ವಸ್ತುಗಳು ಯಾವುವು ಅವುಗಳನ್ನು ಮನೆಯಲ್ಲಿ ಇರಿಸಿಕೊಳ್ಳಬೇಕು ಎಂಬುದನ್ನು ತಿಳಿಯೋಣ. ಮೊದಲನೆಯದಾಗಿ ಮನೆಯ ಮುಂದೆ ತುಳಸಿ ಗಿಡ ಇರಬೇಕು. ಹೌದು ಸ್ನೇಹಿತರೆ ತುಳಸಿ ಗಿಡವು ಸಾಕ್ಷಾತ್ ಲಕ್ಷ್ಮಿ ದೇವಿಯ ರೂಪ ಇದನ್ನು ನಾವು ಪ್ರತಿನಿತ್ಯ ಪೂಜಿಸುತ್ತಿದ್ದರು ನಮ್ಮ ಜನ್ಮದ ಪಾಪಗಳೆಲ್ಲಾ ತೊಳೆಯುತ್ತವೆ ಎಂದು ನಂಬಿಕೆ ಇದೆ. ಪ್ರತಿನಿತ್ಯ ತುಳಸಿ ಎಲೆಯನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ತುಳಸಿ ಗಿಡವನ್ನು ಪೂಜೆ ಮಾಡುವಾಗ ಈ ಒಂದು ಮಂತ್ರವನ್ನು ಹೇಳಿದರೆ ನಿಮಗೆ ಮನೆಯಲ್ಲಿ ಶಾಂತಿ ಆರೋಗ್ಯ ನೆಮ್ಮದಿ ಯಶಸ್ಸು ಎಲ್ಲವೂ ಏಳಿಗೆ ಆಗುತ್ತದೆ. ಮೃತ್ಯುಂಜಯ ತ್ರಾಸ ಹರ ತುಳಸಿ ರೋಗನಾಶಿನಿ. ಮನೆಯ ಮುಂದೆ ಇದ್ದ ತುಳಸಿಗಿಡ ಇದ್ದಕ್ಕಿದ್ದಂತೆ ಒಣಗಿದ್ರೆ ಮುಂದೆ ಅನಾಹುತ ಆಗುವ ಮುನ್ಸೂಚನೆ ನೀಡುತ್ತದೆ ಎಂದು ಅರ್ಥ. ಇನ್ನು ಅದೇ ಜಾಗದಲ್ಲಿ ಬೇರೆ ಗಿಡವನ್ನು ಹಚ್ಚಿದರು ಅದು ಕೂಡ ಒಣಗಿದರೆ ಮನೆಯಲ್ಲಿ ಪಿತೃ ದೋಷದ ತೊಂದರೆ ಇದೆಯೆಂದು ತಿಳಿಯಬಹುದು. ತುಳಸಿ ಇಲ್ಲದೆ ವಿಷ್ಣು ಪೂಜೆಯನ್ನು ಮಾಡಿದರೆ ಪೂಜೆ ಸಂಪೂರ್ಣ ಆಗದು ಎಂದು ಹೇಳುತ್ತಾರೆ. ತುಳಸಿ ಗಿಡವು ಮನೆಯ ಸುತ್ತಮುತ್ತ ಇದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಅಷ್ಟೊಂದು ಮಹತ್ವ ಈ ತುಳಸಿ ಗಿಡಕ್ಕೆ ಇದೆ.

ಸ್ನೇಹಿತರೆ ಹಾಗಾದರೆ ಎರಡನೆಯ ವಸ್ತು ಯಾವುದು ಎಂದು ತಿಳಿಯೋಣ. ಪವಿತ್ರವಾದ ಆಕಳಿನ ಸಗಣಿಯು ಮನೆಯಲ್ಲಿರಬೇಕು. ನಮ್ಮ ಭಾರತದ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷವಾದ ಸ್ಥಾನವಿದೆ ಇವರು ಕೂಡ ಮಹಾಲಕ್ಷ್ಮಿಯ ಸಂಕೇತ ಆಗಿದ್ದಾಳೆ. ಪಂಚಗವ್ಯ ವಾದ ಹಾಲುತುಪ್ಪ ಮೊಸರು ಗೋಮೂತ್ರ ಹಾಗೂ ಸಗಣಿ ಇವುಗಳೆಲ್ಲಾ ತುಂಬಾ ಶ್ರೇಷ್ಠವಾಗಿವೆ. ದೊಡ್ಡ ದೊಡ್ಡ ಶೋಭಾ ಕಾರ್ಯಕ್ರಮಗಳಿಗೆ ಹಾಗೂ ಯಜ್ಞಯಾಗಾದಿಗಳಿಗೆ ಗೋಮಾತೆಯ ಪಂಚಗವ್ಯವನ್ನು ಬಳಸುತ್ತಾರೆ ಇದರಿಂದ ಪೂಜೆಯಲ್ಲಿ ಯಾವುದೇ ದೋಷ ಇರುವುದಿಲ್ಲ. ಸಗಣಿಯಿಂದ ಕುಳ್ಳು ಮಾಡಿ ಮನೆಯಲ್ಲಿ ಧೂಪ ಹಾಕಿದರೆ ಆರೋಗ್ಯದ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತಾರೆ.

ಅದೇ ರೀತಿಯಾಗಿ ಗೋಮೂತ್ರವನ್ನು ಉಪಯೋಗಿಸುವುದರಿಂದ ಮತ್ತು ಮನೆಯಲ್ಲಿ ಇರಿಸಿ ಕೊಳ್ಳುವುದರಿಂದ ವಾತಾವರಣದಲ್ಲಿ ಯಾವುದೇ ತರಹದ ಅನಾರೋಗ್ಯದ ಕೀಟಾಣುಗಳು ಇರುವುದಿಲ್ಲ ಎಂದು ವೈಜ್ಞಾನಿಕವಾಗಿ ಹೇಳಿದ್ದಾರೆ. ಮನೆಯಲ್ಲಿ ಆಕಳುಗಳು ಇದ್ದರೆ ಪ್ರತಿ ಶುಕ್ರವಾರ ಹಾಗೂ ಸೋಮವಾರ ಪೂಜಿಸಬೇಕು ಇದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ನಿಮಗೆ ಸಿಗುತ್ತದೆ. ಸ್ನೇಹಿತರೆ ಹಾಗಾದರೆ ಈಗ ಮೂರನೆಯ ವಸ್ತು ಯಾವುದು ಎಂದು ತಿಳಿದುಕೊಳ್ಳೋಣ. ದೇವರ ಮನೆಯಲ್ಲಿರುವ ಫೋಟೋ ತುಂಬಾ ಮುಖ್ಯವಾದದ್ದು. ಮನೆಯ ದೇವರ ಕೋಣೆಯಲ್ಲಿ ಒಂದೇ ತರಹದ 2 ಫೋಟೋಗಳನ್ನು ಇಟ್ಟುಕೊಳ್ಳಬಾರದು ಹಾಗೂ ಇದ್ದರೆ ಬೇರೆ ಬೇರೆ ಸ್ಥಳದಲ್ಲಿ ಹಾಕಬೇಕು.

ಇನ್ನೂ ರುದ್ರಾವತಾರಗಳಿರುವ ಭಾವಚಿತ್ರಗಳನ್ನು ದೇವರ ಕೋಣೆಯಲ್ಲಿ ಹಾಕುವುದು ಶ್ರೇಷ್ಠವಲ್ಲ. ಕುಲದೇವರ ಫೋಟೋವನ್ನು ಮನೆಯಲ್ಲಿ ಹಾಕುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ನಾಲ್ಕನೆಯ ವಸ್ತು ಯಾವುದೆಂದರೆ ಸರ್ಪಗಂದ ಗಿಡ. ಮನೆಯ ಮುಂದೆ ಒಂದು ಆಯುರ್ವೇದಿಕ್ ಸರ್ಪಗಂಧ ಗಿಡ ಇರುವುದರಿಂದ ಇದರಲ್ಲಿರುವ ಗುಣಗಳು ಮನುಷ್ಯನ ರಕ್ತದೊತ್ತಡಕ್ಕೆ ಸಹಾಯಮಾಡುತ್ತದೆ. ಹಾಗೂ ಈ ಇಸುಬು ಕಜ್ಜಿ ಅಂತಹ ರೋಗಕ್ಕೆ ಇದು ತುಂಬಾ ಒಳ್ಳೆಯ ಗಿಡಮೂಲಿಕೆ ಆಗಿದೆ. ಇದನ್ನು ಮನೆಯ ಮುಂದೆ ಹಚ್ಚುವುದು ಒಳ್ಳೆಯದು. ಇದು ಆಯುರ್ವೇದಿಕ್ನ ರಾಜ ಎಂದು ಹೇಳುತ್ತಾರೆ. ಇದು ಸರ್ಪದ ಕಡಿತಕ್ಕೆ ಒಳ್ಳೆಯದು ಆದ್ದರಿಂದ ಇದನ್ನು ಸರ್ಪಗಂಧಿ ಎಂದು ಹೇಳುತ್ತಾರೆ. ಕೊನೆಯದಾಗಿ ಮನೆಯಲ್ಲಿ ಇರುವ ಮುಖ್ಯವಸ್ತು ಯಾವುದೆಂದರೆ ಗುಲಗಂಜಿಗಳು.

ಗುಲಗಂಜಿ ಗಳು ಅದೃಷ್ಟವನ್ನು ನೀಡುವಂತಹ ವಸ್ತುಗಳು ಇವುಗಳು ಕೂಡ ಮನೆಯಲ್ಲಿದ್ದರೆ ಮಹಾಲಕ್ಷ್ಮಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಗುಲಗಂಜಿಗಳು ಎಲ್ಲರ ಹತ್ತಿರ ಇರುವುದಿಲ್ಲ ಅಂದರೆ ದುರಾದೃಷ್ಟರ ಹತ್ತಿರ ಇವುಗಳು ಇರುವುದಿಲ್ಲ. ಇನ್ನೂ ಗುಲಗಂಜಿ ಗಳನ್ನು ಉಪಯೋಗಿಸಿ ಈ ಒಂದು ತಂತ್ರವನ್ನು ನೀವು ಮನೆಯಲ್ಲಿ ಮಾಡಿದರೆ ಹಾಗೂ ವ್ಯಾಪಾರ ಸ್ಥಳದಲ್ಲಿ ಮಾಡಿದರೆ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಇದಕ್ಕೆ ಒಂದು ಕೆಂಪುಬಟ್ಟೆ ಗುಲಗಂಜಿ ಅಡಿಕೆ ಗೋಮತಿ ಚಕ್ರ ಹಾಗೂ ಲಕ್ಷ್ಮಿ ಕವಡೆಗಳು ಬೇಕು. ಮೊದಲು ಎಲ್ಲವನ್ನೂ ಅರಿಶಿನ ನೀರಿನಿಂದ ತೊಳೆಯಬೇಕು ನಂತರ ನೀರನ್ನು ಹಾಕಿ ತೊಳೆದು ಕೆಂಪು ಬಟ್ಟೆಯಲ್ಲಿ ಹಾಕಿ ಕಟ್ಟಬೇಕು ಇದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟುಕೊಂಡರೆ ನಿಮ್ಮ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಸ್ನೇಹಿತರೆ ಹಾಗಾದರೆ ಒಂದು ಕುತೂಹಲಕರ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟ ಆಗಿದ್ದರೆ ದಯವಿಟ್ಟು ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.