ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ ಈ ರೀತಿ ಕೆಲಸಗಳನ್ನು ಮಾಡಬೇಡಿ … ಅಪ್ಪಿ ತಪ್ಪಿ ಮಾಡಿದ್ರೆ ಲಕ್ಷ್ಮಿ ದೇವಿಯ ಕಂಗೆಣ್ಣಿಗೆ ಗುರಿಯಾಗುತ್ತೀರಾ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಹಾಗೂ ಅಡುಗೆಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಈ ರೀತಿಯಾಗಿ ನೀವು ಮಾಡಿದರೆ ಲಕ್ಷ್ಮೀದೇವಿಯ ಅವಕೃಪೆಗೆ ನೀವು ಕಾರಣರಾಗುತ್ತೀರಿ.ಹಾಯ್ ಸ್ನೇಹಿತರೆ ಮನೆ ಎಂದರೆ ನಾವು ವಾಸಿಸುವ ಸ್ಥಳ ಇದು ನಮಗೆ ದೇವಸ್ಥಾನದಂತೆ ಆಗಿದೆ ದೇವಸ್ಥಾನ ಹೇಗೆ ದೇವರಿಗೆ, ಅದೇ ರೀತಿಯಾಗಿ ಮನುಷ್ಯರಿಗೆ ಮನೆಯೊಂದು ನಿರ್ಮಾಣವಾಗಿದೆ. ನಾವು ವಾಸಿಸುವ ಸ್ಥಳ ಚೌಕಟ್ಟು ಹಾಗೂ ನಾವು ಹೇಗೆ ಇರಬೇಕು ಎಂಬುದು ನಮ್ಮ ಹಣೆಯಲ್ಲಿ ಮೊದಲೇ ದೇವರಿಂದ ಬರೆಯಲ್ಪಡುತ್ತದೆ. ನಾವು ವಾಸಿಸುವ ಸ್ಥಳವನ್ನು ನಾವು ಎಷ್ಟು ಸ್ವಚ್ಛವಾಗಿ ಇಡುತ್ತೇವೆ ಹಾಗೂ ಶುದ್ಧವಾಗಿ ಇಡುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ಹಾಗೂ ಜೀವನ ನಡೆಯುತ್ತದೆ.

ನಾವು ಯಾವುದೇ ಕೆಲಸವನ್ನು ಮಾಡಿದರೂ ಪೂರ್ತಿಯಾಗಿ ಸ್ವಚ್ಛತೆಯಿಂದ ಸಂಪೂರ್ಣವಾಗಿ ಮುಗಿಸಬೇಕು. ಎಲ್ಲಾ ಕೆಲಸವನ್ನು ಅರ್ಧರ್ಧ ಮಾಡುವುದರಲ್ಲಿ ಯಾವುದೇ ಉಪಯೋಗವಿಲ್ಲ ಒಂದು ಕೆಲಸವನ್ನು ಹಿಡಿದ ಮೇಲೆ ಸಂಪೂರ್ಣವಾಗಿ ಮುಗಿಯಬೇಕು ನಂತರ ಬೇರೆಯ ಕೆಲಸವನ್ನು ಮಾಡಬೇಕು. ಇದು ನಾವು ನಮ್ಮ ಕೆಲಸಕ್ಕೆ ಕೊಡುವ ಗೌರವವಾಗಿದೆ. ನೀವು ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಭಕ್ತಿ ಇರಬೇಕು ಸುಖಾಸುಮ್ಮನೆ ಕೆಲಸ ಮುಗಿಯಬೇಕು ಎಂದು ಮಾಡಿದರೆ ಯಾವ ಪ್ರಯೋಜನವೂ ಇಲ್ಲ ಮನಸ್ಸಿಲ್ಲದೆ ಯಾವ ಕೆಲಸವನ್ನು ಕೂಡ ಮಾಡಬಾರದು.

ಈ ರೀತಿಯಾಗಿ ಮಾಡಿದ ಕೆಲಸ ಎಂದಿಗೂ ಹಾಗೆ ಲಾಭವನ್ನು ನೀಡುವುದಿಲ್ಲ. ಹಾಗಾದರೆ ನೀವು ವಾಸಿಸುವ ಮನೆ ಹಾಗೂ ಅಡುಗೆ ಮಾಡುವ ಅಡುಗೆ ಮನೆಯನ್ನು ಯಾವ ರೀತಿಯಾಗಿ ಇಟ್ಟರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂದು ಈ ಮಾಹಿತಿಯಲ್ಲಿ ತಿಳಿಯೋಣ. ಈಗ ನಾನು ಹೇಳುವ ಈ ತಪ್ಪುಗಳನ್ನು ನೀವು ಮಾಡಿದರೆ ಮನೆಯಲ್ಲಿ ಧನಲಾಭ ಆಗುವುದಿಲ್ಲ ಹಾಗೂ ಯಶಸ್ಸು ನಿಮ್ಮ ಜೀವನದಲ್ಲಿ ಬರುವುದಿಲ್ಲ ಹಾಗಾದರೆ ಆ ತಪ್ಪುಗಳನ್ನು ನೀವು ಮಾಡಬೇಡಿ ಅವು ಯಾವುವು ಎಂದು ಒಂದೊಂದಾಗಿ ನೋಡೋಣ. ಸ್ನೇಹಿತರೆ ಮೊದಲು ಅಡುಗೆಮನೆಯಲ್ಲಿ ನಾವು ಊಟ ಮಾಡಿದಮೇಲೆ ಪಾತ್ರೆಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹಾಗೂ ತೊಳೆಯದೆ ಮಲಗುವುದು ನಿಮಗೆ ಒಳ್ಳೆಯದಲ್ಲ.

ಊಟ ಮಾಡಿದ ನಂತರ ಎಲ್ಲಾ ಪಾತ್ರೆಗಳನ್ನು ತೊಳೆದು ಅಡುಗೆ ಮನೆಯಿಂದ ಹೊರಗೆ ಬರಬೇಕು. ಪಾತ್ರೆಗಳನ್ನು ಹಾಗೆ ಒಂದು ಬುಟ್ಟಿಯಲ್ಲಿಟ್ಟು ಕೈತೊಳೆದು ಬರುವುದು ಉತ್ತಮವಲ್ಲ ಅವತ್ತಿನ ದಿನ ಊಟ ಮಾಡಿದ ಪಾತ್ರೆಗಳನ್ನು ಆಗಿನ ಸಮಯದಲ್ಲಿ ತೊಳೆಯಬೇಕು. ಇದರಿಂದ ಲಕ್ಷ್ಮೀದೇವಿಗೆ ಹಾಗೂ ಅನ್ನಪೂರ್ಣೆಗೆ ನಾವು ಗೌರವ ಕೊಟ್ಟಂತೆ ಆಗುತ್ತದೆ. ಎರಡನೆಯದಾಗಿ ಆಹಾರ ಉಳಿದ ಪಾತ್ರಗಳನ್ನು ಹಾಗೆ ಮುಚ್ಚಿಟ್ಟು ಬರುವುದು ಒಳ್ಳೆಯದಲ್ಲ ಅವುಗಳನ್ನು ಚೆನ್ನಾಗಿದ್ದರೆ ಬೇರೆ ಪಾತ್ರೆಯಲ್ಲಿ ಹಾಕಿ ಎಂದರೆ ಶುದ್ಧ ಪಾತ್ರೆಗಳಲ್ಲಿ ಹಾಕಿ ಇಡಬೇಕು ಚೆನ್ನಾಗಿದ್ದರೆ ಅದನ್ನು ಮರುದಿನ ಕೂಡ ಉಪಯೋಗಿಸಬಹುದು. ಆದರೆ ಮಾಡಿದ ಪಾತ್ರೆಯಲ್ಲಿ ಹಾಗೆ ಬಿಟ್ಟು ಮರುದಿನ ಅದನ್ನು ಉಪಯೋಗಿಸುವುದು ಅಥವಾ ಚೆಲ್ಲುವುದು ಮಾಡಬಾರದು.

ಹಾಗೆ ಇನ್ನು ಒಂದು ತಪ್ಪು ಏನೆಂದರೆ ಅನಾವಶ್ಯಕವಾಗಿ ಹೆಚ್ಚಿನ ಆಹಾರವನ್ನು ಮಾಡುವುದು ಮತ್ತು ಅದನ್ನು ಚೆಲ್ಲುವುದು. ಇದು ಒಂದು ದೊಡ್ಡ ತಪ್ಪು. ಪ್ರತಿನಿತ್ಯ ನಾವು ಆಹಾರವನ್ನು ಚೆಲ್ಲುವುದು ಕೆಡಿಸುವುದು ಮಾಡುವುದರಿಂದ ಲಕ್ಷ್ಮೀದೇವಿ ನಮ್ಮ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ. ಹಾಗೂ ಮುಂದಿನ ದಿನಗಳಲ್ಲಿ ನಮಗೆ ಆಹಾರದ ಹಾಗೂ ದಾನ್ಯಗಳ ತೊಂದರೆ ಎದುರಾಗುತ್ತದೆ. ಸ್ನೇಹಿತರೆ ಇನ್ನು ಮನೆಯಲ್ಲಿ ಅದರಲ್ಲೂ ಅಡುಗೆ ಮನೆಯ ಮುಂದೆ ಚಪ್ಪಲಿ ಹಾಕಿಕೊಂಡು ನಡೆಯಬಾರದು ಹಾಗೂ ಅಡುಗೆಮನೆ ಹೊರಗಡೆ ಚಪ್ಪಲಿಯನ್ನು ಬಿಡುವುದು ಈ ರೀತಿ ಹಾಗೆ ಮಾಡಬಾರದು ಇದು ಕೂಡ ಅನ್ನಪೂರ್ಣೆಗೆ ಅವಮಾನಿಸಿದಂತೆ ಆಗುತ್ತದೆ.

ಇನ್ನು ಉತ್ತರ ದಿಕ್ಕು ಮನೆಯಲ್ಲಿರುವ ಶ್ರೇಷ್ಠವಾದ ಹಾಗೂ ಸಂಪತ್ತಿಗೆ ಮೀಸಲಾದ ಸ್ಥಳವಾಗಿದೆ ಉತ್ತರ ದಿಕ್ಕನ್ನು ಕುಬೇರ ದಿಕ್ಕು ಎಂದು ಸಹ ಹೇಳುತ್ತಾರೆ ಈ ದಿಕ್ಕಿನಲ್ಲಿ ನಾವು ಹೆಚ್ಚಿನ ಕಸವನ್ನು ಚೆಲ್ಲುವುದು ಹಾಗೂ ಭಾರವಾದ ವಸ್ತುಗಳನ್ನು ಇಡುವುದನ್ನು ಮಾಡಬಾರದು. ಹಾಗೆ ಸೂರ್ಯಾಸ್ತದ ನಂತರ ಹಾಗೂ ಸೂರ್ಯೋದಯದ ನಂತರ ಕಸವನ್ನು ಗುಡಿಸಬೇಕು ಇದರ ಮಧ್ಯೆ ನಾವು ಕಸವನ್ನು ಗುಡಿಸಬಾರದು ಇದು ಕೂಡ ಲಕ್ಷ್ಮಿದೇವಿಗೆ ಅವಮಾನಿಸಿದಂತೆ ಆಗುತ್ತದೆ. ಇನ್ನೂ ಮುರಿದ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಟ್ಟುಕೊಳ್ಳಬಾರದು ಹಾಗೂ ಇಂತಹ ವಸ್ತುಗಳನ್ನು ಬಳಸಬಾರದು ಇದು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.

ಹಾಗೆ ಖಾಲಿ ಇರುವ ಪಾತ್ರೆಗಳನ್ನು ಒಲೆಯಮೇಲೆ ಇಡುವುದು ಒಳ್ಳೆಯದಲ್ಲ. ಹೆಣ್ಣು ಮಕ್ಕಳು ಸ್ನಾನ ಮಾಡದೆ ಅಡುಗೆ ಮನೆಗೆ ಹೋಗಬಾರದು. ಅಡುಗೆ ಮಾಡುವ ಮುಂಚೆ ಸ್ನಾನ ಮಾಡುವುದು ಒಳ್ಳೆಯ ಪದ್ಧತಿ. ಸ್ನೇಹಿತರೆ ನಾವು ಮಾಡುವ ಚಿಕ್ಕಪುಟ್ಟ ಕೆಲಸಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹಾಗಾದರೆ ಇಂತಹ ವಿಷಯಗಳನ್ನು ನೀವು ತಿಳಿದುಕೊಂಡ ಮೇಲೆ ತಪ್ಪು ಮಾಡದಂತೆ ನೋಡಿಕೊಳ್ಳಬೇಕು ಹಾಗೆ ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ. ಮಾಹಿತಿ ಎಲ್ಲರಿಗೂ ತುಂಬಾ ಮುಖ್ಯವಾಗಿದೆ ಹಾಗೂ ಉಪಯೋಗವಾಗಿದೆ ಆದ್ದರಿಂದ ಇದನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.