ನಿಮ್ಮ ಮನೆಯಲ್ಲಿ ದುಡ್ಡಿನ ಸಮಸ್ಯೆ ಹೆಚ್ಚಾಗಿದ್ಯಾ ಎಷ್ಟು ದುಡಿದರೂ ಕೂಡ ನಿಮ್ಮ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ವಾ ಹಾಗಾದ್ರೆ 33 ನಾಣ್ಯಗಳಿಂದ ಹೀಗೆ ಮಾಡಿ ಸಾಕು ಅಂದಿನಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರೇಕ್ಷಕರ ನಿಮ್ಮ ಮನೆಯಲ್ಲಿ ಲಕ್ಷ್ಮೀ ದೇವಿಯ ಅಸ್ಥಿರ ನಿವಾಸ ಆಗಬೇಕೆಂದರೆ ಮತ್ತು ಮನೆಯಲ್ಲಿ ಪಾಸಿಟಿವ್ ಎನರ್ಜಿ ಅಂದರೆ ಸಕಾರಾತ್ಮಕತೆ ಪಸರಿಸ ಬೇಕಾದರೆ, ಈ ಒಂದು ಪರಿಹಾರವನ್ನು ನೀವು ಮಾಡುತ್ತಾ ಬನ್ನಿ ನಾವು ಈ ದಿನ ತಿಳಿಸುವಂತಹ ಈ ಎರಡು ಪರಿಹಾರಗಳಲ್ಲಿ ನಿಮಗೆ ಅನುಕೂಲವಾಗುವಂತಹ ಒಂದು ಪರಿಹಾರವನ್ನು ನೀವು ಶುಕ್ರವಾರದ ದಿವಸದಂದು ಮಾಡಬೇಕಾಗಿರುತ್ತದೆ,

ಈ ರೀತಿಯ ಪರಿಹಾರವನ್ನು ನೀವು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀಯ ಸ್ಥಿರ ನಿವಾಸ ಆಗುವುದರ ಜೊತೆಗೆ, ಲಕ್ಷ್ಮಿದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಎಂದಿಗೂ ಕೂಡ ಇರುತ್ತದೆ ಎಂದು ಪರಿಹಾರ ಶಾಸ್ತ್ರದಲ್ಲಿ ಈ ಒಂದು ಪರಿಹಾರವನ್ನು ಉಲ್ಲೇಖಿಸಲಾಗಿದೆ.ಈ ಪರಿಹಾರವನ್ನು ಮಾಡುವುದಕ್ಕಾಗಿ ಬೇಕಾಗಿರುವುದು ಗಾಜಿನ ಬಟ್ಟಲು ಈ ಗಾಜಿನ ಭಟ್ಟರಿಗೆ ಒಂದು ಹಿಡಿ ಕಲ್ಲುಪ್ಪನ್ನು ಹಾಕಿ ನಂತರ ಇದಕ್ಕೆ ನೀವು ಮೂವತ್ತ ಮೂರು ರೂಪಾಯಿಗಳನ್ನ ಇಡಬೇಕು

ಅಂದರೆ ಮೂರು ಹತ್ತು ರೂಪಾಯಿಯ ನಾಣ್ಯಗಳು ಮತ್ತು ಮೂರು ಒಂದೊಂದು ರೂಪಾಯಿಯ ನಾಣ್ಯಗಳನ್ನು ಈ ಉಪ್ಪಿನ ಮೇಲೆ ಇರಿಸಿ, ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇರಿಸಿ, ಇದನ್ನು ಮುಂದಿನ ಶುಕ್ರವಾರದವರೆಗೂ ಈ ಒಂದು ಗಾಜಿನ ಬಟ್ಟಲಿನಲ್ಲಿ ಆ ಹಣ ಇರಬೇಕು.ನಂತರ ಮುಂದಿನ ಶುಕ್ರವಾರದ ದಿವಸದಂದು ಈ ಉಪ್ಪನ್ನು ಯಾರು ಓಡಾಡದೆ ಇರುವ ನಿರ್ಜನ ಪ್ರದೇಶದಲ್ಲಿ ಹಾಕಿ ಆ ಹಣವನ್ನು ನಿಮ್ಮ ಕಪಾಟಿನಲ್ಲಿ ಇಟ್ಟುಕೊಳ್ಳಬೇಕು ಈ ಹಣವನ್ನು ಯಾವುದಕ್ಕೆ ಖರ್ಚು ಮಾಡದಿರಿ

ನಂತರ ಅದೇ ಶುಕ್ರವಾರದ ದಿವಸದಂದು ಮತ್ತೊಮ್ಮೆ ಈ ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ಹಾಕಿ ಇದರ ಮೇಲೆ ಮತ್ತೊಮ್ಮೆ ಮೂವತ್ತು ಮೂರು ರುಪಾಯಿಗಳನ್ನು ಇರಿಸಿ ಇಡಬೇಕು.ಹೀಗೆ ಆರು ಶುಕ್ರವಾರದವರೆಗೂ ಮಾಡಿ ಆ ಹಣವನ್ನು ನೀವು ಯಾವುದಕ್ಕೆ ಖರ್ಚು ಮಾಡದೆ ಕಪ‍ಟಿನಲ್ಲಿಯೇ ಇರಿಸಿ. ಈ ಒಂದು ಪರಿಹಾರ ನಿಮ್ಮ ಹಣಕಾಸಿನ ಸಮಸ್ಯೆಯನ್ನು ನಿವಾರಣೆ ಮಾಡುವುದರಲ್ಲಿ ಸಹಕರಿಸುತ್ತದೆ.

ಎರಡನೇ ಪರಿಹಾರ ಇದನ್ನು ಮಾಡಬೇಕಾದರೆ ನಿಮಗೆ ಒಂದು ಬಿಳಿ ಬಣ್ಣದ ಚಿಕ್ಕ ಬ್ಯಾಗ್ ಬೇಕಾಗಿರುತ್ತದೆ, ಇದನ್ನು ಅರಿಶಿನದ ನೀರಿನಲ್ಲಿ ನೆನೆಸಿ ಒಣಗಿಸಬೇಕು. ನಂತರ ಇದರೊಳಗೆ ನಿಂಬೆ ಹಣ್ಣು ಮತ್ತು ಮೂರು ಮೆಣಸಿನ ಕಾಯಿಯನ್ನು ಇಟ್ಟು, ದೇವರ ಮುಂದೆ ಇಟ್ಟು ಅರಿಶಿಣ ಕುಂಕುಮ ಗಂಧವನ್ನು ಹಚ್ಚಿ ಪೂಜೆಯನ್ನು ಮಾಡಬೇಕು ದೀಪಾರಾಧನೆಯ ನಂತರ ಇದನ್ನು ನಿಮ್ಮ ಮನೆಯ ಸಿಂಹ ದ್ವಾರದ ಮುಂದೆ ಕಟ್ಟಬೇಕು ಈ ರೀತಿ ನೀವು ಸೂರ್ಯೋದಯಕ್ಕಿಂತ ಮುನ್ನ ಈ ಪರಿಹಾರವನ್ನು ಮಾಡಬೇಕಾಗುತ್ತದೆ, ಈ ಒಂದು ಬಟ್ಟೆಯನ್ನು ಮನೆಯ ಮುಂದಿನ ಸಿಂಹ ದ್ವಾರದಲ್ಲಿ ಕಟ್ಟಬೇಕು.

ನಂತರ ಈ ಒಂದು ಪರಿಹಾರವನ್ನು ಮಾಡಿ ಒಂದು ವಾರ ಬಿಟ್ಟು ಅಂದರೆ ಗುರುವಾರದ ದಿವಸದಂದು ಮತ್ತೊಮ್ಮೆ ಹೀಗೆ ಸೂರ್ಯಾಸ್ತದ ಬಳಿಕ ಮನೆಯ ಮುಂದೆ ಕಟ್ಟಿರುವಂತಹ ಈ ನಿಂಬೆ ಹಣ್ಣನ್ನು ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು ಮತ್ತೆ ಶುಕ್ರವಾರದ ದಿವಸದಂದು ಇದೆ ರೀತಿಯ ಪರಿಹಾರವನ್ನು ಮಾಡಬೇಕು. ನೀವು ಇಪ್ಪತ್ತ್ಮೂರು ಶುಕ್ರವಾರದವರೆಗೂ ಈ ಪರಿಹಾರವನ್ನು ಮಾಡಬೇಕಾಗುತ್ತದೆ.ಈ ಎರಡು ಪರಿಹಾರಗಳಲ್ಲಿ ನಿಮಗೆ ಸುಲಭ ಪರಿಹಾರ ಯಾವುದು ಅನ್ನಿಸುತ್ತದೆಯೋ ಅದನ್ನು ಮಾಡುತ್ತಾ ಬನ್ನಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ದಿವ್ಯ ಕೃಪಾಕಟಾಕ್ಷ ದೊರೆಯುತ್ತದೆ ಮತ್ತು ನೀವು ಅಂದುಕೊಂಡ ಕಾರ್ಯ ಸಾಧನೆಯೂ ನೆರವೇರುತ್ತದೆ ಮನೆಯಲ್ಲಿ ಸಕಾರಾತ್ಮಕತೆ ಪಸರಿಸುತ್ತದೆ.

Leave a Reply

Your email address will not be published.