ನಿಮ್ಮ ಮನೆಯ ಮುಂದೆ ಈ ಗಿಡಗಳು ಇದ್ದರೆ ತಾಯಿ ಮಹಾಲಕ್ಷ್ಮಿಯ ಆಗಮನ ಯಾವಾಗ್ಲೂ ಆಗಲ್ಲ ಯಾವ ಮರ ಇದ್ದರೆ ಒಳ್ಳೆಯದು ಹಾಗಾದ್ರೆ ಯಾವುದೇ ಕಾರಣಕ್ಕೂ ಈ ಗಿಡಗಳನ್ನು ನಿಮ್ಮ ಮನೆ ಮುಂದೆ ಬೆಳೆಸಿಕೊಳ್ಳಬೇಡಿ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಾಯ್ ಸ್ನೇಹಿತರೆ ಮನೆಯ ಮುಂದೆ ಗಿಡಗಳು ಇದ್ದರೆ ಹಾಗೂ ಮರಗಳು ಇದ್ದರೆ ತುಂಬಾ ಚೆನ್ನಾಗಿರುತ್ತದೆ ತಂಪಾದ ಗಾಳಿ ಮನೆಯೊಳಗೆ ಸದಾ ಬರುತ್ತದೆ. ಆದರೆ ಶಾಸ್ತ್ರದ ಪ್ರಕಾರ ನಮ್ಮ ಮನೆಯ ಮುಂದೆ ಯಾವ ಮರ ಇರಬೇಕು ಮತ್ತು ಯಾವ ಮರ-ಗಿಡಗಳು ಇರಬಾರದು ಎಂಬುದು ಉಲ್ಲೇಖ ಆಗಿದೆ. ಎಲ್ಲಾ ಮರ-ಗಿಡಗಳು ಮನೆಯ ಮುಂದೆ ಇರುವುದು ಶುಭಕರವಲ್ಲ. ಕೆಲವೊಂದು ಮರಗಿಡಗಳು ನಮಗೆ ಅದೃಷ್ಟ ಹಾಗೂ ಆರೋಗ್ಯವನ್ನು ತಂದುಕೊಟ್ಟರೆ ಇನ್ನು ಕೆಲವೊಂದು ಮರಗಿಡಗಳು ನಮಗೆ ಅನಾರೋಗ್ಯ ಮತ್ತು ದುರಾದೃಷ್ಟವನ್ನು ತರುವಂತೆ ಇರುತ್ತದೆ.

ಹಾಗಾದರೆ ಈ ಮಾಹಿತಿಯಲ್ಲಿ ನಾನು ನಿಮಗೆ ಯಾವ ಮರ ಒಳ್ಳೆಯದು ಎಂದು ಹಾಗೂ ಯಾವ ಮರ-ಗಿಡಗಳು ಕೆಟ್ಟದ್ದು ಎಂದು ಹೇಳುತ್ತೇನೆ. ಪ್ರಕೃತಿಯಲ್ಲಿ ವಿಧವಿಧವಾದ ಮರಗಿಡಗಳಿವೆ. ಎಲ್ಲವೂ ಗಾಳಿಯನ್ನು ಬೀಸುತ್ತವೆ ಹಾಗೆ ಹಣ್ಣು-ಕಾಯಿಗಳನ್ನು ನೀಡುತ್ತವೆ ಹಾಗಂತ ಮನೆಯ ಮುಂದೆ ಎಲ್ಲವನ್ನೂ ಬೆಳೆಸುವುದು ನಮಗೆಲ್ಲ ಶ್ರೇಯಸ್ಸಲ್ಲ. ಹೆಚ್ಚಾಗಿ ನಾವು ದೇವರ ಪೂಜೆಯನ್ನು ಮಾಡಲು ಹೂಗಳು ಬೇಕು ಎಂದು ಗಿಡವನ್ನು ಬೆಳೆಸುತ್ತದೆ ಆದಷ್ಟು ಹೂಗಳನ್ನು ಬಿಡುವ ಗಿಡಗಳು ಒಳ್ಳೆಯದು ಇವುಗಳನ್ನು ಬಳಸುವುದು ತಪ್ಪಲ್ಲ. ಹಾಗಾದರೆ ಯಾವ ಗಿಡಮರಗಳು ಒಳ್ಳೆಯದಲ್ಲ ಎಂದು ಕೂಡ ಹೇಳುತ್ತೇನೆ.

ಮೊದಲನೆಯದಾಗಿ ಮನೆ ಮುಂದೆ ತೆಂಗಿನ ಮರಗಳು ಇರುವುದು ತುಂಬಾ ಒಳ್ಳೆಯದು ಇದರ ಎಲೆಗಳಿಂದ ಮನೆಗೆ ಗಾಳಿ ಹಾಗೂ ತಂಪು ಇರುತ್ತದೆ. ಆದರೆ ಕಾಯಿಗಳು ಬೀಳುತ್ತಿರುತ್ತವೆ ಎಚ್ಚರಿಕೆಯಿಂದ ಇರಬೇಕು. ಇನ್ನು ಅಶೋಕಮರ ಮನೆಯ ಮುಂದೆ ಇರುವುದು ಒಳ್ಳೆಯದು ಅದರಲ್ಲೂ ಉತ್ತರದಿಕ್ಕಿನಲ್ಲಿ ಮರ ಇರಬೇಕು ಬೇರೆ ಮರಗಳಿಂದ ಬರುವ ನಕಾರಾತ್ಮಕ ಶಕ್ತಿಗಳನ್ನು ಈ ಮರವು ದೂರ ಮಾಡುತ್ತದೆ ಎನ್ನುವ ನಂಬಿಕೆಯಿದೆ. ಇನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಬಾಳೆಮರ ಇರುವುದು ತುಂಬಾ ಒಳ್ಳೆಯದು ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಓದುವ ವಿದ್ಯಾರ್ಥಿಗಳು ಈ ಮರದ ಕೆಳಗೆ ಓದಿದರೆ ಜ್ಞಾನ ಕೂಡ ಹೆಚ್ಚಾಗುತ್ತದೆ. ಆದರೆ ಮನೆಯ ಮುಂದೆ ಎಕ್ಕೆಗಿಡ ಇರಬಾರದು

ಇದು ತಾನಾಗಿ ಬೆಳೆದರೆ ನೀವು ಅದನ್ನು ಕಡಿಯಬೇಡಿ ಬದಲಾಗಿ ಅದನ್ನು ಅರಿಶಿಣ ಹಚ್ಚಿದ ಅಕ್ಕಿಯನ್ನು ಹಾಕಿ ನೀರನ್ನು ಹಾಕಿ ಪೂಜಿಸಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಆದರೆ ನೀವಾಗಿಯೇ ಈ ಗಿಡವನ್ನು ಮನೆಯ ಮುಂದೆ ಅಂಟಿಸಬಾರದು. ಇನ್ನು ಮನೆಯ ಮುಂದೆ ಪಪ್ಪಾಯಿ ಗಿಡ ಇರುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ ಆದರೆ ಇದು ತಾನಾಗಿಯೆ ಹುಟ್ಟಿ ಹಣ್ಣನ್ನು ಬಿಡುವಾಗ ನೀವು ಇದನ್ನು ಕತ್ತರಿಸಬಾರದು. ಇದನ್ನು ಚಿಕ್ಕದಿದ್ದಾಗ ಕತ್ತರಿಸಬೇಕು ಇಲ್ಲದಿದ್ದರೆ ಹಾಳಾದ ಮೇಲೆ ಕತ್ತರಿಸಬೇಕು. ಆದರೆ ಇದು ನಿಮ್ಮ ಮನೆಗೆ ಕೆಟ್ಟ ಪ್ರಭಾವ ಬೀರುತ್ತದೆ. ಇನ್ನು ವಿಶೇಷವಾಗಿ ಆಲದ ಮರವೋ ನಿಮ್ಮ ಮನೆ ಮುಂದೆ ಇರಬಾರದು ಇದ್ದರೂ ನಿಮ್ಮ ಮನೆಯ ಮೇಲೆ ಇದರ ನೆರಳು ಬೀಳಬಾರದು.

ನಿಮ್ಮ ಮನೆಯಿಂದ ಪೂರ್ವದಿಕ್ಕಿನಲ್ಲಿ ಈ ಮರ ಇದ್ದರೆ ನಿಮಗೆ ಒಳ್ಳೆಯದು. ಇನ್ನು ಮನೆಯ ಮುಂದೆ ದಾಳಿಂಬೆ ಗಿಡ ಇರುವುದು ಒಳ್ಳೆಯದು ಆದರೆ ಇದು ಆಗ್ನೇಯ ದಿಕ್ಕಿನಲ್ಲಿ ಇರುವುದು ಒಳ್ಳೆಯದಲ್ಲ ಫಲಕೊಡುವ ಈ ದಾಳಿಂಬೆ ಗಿಡ ಇದ್ದರೆ ಮನೆಯಲ್ಲಿ ಒಳ್ಳೆಯದಾಗುತ್ತದೆ. ಇನ್ನು ಮನೆಯ ಮುಂದೆ ಅರಿಶಿಣದ ಗಿಡಗಳು ಇರುವುದು ಶ್ರೇಷ್ಠವಲ್ಲ ಅದಾಗಿಯೇ ಬೆಳೆದರು ನಿಮಗೆ ಕೆಟ್ಟ ಪ್ರಭಾವವನ್ನು ತರುತ್ತವೆ. ಹಾಗೆಯೇ ಮನೆಯ ಮುಂದೆ ಸೀತಾಫಲ ಗಿಡ ಇರುವುದು ಕೂಡ ಒಳ್ಳೆಯದಲ್ಲ ಇದರಿಂದ ಮನೆಯಲ್ಲಿ ಇರುವುದಿಲ್ಲ. ಆದರೆ ಈ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯ ವಾಗಿವೆ. ಆದರೆ ಈ ಗಿಡವನ್ನು ನೀವು ಹಣ್ಣುಗಳಿದ್ದಾಗ ಕತ್ತರಿಸಬಾರದು ಅದೇ ರೀತಿಯಾಗಿ ಮನೆಯಮುಂದೆ ಮಾವಿನ ಮರ ಬೆಳೆದರೆ ಇದನ್ನು ಕೂಡ ಹಣವಿದ್ದಾಗ ಕತ್ತರಿಸಬೇಡಿ

ಆದರೆ ಮನೆಯ ಮುಂದೆ ಮಾವಿನಗಿಡ ಇರುವುದು ಒಳ್ಳೆಯದಲ್ಲ ತೋಟದಲ್ಲಿ ಮಾವಿನ ಗಿಡ ಹಾಗೂ ಸೀತಾಫಲದ ಗಿಡಗಳನ್ನು ಬೆಳೆಯಬೇಕು. ಇನ್ನು ಮನೆಯ ಮುಂದೆ ಬೇವಿನ ಮರ ಇರುವುದು ತುಂಬಾ ಶುಭಫಲದಾಯಕವನ್ನು ನಿಮಗೆ ನೀಡುತ್ತದೆ. ಇದರಲ್ಲಿರುವ ಒಳ್ಳೆಯ ಅಂಶಗಳು ಹಾಗೂ ಗುಣಗಳು ನಿಮಗೆ ಒಳ್ಳೆಯ ಆರೋಗ್ಯವನ್ನು ತರುತ್ತದೆ ಬೇವಿನಮರದ ಗಾಳಿಯು ತುಂಬಾ ತಂಪಾಗಿರುತ್ತದೆ ಹಾಗಾಗಿ ಉಸಿರಾಟವು ತುಂಬಾ ಚೆನ್ನಾಗಿರುತ್ತದೆ. ಮನೆಯ ಮುಂದೆ ಮುಳ್ಳು ಇರುವ ಯಾವುದೇ ಗಿಡಗಳನ್ನು ಬೆಳೆಸಬಾರದು ಉದಾಹರಣೆಗೆ ಗುಲಾಬಿ ಗಿಡ ಇದರಲ್ಲಿ ಮುಳ್ಳು ಇರುತ್ತವೆ ಇನ್ನು ಹಲವಾರು ರೀತಿಯ ಮುಳ್ಳು ಬಿಡುವ ಗಿಡಗಳನ್ನು ಬೆಳೆಸಬಾರದು. ಮನೆಯ ಮುಂದೆ ಹುಣಸೆ ಮರ ಇರಬಾರದು ಇರುವುದಿಲ್ಲ

ಬದಲಾಗಿ ನಕಾರಾತ್ಮಕ ಶಕ್ತಿಗಳನ್ನು ಹೆಚ್ಚಾಗುತ್ತದೆ ಇನ್ನು ಕೊನೆಯದಾಗಿ ಅರಳಿಮರ. ಅರಳಿ ಮರವು ಶುಭವಾದ ಮರ ಆದರೆ ಮನೆಯ ಮುಂದೆ ಇರುವುದು ಒಳಿತಲ್ಲ ಏಕೆಂದರೆ ಇದರ ಬೇರುಗಳು ತುಂಬಾ ಆಳವಾಗಿ ಇರುತ್ತವೆ ಇದರಿಂದ ನಿಮ್ಮ ಮನೆಯ ಗೋಡೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಸ್ನೇಹಿತರೆ ಹಾಗಾದರೆ ಮನೆಯ ಮುಂದೆ ಯಾವ ಗಿಡ ಇರುವುದು ಒಳ್ಳೆಯದು ಮತ್ತು ಯಾವ ಗಿಡ-ಮರಗಳು ಇರುವುದು ಕೆಟ್ಟದ್ದು ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.