ಕಣ್ಣಿನಲ್ಲಿ ಬಿದ್ದ ಕಲ್ಲನ್ನು ಇವರು ಗರಿಕೆ ಹುಲ್ಲನ್ನು ಉಪಯೋಗಿಸಿ ತೆಗೆಯುತ್ತಾರೆ ಎಂದರೆ ನೀವು ನಂಬುತ್ತೀರಾ.ಹಾಯ್ ಸ್ನೇಹಿತರೆ ಕಣ್ಣು ನಮಗೆ ತುಂಬಾ ಮುಖ್ಯವಾದ ಅಂಗವಾಗಿದೆ ಏನಿಲ್ಲದಿದ್ದರೂ ಇರಬಹುದು ಆದರೆ ಕಣ್ಣು ಇರಬೇಕು ಎಂದು ಹೇಳುತ್ತಾರೆ ದೇವರು ಮನುಷ್ಯನಿಗೆ ಎರಡು ಕಣ್ಣುಗಳನ್ನು ಕೊಟ್ಟಿದ್ದಾನೆ ಎರಡು ಕಣ್ಣುಗಳು ನಮಗೆ ತುಂಬಾ ಉಪಯೋಗ ಆಗಿವೆ. ಕಣ್ಣು ಇಲ್ಲದವರು ಪರಿಸ್ಥಿತಿ ಹೇಗೆ ಅಂತ ನಮಗೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಬರೀ ಹತ್ತು ನಿಮಿಷ ಕರೆಂಟ್ ಹೋದರೆ ನಾವು ವಿಲವಿಲ ಒದ್ದಾಡುತ್ತಿದೆ ಒಂದೇ ಕಡೆ ಕೊಡುತ್ತೇವೆ ಆದರೆ ಜೀವನವೇ ಕತ್ತಲಾದ ಕುರುಡರಿಗೆ ದೇವರು ಹೇಗೆ ಶಕ್ತಿ ಕೊಡುತ್ತಾನೆ ಎಂಬುದು ತಿಳಿದಿಲ್ಲ.
ನೀವು ಐದು ನಿಮಿಷ ಕಣ್ಣು ಇಲ್ಲದವರ ತರ ಕಣ್ಣುಮುಚ್ಚಿಕೊಂಡು ಓಡಾಡಲು ಅಥವಾ ಮನೆಯಲ್ಲಿ ಇರಲು ಪ್ರಯತ್ನಿಸಿ ಅಂದಾಗ ನಿಮಗೆ ಕಣ್ಣಿನ ಬೆಲೆ ನಿಜವಾಗಿಯೂ ತಿಳಿಯುತ್ತದೆ. ಇಂತಹ ಕಣ್ಣುಗಳನ್ನು ನೀವು ಜವಾಬ್ದಾರಿಯಿಂದ ಹಾಗೂ ಆರೋಗ್ಯದಿಂದ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಸ್ನೇಹಿತರೆ ಅದೇ ರೀತಿಯಾಗಿ ಕಣ್ಣಿಲ್ಲದವರಿಗೆ ನೇತ್ರದಾನ ಮಾಡಿ ನೀವು ಕೂಡ ನಿಮ್ಮ ಕಣ್ಣನ್ನು ಬೇರೆಯವರಿಗೆ ಕೊಟ್ಟರೆ ಅವರ ಜೀವನವನ್ನು ನೀವು ಬೆಳಗಿದಂತೆಯಾಗುತ್ತದೆ. ಮೊನ್ನೆಯಷ್ಟೇ ನಡೆದ ಘಟನೆಯಲ್ಲಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ನೇತ್ರದಾನವನ್ನು ಕೊಟ್ಟು ಇಬ್ಬರ ಕಣ್ಣಿಗೆ ಬೆಳಕಾಗಿದ್ದಾರೆ ಎಂದು ಹೇಳಿದ್ದಾರೆ ಅದೇ ರೀತಿಯಾಗಿ ನೀವು ಕೂಡ ನೇತ್ರದಾನ ಮಾಡುವುದರಿಂದ ನಿಮ್ಮಿಂದ ಒಬ್ಬರಿಗೆ ಸಹಾಯ ಆಗುತ್ತದೆ.
ಹಾಗಾದರೆ ಕಣ್ಣಿನಲ್ಲಿ ಏನಾದರೂ ಬಿದ್ದರೆ ನೀವು ಏನು ಮಾಡಬೇಕು ಎಂದು ತಿಳಿದುಕೊಳ್ಳಿ. ನೀವು ಎಲ್ಲಿಗಾದರೂ ಹೊರಟಾಗ ಅಥವಾ ಮನೆಯಲ್ಲಿರುವಾಗ ಗಾಳಿ-ಧೂಳು ಬಂದರೆ ಕಣ್ಣಿನಲ್ಲಿ ತಕ್ಷಣ ಕಸಕಡ್ಡಿ ಅಥವಾ ಕಲ್ಲುಗಳು ಬೀಳಬಹುದು. ಅಂತಹ ಸಂದರ್ಭದಲ್ಲಿ ನಿಮಗೆ ಕಣ್ಣು ತೆಗೆಯಲು ತುಂಬಾ ಕಷ್ಟ ಆಗುತ್ತದೆ. ಕೆಲವೊಬ್ಬರು ಬೇಗನೆ ಹೋಗಿ ಕಣ್ಣಿಗೆ ನೀರು ಹಾಕಿಕೊಂಡು ತೊಳೆಯುತ್ತಾರೆ ಅಂತವರಿಗೆ ಬೇಗ ದೂಳ ಕಸ ಹೋಗುತ್ತದೆ. ಆದರೆ ಕಣ್ಣಿನಲ್ಲಿರುವ ಕಲ್ಲು ಮಾತ್ರ ಕರಗುವುದಿಲ್ಲ ಅದು ನಿಮಗೆ ತೊಂದರೆ ಕೊಡುತ್ತದೆ ಆ ಕಲ್ಲು ಇದ್ದರೆ ನಿಮಗೆ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ನಾನು ಈಗ ನಿಮಗೆ ಹೇಳುವ ಮಾಹಿತಿ ಏನೆಂದರೆ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ಕಾಳಮ್ಮ ಎಂಬ ಮಹಿಳೆಯು ಗರಿಕೆ ಹುಲ್ಲನ್ನು ಉಪಯೋಗಿಸಿ ಕಣ್ಣಿನಲ್ಲಿ ಬಿದ್ದ ಕಲ್ಲನ್ನು ತೆಗೆಯುತ್ತಾರಂತೆ
ಆದರೆ ಇದನ್ನು ನೀವು ನಂಬುವುದು ಕಷ್ಟ ಆಗಬಹುದು ಆದರೆ ಸ್ನೇಹಿತರೆ ಇವುಗಳೆಲ್ಲ ಮೂಢನಂಬಿಕೆ ಅಲ್ಲ ಕೆಲವೊಬ್ಬರಿಗೆ ಅಂತಹ ಕೆಲಸಗಳು ಬರುತ್ತವೆ ದೇವರ ವರ ಅವರಿಗೆ ಇರಬಹುದು ಅಥವಾ ಅವರ ಕಲೆ ಇರಬಹುದು ಬೇರೆಯವರ ನೋವನ್ನು ಕಡಿಮೆ ಮಾಡುತ್ತದೆ. ಸ್ನೇಹಿತರೆ ಇದು ಸತ್ಯವಾದ ಸಂಗತಿ ಯಾರಿಗಾದರೂ ಕಣ್ಣಿನಲ್ಲಿ ಕಲ್ಲು ಬಿದ್ದರೆ ತುಂಬಾ ಉಪಯೋಗವಾಗುತ್ತದೆ ಈ ಮಾಹಿತಿಯನ್ನು ನೀವು ಎಲ್ಲರಿಗೂ ಶೇರ್ ಮಾಡಲೇಬೇಕು. ವೈದ್ಯರ ಪ್ರಕಾರ ಗರಿಕೆ ಹುಲ್ಲನ್ನು ಉಪಯೋಗಿಸುವುದು ತಪ್ಪು ಎಂದು ಹೇಳಿದ್ದಾರೆ ಆದರೆ ಮಹಿಳೆಯು ಕಪ್ಪು ಗುಡ್ಡೆಗೆ ತಾಕಿಸಿದೆ ಬರಿ ಬಿಳಿ ಗುಡ್ಡೆಯಲ್ಲಿ ಗರಿಕೆಯನ್ನು ಉಪಯೋಗಿಸಿ ಕಲ್ಲನ್ನು ತೆಗೆಯುತ್ತಾರಂತೆ.
ಕಣ್ಣಿನಲ್ಲಿರುವ ಕಪ್ಪು ಗುಡ್ಡೆ ತುಂಬಾ ಸೂಕ್ಷ್ಮವಾಗಿರುತ್ತದೆ ಹಾಗಾಗಿ ಇವರು ಯಾವ ನೋವಾಗದಂತೆ ಕಲ್ಲನ್ನು ತೆಗೆಯುತ್ತಾರೆ. ಕಲ್ಲನ್ನು ತೆಗೆದು ಮೇಲೆ ಅವರಿಗೆ ಬರುವ ತಲೆನೋವು ಹಾಗೂ ತಲೆಬಾರ ಕೂಡ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಸ್ನೇಹಿತರೇ ಇನ್ನೂ ಒಂದು ಮಾಹಿತಿ ಏನೆಂದರೆ ಹಾವೇರಿ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಅಜ್ಜಿಯೊಬ್ಬಳು ನಾಲಿಗೆಯಿಂದ ಕಣ್ಣಿನಲ್ಲಿ ಬಿದ್ದಿರುವ ಕಲ್ಲನ್ನು ತೆಗೆಯುತ್ತಾರೆ ಇವರು ಕೂಡ ಯಾರಿಗೂ ನೋವಾಗದಂತೆ ಕಲ್ಲನ್ನು ತೆಗೆದು ಕಳಿಸಿದ್ದಾರೆ. ಇವರಿಬ್ಬರ ಕಲೆಗೆ ನಾವು ಮೆಚ್ಚಲೇಬೇಕು ಹಣವನ್ನು ಹೆಚ್ಚಾಗಿ ಕೇಳುವುದಿಲ್ಲ ಬರೀ ನ್ನೂರು ರೂಪಾಯಿ ಇಂದ ಮಾತ್ರ ಕೆಲಸ ಮಾಡಿಕೊಡುತ್ತಾರೆ
ಆದರೆ ಆಸ್ಪತ್ರೆಗೆ ಹೋದರೆ ತುಂಬಾ ಖರ್ಚು ಮಾಡಿ ಕಣ್ಣು ನೋವು ಕಡಿಮೆ ಆಗಬೇಕು ವಾಪಸ್ ಮನೆಗೆ ಬರಬೇಕಾಗುತ್ತದೆ ಇಂತಹ ಉದಾಹರಣೆಗಳು ಕೂಡ ಇವೆ. ಸ್ನೇಹಿತರೆ ಕಣ್ಣು ಒಂದು ಮುಖ್ಯವಾದ ಅಂಗ ಆಗಿರುವುದರಿಂದ ನೀವು ಅದನ್ನು ತುಂಬಾ ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಹಾಗೆ ಕಣ್ಣಿನ ಆರೋಗ್ಯಕ್ಕೆ ಬೇಕಾದ ಎಲ್ಲಾ ಆಹಾರ ಪದಾರ್ಥಗಳನ್ನು ತಿನ್ನಬೇಕು. ಈ ಮಾಹಿತಿ ನಿಮಗೆ ತುಂಬಾ ಅನುಕೂಲಕರವಾಗಿದೆ ಎಂದು ನಾನು ನಂಬುತ್ತೇನೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ