ನಿಮ್ಮ ಮನೆಯಲ್ಲಿ ಮಲ್ಲಿಗೆ ಗಿಡ ಇದೆಯಾ .. ಅದರಲ್ಲಿ ಹೂವು ಸರಿಯಾಗಿ ಬರುತ್ತಿಲ್ವಾ ಹಾಗಾದ್ರೆ ಈ ಒಂದು ಉಪಾಯ ಮಾಡಿ ಸಾಕು ಒಂದೇ ವಾರದಲ್ಲಿ ಮಲ್ಲಿಗೆ ಗಿಡ ತುಂಬೆಲ್ಲ ಹೂವು ಬಿಡೋದಕ್ಕೆ ಶುರು ಆಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೆಲವರಿಗೆ ಮನೆಯಲ್ಲಿ ಹೂವಿನ ಗಿಡಗಳನ್ನು ಬೆಳೆಸಬೇಕು ಅಂತ ಬಹಳ ಆಸೆ ಇರುತ್ತದೆ .ಹೌದು ಮನೆಯ ಮುಂದೆ ಅಂಗಳ ಇದ್ದರೆ ಆ ಮನೆಯಲ್ಲಿ ಹೂವಿನ ಗಿಡಗಳನ್ನು ಬೆಳೆಸುವುದು ಒಂದು ಚೆಂದದ ನೋಟವಾಗಿರುತ್ತದೆ .ಈ ರೀತಿ ಹೂವಿನ ಗಿಡಗಳನ್ನು,ತುಳಸಿ ಗಿಡವನ್ನು ಹಾಗೆ ಇನ್ನು ಕೆಲವೊಂದು ಶೋ ಗಿಡಗಳನ್ನು ಬೆಳೆಸುವುದರಿಂದ ಮನೆಯ ಅಂದ ಹೆಚ್ಚುತ್ತದೆ. ಹಾಗೇ ಮನೆಗೆ ಒಳ್ಳೆ ಆಮ್ಲಜನಕದ ಪೂರೈಕೆಯೂ ಆಗುತ್ತದೆ.ಹೌದು ಪ್ರತಿಯೊಬ್ಬರ ಮನೆಯ ಮುಂದೆಯೂ ಚಿಕ್ಕ ಚಿಕ್ಕ ಗಿಡಗಳನ್ನು ಬೆಳೆಸಿದರೆ ಸಾಕು ಎಷ್ಟು ಪರಿಸರಕ್ಕೆ ಲಾಭ ಅಂದರೆ ಈ ಚಿಕ್ಕ ಗಿಡಗಳು ಕೂಡ ಪರಿಸರಕ್ಕೆ ಒಂದಿಷ್ಟು ಕೊಡುಗೆಯನ್ನು ನೀಡುತ್ತದೆ.

ಹೀಗೆ ಮನೆಯ ಮುಂದೆ ಹೆಚ್ಚು ಜಾಗವಿದ್ದರೆ ನೀವು ಕೂಡ ಮನೆಯ ಮುಂದೆ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ನಿಮಗೂ ಕೂಡಾ ಇದರಿಂದ ಪ್ರಯೋಜನ ಪ್ರಕೃತಿಗೂ ಕೂಡ ಒಳ್ಳೆಯ ಲಾಭ.ನಾನು ಈ ದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲು ಬಂದಿರುವುದು ಏನು ಅಂದರೆ ಯಾವುದೇ ಗಿಡ ಆಗಲೇ ಹೆಚ್ಚಾಗಿ ಹೆಣ್ಣು ಮಕ್ಕಳು ಮನೆಯ ಮುಂದೆ ಬೆಳೆಸಲು ಇಷ್ಟಪಡುವುದು ಒಂದು ದಾಸವಾಳದ ಗಿಡ ಮತ್ತು ಮಲ್ಲಿಗೆಯ ಗಿಡ ಯಾಕೆ ಅಂದರೆ ದೇವರಿಗೆ ಸಮರ್ಪಿಸುವುದಾಗಿ.ಈ ರೀತಿ ನೀವು ಮನೆಯ ಮುಂದೆ ದಾಸವಾಳದ ಗಿಡ ಅಥವಾ ದುಂಡುಮಲ್ಲಿಗೆಯ ಗಿಡವನ್ನು ಬೆಳೆಸಿದರೆ ಒಂದು ಚಿಕ್ಕ ಪರಿಹಾರವನ್ನು ಮಾಡಿ. ಹೇಗೆ ನಿಮ್ಮ ಮನೆಯ ಗಿಡಗಳಲ್ಲಿ ಹೆಚ್ಚು ಹೂವುಗಳು ಬಿಡುತ್ತದೆ ಅನ್ನೋದನ್ನ ನೀವೇ ಗಮನಿಸಿ ನೋಡಿ.

ಮುಖ್ಯವಾಗಿ ಮಲ್ಲಿಗೆ ಗಿಡದಲ್ಲಿರುವ ಎಲೆಗಳನ್ನು ಚಿವುಟಿ ಹಾಕಬೇಕು. ಇದರಿಂದ ಗಿಡಗಳು ಚಿಗುರಿ ಬೇಗನೆ ಹೂ ಬಿಡುತ್ತವೆ.ಮಲ್ಲಿಗೆಯ ಸಸಿಗಳನ್ನು ರಂಭೆಯ ತುಂಡು ಅಥವಾ ಬಳ್ಳಿಯನ್ನು ನೆಲದಲ್ಲಿ ಹೋಗಿದ್ದು ಬೇರುಬಿಡಿಸಿ ಚೆನ್ನಾಗಿ ನೀಡಬೇಕಾಗುತ್ತೆ ಬೇರುಬಿಟ್ಟ ರೆಂಬೆಯ ತುಂಡು ಅಥವಾ ಬಳ್ಳಿಯ ನಾಟಿಯನ್ನು ಕಿತ್ತು ಬೇರೆ ಜಾಗದಲ್ಲಿ ನೀಡುವುದು ಒಂದು ರೀತಿಯ ವಿಧಾನ ನಾಟಿ ಮೊದಲು ಭೂಮಿಯನ್ನು ಒಂದೆರಡು ಬಾರಿ ಆಳವಾಗಿ ಉಳುಮೆಮಾಡಿ ಸ್ವಚ್ಛಮಾಡಬೇಕು ನಿರ್ದಿಷ್ಟ ಅಂತರದಲ್ಲಿ ಅರ್ಧ ಮೀಟರ್ ಗಾತ್ರದ ಗುಣಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು

ಈ ಒಂದು ಪರಿಹಾರ ಸಾಕಷ್ಟು ಜನರಿಗೆ ತಿಳಿದಿರುತ್ತದೆ ಅದೇನೆಂದರೆ ಗಿಡ ಬೆಳೆಯುತ್ತಿರುವಾಗ ಇನ್ನೇನು ಚಿಗುರು ಎಲೆ ಬೆಳೆಯಬೇಕು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಅಂತಹ ಸಮಯದಲ್ಲಿ ಏನು ಮಾಡಬೇಕು ಅಂದರೆ ಆ ಗಿಡದ ಅಗಲ ಅಗಲವಾದ ಎಲೆಗಳನ್ನು ಕೀಳಬೇಕು.ಈ ರೀತಿ ಆ ಗಿಡದ ಎರಡು ಮೂರು ಕೊಂಬೆಗಳಲ್ಲಿ ರುವ ಎಲೆಗಳನ್ನು ಪೂರ್ತಿ ಹಾಕಿ ತೆಗೆಯಿರಿ ನಂತರ ಆ ಎಲೆಗಳನ್ನು ಬಿಸಾಡದಿರಿ ಆ ಎಲೆಗಳನ್ನು ಗಿಡದ ಬುಡಕ್ಕೆ ಚಿಕ್ಕ ಚಿಕ್ಕದಾಗಿ ಕಿತ್ತು ಹಾಕಿ ಬಿಡಿ ಇದು ಗೊಬ್ಬರವಾಗಿ ಮತ್ತೆ ಆ ಗಿಡಕ್ಕೆ ಉಪಯುಕ್ತವಾಗುತ್ತದೆ.ಈ ರೀತಿ ಮಾಡುವುದರಿಂದ ಅಂದರೆ ಮಲ್ಲಿಗೆ ಗಿಡ ಆಗಲಿ, ದಾಸವಾಳದ ಗಿಡ ಆಗಲಿ ಅದರ ಎಲೆಗಳನ್ನು ಇನ್ನೇನು ಚಿಗುರು ಬರಬೇಕು ಅಂತಹ ಸಂದರ್ಭದಲ್ಲಿ ಚಿಗುರು ಎಲೆಗಳನ್ನು ಬಿಡಬೇಕು ಬಲಿತಿರುವ ಎಲೆಗಳನ್ನು ಕಿತ್ತು ಹಾಕಬೇಕು.

ಇದರಿಂದ ಮೊಗ್ಗುಗಳು ಚೆನ್ನಾಗಿ ಬಿಡಲು ಶುರು ಮಾಡುತ್ತದೆ. ನೀವು ಗಿಡ ಚಿಕ್ಕದಿದ್ದರೂ ಹೆಚ್ಚು ಹೆಚ್ಚು ಮೊಗ್ಗನ್ನು ಬಿಡುವುದನ್ನು ನೋಡಬಹುದು.ಇನ್ನು ಮನೆಯ ಮುಂದೆ ಹೂವಿನ ಗಿಡಗಳನ್ನು ಬೆಳೆಸುವಾಗ ಅದಕ್ಕೆ ನೀವು ರಾಸಾಯನಿಕ ಗೊಬ್ಬರಗಳನ್ನು ಹಾಕಬೇಡಿ ಮನೆಯಲ್ಲಿ ತರಕಾರಿ ಹೆಚ್ಚಿರುವ ಸಿಪ್ಪೆಗಳನ್ನು ಹಣ್ಣಿನ ಸಿಪ್ಪೆಗಳನ್ನು ಬಾಳೆಹಣ್ಣಿನ ಸಿಪ್ಪೆಯನ್ನು ಇಂತಹ ಪದಾರ್ಥಗಳನ್ನು ಅದಕ್ಕೆ ಗೊಬ್ಬರವಾಗಿ ಹಾಕಿ .ಈ ರೀತಿ ಮಾಡುವುದರಿಂದ ಹೂವಿನ ಗಿಡಕ್ಕೆ ಚೆನ್ನಾಗಿ ಬಲಿಷ್ಠತೆ ಸಿಗುತ್ತದೆ ಆಗ ಯಾವ ಗೊಬ್ಬರದ ಅವಶ್ಯಕತೆ ಇರುವುದಿಲ್ಲ

ಚಿಕ್ಕಪುಟ್ಟ ಹೂ ಗಿಡಗಳನ್ನು ಬೆಳೆಸಲು ವಿಶಾಲವಾದ ಜಾಗವೆ ಇರಬೇಕೆಂದಿಲ್ಲ. ಮನೆಯಲ್ಲಿ ವೆಸ್ಟ್ ಆಗಿರುವ ಪ್ಲಾಸ್ಟಿಕ್ ಬಕೆಟ್, ಅಥವಾ ಮಾರ್ಕೆಟಿನಲ್ಲಿ ದೊರೆಯುವ ಹೂಕುಂಡಗಳನ್ನು ಖರೀದಿಸಿರಿ.  ಅದರಲ್ಲಿ ಹೆಚ್ಚಾಗಿ ಮರಳು ಇರದಂತಹ ಕೆಂಪು ಮಣ್ಣನ್ನು ತುಂಬಿಸಿ, ನೀರು ಹಾಕಿ, ವಿಧವಿಧ ತರದ ಮಲ್ಲಿಗೆ, ಕನಕಾಂಬರ, ಚಂಡು ಹೂ, ಡೇರೆ ಹೂಗಳ ಬೀಜಗಳನ್ನು ಹಾಕಿ ಗಿಡ ಬೆಳೆಸಬಹುದು.ಜೊತೆಗೆ ಅಲಂಕಾರಿಕ ಗಿಡಗಳನ್ನು ಬೆಳೆಸಬಹುದು, ಸಮಯಕ್ಕೆ ಸರಿಯಾಗಿ ನೀರು, ಎಲೆಗಳಿಂದ ತಯಾರಿಸಿದ ಸಾವಯವ ಗೊಬ್ಬರವನ್ನು ತಯಾರಿಸಿ ಆಗಾಗ ಹಾಕುತ್ತಿರಬೇಕು.

ಮತ್ತು ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಕೆಂಪು ಮಣ್ಣನ್ನು ಹಾಕುತ್ತಾ ಇರಿ ಈ ರೀತಿ ಮಾಡುವುದರಿಂದ ಕೂಡ ಒಳ್ಳೆಯ ಪೋಷಕಾಂಶಗಳು ಗಿಡಕ್ಕೆ ಸಿಗುತ್ತದೆ.ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸದಿರಿ ಆರ್ಗ್ಯಾನಿಕ್ ಹಾಗೆ ಫಾರ್ಮಿಂಗ್ ಮಾಡಿ ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ.ಹಾಗೆ ಇತ್ತೀಚಿನ ದಿನಗಳಲ್ಲಿ ಆರ್ಗ್ಯಾನಿಕ್ ಆಗಿ ಫಾರ್ಮಿಂಗ್ ಮಾಡುವುದರಿಂದ ಕೂಡ ಹೆಚ್ಚು ಬೆಲೆ ದೊರೆಯುತ್ತಿದೆ ಅಂತಹ ವಿಚಾರಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿದು ಆರ್ಗ್ಯಾನಿಕ್ ಆಗಿ ಬೆಳೆಗಳನ್ನು ಬೆಳೆಯಿರಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.