ನಿಮ್ಮ ಮನೆಯಲ್ಲಿ ಬೈಕ್ ಮತ್ತೆ ಕಾರ್ ಇದೆಯೇ .. ಹೀಗೆ ಈ ವಾಹನಗಳನ್ನು ಓಡಿಸುವಾಗ ಈ ಒಂದು ಉಪಾಯ ಮಾಡಿದರೆ ಸಾಕು ನೀವು ಆರಾಮಾಗಿ ಪೆಟ್ರೋಲ್ ಅನ್ನು ಉಳಿಸಬಹುದು ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ವಾಹನಗಳಲ್ಲಿ ಪೆಟ್ರೋಲನ್ನು ಉಳಿಸಲು ಈ ರೀತಿಯಾದ ವಿಧಾನವನ್ನು ಬಳಸಿಕೊಳ್ಳಿ.ಹಾಯ್ ಸ್ನೇಹಿತರೆ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಇದೆ ಹಾಗೆ ವಾಹನಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಲೇ ಇದೆ. ಪೆಟ್ರೋಲ್ ಉಪಯೋಗಿಸುವವರು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ನಿಮ್ಮ ವಾಹನದಲ್ಲಿ ಪೆಟ್ರೋಲ್ ಅನ್ನು ಉಳಿಸಿಕೊಳ್ಳಿ ಹೌದು ಸ್ನೇಹಿತರೆ ಯಾರು ತಮ್ಮ ವಾಹನಗಳಿಗೆ ಪೆಟ್ರೋಲ್ ಬಳಸುತ್ತಿರಿ ಅವರು ನಿಮ್ಮ ವಾಹನವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಹಾಗೆಯೇ ಈಗ ನಾನು ಹೇಳುವ ಕೆಲವೊಂದು ವಿಷಯಗಳನ್ನು ತಪ್ಪದೆ ಮಾಡಬೇಕು. ಪೆಟ್ರೋಲ್ ನ ಬೆಲೆ ಈಗ 111 ರೂಪಾಯಿ ಆಗಿದೆ. ವಾಹನಗಳಿಗೆ ತಕ್ಕಹಾಗೆ ಪೆಟ್ರೋಲ್ ಮೈಲೇಜ್ ಕೊಡುತ್ತದೆ. ತುಂಬಾ ಸ್ಪೀಡಾಗಿ ಜೋರಾಗಿ ವಾಹನವನ್ನು ಓಡಿಸುವವರು ಪೆಟ್ರೋಲನ್ನು ಕಳೆದುಕೊಳ್ಳುತ್ತಾರೆ ಅದೇ ರೀತಿ ವಾಹನದ ಮೈಲೇಜ್ ಕೂಡ ಕಡಿಮೆಯಾಗುತ್ತದೆ.

ಪೆಟ್ರೋಲ್ ಹೆಚ್ಚಾಗುತ್ತಿದ್ದಂತೆ ಕೆಲವೊಬ್ಬರು ಗಾಡಿಯನ್ನು ಮಾರುತ್ತಿದ್ದಾರೆ ಇಂತಹ ಉದಾಹರಣೆಗಳು ಕೂಡ ಇವೆ. ಇನ್ನು ಕೆಲವರು ಪೆಟ್ರೋಲ್ ಹೆಚ್ಚಾಗಿದೆ ಸ್ವಲ್ಪವಾದರೂ ವಾಕ್ ಕೂಡ ಆಗುತ್ತೆ ಅಂತ ಕಾಲ್ನಡಿಗೆಯಲ್ಲೇ ಹತ್ತಿರದ ಸ್ಥಳಕ್ಕೆ ಹೋಗುತ್ತಿದ್ದಾರೆ. ಇನ್ನು ಕೆಲವೊಬ್ಬರು ಬಸ್ಸುಗಳನ್ನು ಹಾಗೂ ಪಬ್ಲಿಕ್ ಸರ್ವಿಸ್ ವಾಹನಗಳನ್ನು ಬಳಸುತ್ತಿದ್ದಾರೆ. ಸ್ನೇಹಿತರೆ ಯಾರೇ ಆಗಲಿ ಅವಶ್ಯಕತೆ ಇದ್ದಾಗ ಮಾತ್ರ ಹೆಚ್ಚಾಗಿ ತಮ್ಮ ಸ್ವಂತ ವಾಹನಗಳನ್ನು ಉಪಯೋಗಿಸಿಕೊಳ್ಳಬೇಕು ಇದರಿಂದ ಪರಿಸರ ಕೂಡ ಚೆನ್ನಾಗಿರುತ್ತದೆ. ಹಾಗಾದರೆ ನಿಮ್ಮ ವಾಹನಗಳಲ್ಲಿ ಪೆಟ್ರೋಲ್ ಉಳಿತಾಯ ಮಾಡಬೇಕೆಂದರೆ ಈಗ ನಾನು ಹೇಳುವ ಪಾಯಿಂಟ್ಗಳನ್ನು ತಪ್ಪದೇ ಮಾಡಿ.

ಮೊದಲನೆಯದಾಗಿ ವಾಹನವನ್ನು ಚಲಿಸುತ್ತಿರುವಾಗ ಪದೇಪದೇ ಗೇರ್ ಚೇಂಜ್ ಮಾಡಿಕೊಳ್ಳಬಾರದು ಇದರಿಂದ ಕೂಡ ಪೆಟ್ರೋಲ್ ಹೆಚ್ಚಾಗಿ ಹೋಗುವ ಸಾಧ್ಯತೆಯಿರುತ್ತದೆ. ಗಾಡಿ ಮೈಲೇಜ್ ಕೂಡಾ ಕಡಿಮೆಯಾಗುತ್ತದೆ. ಒಂದೇ ಗೇರ್ ನಲ್ಲಿ ತುಂಬಾ ದೂರವಾಗಲಿ ಚಲಿಸುವುದು ಉತ್ತಮ. ಇನ್ನು ಆರು ತಿಂಗಳಿಗೊಮ್ಮೆ ಎಮಿಷನ್ ಟೆಸ್ಟ್ ಮಾಡುತ್ತಿರಬೇಕು ಇದರಿಂದ ಶೇಕಡಾ 4 ಪರ್ಸೆಂಟ್ ಪೆಟ್ರೋಲ್ ಉಳಿತಾಯ ಆಗುತ್ತದೆ. ಆಕ್ಸಿಜನ್ ಸೆನ್ಸಾರ್ನಿಂದ 40% ಪೆಟ್ರೋಲ್ ಉಳಿತಾಯ ಆಗುತ್ತದೆ. ಟೈಯರ್ ಗಳು ಒಳ್ಳೆಯ ಕಂಡಿಶನ್ ನಲ್ಲಿ ಇದ್ದರೆ ಪೆಟ್ರೋಲ್ ಉಳಿತಾಯ ಆಗುತ್ತದೆ ಹಾಗೂ ಗಾಡಿ ಮೈಲೇಜ್ ಕೊಡುತ್ತದೆ. ಕಾಲಕಾಲಕ್ಕೆ ಹಾಗೂ ವಾಹನಗಳಿಗೆ ತಕ್ಕಂತೆ ಆಯಿಲ್ ಗಳನ್ನು ಬದಲಾಯಿಸುತ್ತಿರಬೇಕು ಇದರಿಂದ ವಾಹನ ಸುರಕ್ಷಿತವಾಗಿರುತ್ತದೆ ಹಾಗೂ ಪೆಟ್ರೋಲ್ ಉಳಿತಾಯವಾಗುತ್ತದೆ.

ಸೂಕ್ತವಾದ ಮೋಟರ್ ಆಯಿಲ್ ಗಳನ್ನು ಬಳಸದಿದ್ದರೆ ಎರಡು ಪರ್ಸೆಂಟ್ ಪೆಟ್ರೋಲ್ ಹೆಚ್ಚಾಗುವ ಸಾಧ್ಯತೆ ಇದೆ. ವಾಹನದ ಕಂಡೀಶನ್ ಹಾಗೂ ಸ್ಪಾರ್ಕ್ ಪ್ಲಗ್ ಕಂಡೀಶನ್ ವೀಲ್ ಅಲೈನ್ಮೆಂಟ್ ಎಲ್ಲವನ್ನೂ ಚೆಕ್ ಮಾಡಿಸುತ್ತಾ ಇರಬೇಕು. ಮೂರನೆಯದಾಗಿ ವಾಹನ ಪೂರ್ತಿಯಾಗಿ ಪೆಟ್ರೋಲ್ ಖಾಲಿ ಆಗುವಷ್ಟರಲ್ಲಿ ಪೆಟ್ರೋಲನ್ನು ತುಂಬಿಸಬೇಕು. ಹೆಚ್ಚಾಗಿ ಲೋವೆಸ್ಟ್ ಗೇರ್ ಬಳಸುವುದಕ್ಕಿಂತ ಹೈಯೆಸ್ಟ್ ಗೇರ್ ಬಳಸಿಕೊಂಡು ವಾಹನವನ್ನು ಚಲಿಸುವುದು ಒಳ್ಳೆಯದು ಇದರಿಂದ ಕೂಡ ಪೆಟ್ರೋಲ್ ಉಳಿತಾಯ ಆಗುತ್ತದೆ. ಹಾಗೂ ಬ್ರೇಕ್ ಹಾಗೂ ಆಕ್ಸಿಲೇಟರ್ ಗಳನ್ನು ತುಂಬಾ ಹಾರ್ಡ್ ಆಗಿ ಅಂದರೆ ರಫ್ ಆಗಿ ಬಳಸಬಾರದು. ಯಾರು ರಫ್ ಆಗಿ ವಾಹನವನ್ನು ಬಳಸುತ್ತಾರೆ ಅಂತವರಿಗೆ ನಿಮ್ಮ ವಾಹನಗಳನ್ನು ಕೊಡಬೇಡಿ.

ಒಂದು ಸಲ ಸಹಾಯ ಮಾಡಲು ಹೋಗಿ ನಿಮ್ಮ ವಾಹನವನ್ನು ಕೆಡಿಸಿಕೊಳ್ಳಬೇಡಿ ಇನ್ನು ಯಾರಿಗಾದರೂ ವಾಹನವನ್ನು ಕೊಡುವ ಮೊದಲು ಪೆಟ್ರೋಲ್ ಹಾಕಿಸಿಕೊಳ್ಳುವ ಅಂತೆ ಮುಲಾಜಿಲ್ಲದೆ ಹೇಳಿ ಅವರಿಗೂ ಕೂಡ ಇದರಿಂದ ತೊಂದರೆ ಆಗುವುದಿಲ್ಲ. ನಿಮ್ಮ ಪೆಟ್ರೋಲ್ ಬಳಸುವ ಯಾವುದೇ ವಾಹನವಾಗಲಿ ಸರಿಯಾದ ಸಮಯಕ್ಕೆ ವಾಹನಗಳನ್ನು ಸರ್ವಿಸ್ ಮಾಡಿಸಬೇಕು ಹಾಗೂ ಮೇಲೆ ಹೇಳಿದಂತೆ ಆಯಿಲ್ ಚೇಂಜ್ ಮಾಡಿಸಿಕೊಳ್ಳಬೇಕು ಹಾಗೂ ವಾಹನದ ಸುರಕ್ಷತೆಯ ಬಗ್ಗೆ ಕಾಳಜಿವಹಿಸಬೇಕು. ಪ್ರತಿನಿತ್ಯ ನೀವು ವಾಹನವನ್ನು ಉಪಯೋಗಿಸುವಾಗ ರಸ್ತೆಯನ್ನು ನೋಡಿಕೊಂಡು ವಾಹನವನ್ನು ಚಲಿಸಬೇಕು. ಇದರಿಂದ ನೀವು ಕೂಡ ಸುರಕ್ಷಿತರಾಗಿ ಇರುತ್ತೀರಿ ಹಾಗೂ ನಿಮ್ಮ ವಾಹನವು ಸುರಕ್ಷಿತವಾಗಿರುತ್ತದೆ. ಮಾಹಿತಿ ನಿಮಗೆ ಇಷ್ಟ ಆಗಿದೆ ನಾನು ತಿಳಿದುಕೊಳ್ಳುತ್ತೇನೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.