ಕೂದಲು ಕತ್ತರಿಸಲು ಯಾವುದೇ ಕಾರಣಕ್ಕೂ ಈ ಮಷೀನ್ ಅನ್ನು ಬಳಸಬೇಡಿ .. ವಯಸ್ಸಿಗೂ ಮುನ್ನವೇ ಬಿಳಿಕೂದಲು ಆಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೂದಲು ಕತ್ತರಿಸುವಾಗ ಮಿಷನ್ ಬಳಕೆ ಮಾಡಿದರೆ ಬಿಳಿ ಕೂದಲು ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಪೂರ್ತಿಯಾಗಿ ತಿಳಿಯಲು ಮಾಹಿತಿ ಓದಿ.
ಹಾಯ್ ಸ್ನೇಹಿತರೆ ಪ್ರತಿ ತಿಂಗಳಿಗೊಮ್ಮೆ ಅದಕ್ಕೂ ಮೊದಲೇ ನಾವು ಕೂದಲುಗಳನ್ನು ಕಟ್ ಮಾಡಿಕೊಳ್ಳುತ್ತೇವೆ. ಅದರಲ್ಲೂ ಗಂಡು ಮಕ್ಕಳು ಹೆಚ್ಚಾಗಿ ಕೂದಲುಗಳನ್ನು ಕಟ್ ಮಾಡಿಸಿಕೊಳ್ಳುತ್ತಾರೆ. ಈಗಿನ ಕಾಲದಲ್ಲಿ ಕೂದಲುಗಳ ಉದುರುವಿಕೆ ಹೆಚ್ಚಾಗಿದೆ ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿ ಆಗಿರಬಹುದು. ಕೂದಲುಗಳು ಬೆಳೆಯುವುದೇ ಕಡಿಮೆ ಅದರಲ್ಲೂ ಬಿಳಿ ಕೂದಲುಗಳು ಎಲ್ಲರನ್ನು ಹೆಚ್ಚಾಗಿ ಕಾಣುತ್ತಿದೆ. ಆಗಿನ ಕಾಲದಲ್ಲಿ ಅಜ್ಜಿ ಅಥವಾ ಅಜ್ಜ ಆದಮೇಲೆ ಅಂದರೆ ವಯಸ್ಸಾದ ಮೇಲೆ ಬಿಳಿ ಕೂದಲುಗಳು ಆಗುತ್ತಿದ್ದವು.

ಬಿಳಿಕೂದಲು ಆಯಿತೆಂದರೆ ವಯಸ್ಸಾಯಿತು ಮತ್ತು ಅಜ್ಜಿ ಆದರೂ ಎಂದು ಹೇಳುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ ಆಹಾರ ಪದ್ಧತಿಗಳು ಬದಲಾಗಿವೆ ಮತ್ತು ನಾವು ಉಪಯೋಗಿಸುವ ವಸ್ತುಗಳು ಕೂಡ ಎಲ್ಲಾ ಆಧುನಿಕವಾಗಿ ಇದರಿಂದಾಗಿ ಈಗ ಚಿಕ್ಕ ಮಕ್ಕಳಿಗೂ ಕೂಡ ಬೆಳ್ಳಿ ಕೂದಲುಗಳು ಕಾಣಿಸಿಕೊಳ್ಳುತ್ತವೆ. ಆಗಿನಕಾಲದಲ್ಲಿ ಹುಣಸೆಹಣ್ಣು ಅಥವಾ ಸೀಗೆಕಾಯಿ ಹಾಕಿ ತಲೆಸ್ನಾನ ಮಾಡುತ್ತಿದ್ದರು ಆದರೆ ಈಗ ನೂರಾರು ರೀತಿಯ ಸೋಪು ಹಾಗೂ ಶಾಂಪೂಗಳು ಬಂದಿದೆ ಇದರಿಂದಾಗಿಯೂ ಕೂಡ ನಮ್ಮ ತಲೆಯಲ್ಲಿ ಕೂದಲು ಕಡಿಮೆಯಾಗುತ್ತಿವೆ ಮತ್ತು ಹೆಚ್ಚಾಗಿ ಬಿಳಿಯಾಗುತ್ತಿವೆ.

ಆಗಿನ ಕಾಲದಲ್ಲಿ ಕಟ್ಟಿಂಗ್ ಮಾಡಿಸಿಕೊಳ್ಳಲು ಒಂದು ದಿನವೇ ಸಾಕಾಗುತ್ತಿತ್ತು ಮನೆಯಲ್ಲಿ ಎಲ್ಲರನ್ನು ಒಂದೇ ದಿನ ಕಟಿಂಗ್ ಮಾಡಿಸುತ್ತಿದ್ದರು ಹೇಗೆಂದರೆ ಕಟಿಂಗ್ ಮಾಡುವವರನ್ನು ಮನೆಗೆ ಕರೆಸುತ್ತಿದ್ದರು ಅಥವಾ ಎಲ್ಲರೂ ಅಂಗಡಿಗೆ ಹೋಗುತ್ತಿದ್ದರು. ಕತ್ತರಿಯನ್ನು ಬಳಸಿಕೊಂಡು ಕ್ಷೌರಿಕರು ಕೂದಲನ್ನು ಕಟ್ಟ್ ಮಾಡುತ್ತಿದ್ದರು. ಆದರೆ ಈಗ 5 ನಿಮಿಷದಲ್ಲಿ ಮಿಷನ್ ಅಥವಾ ಟ್ರಿಮ್ಮರ್ ಬಳಸಿ ಕೂದಲನ್ನು ಕಟ್ ಮಾಡುತ್ತಾರೆ. ಕೂದಲುಗಳನ್ನು ನಾವು ಪ್ರತಿನಿತ್ಯ ಕೊಬ್ಬರಿ ಎಣ್ಣೆ ಹಚ್ಚಿ ತಲೆ ಬಾಚಿಕೊಳ್ಳಬೇಕು ಇದರಿಂದ ನಮ್ಮ ತಲೆ ಕೂದಲುಗಳು ಗಟ್ಟಿಯಾಗಿ ಹಾಗೂ ಕಪ್ಪಾಗಿ ಇರುತ್ತವೆ ಆದರೆ ಈಗ ಎಣ್ಣೆ ಹಚ್ಚುವುದು ಬರಿ ತಲೆ ಸ್ನಾನಮಾಡುವ ದಿನ ಅಥವಾ ಹಿಂದಿನ ದಿನ.

ವಾರದಲ್ಲಿ ಒಂದು ಬಾರಿ ಕೊಬ್ಬರಿ ಎಣ್ಣೆ ಹಚ್ಚಿದರೆ ಮುಗಿಯಿತು ಆದರೆ ಈ ರೀತಿಯಾಗಿ ಮಾಡುವುದರಿಂದ ನಮ್ಮ ಕಣ್ಣುಗಳಿಗೂ ಕೂಡ ತಂಪಾಗಿ ಇರುವುದಿಲ್ಲ ಇದರಿಂದ ಸಾಕಷ್ಟು ರೋಗಗಳು ಕೂಡ ಬರುತ್ತವೆ. ತಲೆಗೆ ಚೆನ್ನಾಗಿ ಕೊಬ್ಬರಿ ಎಣ್ಣೆ ಹಚ್ಚದಿದ್ದರೆ ತಲೆನೋವು ಕಣ್ಣು ಉರಿ ಮುಂತಾದವುಗಳು ಆಗುತ್ತವೆ. ಅದಕ್ಕಾಗಿ ಪ್ರತಿನಿತ್ಯ ಸ್ವಲ್ಪವಾದರೂ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು. ಕತ್ತರಿಯನ್ನು ಬಳಸಿ ಕೂದಲನ್ನು ಕತ್ತರಿಸಿದರೆ ಯಾವುದೇ ತೊಂದರೆ ಇಲ್ಲ ಆದರೆ ಟ್ರಿಮ್ಮರ್ ಅಥವಾ ಮಿಷನ್ ಬಳಸಿ ಕೂದಲು ಕಟ್ ಮಾಡಿಕೊಂಡರೆ ಮನುಷ್ಯನಿಗೆ ಹೀಟ್ ಆಗುತ್ತದೆ ಇದರಿಂದ ಕೂದಲುಗಳು ಬಿಳಿಯಾಗುತ್ತದೆ ಮತ್ತು ಬೇಗ ಉದುರಲು ಪ್ರಾರಂಭವಾಗುತ್ತದೆ.

ಸ್ನೇಹಿತರೆ ನಿಮಗೆ ಕೂದಲುಗಳ ಉದುರುವಿಕೆ ಹೆಚ್ಚಾಗಿದ್ದರೆ ಮೊದಲು ಮಿಷನ್ ಅಥವಾ ಟ್ರಿಮರ್ ಗಳನ್ನು ಬಳಸುವುದನ್ನು ಬಿಡಬೇಕು ಅಥವಾ ಕಡಿಮೆ ಮಾಡಬೇಕು ಏನಾದರೂ ಅರ್ಜೆಂಟ್ ಇದ್ದಾಗ ಮಾತ್ರ ಅವುಗಳನ್ನು ಬಳಸಬೇಕು. ಇನ್ನು ನಿಮಗೆ ಕೂದಲುಗಳು ಉದರಬಾರದೆಂದರೆ ನೀವು ಎಣ್ಣೆ ಹಚ್ಚುವಾಗ ಕರಿಬೇವಿನ ಪುಡಿಯನ್ನು ಎಣ್ಣೆಯಲ್ಲಿ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ ಇದರಿಂದ ಕೂದಲುಗಳು ಸಮೃದ್ಧಿಯಾಗಿ ಬೆಳೆಯುತ್ತವೆ ಮತ್ತು ಕೂದಲು ಕಪ್ಪಾಗುತ್ತದೆ. ಕೂದಲುಗಳು ಇರುವುದರಿಂದ ಯಾವುದೇ ಶುಭಕಾರ್ಯಗಳಿಗೂ ಹೋಗಬೇಕೆಂದರೆ ನಾವು ಚೆನ್ನಾಗಿ ಅಲಂಕಾರ ಮಾಡಿಕೊಂಡು ತಲೆಗೆ ಹೂವು ಮುಡಿದುಕೊಂಡು ಹೋಗಬಹುದು ಆದರೆ ಬಿಳಿ ಕೂದಲುಗಳಿದ್ದರೆ ಅಥವಾ ತೆಳ್ಳಗಾಗಿ ಇದ್ದರೇನು ಕಾರ್ಯಕ್ರಮದಲ್ಲಿ ನಾವು ಅಂದವಾಗಿ ಕಾಣಲು ಆಗುವುದಿಲ್ಲ

ಇದರಿಂದ ನಾವು ಬೇಜಾರ್ ಆಗುವಂತೆ ಆಗುತ್ತದೆ. ಎಷ್ಟು ಚೆನ್ನಾಗಿ ನಾವು ಕೂದಲುಗಳನ್ನು ಕೇರ್ ಮಾಡಿಕೊಳ್ಳುತ್ತೇವೆ ಅಷ್ಟು ಚೆನ್ನಾಗಿ ನಮಗೆ ಕೂದಲು ಚೆನ್ನಾಗಿ ಕಾಣುವಂತೆ ಇರುತ್ತವೆ. ಹಾಗಾದರೆ ಸ್ನೇಹಿತರೇ ನೀವು ನಿಮ್ಮ ಕೂದಲನ್ನು ಚೆನ್ನಾಗಿ ಬೆಳೆಸಿಕೊಂಡು ಚೆನ್ನಾಗಿ ಕಾಣುವಂತೆ ಇಟ್ಟುಕೊಳ್ಳಬೇಕು ಎಂದರೆ ಟ್ರಿಮ್ಮರ್ ಅಥವಾ ಮಿಷನ್ ಹೆಚ್ಚಾಗಿ ಉಪಯೋಗಿಸಬೇಡಿ. ಹಾಗಾದರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಸಂಪೂರ್ಣವಾಗಿ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.