ಜಿರಳೆಗಳು ಮನೆಯಲ್ಲಿ ಹೆಚ್ಚಾಗಿದ್ಯಾ .. ಯಾವುದೇ ಕೆಮಿಕಲ್ ಉಪಯೋಗಿಸದೇ ಜಿರಲೆಗಳನ್ನು ಮನೆಯ ಹತ್ತಿರ ಸುಳಿಯದ ಹಾಗೆ ಮಾಡಬಹುದು ಹೇಗೆ ಅಂತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಮನೆಯಲ್ಲಿರುವ ಜಿರಳೆಗಳನ್ನು ನೀವು ಯಾವುದೇ ಕೆಮಿಕಲ್ ಔಷಧಿಗಳು ಇಲ್ಲದೆ ಸುಲಭವಾಗಿ ಓಡಿಸಬಹುದು.ಹಾಯ್ ಸ್ನೇಹಿತರೆ ಎಲ್ಲರಿಗೂ ಆರೋಗ್ಯ ಅನ್ನೋದು ತುಂಬಾ ಮುಖ್ಯವಾಗಿದೆ. ಮನುಷ್ಯನಿಗೆ ಆರೋಗ್ಯ ಒಂದಿದ್ದರೆ ಅರ್ಧದಷ್ಟು ಸುಖ ಇದ್ದಂತೆ. ರೋಗರುಜಿನಗಳು ಕೇವಲ ಆಹಾರ ಪದಾರ್ಥಗಳಿಂದ ಬರುವುದಿಲ್ಲ ಮತ್ತು ನಾವು ಕೆಟ್ಟ ಹವ್ಯಾಸಗಳನ್ನು ಮಾಡುವುದರಿಂದ ಬರುವುದಲ್ಲದೆ ಕ್ರಿಮಿಕೀಟಗಳಿಂದ ಕೂಡ ಹರಡಬಹುದು. ಒಂದು ಸಲ ಒಂದು ರೋಗ ಬಂದರೆ ಜೀವನಪೂರ್ತಿ ಅದರ ನೋವನ್ನು ನಾವು ಅನುಭವಿಸಬೇಕಾಗುತ್ತದೆ. ಆರೋಗ್ಯವನ್ನು ನಾವು ಎಷ್ಟು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ಕಾಲಕ್ಕೆ ಎಷ್ಟೇ ನಾವು ಸೂಕ್ಷ್ಮವಾಗಿದ್ದರು ಸಾಲದು. ಮನೆಯಲ್ಲಿ ಅಡುಗೆಮನೆ ದೇವರಮನೆ ಬಚ್ಚಲುಮನೆ ಹಾಲ್ ಸ್ಟೋರ್ ರೂಮ್ ಅಂಡ್ ಬೆಡ್ರೂಮ್ ಅಂತ ವಿಶೇಷವಾಗಿರುತ್ತವೆ

ಇವುಗಳಿಂದೆಲ್ಲ ಅದರದೇ ಆದ ಮಹತ್ವವಿದೆ. ಯಾವ ಕೊನೆಯಲ್ಲಿ ಏನು ಕೆಲಸ ಮಾಡಬೇಕು ಎಂದು ನಿಗದಿ ಕೂಡ ಮಾಡಿಕೊಂಡಿದ್ದೇವೆ. ಮನೆಯಲ್ಲಿ ಅದರಲ್ಲೂ ಅಡುಗೆ ಮನೆ ತುಂಬಾ ಸ್ವಚ್ಛವಾಗಿ ಇರಬೇಕು. ಹಾಗೆಂದರೆ ನಾವು ಏನು ಮಾಡಬೇಕು ಅಂದರೆ ಮನೆಯನ್ನು ಪ್ರತಿನಿತ್ಯ ಒರೆಸಬೇಕು. ಅದರಲ್ಲೂ ನೀರಿಗೆ ಸ್ವಲ್ಪ ಪುದಿನ ಸೊಪ್ಪು ಹಾಗೂ ಸೋಪನ್ನು ಹಾಕಿಕೊಂಡು ಒರೆಸಬೇಕು ಇದರಿಂದ ಕ್ರಿಮಿಕೀಟಗಳು ನಾಶವಾಗುತ್ತವೆ. ನಾವು ಎಷ್ಟೇ ಸ್ವಚ್ಛವಾಗಿ ಇದ್ದರು ಅಡುಗೆ ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿ ಇರುತ್ತದೆ. ಇವುಗಳನ್ನು ಎಷ್ಟೇ ಓಡಿಸಲು ಪ್ರಯತ್ನ ಮಾಡಿದರು ಕಡಿಮೆಯಾಗುವುದಿಲ್ಲ. ಹಾಗಾದರೆ ನೀವು ಇವುಗಳನ್ನು ಓಡಿಸಲು ಈ ಒಂದು ಉಪಾಯಗಳನ್ನು ಮಾಡಿ.

ಜಿರಳೆಗಳು ಅಡುಗೆಮನೆಯಲ್ಲಿ ಅದರಲ್ಲೂ ಅಡುಗೆ ಮೇಲೆ ಓಡಾಡುತ್ತಿದ್ದರೆ ಅದನ್ನು ನಾವು ಗೊತ್ತಿಲ್ಲದ ತಿಂದರೆ ನಮ್ಮ ಮೇಲೆ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಮುಖ್ಯವಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಜಿರಳೆಗಳು ಹೆಚ್ಚಾಗಿ ರೊಟ್ಟಿಯಮೇಲೆ ತರಕಾರಿಯ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಾವು ಅವುಗಳನ್ನು ಗೊತ್ತಿಲ್ಲದೆ ತಿಂದರೆ ಫುಡ್ ಪಾಯ್ಸನ್ ಆಗುವ ಸಾಧ್ಯತೆಗಳಿರುತ್ತದೆ, ಹಾಗಾದರೆ ನಾವು ಮಾಡಬೇಕಾದ ಉಪಾಯಗಳೇನು ಎಂದು ತಿಳಿಯೋಣ. ಮೊದಲನೆಯದಾಗಿ ಜಿರಳೆಗಳು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಸ್ವಲ್ಪ ಸಕ್ಕರೆ ಹಾಗೂ ಮೈದಾ ಮತ್ತು ಬೋರಿಕ್ ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿ ಉಂಡಿ ಆಕಾರ ಮಾಡಿ ಅವುಗಳನ್ನು ಜಿರಳೆಗಳು ವಾಸಿಸುವ ಸ್ಥಳದಲ್ಲಿ ಇಡಿ ಇದರ ವಾಸನೆಗೆ ಹೋಗುತ್ತವೆ.

ಇನ್ನು ಎರಡನೆಯ ಉಪಾಯ ಏನೆಂದರೆ ಸೌತೆಕಾಯಿಯನ್ನು ಸಿಪ್ಪೆ ಸಮೇತ ಹೆಚ್ಚಿ ಅವುಗಳನ್ನು ಜಿರಳೆ ಓಡಾಡುವ ಸ್ಥಳದಲ್ಲಿ ಇಡಬೇಕು ವಾರದಲ್ಲಿ ಎರಡು ಮೂರು ದಿನ ಈ ರೀತಿಯಾಗಿ ಮೂಲೆಮೂಲೆಗಳಲ್ಲೂ ಇಟ್ಟರೆ ಜಿರಳೆಗಳು ಕಡಿಮೆ ಆಗುವ ಸಾಧ್ಯತೆ ಇದೆ. ಜಿರಳೆಗಳು ಸೌತೆಕಾಯಿಯನ್ನು ತಿನ್ನುವುದಿಲ್ಲ ಇದರ ಸ್ಮೈಲ್ ಹಾಗೂ ಸಿಪ್ಪೆಯಿಂದ ಜಿರಳೆಗಳು ದೂರ ಇರುತ್ತವೆ. ಮೂರನೆಯ ಉಪಯ ಏನೆಂದರೆ ಪುದೀನಾ ಎಣ್ಣೆಯನ್ನು ಅಥವಾ ನಿಂಬೆ ಹಣ್ಣಿನ ರಸವನ್ನು ನೀರಿನಲ್ಲಿ ಹಾಕಿಕೊಂಡು ಜಿರಳೆಗಳು ಇರುವ ಸ್ಥಳದಲ್ಲಿ ಸಿಂಪಡಿಸಿದರೆ ಜಿರಳೆಗಳು ಮನೆಯಲ್ಲಿ ಕಡಿಮೆಯಾಗುತ್ತವೆ ಇದನ್ನು ಕೂಡ ವಾರದಲ್ಲಿ ಮೂರು ಬಾರಿ ಮಾಡಬೇಕು. ನಾಲ್ಕನೆಯ ಉಪಾಯ ಯಾವುದೆಂದರೆ ಕಾಫಿ ಪುಡಿಯನ್ನು ಜಿರಳೆಗಳು ವಾಸಿಸುವ ಸ್ಥಳಕ್ಕೆ ಹಾಕಬೇಕು

ಮರುದಿನ ಬೆಳಿಗ್ಗೆ ಜಿರಳೆಗಳು ಸತ್ತಿರುತ್ತವೆ ನಂತರ ಕಸದಿಂದ ಕಾಫಿ ಪೌಡರನ್ನು ಹಾಗೂ ಜಿರಳೆಗಳನ್ನು ಹೊರಗೆ ಹಾಕಬೇಕು. ಐದನೇಯದಾಗಿ ಹಾಗೂ ಕೊನೆಯದಾಗಿ ಬಿರಿಯಾನಿ ಎಲೆಗಳನ್ನು ಚೆನ್ನಾಗಿ ಪುಡಿಮಾಡಿ ಜಿರಳೆಗಳು ಓಡಾಡುವ ಸ್ಥಳಕ್ಕೆ ಹಾಕಿದ್ರೆ ಬೇಗನೆ ಜಿರಳೆಗಳು ನಾಶವಾಗುತ್ತವೆ. ನೋಡಿದ್ರಲ್ಲ ಸ್ನೇಹಿತರೆ ಹಾರ್ಪಿಕ್ ಹಾಗೂ ಯಾವುದೇ ಕೆಮಿಕಲ್ ಇಲ್ಲದೆ ಜಿರಳೆಗಳನ್ನು ಓಡಿಸಬಹುದು ನಾವು ಮನೆಯನ್ನು ಸ್ವಚ್ಛವಾಗಿ ಅಂದವಾಗಿ ಇಟ್ಟುಕೊಳ್ಳಬಹುದು ನಮ್ಮ ಆರೋಗ್ಯವನ್ನು ಕೂಡ ಚೆನ್ನಾಗಿ ಇಟ್ಟುಕೊಳ್ಳಬಹುದು. ಜಿರಳೆಗಳನ್ನು ಓಡಿಸುವುದರಿಂದ ಮನೆಯಲ್ಲಿ ಯಾವುದೇ ಆರೋಗ್ಯದ ಸಮಸ್ಯೆಗಳು ಕಾಣಿಸುವುದಿಲ್ಲ. ಮನೆಯಲ್ಲಿ ಮಹಿಳೆಯರು ಜಿರಳೆಗಳನ್ನು ಕಂಡರೆ ಭಯಪಡುವುದು ಸಹಜ ಆದ್ದರಿಂದ ಈ ರೀತಿಯಾಗಿ ಯಾವುದೇ ಹೆಚ್ಚಿನ ಹಣಕಾಸಿನ ಖರ್ಚಿಲ್ಲದೆ ಇಂತಹ ಉಪಾಯಗಳನ್ನು ಮಾಡಿ ಅವುಗಳನ್ನು ಓಡಿಸುವ ಪ್ರಯತ್ನ ಮಾಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.