ನಿಮ್ಮ ಉಗುರಿನಲ್ಲಿ ಏನಾದ್ರು ಈ ರೀತಿ ಇದ್ದರೆ ನಿಮ್ಮಷ್ಟು ಅದೃಷ್ಟವಂತರು ಇನ್ನಾರಿರಲ್ಲ ಹೇಗೆ ಅಂತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹಸ್ತವನ್ನು ನೋಡಿ ಸಾಕಷ್ಟು ಮಾಹಿತಿಗಳನ್ನು ತಿಳಿಸಲಾಗುತ್ತದೆ ಹಾಗೂ ಜೀವನದಲ್ಲಿ ಆ ವ್ಯಕ್ತಿ ಹೇಗಿರುತ್ತಾನೆ ಮತ್ತು ಆ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ ಅನ್ನೋದನ್ನು ಕೂಡಾ ಹಸ್ತವನ್ನು ನೋಡಿ ಹಸ್ತದ ಸಹಾಯದಿಂದ ಈ ಎಲ್ಲ ಮಾಹಿತಿಗಳನ್ನು ತಿಳಿಸಲಾಗುತ್ತದೆ.ಈ ಹಸ್ತ ಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯಶಾಸ್ತ್ರದ ಒಂದು ಭಾಗವಾಗಿದ್ದು ಜ್ಯೋತಿಷ್ಯಶಾಸ್ತ್ರವು ಮಾನವ ಜೀವನಕ್ಕೆ ಒಂದು ದಾರಿ ದೀಪವಾಗಿದೆ ಹಾಗೂ ಜ್ಯೋತಿಷ್ಯ ಶಾಸ್ತ್ರ ಅಂದ ಕೂಡಲೇ ಕೆಲವರಿಗೆ ಇದು ಮೂಢನಂಬಿಕೆ ಅಂತ ಅನ್ನಿಸಬಹುದು .ಆದರೆ ಜನರು ಯಾವಾಗ ಯಾವುದೋ ಒಂದು ವಿಚಾರವನ್ನು ಪೂರ್ತಿಯಾಗಿ ತಿಳಿದುಕೊಳ್ಳದೆ ಅದನ್ನು ಅರ್ಥವೇ ಗೊತ್ತಿಲ್ಲದ ವ್ಯಕ್ತಿಯಿಂದ ತಿಳಿದುಕೊಂಡಾಗ ಆ ಜ್ಯೋತಿಷ್ಯಶಾಸ್ತ್ರವೂ ಮೂಢನಂಬಿಕೆ ಅಂತಾನೇ ಅನಿಸುವುದು .

ಜ್ಯೋತಿಷ್ಯ ಶಾಸ್ತ್ರ ಎಂದರೇನು ಅಂದರೆ ಇದೊಂದು ಲಾಜಿಕ್ ಹೌದು ಸ್ನೇಹಿತರ ಈ ಲಾಜಿಕ್ ನಿಂದ ನಮ್ಮ ಮುಂದಿನ ಜೀವನ ಹೇಗಿರುತ್ತದೆ ಅಂತ ಹೇಳಬಹುದು ಹಾಗೆ ಈ ಲಾಜಿಕ್ ನಿಂದನೆ ನಮ್ಮ ವರ್ತಮಾನ ದಿನಗಳು ಹೇಗಿರುತ್ತದೆ ಅನ್ನೋದನ್ನು ಕೂಡ ಹೇಳಲಾಗುವುದು .ಇಷ್ಟೇ ಜ್ಯೋತಿಷ್ಯಶಾಸ್ತ್ರ ಅಂದರೆ ಆದರೆ ಕೆಲ ವ್ಯಕ್ತಿಗಳು ಈ ಜ್ಯೋತಿಷ್ಯ ಶಾಸ್ತ್ರವನ್ನು ಹೊಟ್ಟೆ ಪಾಡಿಗಾಗಿ ರೂಢಿಸಿಕೊಂಡು ಅದನ್ನು ಮಾಡಿ ಇದನ್ನು ಮಾಡಿ ಮನೆಯಲ್ಲಿ ಅದನ್ನು ಬದಲಾಯಿಸಿ ಇದನ್ನು ಬದಲಾಯಿಸಿ ಅಂತ ಸುಮ್ಮನೆ ಸಲಹೆಗಳನ್ನು ನೀಡುತ್ತಾರೆ.ಹೊರತು ಈ ಜ್ಯೋತಿಷ್ಯ ಶಾಸ್ತ್ರವನ್ನು ಯಾರೂ ಸಂಪೂರ್ಣವಾಗಿ ತಿಳಿದು ಪ್ರವೀಣ ರಾಗಿರುತ್ತಾರೆ ಅಂತಹವರಿಂದ ಶಾಸ್ತ್ರವನ್ನು ಕೇಳಿದರೆ ನೀವು ನಿಮ್ಮ ಜೀವನದಲ್ಲಿ ಆ ನಾಸಿಕವನ್ನು ಅಳವಡಿಸಿಕೊಳ್ಳುವುದರಿಂದ ದೊಡ್ಡ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಪಡೆದುಕೊಳ್ಳಬಹುದು .

ಇನ್ನು ಜ್ಯೋತಿಷ್ಯಶಾಸ್ತ್ರದ ಒಂದು ಭಾಗವಾಗಿರುವ ಹಸ್ತಮುದ್ರಿಕೆ ಶಾಸ್ತ್ರದಲ್ಲಿ ಹಸ್ತವನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಗುಣವನ್ನು ಹೇಳುತ್ತಾರೆ ಅಂತ ನಾನು ಈ ಮೇಲೆ ತಿಳಿಸಿದೆ .ನಿಮ್ಮ ಹಸ್ತದಲ್ಲಿ ರುವಂತಹ ಬೆರಳಿನಲ್ಲಿ ಅರ್ಧ ಚಂದ್ರನ ಆಕಾರ ವಿದ್ದರೆ ಅದು ಏನನ್ನು ಸೂಚಿಸುತ್ತದೆ ಅನ್ನೋದನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಈ ರೀತಿ ಅರ್ಧ ಚಂದ್ರನ ಆಕಾರ ವಿದ್ದರೆ ಆ ವ್ಯಕ್ತಿಯ ಗುಣ ಸ್ವಭಾವಗಳು ಹೇಗಿರುತ್ತದೆ ಎಂದರೆ ಆ ವ್ಯಕ್ತಿ ಮೃದು ಸ್ವಭಾವದಿಂದ ಕೂಡಿರುವಂತಹ ವ್ಯಕ್ತಿಯಾಗಿದ್ದು ಬೇರೆಯವರ ಕಷ್ಟಕ್ಕೆ ಯಾವಾಗಲೂ ಕೂಡ ಸ್ಪಂದಿಸುವಂತಹ ವ್ಯಕ್ತಿಯಾಗಿರುತ್ತಾನೆ .ಹಾಗೆಯೇ ಆ ವ್ಯಕ್ತಿ ಬೇರೆಯವರು ಸಹಾಯ ಹಸ್ತವನ್ನು ನೀಡಿದರೆ ತನ್ನ ಕೆಲಸವನ್ನು ಬಿಟ್ಟು ಅವರ ಕಷ್ಟಕ್ಕೆ ಆಗುವಂತಹ ಗುಣವನ್ನು ಹೊಂದಿರುತ್ತಾರೆ ಈ ಅರ್ಧಚಂದ್ರಾಕಾರ ಉಳ್ಳ ವ್ಯಕ್ತಿಗಳು .

ಇನ್ನು ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ಕೆಲಸವನ್ನು ಅಂದುಕೊಂಡರೂ ಕೂಡ ಅದನ್ನು ಮಾಡದೆ ಬಿಡುವುದಿಲ್ಲ ಹಾಗೂ ಆ ಕೆಲಸವನ್ನು ಪೂರ್ತಿಯಾಗಿ ಮಾಡಿಯೇ ತೀರುತ್ತಾರೆ .ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳಬೇಕು ಅಂತ ಅಂದುಕೊಳ್ಳುವ ಈ ಜನರು ಪ್ರತಿಯೊಬ್ಬರ ಕಷ್ಟಕ್ಕೂ ಆಗುತ್ತಾರೆ ಹಾಗೂ ಪ್ರತಿಯೊಬ್ಬರೂ ಕೂಡ ಖುಷಿಯಿಂದ ಇರಬೇಕು ಎಂಬ ಭಾವನೆಯನ್ನು ಕೂಡ ಹೊಂದಿರುವಂತಹ ವ್ಯಕ್ತಿಗಳು ಇವರಾಗಿರುತ್ತಾರೆ .ಹೃದಯವಂತಿಕೆ ಎಂಬುದನ್ನು ಇವರಿಂದ ನೋಡಿ ಕಲಿಯಬೇಕಾಗುತ್ತದೆ ಹಾಗೂ ಈ ರೀತಿ ಬೆರಳುಗಳಲ್ಲಿ ಅರ್ಧಚಂದ್ರಾಕಾರ ಇರುವಂತಹ ವ್ಯಕ್ತಿಗಳಿಗೆ ವೈಜ್ಞಾನಿಕವಾಗಿ ಏನು ಹೇಳುತ್ತಾರೆ

ಎಂದರೆ ಆ ವ್ಯಕ್ತಿಯಲ್ಲಿ ಯಾವುದೋ ಒಂದು ಪೌಷ್ಟಿಕಾಂಶವೂ ಕೊರತೆಯಿಂದಾಗಿ ಈ ರೀತಿ ದೇಹ ಸೂಚನೆ ನೀಡುತ್ತಿರುತ್ತದೆ ಎಂದು ಹೇಳಲಾಗುವುದು .ನಿಮ್ಮ ಬೆರಳುಗಳಲ್ಲಿ ಕೂಡ ಈ ರೀತಿ ಅರ್ಧಚಂದ್ರಾಕಾರವಿದ್ದರೆ ಈಗಲೇ ವೈದ್ಯರ ಬೇಟಿ ಮಾಡಿ ಟೆಸ್ಟ್ ಮಾಡಿಸಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೂಡ ಪಡೆಯುರಿ .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.