ನೀವು ಎಲ್ಲಿಗಾದರೂ ಹೊರಟಾಗ ವಾಂತಿ ಆಗುತ್ತಿದ್ದರೆ ಈ ಒಂದು ಉಪಾಯ ಮಾಡಿ ಖಂಡಿತವಾಗಿಯೂ ನಿಮಗೆ ವಾಂತಿ ಬರುವುದಿಲ್ಲ.
ಹಾಯ್ ಸ್ನೇಹಿತರೆ ನೀವು ಕೂಡ ಸಂಬಂಧಿಕರೊಂದಿಗೆ ಅಥವಾ ನಿಮ್ಮ ಕುಟುಂಬದವರಿಗೆ ಪ್ರವಾಸಕ್ಕೆ ಹೋಗಿರಬಹುದು ಅಥವಾ ಫ್ರೆಂಡ್ಸ್ ಗಳ ಜೊತೆ ಸ್ಕೂಲಿನಲ್ಲಿ ನೀವು ಪ್ರವಾಸಕ್ಕೆ ಹೋಗಿರುವ ಅನುಭವ ಇರುತ್ತದೆ. ಪ್ರವಾಸಗಳಿಗೆ ಹೋದಾಗ ಸ್ಥಳಗಳನ್ನು ನೋಡುವ ಮೊದಲೇ ಕೆಲವೊಬ್ಬರಿಗೆ ಗಾಡಿಯಲ್ಲಿ ಅಥವಾ ವಾಹನಗಳಲ್ಲಿ ವಾಂತಿ ಪ್ರಾರಂಭ ಆಗಿಬಿಟ್ಟಿರುತ್ತದೆ. ಒಬ್ಬರನ್ನು ನೋಡಿ ಇನ್ನೊಬ್ಬರು ಕೂಡ ವಾಂತಿಯನ್ನು ಮಾಡಲು ಪ್ರಾರಂಭಿಸುತ್ತಾರೆ ಇದರಿಂದ ನೋಡುವ ಸ್ಥಳಗಳನ್ನು ನೋಡಲು ಕೂಡ ಆಗುವುದಿಲ್ಲ ಇಂತಹ ಅನುಭವ ಕೆಲವೊಬ್ಬರಿಗೆ ಇದ್ದರೆ ಇನ್ನು ಕೆಲವರು ಹೊರಡುವ ಮುನ್ನವೇ ನನಗೆ ವಾಂತಿ ಆಗುತ್ತದೆ ಎಂದು ಪ್ರವಾಸಕ್ಕೆ ಹೋಗುವುದನ್ನು ಬಿಟ್ಟು ಬಿಡುತ್ತಾರೆ
ಇಂಥವರು ಎಲ್ಲಿಯೂ ಕೂಡ ಹೋಗುವುದಕ್ಕೆ ಆಗುವುದಿಲ್ಲ ಏನನ್ನು ನೋಡಲು ಆಗುವುದಿಲ್ಲ. ಸ್ನೇಹಿತರೆ ನೀವು ಏನೇ ಹೇಳಿ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವ ಮಜವೇ ಬೇರೆ. ಅದೊಂದು ಸುಂದರ ಅನುಭವವಾಗಿದೆ. ಹೊಸ ಹೊಸ ಸ್ಥಳಗಳನ್ನು ಎಲ್ಲರೊಂದಿಗೆ ಹೋಗಿ ನೋಡುವುದು ಚಂದ. ವರ್ಷಕ್ಕೊಮ್ಮೆ ಪ್ರವಾಸ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು. ನೀವು ಕೂಡ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಿದ್ದರು ಹಾಗೂ ನಿಮಗೂ ವಾಂತಿಯಾಗುವ ಭಯ ಇದ್ದರೆ ಈ ಒಂದು ಮಾಹಿತಿ ತುಂಬಾ ಉಪಯುಕ್ತವಾಗುತ್ತದೆ. ಹಾಗಾದರೆ ವಾಂತಿ ಆಗುವುದನ್ನು ತಡೆಗಟ್ಟಲು ಈಗ ನಾನು ಹೇಳುವ ಈ ಉಪಾಯವನ್ನು ಮಾಡಿ. ಯಾರಾದರೂ ಪ್ರವಾಸಕ್ಕೆ ಕರೆದಾಗ ಆರಾಮಾಗಿ ನೀವು ಕೂಡ ಎಲ್ಲರಂತೆ ಪ್ರವಾಸವನ್ನು ಮಾಡಬಹುದು.
ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ ಎಲ್ಲರಿಗೂ ಹೊಸ ಹೊಸ ಸ್ಥಳಗಳನ್ನು ನೋಡುವುದು ಹಾಗೂ ಅಲ್ಲಿನ ಉಡುಗೆ-ತೊಡುಗೆಗಳನ್ನು ನೋಡುವುದು ಮತ್ತು ಅಲ್ಲಿನ ವಸ್ತುಗಳನ್ನು ಖರೀದಿಸುವುದು ಇದು ಒಂದು ಖುಷಿ ಕೊಡುವಂತಹ ಅನುಭವ. ಹಾಗೆ ಸ್ನೇಹಿತರೇ ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಪ್ರವಾಸಕ್ಕೆ ಹೋದಾಗ ನಾವು ಅಲ್ಲಿನ ವಿಶೇಷವಾದ ತಿಂಡಿ ಅಥವಾ ಊಟಗಳನ್ನು ಮಾಡುತ್ತೇವೆ. ನಮ್ಮ ದೇಹಕ್ಕೆ ಬೇಕಾದ ಹಾಗೂ ನಮ್ಮ ನಾಲಿಗೆ ರುಚಿಗೆ ಬೇಕಾಗುವ ಸಿಹಿ ಪದಾರ್ಥಗಳನ್ನು ತಿನ್ನುವುದು ಕೂಡ ಒಂದು ಒಳ್ಳೆಯ ವಿಚಾರ. ಪ್ರವಾಸಕ್ಕೆ ಹೋದಾಗ ಎರಡು ಅಥವಾ ಮೂರು ದಿನ ನಾವು ಅಲ್ಲೇ ಉಳಿದುಕೊಳ್ಳಬೇಕಾಗುತ್ತದೆ ಅಂತಹ ಸಮಯದಲ್ಲಿ ನಮ್ಮ ಎಲ್ಲರೊಂದಿಗೆ ಹರಟೆಗಳನ್ನು ಹೊಡೆಯುತ್ತಾ ಸಂತೋಷದಿಂದ ಸಮಯ ಕಳೆಯುತ್ತೇವೆ.
ಅಲ್ಲಿಂದ ವಾಪಸ್ ಬರಲು ಕೂಡ ನಮಗೆ ಇಷ್ಟ ಇರುವುದಿಲ್ಲ ಅಂತಹ ಅನುಭವ ಎಲ್ಲರಿಗೂ ಆಗುತ್ತದೆ. ಹಾಗಾದರೆ ಸ್ನೇಹಿತರೇ ನೀವು ಕೂಡ ಎಲ್ಲಿಗಾದರೂ ಹೊರಟಾಗ ವಾಂತಿ ಆಗುವುದನ್ನು ತಡೆಗಟ್ಟಲು ಉಪಾಯಗಳನ್ನು ಮಾಡಿ. ನೀವು ಎಲ್ಲಿಗಾದರೂ ಹೊರಟಾಗ ಎರಡು ತಾಸು ಮೊದಲೇ ಊಟ ಮಾಡಬೇಕು. ಅದರಲ್ಲೂ ಮಸಾಲೆ ಪದಾರ್ಥಗಳನ್ನು ತಿನ್ನುವುದಕ್ಕೆ ಹೋಗಬಾರದು. ಇನ್ನು ವಾಹನಗಳಲ್ಲಿ ಇಂಥವರು ಮುಂದೆಯೇ ಕುಳಿತುಕೊಳ್ಳಬೇಕು. ಹೆಚ್ಚಾಗಿ ನೀರಿನಂಶವಿರುವ ಹಣ್ಣು ತಿನ್ನಬೇಕು. ಅಥವಾ ಬಾಯಿಯಲ್ಲಿ ಒಂದು ಏಲಕ್ಕಿಯನ್ನು ಇಟ್ಟುಕೊಳ್ಳಬೇಕು ಇದರಿಂದ ನಿಮಗೆ ವಾಂತಿ ಬರುವುದಿಲ್ಲ. ಇನ್ನು ಎರಡನೆಯ ಉಪಾಯ ಏನೆಂದರೆ ಕೈಯಲ್ಲಿ ಒಂದು ನಿಂಬೆಹಣ್ಣನ್ನು ಇಟ್ಟುಕೊಳ್ಳಬೇಕು.
ಇದರಿಂದ ಬರುವ ಸುವಾಸನೆ ನಿಮ್ಮ ವಾಂತಿಯನ್ನು ಬರದಂತೆ ನೋಡಿಕೊಳ್ಳುತ್ತದೆ. ಇನ್ನು ನೀವು ಕಾಲು ಚಾಚಿಕೊಂಡು ವಾಹನದಲ್ಲಿ ಆರಾಮಾಗಿ ಕುಳಿತುಕೊಳ್ಳಬೇಕು ಮತ್ತು ಚಾಕ್ಲೇಟ್ ಮಾವಿನ ಹಣ್ಣು ಅಥವಾ ಆರೆಂಜ್ ಹಣ್ಣನ್ನು ತಿನ್ನುವುದು ಉತ್ತಮ. ಎತ್ತರದ ಸ್ಥಳಗಳಿದ್ದರೆ ನೀವು ಕೆಳಗೆ ನೋಡಬಾರದು. ಹಾಗೆ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಬೇಕು. ಸ್ನೇಹಿತರೆ ಹಾಗಾದರೆ ನಿಮಗೂ ಕೂಡ ಎಲ್ಲರೊಡನೆ ಪ್ರವಾಸಕ್ಕೆ ಹೋಗುವ ಇಷ್ಟ ಇದ್ದರೆ ಈಗ ಹೇಳಿರುವ ಈ ಉಪಾಯಗಳನ್ನು ಮಾಡಿಕೊಂಡು ಎಲ್ಲರೊಡನೆ ನೀವು ಎಂಜಾಯ್ ಮಾಡಬಹುದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.