ನಿಮ್ಮ ರಕ್ತವು ಏನಾದ್ರು ಈ ಒಂದು ಗುಂಪಿಗೆ ಸೇರಿದ್ದರೆ ಯಾವುದೇ ಕಾರಣಕ್ಕೂ ನೀವು ಈ ತಪ್ಪುಗಳನ್ನ ಮಾಡಬೇಡಿ ಹಾಗಾದ್ರೆ ಆ ರಕ್ತದ ಗುಂಪು ಯಾವುದು …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಾಯ್ ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯಾಗಿದೆ. ದೇಹದಲ್ಲಿ ಅವಶ್ಯಕತೆಗೆ ತಕ್ಕಷ್ಟು ರಕ್ತ ಇದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನಮ್ಮ ದೇಹದಲ್ಲಿ ರಕ್ತ ಇರಬೇಕೆಂದರೆ ನಾವು ಚೆನ್ನಾಗಿ ಊಟ ಮಾಡಬೇಕು ಮತ್ತು ತರಕಾರಿ ಸೊಪ್ಪು ಹಾಗೂ ಹಣ್ಣುಗಳನ್ನು ಸೇವಿಸಬೇಕು. ನಾವು ಚಿಕ್ಕ ಮಕ್ಕಳಿದ್ದಾಗ ಆಟ ಆಡಲು ಹೋಗಿ ಗಾಯಗಳನ್ನು ಮಾಡಿಕೊಂಡು ರಕ್ತ ಸುರಿಸಿಕೊಂಡು ಬರುತ್ತಿದ್ದೆವು. ಈ ಅನುಭವ ಎಲ್ಲರಿಗೂ ಇರುತ್ತದೆ. ಇನ್ನು ದೊಡ್ಡವರಾದಮೇಲೆ ನಾವು ವಾಹನಗಳನ್ನು ಚಲಿಸಿಕೊಂಡು ಹೋಗುವಾಗ ಅ’ಪಘಾತಗಳು ಆದರೆ ಬೇಗನೆ ಅಲ್ಲಿಂದ ಹಾಸ್ಪಿಟಲ್ಗೆ ಕರೆದುಕೊಂಡು ಹೋಗುತ್ತಾರೆ ಡಾಕ್ಟರ್ಗಳು ಮೊದಲು ರಕ್ತವನ್ನು ನಿಲ್ಲಿಸುತ್ತಾರೆ ಏಕೆಂದರೆ ರಕ್ತ ಇರದಿದ್ದರೆ ನಮ್ಮ ಜೀವ ಉಳಿಯುವುದು ಅಸಾಧ್ಯ.ರಕ್ತದಲ್ಲಿ ದ್ರವ ಮತ್ತು ಘನ ಭಾಗಗಳಿವೆ. ದ್ರವ ಪದಾರ್ಥಕ್ಕೆ ಪ್ಲಾಸ್ಮಾ ಎಂದು ಹೆಸರು.

ರಕ್ತದಲ್ಲಿ ಮೂರು ಬಗೆಯ ಜೀವಕೋಶಗಳಿವೆ. ಅವುಗಳಿಗೆ ಕೆಂಪು ರಕ್ತ ಜೀವಕೋಶ ಬಿಳಿಯ ರಕ್ತ ಜೀವಕೋಶ ಮತ್ತು ಹಲಗೆ ಕಣ ಎಂದು ಹೆಸರುಗಳಿವೆ. ಈ ಮೂರೂ ಬಗೆಯ ಜೀವಕೋಶಗಳು ಬರಿಗಣ್ಣಿಗೆ ಗೋಚರಿಸಲಾರವು. ಸೂಕ್ಷ್ಮದರ್ಶಕದಲ್ಲಿ ಕಾಣಲು ಸಾಧ್ಯ.ಕೆಂಪು ರಕ್ತಜೀವಕೋಶದಲ್ಲಿ ಹೀಮೋಗ್ಲೋಬಿನ್ ಎಂಬ ರಾಸಾಯನಿಕ ಪದಾರ್ಥವಿದೆ.ಹೀಮೋಗ್ಲೋಬಿನ್ ಪದಾರ್ಥದಿಂದಾಗಿಯೇ ಈ ಜೀವಕೋಶಗಳಿಗೆ ಕೆಂಪು ಬಣ್ಣವಿದೆ. ಕೆಂಪು ರಕ್ತಜೀವಕೋಶಗಳಲ್ಲಿರುವ ಹೀಮೋಗ್ಲೋಬಿನ್ ಆಮ್ಲಜನಕವನ್ನು ದೇಹದ ಎಲ್ಲ ಅಂಗಾಂಗಗಳಿಗೆ ಒದಗಿಸುವ ಕಾರ್ಯ ಮಾಡುತ್ತದೆ.ಬಿಳಿಯ ರಕ್ತಜೀವಕೋಶಗಳನ್ನು ದೇಶದ ರಕ್ಷಣೆಮಾಡುತ್ತಿರುವ ಸೈನಿಕರಿಗೆ ಹೋಲಿಸಬಹುದು.

ಈ ಜೀವಕೋಶಗಳು ರಕ್ತದಲ್ಲಿ ಹರಿದಾಡುತ್ತಿದ್ದು ದೇಹದ ಯಾವುದೇ ಭಾಗದಲ್ಲಿ ರೋಗಜನಕ ರೋಗಾಣುಗಳು ದೇಹಸೇರಿದಾಗ ಅಲ್ಲಿ ಧಾವಿಸಿ ಆ ರೋಗಾಣುಗಳನ್ನು ತಡೆಗಟ್ಟಿ ರೋಗ ಬಾರದಂತೆ ನಮ್ಮನ್ನು ರಕ್ಷಿಸುತ್ತವೆ.ಹಲಗೆ ಕಣಗಳು ಗಾಯವಾದಾಗ ಅಲ್ಲಿಗೆ ಧಾವಿಸಿ ರಕ್ತನಾಳಗಳಿಂದ ರಕ್ತ ಹರಿಯದ೦ತೆ ತಡೆಗಟ್ಟುತ್ತದೆ.ಮೊದಲು ನಾವು ನಮ್ಮ ರಕ್ತದ ಗುಂಪನ್ನು ತಿಳಿದುಕೊಳ್ಳಬೇಕು.ರಕ್ತದಲ್ಲಿ ಈ ಕೆಳಕಂಡಂತೆ ಗುಂಪುಗಳಿವೆ. A+ve, A-ve, B+ve,B-ve, AB+ve, AB-ve, O-ve, O+ve ಎಂಬುದಾಗಿ ವಿಂಗಡಿಸಲಾಗುತ್ತದೆ.ಸಾಮಾನ್ಯವಾಗಿ A+ve ಮತ್ತು O+ve ಗುಂಪುಗಳ ಹೆಚ್ಚಿನ ಜನರಲ್ಲಿ ಕಾಣಸಿಗುತ್ತದೆ. B-ve O-ve ಮುಂತಾದ ರಕ್ತದ ಗುಂಪುಗಳು ಬಹಳ ವಿರಳ.

ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಬಹಳ ಕಷ್ಟದ ಕೆಲಸ.ಸಾಮಾನ್ಯವಾಗಿ O-ve ರಕ್ತವನ್ನು ಯುನಿವರ್ಸಲ್ ಡೋನರ್   ಎಂದು ಕರೆಯಲಾಗುತ್ತದೆ. ಯಾಕೆಂದರೆ ವ್ಯಕ್ತಿಗೆ ಸರಿಹೊಂದುವ ರಕ್ತವು ದೊರಕದೇ ಇದ್ದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ O-ve ರಕ್ತವನ್ನು ರೋಗಿಗೆ ಕೊಡಲಾಗುತ್ತದೆ. ಯಾವುದೇ ರಕ್ತದ ಗುಂಪು ಹೊಂದಿರುವ ವ್ಯಕ್ತಿಗೆ O-ve ರಕ್ತವನ್ನು ಕೊಡಬಹುದು. ಆದರೆ ನಮ್ಮ ದೇಶದ ಜನಸಂಖ್ಯೆಯ ಕೇವಲ 7 ಪ್ರತಿಶತ ಜನರು ಮಾತ್ರ O-ve ರಕ್ತವನ್ನು ಹೊಂದಿರುತ್ತಾರೆ.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಕ್ತದ ಗುಂಪನ್ನು ತಿಳಿದಿರಬೇಕು.

ಅ’ಪಘಾತ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ರಕ್ತದ ಅವಶ್ಯಕತೆ ಒದಗಿ ಬಂದಲ್ಲಿ ಕಷ್ಟವಾಗಬಹುದು. ರಕ್ತವು ಎಲ್ಲರಿಗೂ ತುಂಬಾ ಮುಖ್ಯವಾಗಿದೆ ಅದರಲ್ಲೂ O-ve ರಕ್ತವನ್ನು ಹೊಂದಿದ್ದವರು ತುಂಬಾ ಅದೃಷ್ಟವಂತರು.ಅದೇ ರೀತಿ ಅಕ್ಟೋಬರ್ 1ರಂದು ‘ರಾಷ್ಟ್ರೀಯ ರಕ್ತದಾನ ದಿವಸ’ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. O+ve ಮತ್ತು A+ve ರಕ್ತದ ಗುಂಪನ್ನು ಸಾಮಾನ್ಯವಾಗಿ ಮೂರು ರಕ್ತದಾನಿಗಳಲ್ಲಿ ಒಬ್ಬ ವ್ಯಕ್ತಿ ಹೊಂದಿರುವ ಸಾಧ್ಯತೆ ಇರುತ್ತದೆ. B+ve ಪ್ರತೀ 12ರಲ್ಲಿ ಒಬ್ಬರಿಗೆ,AB+ve ಪ್ರತೀ 29ರಲ್ಲಿ ಒಬ್ಬರಿಗೆ, O-ve ಮತ್ತು A-ve ಪ್ರತೀ 15ರಲ್ಲಿ ಒಬ್ಬರಿಗೆ, B-ve ರಕ್ತ ಪ್ರತೀ 67 ಜನರಲ್ಲಿ ಒಬ್ಬರಿಗೆ ಹಾಗೂ AB-ve ರಕ್ತ ಪ್ರತೀ 167 ಜನರಲ್ಲಿ ಒಬ್ಬರಿಗೆ ಇರುವ ಸಂಭವವಿರುತ್ತದೆ.

ಆದರೆ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಾಗ ರಕ್ತವನ್ನು ದಾನ ಮಾಡಿ ಇದರಿಂದ ಒಬ್ಬರ ಜೀವ ಹಾಗೂ ಜೀವನವನ್ನು ನೀವು ಕಾಪಾಡಿದಂತೆ ಆಗುತ್ತದೆ. ದಯವಿಟ್ಟು ಇಂತಹ ಒಳ್ಳೆಯ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.