ಇಲ್ಲೊಬ್ಬ ರೈತನಿಗೆ ಎತ್ತಿನ ಗಾಡಿಯಲ್ಲಿ ಹೋಗುವಾಗ 1000 ರೂಪಾಯಿ ದಂಡ ಹಾಕಿದರು… ಅದಕ್ಕೆ ಆತ ಮಾಡಿದ ಕೆಲಸಕ್ಕೆ ಇಡೀ ದೇಶವೇ ಭೇಷ್ ಎನ್ನುತ್ತಿದೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ರೈತನ ಈ ಚಾಣಾಕ್ಷತನಕ್ಕೆ ಬುದ್ಧಿವಂತಿಕೆಗೆ ಒಂದು ಸಲಾಂ ಹೇಳಲೇಬೇಕು ಹೌದು ಸ್ನೇಹಿತರೆ ರೈತ ಮಾಡಿರುವಂತಹ ಈ ಕೆಲಸವನ್ನು ನೀವು ಕೂಡ ತಿಳಿದರೆ ನಿಮಗೂ ಕೂಡ ಅಚ್ಚರಿಯಾಗುತ್ತದೆ, ಅದೇನು ಅಂತ ಹೇಳ್ತೀವಿ ಪೂರ್ತಿ ಮಾಹಿತಿಯನ್ನು ತಿಳಿಯಿರಿ.ಮತ್ತು ನೀವು ಈ ಮಾಹಿತಿಯನ್ನು ಓದುತ್ತಿದ್ದರೆ ತಪ್ಪದೇ ರೈತರಿಗೋಸ್ಕರ ಒಂದು ಕಾಮೆಂಟ್ ಮಾಡಿ ಅನ್ನದಾತನಾಗಿರುವ ರೈತನು ನಮ್ಮೆಲ್ಲರ ದೇವರು ಅಂತ ಹೇಳಿದರೆ ತಪ್ಪಾಗಲಾರದು, ಆದ್ದರಿಂದ ಮಾಹಿತಿಯನ್ನು ತಿಳಿದ ನಂತರ ಮಾಹಿತಿಗೆ ಒಂದು ಲೈಕ್ ಮಾಡಿ.ಈ ಘಟನೆ ನಡೆದಿರುವುದು ಉತ್ತರಾಖಂಡದ ದೆಹರದೂನ್ ಅಲ್ಲಿ, ಸ್ನೇಹಿತರೆ ರೈತರುಗಳು ಅಂದ ಮೇಲೆ ಅವರು ವರ್ಷಪೂರ್ತಿ ದುಡಿಯಲೇಬೇಕು ಮತ್ತು ವರ್ಷಪೂರ್ತಿ ದುಡಿದಂತಹ ಪ್ರತಿಫಲವೂ ಅವರು ವರ್ಷಕ್ಕೊಮ್ಮೆ ಪಡೆದುಕೊಳ್ಳುತ್ತಾರೆ,

ತಾವು ಬೆಳೆದಂತಹ ಬೆಳೆಗೆ ಸರಿಯಾದ ಬೆಲೆ ದೊರೆತರೆ ಮಾತ್ರ ರೈತನಿಗೆ ಹರ್ಷದ ಕೂಳು ಇಲ್ಲವಾದರೆ ರೈತ ಕಷ್ಟದ ದಿನಗಳನ್ನು ಮುಂದೆ ಎದುರಿಸಬೇಕಾಗುತ್ತದೆ.ಹೀಗೆ ರೈತ ನಮ್ಮ ಭಾರತ ದೇಶದ ಬೆನ್ನೆಲುಬು ಆದರೂ ಕೂಡ ಆತನ ಕಷ್ಟವನ್ನು ಮಾತ್ರ ಯಾರೂ ಕೂಡ ಕೇಳುವುದಿಲ್ಲ ಆತನ ಕಷ್ಟಗಳಿಗೆ ಯಾರೂ ಕೂಡ ಆಗುವುದಿಲ್ಲ ಈ ಸಮಾಜದಲ್ಲಿ, ಒಮ್ಮೆ ಒಬ್ಬ ರೈತ ತನ್ನ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರುವುದಕ್ಕಾಗಿ ಹೊದಾಗ, ರೈತನು ಎತ್ತಿನ ಗಾಡಿಯಲ್ಲಿ ತಾನು ಬೆಳೆದಂತಹ ಬೆಳೆಯನ್ನು ತೆಗೆದುಕೊಂಡು ಹೋಗಿರುತ್ತಾನೆ.ಈ ಸಂದರ್ಭದಲ್ಲಿ ಮಾರುಕಟ್ಟೆಯ ಬಳಿ ಎತ್ತಿನ ಗಾಡಿಯನ್ನು ನಿಲ್ಲಿಸಿ ರೈತ ತನ್ನ ಬೆಲೆಯನ್ನು ಮಾರುವುದಕ್ಕಾಗಿ ಹೋಗಿರುವಾಗ ಆತನ ಎತ್ತಿನ ಗಾಡಿಗೆ ಪೊಲೀಸ್ ಪಂಕಜ್ ಕುಮಾರ್ ಎಂಬುವವರು ಗಾಡಿಯನ್ನು ಸೀಸ್ ಮಾಡಿ ಅದಕ್ಕೆ ಫೈನ್ ಕೂಡ ಹಾಕಿರುತ್ತಾರೆ, 

ರೈತ ತನ್ನ ಕೆಲಸವನ್ನು ಮುಗಿಸಿಕೊಂಡು ಹಿಂತಿರುಗಿದಾಗ ತನ್ನ ಎತ್ತಿನ ಗಾಡಿಯ ಮೇಲೆ ಫೈನ್ ಹಾಕಿರುವ ವಿಚಾರವನ್ನು ತಿಳಿಯುತ್ತಾನೆ ರೈತನಾದ ರಿಯಾಜ್ ಹಸನ್.ನಮ್ಮ ಭಾರತ ದೇಶದಲ್ಲಿ ಕೆಲವೊಂದು ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಲೇಬೇಕಾಗುತ್ತದೆ ಅದೇನೆಂದರೆ ನೋ ಪಾರ್ಕಿಂಗ್ ಇರದ ಜಾಗದಲ್ಲಿ ಗಾಡಿಗಳನ್ನು ನಿಲ್ಲಿಸಬಾರದು ಮತ್ತು ಹೆಲ್ಮೆಟ್ ರಹಿತ ಗಾಡಿಯನ್ನು ಒಡಿಸಬಾರದು ಇಂತಹ ಕೆಲವೊಂದು ನಿಯಮಗಳು, ಆದರೆ ಇಂತಹ ನಿಯಮಗಳನ್ನು ಪಾಲಿಸುವುದಕ್ಕಾಗಿ ಕೆಲವೊಂದು ಸೆಕ್ಷನ್ ಗಳು ಇವೆ ಆ ಸೆಕ್ಷನ್ ಪ್ರಕಾರ ರೂಲ್ಸ್ ಗಳು ಕೂಡ ಇರುತ್ತದೆ.ರೈತನು ತನ್ನ ಎತ್ತಿನ ಗಾಡಿಯ ಮೇಲೆ ಫೈನ್ ಹಾಕಿರುವ ವಿಚಾರವನ್ನು ಕುರಿತು ಪೊಲೀಸರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾನೆ, 

ಅದೇನೆಂದರೆ ಎತ್ತಿನ ಗಾಡಿಯ ಮೇಲೆ ಫೈನ್ ಯಾವ ಸೆಕ್ಷನ್ ಮೇಲೆ ಹಾಕಿದ್ದೀರಾ ಎಂದು, ಹಾಗೆ ಫೈನ್ ಹಾಕಿರುವ ಆಧಾರದ ಮೇಲೆ ರೆಸಿಪ್ಟ್ ನಲ್ಲಿ ಯಾವ ಗಾಡಿ ನಂಬರ್ ಅನ್ನು ಹಾಕಿದ್ದೀರಾ ಅಂತೆಲ್ಲಾ ಕೇಳಿದಾಗ ಪೊಲೀಸ್ ಸೆಕ್ಷನ್ ನಂಬರ್ ಎಂಬತ್ತೊಂದರ ಪ್ರಕಾರ ಮೋಟಾರ್ ಗಾಡಿ ನಿಯಮದ ಆಧಾರದ ಮೇಲೆ ಫೈನ್ ಹಾಕಿದ್ದೇನೆ ಎಂದು ಪೊಲೀಸರು ಹೇಳುತ್ತಾರೆ.ಆಗ ರಿಯಾಜ್ ಹಸನ್ ಹೇಳುತ್ತಾರೆ ಇದು ಮೋಟಾರ್ ಗಾಡಿ ಅಲ್ಲ ಅಲ್ಲದೆ ಇದು ಎತ್ತಿನ ಗಾಡಿ, ಜೀವ ಇರುವಂತಹ ಈ ಗಾಡಿಯನ್ನು ಎಲ್ಲಿ ನಿಲ್ಲಿಸಿದರೂ ಅದು ಇದ್ದ ಕಡೆ ಇರುವುದಿಲ್ಲ ಆದ್ದರಿಂದ ನೀವು ಈ ಎತ್ತಿನ ಗಾಡಿಯ ಮೇಲೆ ಹೇಗೆ ಫೈನ್ ಹಾಕಲಾಗುತ್ತದೆ ಅಂತ ಪ್ರಶ್ನಿಸಿದಾಗ ಪೊಲೀಸ್ ಯಾವ ಮಾತನ್ನೂ ಆಡದೆ ಸುಮ್ಮನಾಗಿಬಿಡುತ್ತಾರೆ.ಈ ಒಂದು ಘಟನೆಯನ್ನು ಅಲ್ಲಿ ಹೋಗುತ್ತಿದ್ದ ದಾರಿಹೋಕನೊಬ್ಬ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಾಕಿಕೊಂಡಿದ್ದರು, ಇದೀಗ ಈ ರೈತ ಮಾಡಿರುವಂತಹ ಈ ಕೆಲಸ ಇಡೀ ದೇಶವೇ ಮೆಚ್ಚುತ್ತಿದೆ ಹಾಗಾದರೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.

Leave a Reply

Your email address will not be published.