ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಬೇಕಾ ಹಾಗಾದ್ರೆ ಉಪ್ಪಿನಿಂದ ಈ ಒಂದು ಚಿಕ್ಕ ಪ್ರಯೋಗ ಮಾಡಿ ನೋಡಿ …ನಿಮ್ಮ ಮನೇಲಿ ಲಕ್ಷ್ಮಿ ದೇವಿಯ ಸ್ಥಿರ ವಾಸ ಆಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಗೆ ಲಕ್ಷ್ಮೀದೇವಿಯ ಆಶೀರ್ವಾದ ಸದಾ ಇರಬೇಕೆಂದರೆ ಈ ಒಂದು ಉಪ್ಪಿನ ದೀಪದ ಪ್ರಯೋಗ ಮಾಡಿ ನೋಡಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ.
ಹಾಯ್ ಸ್ನೇಹಿತರೆ ಹಣದ ಸಮಸ್ಯೆಗೊಂದು ಇಲ್ಲದಿದ್ದರೆ ಜೀವನದಲ್ಲಿ ಅರ್ಧ ಸಮಸ್ಯೆಗಳು ಇಲ್ಲದಂತೆ ಎನ್ನಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಡುತ್ತಿರುವುದು ದುಡ್ಡಿನ ಸಮಸ್ಯೆ. ಹಣವನ್ನು ನಾವು ಗಳಿಸುವುದಕ್ಕೆ ನೂರಾರು ದಾರಿಗಳಿವೆ ಹಣವನ್ನು ನಾವು ಗಳಿಸುತ್ತೇವೆ ಆದರೆ ಅದನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ನಾವು ಮಾಡಿದರೆ ಅದು ಒಂದು ತರಹ ದುಡಿಮೆಯೇ ಆಗುತ್ತದೆ. ಅಂದರೆ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದು ಒಳ್ಳೆಯದು ಎಂಬ ದೊಡ್ಡ ಮಾತು ಇದೆ. ದುಡ್ಡನ್ನ ಎಲ್ಲರೂ ದುಡಿಯುತ್ತಾರೆ ಓದಿದವರು ದುಡಿಮೆ ಮಾಡುತ್ತಾರೆ

ಓದದೇ ಇರುವವರು ಕೂಡ ದುಡ್ಡನ್ನು ಕೆಲಸ ಮಾಡಿ ಪಡೆಯುತ್ತಾರೆ. ಆದರೆ ಇವರಿಬ್ಬರಲ್ಲಿ ಯಾರ ದುಡ್ಡನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಚಾಲಾಕಿತನ ಹೊಂದಿರುತ್ತಾರೆ ಅವರು ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಕೆಲವೊಬ್ಬರು ತಮ್ಮ ಯುಕ್ತಿಯಿಂದ ಹಣವನ್ನು ಸಂಪಾದಿಸುತ್ತಾರೆ ಇನ್ನೂ ಕೆಲವರು ತಮ್ಮ ಮಂತ್ರ ಹಾಗೂ ತಂತ್ರ ಶಕ್ತಿಯಿಂದ ಹಣವನ್ನು ಸಂಪಾದಿಸುವ ಬುದ್ಧಿಯನ್ನು ಹೊಂದಿರುತ್ತಾರೆ. ಹಾಗಾದರೆ ಈ ಒಂದು ಉಪ್ಪಿನ ದೀಪದ ಪ್ರಯೋಗವನ್ನು ಹೇಗೆ ಮಾಡುವುದು ಮತ್ತು ಯಾವ ರೀತಿಯಾಗಿ ಮಾಡಬೇಕು ಎಂಬುದನ್ನು ನಾನು ಮಾಹಿತಿಯಲ್ಲಿ ತಿಳಿಸುತ್ತೇನೆ ಅದೇ ರೀತಿಯಾಗಿ ಇದರಿಂದಾಗುವ ಲಾಭಗಳು ಯಾವುವು ಎಂಬುದನ್ನು ಕೂಡ ತಿಳಿಸುತ್ತೇನೆ.

ಈ ಒಂದು ಉಪ್ಪಿನ ದೀಪದ ಪ್ರಯೋಗವನ್ನು ನೀವು ಶುಕ್ರವಾರ ಮಾಡುವುದು ಒಳ್ಳೆಯದು ಅದರಲ್ಲೂ ಪಂಚಗವ್ಯ ವಸ್ತುಗಳನ್ನು ಉಪಯೋಗಿಸಿಕೊಂಡು ಉಪ್ಪಿನ ದೀಪವನ್ನು ಹಚ್ಚಿದರೆ ಸಾಕ್ಷಾತ್ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಸದಾ ನೆಲೆಸುತ್ತಾಳೆ. ಹಾಗಾದರೆ ಮೊದಲು ಪಂಚಗವ್ಯ ಎಂದರೆ ಯಾವುವು ಎಂದು ನೋಡೋಣ. ಆಕಳಿನ ಹಾಲು ಮೊಸರು ತುಪ್ಪ ಹಾಗೂ ಸಗಣಿ ಮತ್ತು ಗಂಜಲ ಈ 5 ವಸ್ತುಗಳನ್ನು ಪಂಚಗವ್ಯ ಎಂದು ಕರೆಯುತ್ತಾರೆ. ಇವುಗಳನ್ನು ಕಲಸಿಕೊಂಡು ಇದರ ಮೇಲೆ ಒಂದು ತಟ್ಟೆಯನ್ನು ಇಟ್ಟು ನಂತರ ಆ ತಟ್ಟೆಯಲ್ಲಿ ಉಪ್ಪನ್ನು ಹಾಕಿ ಪ್ರತಿನಿತ್ಯ ಅದರಲ್ಲಿ ಒಂದು ದೀಪವನ್ನು ಹಚ್ಚಬೇಕು ಇದನ್ನು ನಾವು ಪೂಜೆ ಮಾಡಿದ್ದರೆ ಲಕ್ಷ್ಮೀದೇವಿ ಆಶೀರ್ವಾದ ಸದಾ ನಿಮಗೆ ಸಿಗುತ್ತದೆ.

ಇದರಿಂದ ನಿಂತ ಕೆಲಸಗಳೆಲ್ಲ ಮುಂದುವರೆಯುತ್ತವೆ ಹಾಗೂ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಹಣದ ಸಮಸ್ಯೆಗಳು ದೂರವಾಗುತ್ತವೆ. ಈ ಒಂದು ಪ್ರಯೋಗವನ್ನು ನೀವು ಹುಣ್ಣಿಮೆ ದಿನದಂದು ಪ್ರಾರಂಭ ಮಾಡಬೇಕು. ಹುಣ್ಣಿಮೆಯ ಎರಡು ದಿನದ ಮುಂಚೆ ಒಂದು ಮಣ್ಣಿನ ತಟ್ಟೆಗೆ ಪಂಚಗವ್ಯ ಗಳನ್ನು ಮೆತ್ತಿ ಒಣಗಿಸಬೇಕು ನಂತರ ಇದನ್ನು ಹುಣ್ಣಿಮೆಯ ದಿನ ಬಳಸಿಕೊಂಡು ದೀಪವನ್ನು ಹಚ್ಚಬೇಕು. ಈ ರೀತಿಯಾದ ಪ್ರಯೋಗ ಲಕ್ಷ್ಮೀದೇವಿಗೆ ತುಂಬ ಪ್ರಿಯವಾದದ್ದು ಹಾಗಾದರೆ ಈ ಒಂದು ಪ್ರಯೋಗವನ್ನು ನೀವು ಕೂಡ ಮಾಡಿನೋಡಿ. ನಿಮ್ಮ ಮನೆಯಲ್ಲಿ ಎಂತಹದೇ ಸಮಸ್ಯೆಗಳು ಇದ್ದರೂ ಮಂಜಿನಂತೆ ಕರಗುತ್ತವೆ. ಇನ್ನೊಂದು ಮುಖ್ಯ ವಿಷಯ ಏನೆಂದರೆ ಈ ಪ್ರಯೋಗಕ್ಕೆ ಬಳಸುವ ಉಪ್ಪು ಕಲ್ಲುಪ್ಪು ಆಗಿರಬೇಕು.

ಈ ಒಂದು ಉಪ್ಪನ್ನು ಪ್ರತಿ ಹುಣ್ಣಿಮೆಗೆ ಬದಲಾಯಿಸಬೇಕು. ಚೆನ್ನಾಗಿದ್ದರೆ ಇದನ್ನು ಅಡುಗೆಗೂ ಕೂಡ ಬಳಸಬಹುದು. ಹಿಂದಿನ ಕಾಲದಲ್ಲಿ ಮನೆಯಲ್ಲಿ ಆಕಳು ಇರುತ್ತಿದ್ದವು ಹೀಗಾಗಿ ಎಲ್ಲರೂ ಇಂತಹ ಪ್ರಯೋಗವನ್ನು ಪಂಚಗವ್ಯ ಉಪಯೋಗಿಸಿ ಮಾಡುತ್ತಿದ್ದರು. ಆದರೆ ಈಗ ಸ್ವಲ್ಪ ನಗರಗಳಲ್ಲಿ ಆಕಳಿನ ಸಗಣಿ ಸಿಗುವುದಿಲ್ಲ. ಅಂತವರು ಬರೀ ಉಪ್ಪಿನಿಂದ ಈ ಒಂದು ಪ್ರಯೋಗವನ್ನು ಮಾಡಬಹುದು. ಸ್ನೇಹಿತರೆ ಹಾಗಾದರೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ನಿಮಗೂ ಕೂಡ ಒಳ್ಳೆಯದಾಗಲಿ ನೀವು ಅಂದುಕೊಂಡ ಎಲ್ಲ ಕೆಲಸಗಳು ನೆರವೇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಯಾವುದೇ ಕಷ್ಟಗಳನ್ನು ಎದುರಿಸುವ ಶಕ್ತಿ ಆ ದೇವಿ ನಿಮಗೆ ಸಂಪೂರ್ಣವಾಗಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟ ಹಾಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು

Leave a Reply

Your email address will not be published.