ನಿಮ್ಮ ಮನೆಯಲಿ ತಿಗಣೆಗಳ ಕಾಟ ಹೆಚ್ಚಾಗಿದ್ಯಾ ಹಾಗಾದ್ರೆ ಹೀಗೆ ಮಾಡಿ ಸಾಕು ಜನುಮದಲ್ಲಿ ತಿಗಣೆಗಳು ನಿಮ್ಮ ಮನೆ ಬಳಿ ಸುಳಿಯಲ್ಲ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆ ಅಂದ ಮೇಲೆ ಮನೆಯೊಳಗೆ ಹುಳ ಹುಪ್ಪಟೆಗಳು ಸೇರಿಕೊಳ್ಳುವುದು ಸಹಜವಾಗಿರುತ್ತದೆ, ಆದರೆ ಮನೆಗಳಿಗೆ ಏನಾದರೂ ತಿಗಣೆ ಬಂದರೆ ಆ ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ,ಹೌದು ಈ ತಿಗಣೆಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ ಎಲ್ಲಿ ಬಂದು ಸೇರಿಕೊಳ್ಳುತ್ತಿದೆ ಅನ್ನೋದೇ ಗೊತ್ತಾಗುವುದಿಲ್ಲ, ಒಮ್ಮೆ ಈ ತಿಗಣೆಗಳು ಸೇರಿಕೊಂಡರೆ, ಅದಕ್ಕೆ ಕೂಡಲೆ ಪರಿಹಾರವನ್ನು ಮಾಡದೆ ಇದ್ದಾಗ, ಈ ತಿಗಣೆಗಳು ಮೊಟ್ಟೆಯಿಟ್ಟು ಇದರ ಸಂತಾನವನ್ನು ಬೇಗನೆ ಬೆಳೆಸಿ ಬಿಡುತ್ತದೆ.ಮನೆಯಲ್ಲಿಯೇ ಸುಲಭವಾದ ಪರಿಹಾರಗಳನ್ನು ಮಾಡಬಹುದು ಈ ತಿಗಣೆಗಳನ್ನು ಓಡಿಸುವುದಕ್ಕೆ ಆದರೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೇಗೆ ಇದೊಂದು ತಿಗಣೆಯನ್ನು ಓಡಿಸುವುದು ಎಂಬುದನ್ನು ತಿಳಿಯೋಣ,

ಈ ದಿನದ ಮಾಹಿತಿಯಲ್ಲಿ ನೀವು ಕೂಡ ಈ ಉಪಯುಕ್ತ ವಿಚಾರ ತಿಳಿದು ಪ್ರತಿಯೊಬ್ಬರಿಗು ಮಾಹಿತಿಯನ್ನು ಶೇರ್ ಮಾಡಿ, ಜೊತೆಗೆ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯದಿರಿ.ಮನೆಯಲ್ಲಿ ಮಕ್ಕಳಿದ್ದರೆ ಅಂದರೆ ಮನೆಗೆ ತಿಗಣೆ ಸೇರಿಕೊಂಡಿದ್ದರೆ ಈ ಒಂದು ಪರಿಹಾರವನ್ನು ನೀವು ಮಾಡಬಹುದು, ಅದೇನೆಂದರೆ ಬಟ್ಟೆಗಳನ್ನು ಅಂದರೆ ತಿಗಣೆ ಸೇರಿಕೊಂಡಿರುವಂತಹ ಬೆಡ್ ಶೀಟ್ ಗಳು ಸೋಫಾ ಬಟ್ಟೆ ಆಗಲಿ ಮತ್ತು ಪಿಲ್ಲೋ ಕವರ್ ಇವುಗಳನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು,

ನಂತರ ವಾಶ್ ಮಾಡುವುದು ಒಳ್ಳೆಯದು ಮತ್ತು ಇದರಿಂದ ಕೇವಲ ತಿಗಣೆಗಳು ಮಾತ್ರ ಅಲ್ಲ ಬೇರೆ ರೀತಿಯ ಬ್ಯಾಕ್ಟೀರಿಯಾಗಳು ವೈರಸ್ ಗಳು ಕೂಡ ನಾಶವಾಗುತ್ತದೆ.ಎರಡನೆಯ ಪರಿಹಾರ ಈ ತಿಗಣೆಗಳು ಫರ್ನಿಚರ್ ನಲ್ಲಿ ಮತ್ತು ಸೋಫಾಗಳ ಮೂಲೆಯಲ್ಲಿ ಅಡಗಿರುತ್ತದೆ ಇದಕ್ಕಾಗಿ ಮಾಡಬಹುದಾದ ಪರಿಹಾರ ಅಂದರೆ ಬೋರಿಕ್ ಆಸಿಡ್ ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತದೆ ಇದನ್ನು ತಂದು ನೀರಿನೊಳಗೆ ಮಿಶ್ರಿತ ಮಾಡಿ ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಫರ್ನಿಚರ್ ಮೇಲೆ ಮೂಲೆಗಳಲ್ಲಿ ಇದನ್ನು ಸ್ಪ್ರೇ ಮಾಡಬೇಕು ಇದರಿಂದ ತಿಗಣೆಗಳು ನಾಶ ಆಗುತ್ತದೆ.

ಸ್ವಾವಲಂಬಿಯಾದ ಈ ತಿಗಣೆಗಳು ಉತ್ತಮ ಆಹಾರಕ್ಕಾಗಿ ಮನುಷ್ಯರ ರಕ್ತವನ್ನು ಹೀರುತ್ತದೆ ತಿಗಣೆಗಳನ್ನು ನಾಶ ಮಾಡುವುದಕ್ಕಾಗಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಇದನ್ನು ಕೂಡ ಸೋಫಾಗಳ ಮೂಲೆಯಲ್ಲಿ ಸೋಪ್ಗಳ ತುದಿಯಲ್ಲಿ ಅಂಚುಗಳಲ್ಲಿ ಮನೆಯ ಮೂಳೆಗಳಿಗೆ ಸ್ಪ್ರೇ ಮಾಡಬೇಕು, ಈ ರೀತಿ ಸ್ಪ್ರೆ ಮಾಡಿ ಒಂದು ಗಂಟೆಗಳ ನಂತರ ನೀವು ಮನೆಯನ್ನು ಸ್ವಚ್ಛ ಮಾಡಬೇಕು ಮನೆಯಲ್ಲಿ ಮಕ್ಕಳಿದ್ದರೆ ಜೋಪಾನ.ವಿನೆಗರ್ ಕಡಿಮೆ ಬೆಲೆಯಲ್ಲಿ ಈ ವಿನೇಕರ್ ನಿಮಗೆ ದೊರೆಯುತ್ತದೆ ಇದನ್ನು ಕೂಡ ಬಟ್ಟೆಗಳ ಮೇಲೆ ಮತ್ತು ಸೋಫಾ ತುದಿಯಲ್ಲಿ ಸ್ಪ್ರೇ ಮಾಡುವುದರಿಂದ ಕತೆಗಳೇ ನಾಶವಾಗುತ್ತದೆ, ಜೊತೆಗೆ ಸಾರಾಯಿ ಹೌದು ಈ ಆಲ್ಕೋಹಾಲನ್ನು ಕೂಡ ಫರ್ನಿಚರ್ಗಳಿಗೆ ಸ್ಪ್ರೇ ಮಾಡುವುದರಿಂದ ಕೂಡ ತಿಗಣೆಗಳು ನಾಶ ಆಗುತ್ತದೆ.

ಬ್ಲೀಚಿಂಗ್ ಪುಡಿ ಅನ್ನು ನೀರಿನೊಂದಿಗೆ ಬೆರೆಸಿ ಇದನ್ನು ಕೂಡ ಸ್ಪ್ರೇ ಮಾಡಬೇಕು ಎಲ್ಲೆಲ್ಲಿ ಕಂಡುಬರುತ್ತದೆ ಅಲ್ಲಿ ಸ್ಪ್ರೇ ಮಾಡುವುದರಿಂದ ತಿಗಣೆ ನಾಶವಾಗುತ್ತದೆ.ಈ ರೀತಿಯಾಗಿ ಸಣ್ಣಪುಟ್ಟ ಪರಿಹಾರಗಳಿಂದ ಮನೆಯಲ್ಲಿ ತಿಗಣೆಗಳಾಗಿದ್ದರೆ ನಾಶವಾಗುತ್ತದೆ, ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published.