ನಿಮ್ಮ ಎದೆಯಲ್ಲಿ ಕಫ ಕಟ್ಟಿ ಒದ್ದಾಡುತ್ತಿದ್ದೀರಾ ಅದಕ್ಕೆ ಹೀಗೆ ಮಾಡಿ ಸಾಕು ಒಂದೇ ರಾತ್ರಿಯಲ್ಲಿ ಕಫ ಹೊರಗೆ ಬರುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ವಾತಾವರಣದ ಬದಲಾವಣೆಯಿಂದ ಶೀತ ನೆಗಡಿ ಕೆಮ್ಮು ಕಫ ಕಂಡುಬರುತ್ತದೆ. ಇದು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು ತುಂಬಾನೇ ಸುಲಭವಾಗಿ ಎಲ್ಲರಿಗೂ ಹರಡುತ್ತದೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿದ್ದರೆ ಮುನ್ನೆಚ್ಚರಿಕೆಯನ್ನು ವಹಿಸಬೇಕು.ಶಾಲೆಯಲ್ಲಿ ಕೆಮ್ಮು-ಶೀತ ಇರುವ ಮಕ್ಕಳ ಜೊತೆಗೆ ಆಟವಾಡಿದರೆ ನಿಮ್ಮ ಮಕ್ಕಳಿಗೂ ಅದು ಹರಡುತ್ತದೆ. ಅದರಲ್ಲೂ  ಕೆಮ್ಮು ಮತ್ತು ಕಫದ ಸಮಸ್ಯೆ ಇದ್ದರೆ ಇನ್ನು ಕಷ್ಟ.ಅದಕ್ಕಾಗಿ ನಾನು ಇವತ್ತು ಸರಳವಾಗಿ ಕಫವನ್ನ ಹೇಗೆ ತೆಗೆಯುವುದು ಎನ್ನುವುದನ್ನು ಹೇಳಿಕೊಡುತ್ತೇನೆ. ಈ ಸರಳ ವಿಧಾನವನ್ನು ಅನುಸರಿಸಿ ಕಫದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸ್ನೇಹಿತರೆ ಈ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಮನೆಮದ್ದು ಏನೆಂದರೆ, ಒಂದು ಕಪ್ನಲ್ಲಿ ಒಂದು ಸ್ಪೂನ್ ನಷ್ಟು ಉಪ್ಪನ್ನು ತೆಗೆದುಕೊಳ್ಳಿ, ತುಂಬಾ ಸುಲಭವಾಗಿ  ಎಲ್ಲ ಕಡೆ ಕೂಡ ಸಿಗುತ್ತದೆ. ತುಂಬ ಸುಲಭವಾಗಿ ನಾವು  ಈ ಮನೆಮದ್ದನ್ನು ಮಾಡಿಕೊಳ್ಳಬಹುದು.ನಂತರ ಒಂದು ಸ್ಪೂನ್ ನಷ್ಟು ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ. ಹಿಂದಿನ ಕಾಲದಲ್ಲಿ ಕೂಡ ಈ ಸಾಸಿವೆ ಎಣ್ಣೆಯನ್ನು ಸಮಸ್ಯೆಗೆ ಅಂದರೆ ಕಫದ ನಿವಾರಣೆಗೆ ಉಪಯೋಗಿಸಿಕೊಳ್ಳುತ್ತಿದ್ದರು.ಉಪ್ಪು ಮತ್ತು ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ಇದನ್ನ ನೀವು ಯಾವ ರೀತಿಯ ಉಪಯೋಗ ಮಾಡಬೇಕು ಎಂದರೆ ,ಕೈಯಲ್ಲಿ ಸ್ವಲ್ಪ ರಷ್ಟು ತೆಗೆದುಕೊಂಡು ನಿಮಗೆ ಎಲ್ಲೆಲ್ಲಿ ಕಫ ಕಟ್ಟಿರುತ್ತದೆ ಅಂತಹ ಜಾಗಕ್ಕೆ ಹೆಚ್ಚಿಕೊಳ್ಳಿ. ಎಲ್ಲೆಲ್ಲಿ ಅಂದರೆ ಸಾಮಾನ್ಯವಾಗಿ ಎದೆಯಭಾಗದಲ್ಲಿ ಮತ್ತು ಗಂಟಲಿನ ಭಾಗದಲ್ಲಿ ಹೆಚ್ಚಾಗಿ ಕಫ ಶೇಖರಣೆ ಯಾಗಿರುತ್ತದೆ.

ಮಿಶ್ರಣವನ್ನು ಹಚ್ಚಿಕೊಂಡು ಎರಡು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಈ ರೀತಿ ಮಸಾಜ್ ಮಾಡುವುದರಿಂದ ಕಟ್ಟಿಕೊಂಡಿರುವ ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಈ ಮನೆಮದ್ದನ್ನು ನೀವು ರಾತ್ರಿ ಮಲಗುವುದಕ್ಕಿಂತ ಮುಂಚೆ ಮಾಡಬೇಕು. ಆಮೇಲೆ ಅದರ ಮೇಲೆ ಪೂರ್ತಿಯಾಗಿ ಬೆಡ್ಶೀಟ್ ಹಾಕಿಕೊಂಡು ಮಲ್ಕೊಳ್ಳಿ. ಫ್ಯಾನ್ ಮತ್ತು ಎಸಿಯನ್ನು ಹಾಕಿಕೊಂಡು ಮಲಗಬೇಡಿ.ಮನೆಮದ್ದನ್ನು ಅಳವಡಿಸಿಕೊಂಡಾಗ ತಣ್ಣನೆಯ ನೀರನ್ನು ಕುಡಿಯುವುದು ಆಗಲಿ ಹಾಗೂ ತಣ್ಣನೆ ಪದಾರ್ಥಗಳನ್ನುತಿನ್ನುವುದು ಮಾಡಬಾರದು. ಸ್ನಾನ ಮಾಡುವಾಗ ಹಾಗೂ ಮುಖ ತೊಳೆಯುವಾಗ ಬಿಸಿನೀರನ್ನು ಬಳಸಿಕೊಳ್ಳಬೇಕು.

ಅಲ್ಲದೆ ಪದೇ ಪದೇ ಕೈಯಿಂದ ಕಣ್ಣನ್ನು ಬಾಯನ್ನು ಟಚ್ ಮಾಡ್ಬೇಡಿ. ಆರೋಗ್ಯಕರ ವಾದಂತಹ ಆರೋಗ್ಯ ಕ್ರಮವನ್ನು ಪಾಲಿಸಿ. ಈ ರೀತಿ ಮಾಡಿದಂತಹ ಮೊದಲನೇ ದಿನ ನಿಮಗೆ ಕೊಂಚ ರಿಲೀಫ್ ಸಿಗುತ್ತೆ.ಸತತವಾಗಿ ಮೂರು ದಿನಗಳ ಕಾಲ ಮಾಡಿದರೆ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.ಹಾಕಿದ್ರೆ ಫ್ರೆಂಡ್ಸ್ ಟ್ರೈ ಮಾಡಿ ನೋಡಿ ಒಳ್ಳೆ ಫಲಿತಾಂಶ ನಿಮಗೆ ಸಿಗಲಿ, ಹಿಂದಿನ ಕಾಲದಲ್ಲಿಯೂ ಕೂಡ ಈ ಸಾಸಿವೆ ಎಣ್ಣೆಯನ್ನು ಎಲ್ಲಾ ರೀತಿಯ ಸಮಸ್ಯೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದರು ಎಂದರೆ ಎಲ್ಲ ರೀತಿಯ ಸಮಸ್ಯೆ ಎಂದರೆ ಜ್ವರ, ನೆಗಡಿ, ಕೆಮ್ಮು, ಶೀತ.ಹಿಂದಿನ ಕಾಲದವರು ಉಪಯೋಗಿಸುತ್ತಿದ್ದ ಮನೆಮದ್ದುಗಳು ಯಾವತ್ತಿಗೂ ಸುಳ್ಳಾಗುವುದಿಲ್ಲ ಅಲ್ವಾ ಫ್ರೆಂಡ್ಸ್ .ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮಾಹಿತಿಯನ್ನು ಲೈಕ್ ಮಾಡಿ ಮತ್ತೆ ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.