ಜೀವನ ಪರ್ಯಂತ ನೀವು ಖುಷಿ ಆಗಿರಬೇಕಾ ಹಾಗಾದ್ರೆ ಜೀವನದಲ್ಲಿ ಈ ಸೂತ್ರಗಳನ್ನು ಅಳವಡಿಸಿಕೊಳ್ಳಿ … ಎಲ್ಲರಿಗಿಂತ ಉತ್ತಮ ಜೀವನ ನಿಮ್ಮದಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಶ್ರೀಮಂತರಾಗಲು ಈ 6 ಸೂತ್ರಗಳು ತುಂಬಾ ಮುಖ್ಯವಾಗಿದೆ.ಹಾಯ್ ಸ್ನೇಹಿತರೆ ಎಲ್ಲರಿಗೂ ನಾವು ಕೂಡ ಶ್ರೀಮಂತರಾಗಬೇಕು ಎನ್ನುವ ಬಹುದೊಡ್ಡ ಆಸೆ ಇರುತ್ತದೆ. ಶ್ರೀಮಂತರಾಗಲು ಏಕೆ ಇಷ್ಟಪಡುತ್ತಾರೆ ಎಂದರೆ ತಮಗೆ ಬೇಕಾದ ಹಾಗೆ ಎಲ್ಲವನ್ನು ತೆಗೆದುಕೊಳ್ಳಬಹುದು ಎಲ್ಲರಿಂದ ಗೌರವ ಪ್ರತಿಷ್ಠೆ ಶ್ರೀಮಂತರಾಗಲು ಇಷ್ಟಪಡುತ್ತಾರೆ. ಈಗ ನಾನು ಹೇಳುವ ಆರು ಸೂತ್ರಗಳು ನಿಮ್ಮ ಜೀವನದಲ್ಲಿ ಇದ್ದರೆ ಖಂಡಿತವಾಗಿಯೂ ನೀವು ಶ್ರೀಮಂತರಾಗಲು ಸಾಧ್ಯ. ಜೀವನದಲ್ಲಿ ಶ್ರೀಮಂತರಾದದಿದ್ದರೂ ಪರವಾಗಿಲ್ಲ ಆದರೆ ಮನುಷ್ಯನಿಗೆ ಆರೋಗ್ಯ ಎಂಬುದು ತುಂಬಾ ಮುಖ್ಯ. ಶ್ರೀಮಂತರು ಆಗಬೇಕೆಂದರೆ ಮೊದಲು ನಮಗೆ ಶಕ್ತಿ ಹಾಗೂ ಸಾಮರ್ಥ್ಯ ಎಂದರೆ ನಮಗೆ ಆರೋಗ್ಯ ಮುಖ್ಯ ಮೊದಲನೆಯ ಸೂತ್ರ ಯಾವುದೆಂದರೆ ಆರೋಗ್ಯ ಆರೋಗ್ಯವೇ ಭಾಗ್ಯ ಎಂದು ಹೇಳುತ್ತಾರೆ.

ರೋಗರುಜಿನಗಳನ್ನು ದೇಹದಲ್ಲಿ ತುಂಬಿಕೊಂಡು ಶ್ರೀಮಂತರಾಗಿದ್ದರೆ ಯಾವ ಪ್ರಯೋಜನವೂ ಇಲ್ಲ ನಾವು ಎಷ್ಟೇ ಶ್ರೀಮಂತರಾಗಿದ್ದರೂ ಊಟಕ್ಕೆ ಹಣವನ್ನು ತಿನ್ನುವುದಿಲ್ಲ ರೈತರು ಬೆಳೆದ ಅಕ್ಕಿಯನ್ನು ನಾವು ತಿನ್ನುತ್ತೇವೆ. ಹಾಗಾದರೆ ಸ್ನೇಹಿತರೇ ಮೊದಲು ಮನುಷ್ಯನಿಗೆ ಆರೋಗ್ಯವೇ ಮುಖ್ಯವಾಗಿದೆ ನಮಗೆ ಎಲ್ಲ ಇದ್ದು ಆರೋಗ್ಯ ಒಂದು ಇರದಿದ್ದರೆ ನಮ್ಮ ಜೀವನವೇ ವ್ಯರ್ಥ ಅನಿಸುತ್ತದೆ. ಹಾಗಾದರೆ ಎರಡನೆಯ ಸೂತ್ರ ಯಾವುದು ಎಂದು ಈಗ ಹೇಳುತ್ತೇನೆ ಎರಡನೇ ಸೂತ್ರ ಒಳ್ಳೆಯ ಪತ್ನಿ. ಒಳ್ಳೆಯ ಪತ್ನಿಯೆಂದರೆ ಸುಂದರವಾಗಿ ಇರುವವಳು ಅಲ್ಲ. ಗಂಡನ ಕಷ್ಟಸುಖಗಳಿಗೆ ತನ್ನ ಸಂಪೂರ್ಣ ಮನಸ್ಸಿನಿಂದ ಜೊತೆ ಇರುವವಳು. ಗಂಡ ಆರೋಗ್ಯವಾಗಿ ದುಡಿದು ಶ್ರೀಮಂತನಾಗಿದ್ದರೂ ಜವಾಬ್ದಾರಿಯನ್ನು ತೆಗೆದುಕೊಳ್ಳದ ಪತ್ನಿ ಜೊತೆಗಿದ್ದರೆ ಅವನಿಗೆ ಯಾವುದೇ ನೆಮ್ಮದಿ ಎಂಬುದು ಸಿಗುವುದಿಲ್ಲ.

ಮನೆಯಲ್ಲಿ ಎಷ್ಟೇ ತೊಂದರೆಗಳಿದ್ದರೂ ನಿಭಾಯಿಸಿಕೊಂಡು ಗಂಡನನ್ನು ಅರ್ಥಮಾಡಿಕೊಂಡು ಜೊತೆಯಾಗಿ ಇರುವವಳೆ ನಿಜವಾದ ಪತ್ನಿ. ಹೌದಲ್ಲವೇ ಸ್ನೇಹಿತರೆ ಮನೆಯಲ್ಲಿ ಪತ್ನಿ ಹಾಗೂ ಪತಿ ಖುಷಿಯಿಂದ ತಮ್ಮ ಕುಟುಂಬವನ್ನು ನೋಡಿ ಇದ್ದರೆ ಅದರಲ್ಲಿರುವ ಸುಖ ಯಾವುದರಲ್ಲಿ ಸಿಗುವುದಿಲ್ಲ. ಮನೆಗೆ ಬಂದು ಹೋಗೋರಿಗೆ ಏನು ನೋವಾಗದಂತೆ ನೋಡಿಕೊಂಡು ಮನೆಯವರನ್ನೆಲ್ಲ ಸಂತೋಷದಿಂದ ಇರಿಸಿದರೆ ಗಂಡನಿಗೆ ಯಾವ ಚಿಂತೆ ಇರುವುದಿಲ್ಲ. ಈ ರೀತಿಯಾದ ಪತ್ನಿ ಸಿಗುವುದು ಅದೃಷ್ಟ ಹಾಗೂ ಇದರಿಂದ ಕೂಡ ಒಂದು ಗಂಡು ಶ್ರೀಮಂತರಾಗಲು ಸಾಧ್ಯ. ಮೂರನೆಯ ಸೂತ್ರ ಯಾವುದೆಂದರೆ ಮನೆಯಲ್ಲಿ ಮಕ್ಕಳು ಹೌದು ಸ್ನೇಹಿತರೆ ಹೆಂಡತಿ ಇದ್ದು ಆಸ್ತಿ ಇದ್ದು ಮನೆಯಲ್ಲಿ ಮಕ್ಕಳು ಇರದಿದ್ದರೆ ತುಂಬಾ ಸಮಸ್ಯೆ ಆಗುತ್ತದೆ

ಮಕ್ಕಳು ಇರಬೇಕು ಅದರಲ್ಲೂ ವಿದ್ಯೆ ಹಾಗೂ ಜ್ಞಾನವುಳ್ಳ ಮಕ್ಕಳು ಆರೋಗ್ಯವಾಗಿ ಇದ್ದರೆ ಮತ್ತು ತಂದೆ-ತಾಯಿಗೆ ಒಳ್ಳೆಯ ಹೆಸರು ತೊಂದರೆ ಅದೇ ಅವರ ಆಸ್ತಿ ಮಕ್ಕಳು ಕೂಡ ತಂದೆಯ ಶ್ರೀಮಂತಿಕೆಗೆ ಕಾರಣ ಅವರು ಎಲ್ಲಾ ಚಿಂತೆಗಳನ್ನು ಬಿಟ್ಟು ಒಳ್ಳೆಯ ದುಡಿಮೆ ಮಾಡಿ ಶ್ರೀಮಂತರಾಗಬಹುದು. ಇನ್ನು ನಾಲ್ಕನೆಯ ಸೂತ್ರ ಯಾವುದು ಎಂದರೆ ನಾವು ಕಷ್ಟದಲ್ಲಿದ್ದಾಗ ನಮಗೆ ಸಹಾಯ ಮಾಡಿ ಒಳ್ಳೆಯ ಸಲಹೆಗಳನ್ನು ನೀಡುವ ಸ್ನೇಹಿತರು.ಅವರು ಯಾವುದೇ ವಯಸ್ಸಿನವರಾಗಿದ್ದರು ಕೂಡ ಪರವಾಗಿಲ್ಲ ಆದರೆ ಒಳ್ಳೆಯ ಸ್ನೇಹಿತರಾಗಿ ಸಲಹೆಗಳನ್ನು ನೀಡುವವರು ಕೂಡ ನಮಗೆ ಬೇಕಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಹೇಳದ ವಿಷಯಗಳನ್ನು ಸ್ನೇಹಿತರೊಂದಿಗೆ ಹೇಳಿಕೊಳ್ಳಲು ಅಥವಾ ಹಂಚಿಕೊಳ್ಳಲು ಒಬ್ಬರು ಬೇಕೇ ಬೇಕು.

ಇನ್ನು 5ನೇಯ ಸೂತ್ರ ಯಾವುದು ಎಂದರೆ ಒಬ್ಬ ಮನುಷ್ಯನಿಗೆ ಬೇಕಾದ ಜಾಣ್ಮೆ ಹಾಗೂ ನೈಪುಣ್ಯತೆ ಅಥವಾ ಕೌಶಲ್ಯ. ಯಾವ ವ್ಯಕ್ತಿಗೆ ತನ್ನದೇ ಆದ ಸ್ವಂತ ವಿಚಾರಗಳು ಹಾಗೂ ಕೌಶಲ್ಯಗಳು ಇರುತ್ತವೆ ಅವರು ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಇನ್ನು ಕೊನೆಯದಾಗಿ ಆರನೇ ಸೂತ್ರ ಯಾವುದು ಎಂದರೇನು ಸಾಲ. ಮನುಷ್ಯನಿಗೆ ಸಾಲ ಇರಬಾರದು ಸಾಲ ಇದ್ದರೆ ಎಷ್ಟೇ ದುಡಿದರೂ ಅನಾವಶ್ಯಕವಾಗಿ ನಾವು ಬರೀ ಸಾಲ ಬಡ್ಡಿ ತೀರಿಸುತ್ತಾ ಇರಬೇಕಾಗುತ್ತದೆ. ಸಾಲ ಇಲ್ಲ ಎಂದರೆ ದುಡಿದ ದುಡ್ಡಲ್ಲಿ ಮನೆಯನ್ನು ನಿಭಾಯಿಸಿಕೊಂಡು ಹೋಗಬಹುದು ಉಳಿದರೆ ಸ್ವಲ್ಪ ಕೂಡಿ ಅಂದರೆ ಗಳಿಸಿ ಇಡಬಹುದು. ಸ್ನೇಹಿತರೆ ಹಾಗಾದರೆ ನಮ್ಮ ಜೀವನಕ್ಕೆ ಬೇಕಾದ ಆರು ಸೂತ್ರಗಳು ಯಾವುವು ಮತ್ತು ನಾವು ಅದರಿಂದ ಹೇಗೆ ಶ್ರೀಮಂತ ರಾಗುತ್ತೇವೆ ಎನ್ನುವ ಮಾಹಿತಿ ನಿಮಗೆ ಈಗ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.