ಡಿಗ್ರಿ ಡಬಲ್ ಡಿಗ್ರಿ ಮಾಡಿದರೂ ಕೂಡ ನಿಮಗೆ ಕೆಲಸ ಸಿಗುತ್ತಿಲ್ವ … ಕಡಿಮೆ ಖರ್ಚಿನಲ್ಲಿ ಟಾರ್ಪಲಿನ್ ಬ್ಯುಸಿನೆಸ್ ಪ್ರಾರಂಭ ಮಾಡಿ .. ಒಳ್ಳೆಯ ಆದಾಯ ನೀವು ಅಂದುಕೊಂದಕ್ಕಿಂತ ನಿಮಗೆ ಸಿಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೆ ಉದ್ಯೋಗ ಇಲ್ಲವೆಂದು ಯೋಚನೆ ಮಾಡುತ್ತಿದ್ದರೆ ತುಂಬಾ ಲಾಭದಾಯಕವಾದ ಈ ಟಾರ್ಪಲ್ ಬಿಸಿನೆಸ್ ಒಮ್ಮೆ ಮಾಡಿನೋಡಿ.ಹಾಯ್ ಸ್ನೇಹಿತರೆ ಈಗಿನ ಕಾಲದಲ್ಲಿ ಎಲ್ಲರಿಗೂ ಒಂದೊಂದು ಕೆಲಸ ಸಿಗುವುದು ತುಂಬಾ ಕಷ್ಟಕರವಾದ ಸಂಗತಿಯಾಗಿದೆ. ಆಗಿನ ಕಾಲದಲ್ಲಿ ವಿದ್ಯಾಭ್ಯಾಸದ ಕೊರತೆಯಿತ್ತು ಆದರೆ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳು ಇದ್ದವು ಆದರೆ ಈಗ ಎಲ್ಲರೂ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಯಾರೇ ಕೇಳಿದರೂ ನಾನು ಡಿಗ್ರಿ ಮುಗಿಸಿದ್ದೇನೆ ನಾನು ಇಂಜಿನಿಯರಿಂಗ್ ಮುಗಿಸಿದ್ದೇನೆ ಡಾಕ್ಟರ್ ಮುಗಿಸಿದ್ದೇನೆ ಹೀಗೆ ಎಷ್ಟೊಂದು ವಿದ್ಯಾಭ್ಯಾಸವನ್ನು ಕಲಿತು ಮನೆಯಲ್ಲಿ ಕುಳಿತುಕೊಳ್ಳುವ ಹಾಗೆ ಆಗಿದೆ. ಈಗ ವಿದ್ಯಾಭ್ಯಾಸಕ್ಕಾಗಿ ಯಾವುದೇ ಕೊರತೆ ಇಲ್ಲ ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುತ್ತಾರೆ

ಯಾರು ಕೂಡ ಅನಕ್ಷರತೆಯಿಂದ ಹಿಂದುಳಿಯುವ ಹಾಗೆಯೇ ಪರಿಸ್ಥಿತಿ ಇಲ್ಲ. ಅನಾಥರು ಬಿಕ್ಷುಕರು ಇಂತಹ ಸಮಸ್ಯೆಗಳಲ್ಲಿ ಇರಬಹುದು ಅನಾಥ ಮಕ್ಕಳು ಕೂಡ ಅನಾಥಾಶ್ರಮದಲ್ಲಿ ಓದುವ ಹಾಗೆ ಈಗಿನ ಅನುಕೂಲಗಳು ಇವೆ ಆದರೆ ಚೆನ್ನಾಗಿ ಇದ್ದವರು ವಿದ್ಯಾಭ್ಯಾಸವನ್ನು ಮಾಡಿಸಿ ಇರುತ್ತಾರೆ. ಅಂದರೆ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಿಲ್ಲ. ಆದರೆ ವಿದ್ಯಾಭ್ಯಾಸ ಎಲ್ಲರಿಗೂ ತಿಳಿದ ಮೇಲೆ ಉದ್ಯೋಗದ ಕೊರತೆ ತುಂಬಾ ಹೆಚ್ಚಾಗುತ್ತಾ ಹೋಗುತ್ತಿದೆ. ಎಲ್ಲರೂ ಓದಿ ಮನೆಯಲ್ಲಿ ಕುಳಿತರೆ ಮನೆಯಲ್ಲಿ ಅವರ ಮುಂದಿನ ಭವಿಷ್ಯದ ಬಗ್ಗೆ ಅವರು ತುಂಬಾ ಚಿಂತೆಯನ್ನು ಮಾಡುತ್ತಾರೆ. ಸ್ನೇಹಿತರೆ ಅದರಲ್ಲೂ ಹಳ್ಳಿಯಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿವೆ. ಇಷ್ಟೊಂದು ಹಣವನ್ನು ಖರ್ಚು ಮಾಡಿ ಓದಿ ಯಾವುದೇ ಕೆಲಸವಿಲ್ಲದೆ ನಿರುದ್ಯೋಗದಿಂದ ಆತ್ಮಹತ್ಯೆಯನ್ನು ಮಾಡಿಕೊಂಡವರ ಉದಾಹರಣೆ ಕೂಡ ತುಂಬಾ ಇವೆ.

ಮೊದಲು ವಿದ್ಯಾರ್ಥಿಗಳಾದ ನಾವು ಶಿಕ್ಷಣ ಇರುವುದು ಕೇವಲ ಕೆಲಸಕ್ಕಾಗಿ ಮಾತ್ರ ಅಲ್ಲ ಅದು ನಮ್ಮ ಹಕ್ಕು ಹಾಗೂ ಅರ್ಹತೆ ಎಂದು ತಿಳಿದುಕೊಳ್ಳಬೇಕು. ನಮ್ಮ ಬಳಿ ಏನೇ ಇದ್ದರೂ ಎಲ್ಲರೂ ಅದನ್ನು ಕಿತ್ತುಕೊಳ್ಳಬಹುದು ಆದರೆ ನಮ್ಮ ಬಳಿ ಇರುವ ವಿದ್ಯೆಯನ್ನು ಕದಿಯಲು ಯಾರಿಗೂ ಸಾಧ್ಯವಿಲ್ಲ ವಿದ್ಯೆಗೆ ಅಷ್ಟೊಂದು ಮಹತ್ವ ಹಾಗೂ ಶಕ್ತಿ ಇದೆ. ನಾವು ಏನೇ ಓದಿದರೂ ಏನೇ ತಿಳಿದುಕೊಂಡರು ಜೀವನದಲ್ಲಿ ಒಂದಲ್ಲ ಒಂದು ಬಾರಿ ಅದರ ಪ್ರಯೋಜನ ಆಗುತ್ತದೆ. ಒಂದು ಭರವಸೆಯನ್ನು ನಾವು ಯಾವಾಗಲೂ ಕಳೆದುಕೊಳ್ಳಬಾರದು. ಹಾಗಾದರೆ ಏನು ಮಾಡಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿರುತ್ತದೆ. ಮನೆಯಲ್ಲೇ ಕುಳಿತು ಹೊಸ ಹೊಸ ಕೆಲಸಗಳನ್ನು ನೀವೆಷ್ಟು ಮಾಡಿಕೊಳ್ಳಬೇಕು ಖಾಲಿ ಕುಳಿತಾಗ ಯೋಚಿಸಿದರೆ ನಮ್ಮ ಬುದ್ಧಿ ಚುರುಕಾಗಿ ಇರುತ್ತದೆ

ಆಗ ನಮಗೆ ಒಂದು ಒಳ್ಳೆಯ ವಿಚಾರ ಹಾಗೂ ನಿರ್ಧಾರಗಳು ಬರುತ್ತವೆ. ಆಗ ನಾವು ತಾಳ್ಮೆಯಿಂದ ಒಳ್ಳೆ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡು ಕೆಲಸವನ್ನು ಪ್ರಾರಂಭ ಮಾಡಿಕೊಳ್ಳಬೇಕು. ನಿಮ್ಮ ಸುತ್ತಮುತ್ತಲು ಇರುವ ಪರಿಸರವನ್ನು ನೋಡಿ ಅಂತಹ ಪರಿಸರಕ್ಕೆ ತಕ್ಕಹಾಗೆ ಯಾವುದಾದರೂ ಒಂದು ಬಿಸಿನೆಸ್ ಸ್ಟಾರ್ಟ್ ಮಾಡಬೇಕು. ಹಾಗಾದರೆ ಹಳ್ಳಿಗಳಲ್ಲಿ ನೀವು ವಾಸಿಸುತ್ತಿದ್ದರೆ ಈ ಒಂದು ಟಾರ್ಪಾಲು ಬಿಸಿನೆಸ್ ತುಂಬಾ ಉಪಯುಕ್ತವಾಗಿದೆ ನಗರಗಳನ್ನು ಕೂಡ ಇದು ಒಳ್ಳೆಯ ಬಿಜಿನೆಸ್ ಆದರೆ ಹಳ್ಳಿಗೆ ಹೊಲಿಸಿಕೊಂಡು ನೋಡಿದರೆ ಹಳ್ಳಿಗಳಲ್ಲಿ ಹೆಚ್ಚಾಗಿ ಉಪಯುಕ್ತವಾಗಿದೆ ಎನಿಸುತ್ತದೆ. ಹಳ್ಳಿಗಳಲ್ಲಿ ಕೃಷಿಗೆ ಹೆಚ್ಚಾಗಿ ಆಧ್ಯತೆ ಇರುತ್ತದೆ. ಕೃಷಿಗೆ ಹೆಚ್ಚಾಗಿ ಈ ಟಾರ್ಪಾಲನ್ನು ಬಳಸುತ್ತಾರೆ.

ಬೆಳೆಯನ್ನು ಮುಚ್ಚಲು ಅಂದರೆ ಮಳೆಯಿಂದ ಬೆಳೆಗಳನ್ನು ರಕ್ಷಿಸಲು ಹಾಗೂ ಬಿಸಿಲಿಗೆ ಬೆಳೆಗಳನ್ನು ಒಣಗಿಸುವಾಗ ಇವುಗಳು ಹೆಚ್ಚಾಗಿ ಉಪಯೋಗವಾಗುತ್ತದೆ. ಇನ್ನು ಕೋಳಿ ಫಾರ್ಮ್ ಯಾವುದೇ ನರ್ಸರಿಗಳಲ್ಲಿ ಕೂಡ ಈ ಟಾರ್ಪಾಲ್ ಗಳು ಉಪಯೋಗವಾಗುತ್ತದೆ. ದೊಡ್ಡ ದೊಡ್ಡ ಇಂಡಸ್ಟ್ರಿ ಗಳಲ್ಲಿ ಇವುಗಳನ್ನು ತಯಾರಿಸುತ್ತಾರೆ ನೀವು ಅಲ್ಲಿಂದ ಹೋಲ್ಸೇಲ್ ರೀತಿಯಾಗಿ ಸ್ವಲ್ಪ ತೆಗೆದುಕೊಂಡು ಬಂದರೆ ನೀವು ಕೂಡ ಹಳ್ಳಿಯಲ್ಲಿ ಒಂದು ಅಂಗಡಿ ಇಟ್ಟುಕೊಂಡು ಬಾಡಿಗೆಗೆ ಅಥವಾ ಅವರಿಗೆ ಬೇಕೆಂದರೆ ಸ್ವಂತಕ್ಕೆ ಕೂಡ ಮಾರಬಹುದು. ಟಾರ್ಪಾಲ್ ಗಳಲ್ಲಿ ಕೂಡ ವಿಧವಿಧವಾದ ಟಾರ್ಪಾಲ್ಗಳು ಇವೆ. ಉದಾಹರಣೆಗೆ ಪ್ಲಾಸ್ಟಿಕ್ ಟಾರ್ಪಲ್ ಎಚ್ಡಿಬಿ ಟಾರ್ಪಾಲ್ ಹಾಗೂ ವಾಟರ್ ಪ್ರೂಫ್ ಟಾರ್ಪಲ್ ಪಿವಿಸಿ ಟಾರ್ಪಲ್ ಮುಂತಾದವುಗಳು.

ಲಾರಿ ಹಾಗೂ ಯಾವುದೇ ವಾಹನಗಳಿಗೆ ಬಳಸಲು ಕೂಡ ಇವುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಇದರಲ್ಲಿ ಗ್ರೇಡ್ ಗಳು ಕೂಡ ಇರುತ್ತವೆ ಸ್ವಲ್ಪ ಇದರ ಬಗ್ಗೆ ತಿಳಿದುಕೊಂಡು ಅಧ್ಯಯನ ಮಾಡಿ ನೀವು ಕೂಡ ಬಿಸಿನೆಸ್ ಮಾಡಬಹುದು ಇದರಿಂದ ತುಂಬಾ ನಿಮಗೆ ಲಾಭ ಬರುತ್ತದೆ. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.