ಈ ಊರಿನ ರೈತ ತಾನು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದ ಕೋತಿಗಳಿಗೆ ಈ ರೈತ ಮಾಡಿದ ಐಡಿಯಾ ಸೂಪರ್ ಈಗ ಇದು ಎಲ್ಲೆಡೆ ವೈರಲ್ ಆಗಿದೆ…!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ. ರೈತನಿಗೆ ನಮ್ಮ ದೇಶದಲ್ಲಿ ವಿಶೇಷ ಸ್ಥಾನವಿದೆ. ರೈತ ನೆಂದರೆ ನಮ್ಮ ದೇಶಕ್ಕೆ ಬೆನ್ನೆಲುಬು ಅಂತಾನೆ ಹೇಳಬಹುದು. ಆ ರೈತ ಮಾಡುವ ಕೆಲಸದಿಂದ ನಾವು ಕೂಡ ಎಷ್ಟೇ ಕಷ್ಟಪಟ್ಟು ದುಡಿದರೂ ರೈತನ ಹಾಗೆ ಮಾಡಲು ಆಗುವುದಿಲ್ಲ.ಯಾಕೆಂದರೆ ರೈತ ಕಷ್ಟಪಟ್ಟು ದುಡಿದರೆ ಮಾತ್ರ ನಮಗೆ ತಿನ್ನಲು ಅನ್ನ ಸಿಗುತ್ತದೆ.ಸ್ನೇಹಿತರೇ ಈ ರೈತ ನೆಂದರೆ ಕೃಷಿಯಲ್ಲಿ ಅಥವಾ ಆಹಾರ ಅಥವಾ ಕಚ್ಚಾ ವಸ್ತುಗಳಿಗಾಗಿ ಸಾವಯವಗಳನ್ನು ಬೆಳೆಸುವಲ್ಲಿ ತೊಡಗಿರುವ ವ್ಯಕ್ತಿ.ರೈತನು ಬೇಸಾಯ ಮಾಡುವ ಜಮೀನನ್ನ ಮಾಲೀಕ ಆಗಿರಬಹುದು ಅಥವಾ ಇತರರು ಒಡೆಯನಾಗಿರುವ ಜಮೀನಿನಲ್ಲಿ ಕಾರ್ಮಿಕ ಕೆಲಸ ಮಾಡಬಹುದು. ಆದರೆ ಅವನು ಸಾಮಾನ್ಯವಾಗಿ ಆ ಜಮೀನಿನ ಒಡೆಯ ನಾಗಿರುತ್ತಾನೆ.

ಯಾವಾಗಲೂ ಪ್ರತಿಯೊಂದು ತುತ್ತನ್ನು ತಿನ್ನುವಾಗ ದೇವರಿಗಿಂತ ಮೊದಲು ರೈತನನ್ನು  ನೆನೆಸಿಕೊಂಡು ತುತ್ತನ್ನು ತಿನ್ನಿ ಎಂದು ಹೇಳುತ್ತಾರೆ. ಹಾಗೆಯೇ ರೈತ ಬೆಳೆಸಿದ ಹಸಿರಿನಲ್ಲಿ ಆತನ ಉಸಿರು ನಿಂತಿರುತ್ತದೆ.ರೈತರಿಗೆ ಎಷ್ಟು ಕಷ್ಟ ಪಟ್ಟರೂ ಕೂಡ ಇನ್ನೊಂದು ಯಾವುದಾದರೂ ಒಂದು ರೀತಿಯಲ್ಲಿ ಕಷ್ಟ ಗಳಾಗುತ್ತವೆ. ಅದು ಹೇಗೆಂದರೆ ಪ್ರಾಣಿಗಳು ಹೆಚ್ಚಾಗಿ ರೈತ ಬೆಳೆದ ಬೆಳೆಯನ್ನು ಹಾಳು ಮಾಡುತ್ತವೆ ಹಾಗಾಗಿ ಕೆಲವು ರೈತರು ಹೀಗೆ ಹಾಳುಮಾಡುವ ಪ್ರಾಣಿಗಳಿಂದ ಬೇಸತ್ತು ಬಿಡುತ್ತಾರೆ.ಹೀಗೆ ಬೇಸತ್ತು ಕೆಲವರು ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಯುವುದನ್ನು ಕೂಡ ಬಿಡುತ್ತಾರೆ. ಸ್ನೇಹಿತರೆ ನಾನು ಇಂದಿನ ಮಾಹಿತಿಯಲ್ಲಿ ಇಲ್ಲಿ ಒಬ್ಬ ರೈತ ಬೆಳೆ ನಾಶ ಮಾಡುವ ಕೋತಿಗಳಿಗೆ ಮಾಡಿದ ಸುಪರ್ ಟೆಕ್ನಿಕ್ ಅನ್ನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ರೈತನು ಮಾಡಿದ ಈ ಟೆಕ್ನಿಕ್ ವಿದೇಶದಲ್ಲೂ ಕೂಡ ವೈರಲ್ ಆಗಿದೆ. ಅದು ಯಾವ ಟೆಕ್ನಿಕ್ ಎಂದು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ. ಇದಂತೂ ರೈತರಿಗೆ ದೊಡ್ಡ ಪಜೀತಿಯಾಗಿರುತ್ತದೆ ಹೇಳಿಕೊಳ್ಳಲಾಗದ ನೋವು ರೈತನಲ್ಲಿ ಇರುತ್ತದೆ. ರೈತರು ಲಕ್ಷಗಟ್ಟಲೆ ಹಣ ಗಳನ್ನು ಸುರಿಸಿ ತಿಂಗಳುಗಟ್ಟಲೆ ಬೆವರನ್ನು ಸುರಿಸಿ ಬೆಳೆಯನ್ನು ಕಟಾವು ವರೆಗೂ ಕೂಡಾ ತರುತ್ತಾರೆ.ಆದರೆ ಏಕಾಏಕಿ ದಾಳಿ ಮಾಡುವ ಆಕ್ರಮಣ ಕಾರಿ ಕೋತಿಗಳ ಗುಂಪು ಹಿಂದುಮುಂದು ತಿಳಿಯದೆ ಬೆಳೆಯನ್ನು ಕುಕ್ಕಿ ತಿಂದು ಅದನ್ನು ನಾಶ ಮಾಡುತ್ತವೆ. ಈ ರೀತಿಯಾಗಿ ತೊಂದರೆಯನ್ನು ಅನುಭವಿಸುವಂತಹ ರೈತ ಕೋತಿಗಳ ಮೇಲೆ ಕಂಪ್ಲೇಂಟನ್ನು ಕೂಡ ಕೊಡಲು ಆಗುವುದಿಲ್ಲ.

ಅವುಗಳಿಗೆ ಪಾಠ ಕಲಿಸಲು ಕೂಡ ಆಗದೇ ಇರುವಂತಹ ಸಂದಿಗ್ಧ ಪರಿಸ್ಥಿತಿಗೆ ಬಂದು ನಿಲ್ಲುತ್ತಾನೆ ರೈತ.ಈ ರೀತಿಯಾಗಿ ಕಷ್ಟವನ್ನು ಅನುಭವಿಸುತ್ತಿರುವ ಒಬ್ಬ ರೈತ ಸಕ್ಕತ್ತಾಗ್ ಇರುವ ಒಂದು ಸೂಪರ್ ಟೆಕ್ನಿಕ್ ಉಪಯೋಗಿಸಿದ್ದಾರೆ. ಅದೇನೆಂದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರೈತನ ಹೆಸರು ಶ್ರೀಕಾಂತ್.ಹೇಳಿಕೇಳಿ ಇದು ಮಲೆನಾಡು ಇಲ್ಲಿನ ಕೋತಿಗಳ ಹಾವಳಿ  ಕೂಡ ತುಂಬಾನೇ ಜಾಸ್ತಿಯಾಗಿರುತ್ತದೆ. ಇನ್ನೇನು ಫಸಲು ಬಂತು ಕಟಾವು ಮಾಡಬೇಕು ಎನ್ನುವ ಸಮಯದಲ್ಲಿ ಕೋತಿಗಳು ಕಾಫಿ ತೋಟ ಅಡಿಕೆ ತೋಟ ಇನ್ನಿತರ ಬೆಳೆಯನ್ನು ಹಾಳು ಮಾಡುತ್ತಿದ್ದವು.

ಅವುಗಳನ್ನು ನಿಯಂತ್ರಿಸುವುದು ಅಸಾಧ್ಯದ ಮಾತಾಗಿತ್ತು. ಈ ಕೋತಿಗಳ ಆಟವನ್ನು ಹೇಗೆ ಕಂಟ್ರೋಲ್ ಮಾಡಬೇಕು ಎಂದು ಚಿಂತಿಸುತ್ತಿದ್ದ ಶ್ರೀಕಾಂತ್ ಅವರಿಗೆ ಭಟ್ಕಳದ ಒಬ್ಬ ರೈತನ ಐಡಿಯಾ ಕಣ್ಣಿಗೆ ಬಿತ್ತು. ಭಟ್ಕಳದ ರೈತ ಕೋತಿಗಳ ದಾಳಿಯನ್ನು ತಪ್ಪಿಸಲು ಒಂದು ದೊಡ್ಡ ಹುಲಿ ಯಂತಿರುವ ಡಾಲ್ ಅನ್ನು ತಂದು ತೋಟದ ಬಳಿ ಇಟ್ಟಿದ್ದರು.ಅದು ನಿಜವಾದ ಹುಲಿ ಎಂದು ಭಾವಿಸಿದ ಕೋತಿಗಳು ತೋಟದ ಕಡೆ ಬರುತ್ತಿರಲಿಲ್ಲ. ಅದರಂತೆ ಶ್ರೀಕಾಂತ್ ಅವರು ಗೋವಾದಿಂದ ಒಂದು ಹುಲಿಯ ಡಾಲ್ ಅನ್ನು ತರಿಸಿ ತೋಟದ ಬಳಿ ಇಟ್ಟರು.ಇದು ಸ್ವಲ್ಪ ದಿನ ಆ ಕೆಲಸ ಮಾಡಿತು ದಿನಕಳೆದಂತೆ ಹುಲಿಯ ಬಣ್ಣ ಕಳೆಗುಂದುತ್ತಾ ಬಂದಿತ್ತು.  ನಿಜ ಕೋತಿಗಳಿಗೆ ಗೊತ್ತಾಗಿ ಮತ್ತೆ ತೋಟಕ್ಕೆ ದಾಳಿ ಮಾಡತೊಡಗಿದವು. ಮತ್ತೆ ಆಲೋಚನೆಗೆ ಬಿದ್ದಂತಹ ಶ್ರೀಕಾಂತ್ ಅವರಿಗೆ ಸಕ್ಕತ್ ಐಡಿಯಾ ಹೊಳೆಯಿತು.

ವಿಧವಿಧವಾದ ಬಣ್ಣಗಳನ್ನು ತೆಗೆದುಕೊಂಡು ತಮ್ಮ ನಾಯಿಗಳಿಗೆ ಹುಲಿಯಂತೆ ಬಣ್ಣ ಹಚ್ಚಿದರು. ಪೇಂಟ್ ಆದಮೇಲೆ ನಾಯಿ ಹುಲಿಯಂತೆ ಕಾಣಿಸಿತು. ಬೆಳಗ್ಗೆ ಒಂದು ಸಾರಿ ಮತ್ತು ಸಾಯಂಕಾಲ ಒಂದು ಸಾರಿ ಇಡೀ ತೋಟವನ್ನು ಸುತ್ತಾಡಿದರು ಶ್ರೀಕಾಂತ್ ಅವರು.ನಿಜವಾದ ಹುಲಿ ಬಂದುಬಿಟ್ಟಿದೆ ತೋಟಕ್ಕೆ ಹೋದರೆ ನಮ್ಮ ಗತಿ ಮುಗಿಯಿತು ಎಂದುಕೊಂಡು ಕೋತಿಗಳು ಶ್ರೀಕಾಂತ್ ಅವರ ತೋಟದ ಕಡೆ ತಿರುಗಿ ಕೂಡ ನೋಡುತ್ತಿಲ್ಲ ಈಗ. ಕೊನೆಗೂ ಐಡಿಯಾ ಸಕ್ಸಸ್ ಆಯ್ತು.ಶ್ರೀಕಾಂತ್ ಅವರ ಸೂಪರ್ ಐಡಿಯಾವನ್ನು ನೋಡಿ ಮೂಕವಿಸ್ಮಿತನಾದ ಸುತ್ತಮುತ್ತಲಿನವರು ಅದೇ ಐಡಿಯಾವನ್ನು ಎಲ್ಲರೂ ಕೂಡ  ಮಾಡುತ್ತಿದ್ದಾರೆ ಇದರಿಂದ ಕೋತಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳುತ್ತಾರೆ.

ಶ್ರೀಕಾಂತ್ ಅವರ ಕ್ರಿಯೇಟಿವ್ ಐಡಿಯಾಸ್ ದೇಶ-ವಿದೇಶಗಳಲ್ಲೂ ಕೂಡ ವೈರಲ್ ಆಗಿದೆ. ಕೋತಿಗಳಿಗೆ ಹಿಂಸೆ ನೀಡದೆ ವಿಷ ಹಾಕದೆ ಒಂದು ಸೂಪರ್ ಆಗಿರುವಂತಹ ಐಡಿಯಾವನ್ನು ಕಂಡುಕೊಂಡು ಕೋತಿಗಳಿಗೆ ಹೆದರುಸುತ್ತಿರುವ ನ್ಯಾಚುರಲ್ ಟೆಕ್ನಿಕ್.ನೋಡಿದ್ರಲ್ಲ ಸ್ನೇಹಿತರೆ ನಮ್ಮ ರೈತರ ಮನಸ್ಸು ಮಾಡಿದರೆ ಏನನ್ನಾದರೂ ಮಾಡಲು ಸಿದ್ಧರಾಗಿರುತ್ತಾರೆ. ಇವರ ರೀತಿ ಎಲ್ಲರೂ ಕೂಡ ಯೋಚನೆ ಮಾಡಿಕೊಂಡು ವಿಧವಿಧವಾದ ಕ್ರಿಯೇಟಿವ್ ಐಡಿಯಾಗಳನ್ನು ಕಂಡುಕೊಂಡರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಎರಡುಮಾತಿಲ್ಲ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ಈ ಸಂಪೂರ್ಣ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಳುಹಿಸಿಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.