ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಬಹಳ ಇದೆಯೇ .. ಹಣದ ಹರಿವು ಹೆಚ್ಚಾಗಬೇಕೆಂದರೆ ಶುಕ್ರವಾರದ ದಿನ ಆರೇ ಆರು ಗರಿಕೆಯಿಂದ ಹೀಗೆ ಮಾಡಿ ನಿಮ್ಮ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶುಕ್ರವಾರದ ದಿನ 6 ಗರಿಕೆಗಳಿಂದ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆಗಳು ತುಂಬಾ ಕಡಿಮೆಯಾಗುತ್ತದೆ.ಹಾಯ್ ಸ್ನೇಹಿತರೆ ಈಗ ನಾನು ಹೇಳುವ ಹೀಗೊಂದು ಪರಿಹಾರ ನಿಮ್ಮ ಜೀವನಕ್ಕೆ ತುಂಬಾ ಬದಲಾವಣೆಯನ್ನು ತರಬಹುದು ಒಂದು ಸಲ ಪರಿಹಾರ ಮಾಡಿ ನೋಡಿ ಸಾಕಷ್ಟು ಒಳ್ಳೆಯ ಫಲಗಳು ನಿಮಗೆ ಸಿಗುತ್ತದೆ ಹಾಗಾದರೆ ಈ ಪರಿಹಾರವನ್ನು ಹೇಗೆ ಮಾಡುವುದು ಮತ್ತು ಈ ಪರಿಹಾರವನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಹಾಗೆ ಇದರಿಂದ ಆಗುವ ಲಾಭಗಳ ಬಗ್ಗೆ ಕೊಡ ತಿಳಿಸುತ್ತೇನೆ. ಹಣಕಾಸಿನ ತೊಂದರೆ ಯಾರಿಗಿರುವುದಿಲ್ಲ ಹೇಳಿ ಪ್ರತಿ ನಿತ್ಯ ಬೆಳಗಾದರೆ ದುಡ್ಡಿನಿಂದಲೇ ನಮ್ಮ ಕೆಲಸಗಳು ಆರಂಭವಾಗುತ್ತವೆ ನಾವು ದುಡಿಯುವ ತಕ್ಕಹಾಗೆ ನಮ್ಮ ಜೀವನವನ್ನು ನಡೆಸಿಕೊಂಡು ಹೋಗಬೇಕು.

ದುಡಿಯುವುದು ಕಡಿಮೆ ಹಾಗೂ ಖರ್ಚು ಜಾಸ್ತಿ ಎಂದಾಗ ಮನುಷ್ಯ ಸಾಲದ ಬಾರ ಹೆಚ್ಚಿಸಿಕೊಳ್ಳುತ್ತಾನೆ. ಮತ್ತೆ ಆ ಸಾಲಕ್ಕಾಗಿ ಕಷ್ಟಪಡುತ್ತಾ ದುಡಿದು ಹಣವನ್ನು ಕೊಡುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿರುತ್ತದೆ ಹೀಗೆ ಮೇಲಿಂದ ಮೇಲೆ ಸಮಸ್ಯೆಗಳು ಹೆಚ್ಚಾಗಿ ಹಣವು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಇನ್ನೊಬ್ಬರು ನಿಮ್ಮ ಬಳಿ ದುಡ್ಡು ತೆಗೆದುಕೊಂಡು ನಿಮಗೆ ಮೋಸ ಮಾಡಿ ಕೊಡದೇ ಹೋಗಬಹುದು ಇಂತಹ ಸಮಸ್ಯೆಗಳು ಕೂಡ ಹೆಚ್ಚಾಗಿದೆ ಇನ್ನು ಮನೆಯ ಸುತ್ತಮುತ್ತ ಇರುವವರು ಹಾಗೂ ನಿಮ್ಮ ಹಿತಶತ್ರುಗಳು ನಿಮಗೆ ಹಣದ ಸಮಸ್ಯೆ ಆಗಬೇಕೆಂದು ಬಯಸುತ್ತಾರೆ ಅಂತವರು ಕೂಡ ನಿಮಗೆ ಹಣ ಬರದೇ ಕಟ್ಟಿಹಾಕುವಂತೆ ಮಾಡಿರುತ್ತಾರೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಈ ಒಂದು ಪರಿಹಾರ ತುಂಬಾ ಮುಖ್ಯವಾಗಿದೆ.

ಹಣಕಾಸಿನ ತೊಂದರೆಗಳು ಯಾರ ಮನೆಯಲ್ಲಿ ಹೆಚ್ಚಾಗಿದೆ ಅಂತವರು ಈ ಪರಿಹಾರ ಮಾಡಿದರೆ ಒಳ್ಳೆಯ ಫಲ ನಿಮಗೆ ಸಿಕ್ಕೆ ಸಿಗುತ್ತದೆ. ಇವಂದು ಪರಿಹಾರವನ್ನು ಶುಕ್ರವಾರದ ದಿನ ಮಾಡಬೇಕು ಮತ್ತು ನಂಬಿಕೆ ಹಾಗೂ ಭಕ್ತಿಯಿಂದ ಗಣೇಶನನ್ನು ಮನದಲ್ಲಿ ನೆನೆದು ಪರಿಹಾರವನ್ನು ಪ್ರಾರಂಭ ಮಾಡಬೇಕು. ಎಲ್ಲ ದೋಷಗಳನ್ನು ದೂರಮಾಡುವ ವಿಘ್ನ ವಿನಾಯಕ ನಿಮ್ಮನ್ನು ಆಶೀರ್ವದಿಸಿ ಒಳ್ಳೆಯದಾಗುವಂತೆ ಮಾಡುತ್ತಾನೆ. ಹಾಗಾದರೆ ಈ ಒಂದು ಪರಿಹಾರಕ್ಕೆ ಬೇಕಾಗುವ ಸಾಮಗ್ರಿಗಳು ಏನೆಂದು ಹೇಳುತ್ತೇನೆ. ಶುಕ್ರವಾರದ ದಿನ ಬೆಳಗ್ಗೆ ಸ್ನಾನ ಮಾಡಿ 6 ಗರಿಕೆ ಪತ್ರಿಯನ್ನು ತೆಗೆದುಕೊಳ್ಳಿ. ನಂತರ ಒಂದು ಬಿಳಿ ಬಣ್ಣದ ದಾರ ಹಾಗೂ ಸ್ವಲ್ಪ ಅರಿಶಿನ. ದಾರವು ಮನೆಯಲ್ಲಿ ಹೂವು ಕಟ್ಟಲು ಬಳಸುವ ದಾರವಾದರೆ ಒಳ್ಳೆಯದು.

ಈ ದಾರಕ್ಕೆ ಅರಿಶಿಣವನ್ನು ಹಚ್ಚಿ ಗರಿಕೆ ಪತ್ರಿಗಳನ್ನು ದಾರದಿಂದ ಕಟ್ಟಬೇಕು. ಸ್ನೇಹಿತರೆ ನೋಡಿ ಅರಿಶಿಣ ಗುರುಗ್ರಹದ ಸಂಕೇತ ಹಾಗೂ ಬಿಳಿ ಬಣ್ಣ ಎನ್ನುವುದು ರಾಹು ಗ್ರಹದ ಬಣ್ಣ ಹಾಗೂ ದಾರವು ಶುಕ್ರಗ್ರಹದ ಸಂಕೇತ. ಅರಿಶಿಣವೆಂದರೆ ಮಂಗಳಕರವಾದುದು ಎಂದು ನಿಮಗೆ ತಿಳಿದಿದೆ. ಇಂತಹ ವಸ್ತುಗಳನ್ನು ಬಳಸಿಕೊಂಡು ಮಾಡುವ ಪರಿಹಾರ ಎಂದು ನಿಮಗೆ ಒಳ್ಳೆಯ ಫಲವನ್ನು ಸಿಗುವಂತೆ ಮಾಡುತ್ತದೆ. ಎಲ್ಲಾ ಗ್ರಹಗಳ ದೋಷವೂ ಇದರಿಂದ ದೂರ ಆಗುತ್ತದೆ. ನಂತರ ಪೂಜೆ ಮಾಡಿ ಆ ಗರಿಕೆ ಪತ್ರೆಗಳನ್ನು ಎಡಗೈಯಲ್ಲಿ ಇಟ್ಟುಕೊಳ್ಳಬೇಕು ನಂತರ ಅದರ ಮೇಲೆ ಬಲಗೈಯಿಂದ ಮುಚ್ಚಿ ಮನದಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು ಹಾಗೂ ನಿಮಗೆ ಇರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬೇಕು

ಹೀಗೆ ಮಾಡಿದ ನಂತರ ಗಣೇಶನ ಒಂದು ಮಂತ್ರವನ್ನು ಹೇಳಬೇಕು ಆ ಮಂತ್ರ ಹೀಗಿದೆ. ಓಂ ಶ್ರೀಂ ಹಿಂ ಕ್ಲೀಂ ಗೌಂ ಗಂ ಗಣಪತಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಹೇಳಿಕೊಳ್ಳಬೇಕು. ಈ ರೀತಿಯಾಗಿ ಮಾಡಿ ಇದನ್ನು ನೀವು ಹಣ ಇರುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಅಥವಾ ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಇಡಬೇಕು. ಸ್ನೇಹಿತರೆ ಈ ರೀತಿಯಾಗಿ ಐದು ಶುಕ್ರವಾರ ಮಾಡಿನೋಡಿ ನಿಮಗೆ ಸಾಕಷ್ಟು ಲಾಭ ಸಿಗುತ್ತದೆ. ಆದರೆ ಈ ಪರಿಹಾರವನ್ನು ಭಕ್ತಿಯಿಂದ ಹಾಗೂ ನಂಬಿಕೆಯಿಂದ ಮಾಡಬೇಕು. ಹಣಕಾಸಿನ ತೊಂದರೆ ನಿಮಗೆ ಕಾಡುವುದಿಲ್ಲ. ಮನೆಯಲ್ಲಿ ಪೂಜೆ ಮಾಡಿದ ನಂತರ ಒಂದೊಂದೇ ಸಮಸ್ಯೆಗಳು ದೂರವಾಗುತ್ತಾ ಹೋಗುತ್ತದೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಬದಲಾವಣೆ ಆಗುತ್ತದೆ.

ಸ್ನೇಹಿತರೆಂದು ಪರಿಹಾರವನ್ನು ಮಾಡಲು ಯಾವುದೇ ಖರ್ಚು ಕೂಡ ಇಲ್ಲ ಸರಳವಾದ ಪರಿಹಾರವನ್ನು ಸುಲಭವಾಗಿ ನೀವು ಮನೆಯಲ್ಲಿ ಮಾಡಬಹುದು. ಹಾಗಾದರೆ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.