ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿದೆ ಒಂದು ರಹಸ್ಯಮಯ ಹುತ್ತ ಒಂದು ಬಾರಿ ಈ ಹುತ್ತವನ್ನು ನೀವು ಈ ರೀತಿ ಪೂಜೆ ಮಾಡಿದರೆ ಸಾಕು ಯಾವುದೇ ದೋಷಗಳೆಲ್ಲ ಪರಿಹರವಾಗುತ್ತವೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಈ ಪರಮಪವಿತ್ರ ಮಣ್ಣನ್ನು ಉಪಯೋಗಿಸಿದರೆ ಇಷ್ಟೆಲ್ಲ ಲಾಭವಿದೆ ನೋಡಿ.ದಕ್ಷಿಣ ಭಾರತದ ಪ್ರಸಿದ್ಧ ನಾಗದೇವರ ದೇವಸ್ಥಾನ ಕುಕ್ಕೆಸುಬ್ರಹ್ಮಣ್ಯದಲ್ಲಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ನಾಗದೇವನ ಆರಾಧನೆ ಇಲ್ಲಿ ಮಹತ್ವವಾದದ್ದು. ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಈ ದೇವಸ್ಥಾನ ಊರಿನ ಮಧ್ಯದಲ್ಲಿದ್ದು ನದಿ ಕಾಡು ಪರ್ವತಗಳಿಂದ ಆವೃತವಾಗಿದೆ.

ಇಲ್ಲಿಯ ಪ್ರಕೃತಿ ತುಂಬಾ ಸುಂದರವಾಗಿದೆ. ಜಾತಕಗಳಲ್ಲಿನ ಸರ್ಪದೋಷದಿಂದಾಗಿ ತಡ ವಿವಾಹ, ಅನಾರೋಗ್ಯ,ವೈವಾಹಿಕ ಸುಖ ಭಂಗ, ಪುತ್ರ ಹೀನತೆ,ಗಂಡುಮಕ್ಕಳ ಆಗದಿರುವುದು ಇನ್ನು ಮುಂತಾದ ತೊಂದರೆಗಳಿಗೆ ಇಲ್ಲಿ ಪರಿಹಾರ ಸಿಗುವುದು. ಕುಜದೋಷವಿರುವವರೂ ಕೂಡ ಇಲ್ಲಿ ಬಂದು ಪರಿಹಾರ ಮಾಡಿಕೊಳ್ಳಬಹುದು. ದೋಷಗಳು ಎಲ್ಲರಿಗೂ ಇರುತ್ತವೆ ಅದರಲ್ಲಿ ನಾಗದೋಷವು ತುಂಬಾ ಜನರಿಗೆ ಇರುತ್ತದೆ.ಇಲ್ಲಿ ವರ್ಷಕ್ಕೊಮ್ಮೆ ಕಾರ್ತಿಕಮಾಸದಲ್ಲಿ ಚಂಪಾ ಸೃಷ್ಟಿ ಉತ್ಸವ ಆರಂಭವಾಗುತ್ತದೆ. ಈ ಚಂಪಾ ಸೃಷ್ಟಿ ಉತ್ಸವದ ಮುನ್ನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಪ್ರದಾಯದಂತೆ ಮೂಲ ಮೃತ್ತಿಕ ಪ್ರಸಾದವನ್ನು ನಾಗದೇವನ ಗರ್ಭಗುಡಿಯಿಂದ ತೆಗೆಯಲಾಗುತ್ತದೆ.

ಕುಮಾರಧಾರ ನದಿಯ ದಡದಲ್ಲಿರುವ ಕುಕ್ಕೆ ಸುಬ್ರಮಣ್ಯವು 5000 ವರ್ಷಗಳಷ್ಟು ಹಳೆಯದಾದ ದೇವಾಲಯವಾಗಿದೆ. ಕುಕ್ಕೆ ಸುಬ್ರಮಣ್ಯವು ‘ನಾಗರಾಧಾನೆ’ ಅಥವಾ ನಾಗ ದೇವರ ಪೂಜೆ ಮತ್ತು ಸರ್ಪ ದೋಷ  ನಿವಾರಣೆಗೆ ಜನಪ್ರಿಯ ಸ್ಥಳವಾಗಿದೆ.ಇತಿಹಾಸ ಸಂತ ಪರಶುರಾಮ ರಚಿಸಿದ ಏಳು ಪವಿತ್ರ ಸ್ಥಳಗಳಲ್ಲಿ ಕುಕ್ಕೆ ಸುಬ್ರಮಣ್ಯ ಕೂಡ ಒಂದಾಗಿದೆ. ದೈವಿಕ ಸರ್ಪ ವಾಸುಕಿ ಗರುಡ  ಪೌರಾಣಿಕ ಪಕ್ಷಿ ಮತ್ತು ವಿಷ್ಣುವಿನ ಅಧಿಕೃತ ವಾಹನ ಬೇಟೆಯಿಂದ ತಪ್ಪಿಸಿಕೊಳ್ಳಲು ಕುಕ್ಕೆ ಸುಬ್ರಮಣ್ಯದಲ್ಲಿ ಆಶ್ರಯ ಪಡೆದಿದ್ದನೆಂದು ನಂಬಲಾಗಿದೆ.

ಕುಕ್ಕೇ ಸುಬ್ರಮಣ್ಯ ಬಳಿಯ ಕುಮಾರ ಪರ್ವತದಲ್ಲಿ ಭಗವಾನ್ ಕುಮಾರಸ್ವಾಮಿ ಮತ್ತು ಅವರ ಸಹೋದರ ಗಣೇಶ ರಾಕ್ಷಸರಾದ ತಾರಕ ಮತ್ತು ಶೂರಪದ್ಮಾಸುರರನ್ನು ಸಂಹರಿಸಿದ್ದಾರೆ ಎನ್ನಲಾಗಿದೆ. ವಿಜಯದ ನಂತರ, ಭಗವಾನ್ ಕುಮಾರಸ್ವಾಮಿ ಇಂದ್ರನ ಮಗಳು ದೇವಸೇನಳನ್ನು ವಿವಾಹವಾದ ಸ್ಥಳ ಕುಕ್ಕೆ ಸುಬ್ರಮಣ್ಯಕ್ಕೆ ಹತ್ತಿರದ ಕುಮಾರ ಪರ್ವತವಾಗಿದೆ. ಎಲ್ಲಾ ಪ್ರಮುಖ ದೇವರುಗಳು ಈ ವಿವಾಹಕ್ಕೆ ಸಾಕ್ಷಿಯಾಗಿ ಈ ಸ್ಥಳಕ್ಕೆ ದೈವಿಕ ಶಕ್ತಿಯನ್ನು ನೀಡಿದರು ಎಂದು ನಂಬಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರು ಇದನ್ನು ವಿಧಿವಿಧಾನಗಳಿಂದ ಮುಂಜಾನೆಯಲ್ಲಿ ಕುಕ್ಕೆ ಶುಭಮುಹೂರ್ತದಲ್ಲಿ ಇದನ್ನು ತೆಗೆಯುತ್ತಾರೆ. ಭಕ್ತರ ಪಾಲಿನ ಈ ಶ್ರೇಷ್ಠವಾದ ಮಣ್ಣನ್ನು ಆದಿ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಹುತ್ತದಿಂದ ತೆಗೆಯುತ್ತಾರೆ ಎಂದು ಹೇಳುತ್ತಾರೆ. ಈ ಮಣ್ಣನ್ನು ಕಾರ್ತಿಕಮಾಸದ ಏಕಾದಶಿಯಂದು ತೆಗೆಯುತ್ತಾರೆ. ಇದು ಪರಮಪವಿತ್ರವಾದ ಮಣ್ಣು ಎಂದು ಹೆಸರು ವಾಸಿಯಾಗಿದೆ. ವರ್ಷದ ಒಂದು ದಿನ ಮಾತ್ರ ಈ ಮಣ್ಣನ್ನು ತೆಗೆಯುತ್ತಾರೆ. ಈ ಪವಿತ್ರವಾದ ಮಣ್ಣು ನಿಮಗೆ ಬೇರೆ ಎಲ್ಲೂ ಸಿಗುವುದಿಲ್ಲ ಮೊದಲಾಗಿ ಕುಕ್ಕೆಸುಬ್ರಹ್ಮಣ್ಯದಲ್ಲಿ ಮಾತ್ರ ಇರುತ್ತದೆ. ಆದಿ ಸುಬ್ರಹ್ಮಣ್ಯದ ಹುತ್ತದಿಂದ ಮೂರು ಹಿಡಿ ಮಣ್ಣನ್ನು ತೆಗೆದು ಕುಮಾರಪರ್ವತದ ತುದಿಯ ಮಣ್ಣನ್ನು ಸೇರಿಸಿ ಭಕ್ತರಿಗೆ ಇಲ್ಲಿ ಪ್ರಸಾದದ ರೂಪದಲ್ಲಿ ಕೊಡುತ್ತಾರೆ.

ಈ ಪ್ರಸಾದ ತಿನ್ನುವುದರಿಂದ ನಾಗದೇವನ ಕನಸುಗಳಿಂದ ಮತ್ತು ನಾಗ ಭಯದಿಂದ ಮುಕ್ತಿ ಸಿಗುತ್ತದೆ ಮಾತು ತೊದಲಿಸುವವರು ಇದನ್ನು ತಿಂದರೆ ವಾಸಿಯಾಗುತ್ತದೆ. ಮಾತನ್ನು ತೊದಲಿಸುವವರು ಇದನ್ನು ನೀರಿನಲ್ಲಿ ಹಾಕಿ ಕುಡಿಯಬೇಕು. ಈ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯದಿಂದ ಅಲ್ಲದೇ ವಿದೇಶಗಳಿಂದ ಆಗಮಿಸುತ್ತಾರೆ. ಸುಬ್ರಹ್ಮಣ್ಯಕ್ಕೆ ಮಕ್ಕಳಾಗದವರು ಕೂಡ ಇಲ್ಲಿ ಬಂದು ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಹಾಗೆಯೇ ಇಲ್ಲಿ ಹೋದವರಿಗೆ ಒಳ್ಳೆಯ ಶುಭ ಸೂಚನೆ ಸಿಗುತ್ತದೆ. ಇಲ್ಲಿಗೆ ಬಂದು ಹೋಗುವವರು ತುಂಬಾ ಹೆಚ್ಚಾಗಿದ್ದಾರೆ ಹಾಗೆಯೇ ಇಲ್ಲಿನ ಪೂಜೆಗಳಲ್ಲ ಸತ್ಯವಾಗಿವೆ.

ಈ ಒಂದು ದೇವಸ್ಥಾನ ನಮ್ಮ ಕರ್ನಾಟಕದಲ್ಲಿರುವುದು ಒಂದು ಹೆಮ್ಮೆಯ ವಿಷಯ. ಧರ್ಮಸ್ಥಳದಿಂದ ಕೇವಲ ಐವತ್ತು ಕಿಲೋಮೀಟರ್ ದೂರವಿದೆ ಹಾಗೂ ಧರ್ಮಸ್ಥಳದಿಂದ ಹೋಗಲು ತುಂಬಾ ವಾಹನಗಳ ಸೌಕರ್ಯವಿದೆ. ಮದುವೆಯಾದವರು ಇಲ್ಲಿಗೆ ಒಂದು ಸಲ ಹೋಗಿ ಬರುವುದರಿಂದ ದೋಷಗಳೆಲ್ಲ ಹೋಗುತ್ತವೆ ಹಾಗೂ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ದೇವರಲ್ಲಿ ನಾಗದೇವನು ಕೂಡ ಒಬ್ಬ. ಶಿವನ ಕೊರಳಿನಲ್ಲಿ ನಾಗದೇವ ಇರುವುದು ಎಷ್ಟು ಸತ್ಯವೋ ಅಷ್ಟೇ ಕುಕ್ಕೆಸುಬ್ರಹ್ಮಣ್ಯದಲ್ಲಿ ನಾಗದೇವ ಇರುತ್ತಾನೆ.

ಜೀವನದಲ್ಲಿ ಒಂದು ಬಾರಿಯಾದರೂ ಈ ಸ್ಥಳಕ್ಕೆ ಹೋದರೆ ನಿಮ್ಮ ಜೀವನ ಆರೋಗ್ಯವಾಗಿ ನೆಮ್ಮದಿಯಿಂದ ಇರುತ್ತದೆ. ಹಾಗಾದ್ರೆ ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ತುಂಬಾ ಲಾಭವನ್ನು ತರುತ್ತದೆ ಎಂದು ನಾನು ನಂಬಿದ್ದೇನೆ. ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಲಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.