ಸರಿಯಾದ ಬೆಲೆಗೆ ನಿಮ್ಮ ಅಸ್ತಿ ವ್ಯಾಪಾರ ಆಗುತ್ತಿಲ್ವ ಹಾಗಾದ್ರೆ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಸಾಕು ನಿಮ್ಮ ಅಸ್ತಿ ಅಂದುಕೊಂದಕ್ಕಿಂತ ಜಾಸ್ತಿ ದುಡ್ಡಿಗೆ ಸೇಲ್ ಆಗತ್ತೆ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಂಗಳವಾರ ದಿನ ಹೀಗೆ ಮಾಡಿದರೆ ನೀವು ಸೇಲ್ ಮಾಡುವ ಸ್ಥಳಕ್ಕೆ ಸರಿಯಾದ ಬೆಲೆ ಸಿಗುತ್ತದೆ ಹಾಗೂ ಇದರಿಂದ ನಿಮಗೆ ತುಂಬಾ ಕೂಡಾ ಆಗುತ್ತದೆ.
ಹಾಯ್ ಸ್ನೇಹಿತರೆ ಹೆಣ್ಣು-ಹೊನ್ನು-ಮಣ್ಣು ಇದರಿಂದ ನಿಮಗೆ ಎಷ್ಟು ಲಾಭವಿದೆ ಅಷ್ಟೇ ನಾವು ನಿರಾಸೆ ಅನುಭವಿಸಬೇಕಾಗುತ್ತದೆ. ಯಾವುದೇ ಹೆಣ್ಣು-ಹೊನ್ನು-ಮಣ್ಣು ಸಿಗಬೇಕೆಂದರೆ ಋಣಾನುಬಂದ ಇರಬೇಕೆಂದು ಹೇಳುತ್ತಾರೆ. ಇದು ನಿಜ ಕೂಡ ಹೌದು. ಪುರಾತನ ಕಾಲದಿಂದಲೂ ಹೆಣ್ಣು-ಹೊನ್ನು ಮಣ್ಣಿನಿಂದ ತುಂಬಾ ನೋವನ್ನು ಪಡೆದಿರುವವರು ಇದ್ದಾರೆ ಹಾಗೆ ಲಾಭವನ್ನು ಕೂಡ ಪಡೆದಿರುವವರು ಇದ್ದಾರೆ. ಕೆಲವೊಂದು ಪರಿಸ್ಥಿತಿಗಳಲ್ಲಿ ಹಣಕಾಸಿನ ಅವಶ್ಯವಿದ್ದಾಗ ನಾವು ಗಳಿಸಿರುವ ಆಸ್ತಿಯನ್ನು ಮಾರಬೇಕಾಗುವ ಪರಿಸ್ಥಿತಿ ನಮಗೆ ಬರಬಹುದು. ಆದರೆ ನಾವು ಅದನ್ನು ಒಳ್ಳೆಯ ಬೆಲೆಗೆ ಮಾರಬೇಕು.

ಕೆಲವೊಬ್ಬರಿಗೆ ಮೋಸ ಮಾಡುವುದರಿಂದ ನಾವು ಲಾಭವನ್ನು ಪಡೆಯದೆ ನಮ್ಮ ಸ್ಥಳವನ್ನು ಮಾರಬೇಕಾಗುತ್ತದೆ. ಅದಕ್ಕಾಗಿ ಈಗ ನಾನು ಹೇಳುವ ಈ ಪರಿಹಾರವನ್ನು ನೀವು ಮಾಡಿದರೆ ನೀವು ಒಳ್ಳೆಯ ಬೆಲೆಗೆ ನಿಮ್ಮ ಸ್ಥಳವನ್ನು ಲಾಭ ಆಗುವಂತೆ ಮಾಡಬಹುದು. ಎಷ್ಟು ಆಸೆ ಕನಸುಗಳನ್ನು ಇಟ್ಟುಕೊಂಡು ಒಂದು ಸ್ಥಳವನ್ನು ಕೊಂಡಿರುತ್ತೇವೆ. ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅಥವಾ ಮನೆಯಲ್ಲಿರುವ ಹಣದ ತೊಂದರೆ ಇಂತಹ ಎಲ್ಲಾ ತೊಂದರೆಗಳಿಗೆ ನಾವು ಮಾರಬೇಕಾಗುತ್ತದೆ. ಮಂಗಳವಾರ ಸುಬ್ರಹ್ಮಣ್ಯಸ್ವಾಮಿಯ ಆರಾಧನೆ ಮಾಡುವುದರಿಂದ ನೀವು ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಪ್ರತಿ ಮಂಗಳವಾರ ಸ್ನಾನ ಮಾಡಿ ಪೂಜೆ ಮಾಡಿ ಈ ಒಂದು ಮಂತ್ರವನ್ನು ಪಠಿಸುತ್ತಾ ಇರಬೇಕು ಒಂದಲ್ಲ ಒಂದು ದಿನ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ.

ಮಂಗಳವಾರ ದಿನ ಯಾವಾಗ ಷಷ್ಟಿ ಬರುತ್ತದೆ ದಿನ ತುಂಬಾ ಶ್ರೇಷ್ಠವಾದ ದಿನ. ಮಂಗಳವಾರ ಎಂದರೆ ಕುಜನಿಗೆ ಸಂಬಂಧಪಟ್ಟ ಯಾವುದೇ ದೋಷಗಳಿದ್ದರೂ ಪರಿಹಾರ ಮಾಡಿಕೊಳ್ಳಬಹುದು ಅದರಲ್ಲೂ ಸುಬ್ರಹ್ಮಣ್ಯಸ್ವಾಮಿಯ ಆರಾಧನೆ ಮಾಡುವುದರಿಂದ ನೀವು ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಇನ್ನು ಮಂಗಳವಾರದ ದಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಗಣೇಶ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ದಾಳಿಂಬೆ ಹಣ್ಣನ್ನು ದಾನವಾಗಿ ಕೊಡುವುದರಿಂದ ಇಂತಹ ತೊಂದರೆಗಳಿಗೆ ಒಳ್ಳೆಯ ಲಾಭವನ್ನು ಪಡೆಯಬಹುದು. ಹಾಗಾದರೆ ಈ ಮಂತ್ರ ಹೀಗಿದೆ ನೋಡಿ. ಧರಣಿ ಗರ್ಭ ಸಂಭೂತಮ್ ವಿದ್ಯುತ್ಕಾಂತಿ ಸಮಪ್ರಭಂ ಕುಮಾರಂ ಶಕ್ತಿ ಹಸ್ತಂ ತಂ ಮಂಗಳಂ ಪ್ರಣಮಾಮ್ಯಹಂ ಈ ರೀತಿಯಾಗಿ ಈ ಮಂತ್ರವನ್ನು ಮಂಗಳವಾರದ ದಿನ ಇಪ್ಪತ್ತೊಂದು ಬಾರಿ ಪಠಿಸಬೇಕು ಇದರಿಂದ ನೀವು ಮಾಡುವ ಜಾಗಕ್ಕೆ ಒಳ್ಳೆಯ ಬೆಲೆ ಸಿಗುವಂತಾಗುತ್ತದೆ.

ಸ್ನೇಹಿತರೇ ಈ ಪರಿಹಾರವನ್ನು ನೀವು ನಂಬಿಕೆಯಿಂದ ಮಾಡಿಕೊಂಡು ಇದ್ದರು ನೀವು ಎಲ್ಲಾ ಕೆಲಸಗಳಲ್ಲೂ ಲಾಭವನ್ನು ಪಡೆಯುತ್ತೀರಿ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರಿಗೂ ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿ. ನಮ್ಮ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳಿಗೂ ಪರಿಹಾರ ಏನೆಂದರೆ ನಮ್ಮ ಮೇಲೆ ನಮಗೆ ಇರುವ ನಂಬಿಕೆ ಹಾಗೂ ನಮಗೆ ಇರುವ ತಾಳ್ಮೆ ಮತ್ತು ದೇವರಲ್ಲಿ ಇರುವ ಭಕ್ತಿ ಹಾಗೂ ನಮ್ಮಲ್ಲಿರುವ ಧೈರ್ಯ ಇವೆಲ್ಲಾ ಇದ್ದರೆ ಖಂಡಿತವಾಗಿಯೂ ನೀವು ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ. ಆದರೆ ಸ್ಥಳವನ್ನು ಮಾಡುವ ಮುನ್ನ ಕೊಡುವವರಿಗೆ ಸರಿಯಾದ ಬೆಲೆ ತಿಳಿಸಿ ವ್ಯವಹಾರದಲ್ಲಿ ದೊಡ್ಡವರನ್ನು ಸೇರಿಸಿಕೊಂಡು ವ್ಯವಹಾರ ಮಾಡುವುದು ಉತ್ತಮ. ಮೇಲೆ ನಾನು ಹೇಳಿರುವ ಮಂತ್ರವನ್ನು ನೀವು ಮಂಗಳವಾರ ಪ್ರತಿನಿತ್ಯ ಹೇಳುತ್ತಾ ಬಂದರೆ ನಿಮಗೆ ವ್ಯಾಪಾರದಲ್ಲಿ ಸಾಕಷ್ಟು ಲಾಭ ಸಿಗುವುದು ಖಂಡಿತ. ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.