ಬಿಸಿಲಿನ ತಾಪಕ್ಕೆ ನೀವೇನಾದ್ರು ಎಲ್ಲೆಂದರಲ್ಲಿ ಸಿಗುವ ಕಬ್ಬಿನ ಹಾಲನ್ನು ಕುಡಿಯುತ್ತಿದ್ದೀರಾ ಹಾಗಾದ್ರೆ ಎಚ್ಚರ ಯಾಕೆ ಗೊತ್ತ ಈ ರೀತಿಯ ಕಬ್ಬಿನ ಹಾಲನ್ನು ಕುಡಿಯುವುದರಿಂದ ನಿಮ್ಮ ಜೀವಕ್ಕೆ ಹಾನಿಯಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕಬ್ಬಿನ ಹಾಲು ಕುಡಿಯುವುದರಿಂದ ಆಗುವ ಲಾಭಗಳೇನು ಹಾಗೂ ಇದರಿಂದ ಆಗುವ ತೊಂದರೆಗಳೇನು ಎಂದು ತಿಳಿಯಲು ಮಾಹಿತಿ ನೋಡಿ.
ಹಾಯ್ ಸ್ನೇಹಿತರೆ ಬೇಸಿಗೆಯಲ್ಲಿ ಶಕೆ ಆಗಲು ಈಗಾಗಲೇ ಆರಂಭವಾಗಿದೆ. ಎಷ್ಟೇ ನೀರು ಕುಡಿದರು ಬಾಯಾರಿಕೆ ಆಗದೆ ಇರುವುದಿಲ್ಲ. ಪದೇ ಪದೇ ನೀರು ಕುಡಿಯಬೇಕು ಎನಿಸುತ್ತದೆ ಅದರಲ್ಲೂ ಹಳ್ಳಿಗಳಲ್ಲಿ ಮಜ್ಜಿಗೆ ಮೊಸರು ಹೀಗೆ ತಂಪು ಇರುವ ಆಹಾರಗಳನ್ನು ಸೇವಿಸುತ್ತಾರೆ. ಆದರೆ ಪಟ್ಟಣದಲ್ಲಿ ಅಂದರೆ ಸಿಟಿಗಳಲ್ಲಿ ಇಂತಹ ಮಜ್ಜಿಗೆ ಮೊಸರಿನಂತಹ ತಂಪು ಪಾನೀಯಗಳು ಸಿಗುವುದು ಸ್ವಲ್ಪ ಕಷ್ಟ ಅದರಲ್ಲೂ ಪ್ಯೂರ್ ಆಗಿರುವ ಮಜ್ಜಿಗೆ ಮೊಸರು ಸಿಗುವುದು ಕಷ್ಟ.

ಹಾಗಾಗಿ ಎಲ್ಲರೂ ಜ್ಯೂಸ್ ಅಂಗಡಿಗಳಲ್ಲಿ ಜ್ಯೂಸನ್ನು ಹಾಗೂ ಕಬ್ಬಿನ ಹಾಲಿನಅಂಗಡಿಗಳಲ್ಲಿ ಕಬ್ಬಿನ ಜ್ಯೂಸ್ ಹೀಗೆ ಇಂತಹ ಪಾನೀಯಗಳನ್ನು ಕುಡಿಯುತ್ತಾರೆ ಸ್ನೇಹಿತರೆ ಕಬ್ಬಿನ ಹಾಲಿನಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ಸ್ ಗಳು ಇರುತ್ತವೆ ಹಾಗೆಯೇ ಪ್ರೊಟೀನ್ ಕ್ಯಾಲ್ಸಿಯಂ ಪೊಟ್ಯಾಶಿಯಂ ಕಬ್ಬಿಣಾಂಶ ಇರುತ್ತದೆ. ಕಬ್ಬಿನ ಹಾಲು ಕುಡಿಯಲು ತುಂಬಾ ಸಿಹಿಯಾಗಿರುತ್ತದೆ ಹಾಗೆ ಎಷ್ಟೇ ಕುಡಿದರೂ ಮತ್ತೆ ಮತ್ತೆ ಕುಡಿಯಬೇಕು ಎನಿಸುತ್ತದೆ. ಉರಿಮೂತ್ರ ಬರುವವರು ಕಬ್ಬಿನ ಹಾಲಿನ ಜೊತೆ ನೆಲ್ಲಿಕಾಯಿ ರಸ ಹಾಗೂ ಜೇನುತುಪ್ಪವನ್ನು ಅದರ ಜೊತೆ ಕುಡಿಯಬಹುದು ಹೀಗೆ ಮಾಡಿದರೆ ಅವರಿಗೆ ಉರಿಮೂತ್ರ ಕಡಿಮೆಯಾಗುತ್ತದೆ. ಕಬ್ಬಿನ ಹಾಲು ಕುಡಿಯಲು ತಂಪಾಗಿದ್ದರೂ ಇದು ದೇಹಕ್ಕೆ ಉಷ್ಣಾಂಶವನ್ನು ನೀಡುತ್ತದೆ ಹಾಗಾಗಿ ಕಬ್ಬಿನ ಹಾಲು ದೇಹಕ್ಕೆ ಒಳ್ಳೆಯದು ಎನ್ನುತ್ತಾರೆ.

ಅದರಲ್ಲೂ ಬೇಸಿಗೆಕಾಲದಲ್ಲಿ ಕಬ್ಬಿನ ಹಾಲನ್ನು ಕುಡಿಯುವುದು ಒಳ್ಳೆಯದು ಇದರಲ್ಲಿರುವ ಕಬ್ಬಿಣ ಅಂಶ ಹಾಗೂ ಪ್ರೋಟೀನ್ಗಳು ನಮ್ಮ ದೇಹವನ್ನು ಸೇರಿ ಆರೋಗ್ಯವಾಗಿರುವಂತೆ ಮಾಡುತ್ತದೆ. ಕಬ್ಬಿನ ಹಾಲು ಕುಡಿಯುವುದಕ್ಕಿಂತ ಹಳ್ಳಿಯಲ್ಲಿ ಸಿಗುವ ಕಬ್ಬನ್ನು ನಾವು ಬಾಯಿಂದಲೇ ಜಗಿದು ರಸ ಕುಡಿದರೆ ಹಲ್ಲಿಗೆ ಹಾಗೂ ವಸಡುಗಳಿಗೆ ಕ್ಯಾಲ್ಸಿಯಂ ದೊರೆಯುತ್ತದೆ ಇದರಿಂದಾಗಿ ನಮ್ಮ ಹಲ್ಲುಗಳು ಸ್ಟ್ರಾಂಗ್ ಆಗಿರುವಂತೆ ಕಾಪಾಡುತ್ತವೆ. ಸ್ನೇಹಿತರೇ ನೀವು ಏನೇ ಹೇಳಿ ಹಳ್ಳಿಯಲ್ಲಿರುವ ಸೊಗಡು ಸಿಟಿಯಲ್ಲಿ ಸಿಗುವುದಿಲ್ಲ. ಕಬ್ಬನ್ನು ಹಲ್ಲಿನಿಂದ ಸುರಿದುಕೊಂಡು ಜಗಿದು ರಸ ಕುಡಿಯುವುದರ ಮಜವೇ ಬೇರೆ. ಕಬ್ಬಿನ ಹಾಲನ್ನು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಹರಳುಗಳು ಕೂಡ ಕರಗುತ್ತವೆ ಎಂದು ಅಂದರೆ ಅಷ್ಟು ಶಕ್ತಿ ಕಬ್ಬಿನ ಹಾಲಿನಲ್ಲಿ ಇದೆ.

ಸ್ನೇಹಿತರೆ ಹಾಗಾದರೆ ಕಬ್ಬಿನ ಹಾಲಿನಿಂದ ನಮ್ಮ ಆರೋಗ್ಯಕ್ಕೆ ಆಗುವ ನಷ್ಟಗಳೇನು ಎಂದು ಈಗ ತಿಳಿಯೋಣ. ಕಬ್ಬಿನ ಹಾಲು ಕುಡಿಯುವುದರಿಂದ ಆಗುವುದಿಲ್ಲ ಆದರೆ ಅದನ್ನು ತಯಾರಿಸುವವರು ಸೂಕ್ಷ್ಮವಾಗಿ ತಯಾರಿಸಿಕೊಳ್ಳಬೇಕು ಕಬ್ಬಿನಅಂಗಡಿಗಳಲ್ಲಿ ಒಬ್ಬನೇ ಮಾಡಿರುತ್ತಾನೆ. ಹಾಗಾಗಿ ಕೈ ತೊಳೆದೆ ಕಬ್ಬಿನ ಹಾಲನ್ನು ಹಾಕಿ ಕೊಡುತ್ತಾನೆ ಹಾಗೂ ಮತ್ತೆ ಪುನಹ ಅದೇ ಕೈಯಿಂದ ಕಬ್ಬನ್ನು ಮಿಷನ್ಗೆ ಹಾಕಿ ಮತ್ತೆ ಕಬ್ಬಿನ ರಸವನ್ನು ತಯಾರು ಮಾಡುತ್ತಾರೆ ಹಾಗೆಯೇ ಕಬ್ಬಿನಲ್ಲಿ ಮಣ್ಣು ಇರುತ್ತದೆ ಪ್ರತಿನಿತ್ಯ ಕಬ್ಬಿನ ಮಿಷನನ್ನು ಸ್ವಚ್ಛವಾಗಿ ತೊಳೆಯಬೇಕು. ಹೀಗೆ ತಯಾರಿಸಿರುವ ಕಬ್ಬಿನ ಹಾಲನ್ನು ಕುಡಿಯುವ ಮೊದಲು ಹುಷಾರಾಗಿರಿ. ಶುಗರ್ ಇರುವವರು ಕಬ್ಬಿನ ಹಾಲನ್ನು ಕುಡಿಯುವುದು ಒಳ್ಳೆಯದಲ್ಲ ಇದರಲ್ಲಿ ಹೆಚ್ಚಾಗಿ ಸಕ್ಕರೆ ಅಂಶ ಇರುತ್ತದೆ ಇದು ಅವರಿಗೆ ಶುಗರ್ ಹೆಚ್ಚಾಗುವಂತೆ ಮಾಡಬಹುದು.

ಹಾಗಾದರೆ ಸ್ನೇಹಿತರೇ ಕಬ್ಬಿನ ಹಾಲು ಕುಡಿಯುವುದು ಒಳ್ಳೆಯದು ಆದರೆ ಕುಡಿಯುವ ಮೊದಲು ಸ್ವಚ್ಛವಾಗಿ ತಯಾರು ಮಾಡಿಕೊಳ್ಳಬೇಕು ಅಥವಾ ಹಳ್ಳಿಯಲ್ಲಿ ಸಿಗುವ ಕಬ್ಬನ್ನು ನೀವೇ ಹಲ್ಲಿನಿಂದ ಸುಲಿದುಕೊಂಡು ತಿನ್ನಬಹುದು. ಸ್ನೇಹಿತರೆ ಕಬ್ಬಿನ ಹಾಲಿನಿಂದ ಸಿಗುವ ಲಾಭಗಳು ಮತ್ತು ನಷ್ಟಗಳು ಏನು ಎಂದು ನಿಮಗೆ ಈಗ ತಿಳಿದಿದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನೀವು ಕೂಡ ಇತರರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.